Author: kannadanewsnow09

ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿರುವ ಯುಎಸ್ ಗಗನಯಾತ್ರಿಗಳ ಮರಳುವಿಕೆಯ ಬಗ್ಗೆ ಕುತೂಹಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಭಾನುವಾರ ಇವರಿಬ್ಬರು ಮಾರ್ಚ್ 18 ರ ಮಂಗಳವಾರ ಸಂಜೆ (ಜಿಎಂಟಿ) ಭೂಮಿಗೆ ಮರಳಲಿದ್ದಾರೆ ಎಂದು ದೃಢಪಡಿಸಿದೆ. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಅಮೆರಿಕದ ಮತ್ತೊಬ್ಬ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಕ್ರಾಫ್ಟ್ನಲ್ಲಿ ಭಾನುವಾರ ಮುಂಜಾನೆ ಐಎಸ್ಎಸ್ಗೆ ಕರೆತರಲಾಗುವುದು. https://twitter.com/Commercial_Crew/status/1901422933366456607 ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್, ಹೀಗಿದೆ ಸ್ಪ್ಲಾಶ್ ಡೌನ್ ಸಮಯ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ತನ್ನ ಮೊದಲ ಸಿಬ್ಬಂದಿ ಪ್ರಯಾಣದಲ್ಲಿ ಪರೀಕ್ಷಿಸುತ್ತಿದ್ದಾಗ ಪ್ರೊಪಲ್ಷನ್ ಸಮಸ್ಯೆಗಳಿಂದ ಹಾನಿಗೊಳಗಾದ ನಂತರ ಮತ್ತು ಅವುಗಳನ್ನು ಭೂಮಿಗೆ ಹಿಂತಿರುಗಿಸಲು ಅನರ್ಹವೆಂದು ಪರಿಗಣಿಸಲಾದ ನಂತರ ಇವರಿಬ್ಬರು ಕಳೆದ ವರ್ಷ ಜೂನ್ನಿಂದ ಐಎಸ್ಎಸ್ನಲ್ಲಿದ್ದಾರೆ. ಫ್ಲೋರಿಡಾ ಕರಾವಳಿಯಲ್ಲಿ ಗಗನಯಾತ್ರಿಗಳ ನಿರೀಕ್ಷಿತ ಸಾಗರ ಪತನವನ್ನು ಫ್ಲೋರಿಡಾ ಸಮಯ ಮಂಗಳವಾರ ಸಂಜೆ 5:57…

Read More

ನವದೆಹಲಿ: ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ‘ಬುಚ್’ ವಿಲ್ಮೋರ್ ಮಂಗಳವಾರ ಸಂಜೆ (ಭಾರತದಲ್ಲಿ ಬುಧವಾರ ಮುಂಜಾನೆ) ಭೂಮಿಗೆ ಮರಳಲಿದ್ದಾರೆ. ನಾಸಾ ಮಂಗಳವಾರ ಸಂಜೆ 5:57 ಕ್ಕೆ (ಭಾರತೀಯ ಕಾಲಮಾನ ಮಾರ್ಚ್ 19 ರ ಮುಂಜಾನೆ 3:27) ಫ್ಲೋರಿಡಾ ಕರಾವಳಿಯಲ್ಲಿ ಗಗನಯಾತ್ರಿಗಳ ನಿರೀಕ್ಷಿತ ಸಾಗರ ಪತನವನ್ನು ಮುಂದಕ್ಕೆ ಸಾಗಿಸಿತು. ಇದನ್ನು ಆರಂಭದಲ್ಲಿ ಬುಧವಾರಕ್ಕಿಂತ ಮುಂಚಿತವಾಗಿ ನಿಗದಿಪಡಿಸಲಾಗಿತ್ತು. https://TWITTER.com/Commercial_Crew/status/1901422933366456607 “ನವೀಕರಿಸಿದ ರಿಟರ್ನ್ ಟಾರ್ಗೆಟ್ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗೆ ಹಸ್ತಾಂತರ ಕರ್ತವ್ಯಗಳನ್ನು ಪೂರ್ಣಗೊಳಿಸಲು ಸಮಯವನ್ನು ನೀಡುತ್ತದೆ, ಆದರೆ ವಾರದ ಕೊನೆಯಲ್ಲಿ ನಿರೀಕ್ಷಿಸಲಾದ ಕಡಿಮೆ ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಗೆ ಮುಂಚಿತವಾಗಿ ಕಾರ್ಯಾಚರಣೆಯ ನಮ್ಯತೆಯನ್ನು ಒದಗಿಸುತ್ತದೆ” ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ಅವರನ್ನು ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ರಾಫ್ಟ್ ನಲ್ಲಿ ಮತ್ತೊಬ್ಬ ಅಮೆರಿಕನ್ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಮನೆಗೆ ಸಾಗಿಸಲಾಗುವುದು. ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ತಮ್ಮ ಮೊದಲ ಸಿಬ್ಬಂದಿ ಪ್ರಯಾಣದಲ್ಲಿ ಪರೀಕ್ಷಿಸುತ್ತಿದ್ದ…

Read More

ಮಂಡ್ಯ: ಜಿಲ್ಲೆಯ ಖಾಸಗಿ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಪುಡ್ ಪಾಯಿಸನ್ ನಿಂದ ಸಾವನ್ನಪ್ಪಿದ್ದನು. ಈ ಘಟನೆಯ ಸಂಬಂಧ ಶಿಕ್ಷಣ ಸಂಸ್ಥೆಯ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಬಿಇಓ ಉಮಾ ನೀಡಿದ್ದಂತ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ. ಬಿಇಓ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದಂತ ಪುಷ್ಪೇಂದ್ರ ಕುಮಾರ್, ಹೋಟೆಲ್ ಮಾಲೀಕ ಸಿದ್ದರಾಜು, ಕಲ್ಯಾಣ ಮಂಟಪದ ನೌಕರ ಕೃಷ್ಣ, ಗೋಕುಲ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳವಳ ವ್ಯಕ್ತ ಪಡಿಸಿದ್ದ ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಂತ ಸಿಎಂ ಸಿದ್ಧರಾಮಯ್ಯ ಅವರು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದು ನೋವಾಯಿತು ಎಂದಿದ್ದರು. ಈ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ…

Read More

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ. ಆದರೇ ಅವರ ಸಾಧನೆ, ನಟಿಸಿದಂತ ಚಿತ್ರಗಳ ಮೂಲಕ ಇನ್ನೂ ನೆನಪಾಗಿಯೇ ಉಳಿದಿದ್ದಾರೆ. ಇಂದು ಪುನೀತ್ ರಾಜ್ ಕುಮಾರ್ ಅವರಿಗೆ 50ನೇ ಜನ್ಮ ದಿನದ ಹಿನ್ನಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ದಂಡೆ ನೆರೆದಿದೆ.  ರಾತ್ರಿಯಿಂದಲೇ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವಂತ ಅಪ್ಪು ಸಮಾಧಿ ದರ್ಶನಕ್ಕಾಗಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಅಪ್ಪು ಸಮಾಧಿಯ ದರ್ಶನವನ್ನು ಪಡೆಯುತ್ತಿದ್ದಾರೆ. ಇಂದು ಪುನೀತ್ ರಾಜ್ ಕುಮಾರ್ 50ನೇ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಅಪ್ಪು ಸಮಾಧಿಯ ದರ್ಶನವನ್ನು ಅಭಿಮಾನಿಗಳು ಸಾಲುಗಟ್ಟಿ ನಿಂತು ಮಡಾುತ್ತಿದ್ದಾರೆ. ಪುನೀತ್ ಅವರ ಕುಟುಂಬಸ್ಥರು ಇಂದು ಸಮಾಧಿ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದೆ. https://kannadanewsnow.com/kannada/no-property-registration-without-e-khata-state-govt/ https://kannadanewsnow.com/kannada/how-to-remove-encroachments-on-government-land-in-the-state-what-are-the-actions-against-the-erring-officer-heres-the-information/

Read More

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು, ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸುವುದು, ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಅಧಿಕಾರಿಗಳು, ಭೂ ಕಬಳಿಕೆಗೆ ದುಷ್ಪ್ರೇರಣೆ ನೀಡುವ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಶಾಮೀಲಾದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಾನೂನು, ಶಿಸ್ತು ಕ್ರಮದ ಬಗ್ಗೆ ಸರ್ಕಾರ ಮಹತ್ವದ ಆದೇಶ ಮಾಡಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆ ಕುರಿತು ವರದಿ ಸಂಖ್ಯೆ: 05/2018 ಸಲ್ಲಿಸಿರುತ್ತಾರೆ. ಸದರಿ ವರದಿಯ ಬಗ್ಗೆ ಕರ್ನಾಟಕ ವಿಧಾನ ಮಂಡಲದ 2019-20ನೇ ಸಾಲಿನ 14.01.2020ರಂದು ಸಭೆ ನಡೆಸಿದ್ದು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ದಿನಾಂಕ: 07.01.2020 ಮತ್ತು ಕಬಳಿಕೆಯಾಗಿರುವ ಸರ್ಕಾರಿ ಜಮೀನುಗಳನ್ನು ಹಿಂಪಡೆಯುವ ಪ್ರಕ್ರಿಯೆ ಮಂದ ಗತಿಯಲ್ಲಿಯಲ್ಲಿರುವುದು, ಭೂ ಕಬಳಿಕೆದಾರರು ಹಾಗೂ ದುಷ್ಟೇರಣೆ ನೀಡಿದವರ ವಿರುದ್ಧ ಕಠಿಣ ಕ್ರಮಗಳಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ ಎಂದಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 192 192-29 ಹಾಗೂ…

Read More

ಅಯೋಧ್ಯೆ: ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಳದ ಎಫೆಕ್ಟ್ ಎನ್ನುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ 400 ಕೋಟಿ ತೆರಿಗೆಯನ್ನು ಪಾವತಿಸಿದೆ. ಈ ಬಗ್ಗೆ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ.2, 2020ರಿಂದ ಫೆಬ್ರವರಿ.5, 2025ರವರೆಗೆ ಐದು ವರ್ಷಗಳಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ 400 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾಗಿ ತಿಳಿಸಿದ್ದಾರೆ. 400 ಕೋಟಿ ತೆರಿಗೆಯಲ್ಲಿ 270 ಕೋಟಿ ಸರಕು ಮತ್ತು ಸೇವಾ ತೆರಿಗೆ ಆಗಿದ್ದರೇ, ಉಳಿದ 130 ಕೋಟಿ ವಿವಿಧ ವರ್ಗಗಳ ಅಡಿಯ ತೆರಿಗೆ ಆಗಿದೆ. ಟ್ರಸ್ಟ್ ಆರ್ಥಿಕ ದಾಖಲೆಗಳನ್ನು ಸಿಎಜಿಯಿಂದ ಕಾಲ ಕಾಲಕ್ಕೆ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ. ದಿನೇ ದಿನೇ ಅಯೋಧ್ಯೆಗೆ ಬರುತ್ತಿರುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿದೆ. ಇದೊಂದು ಬೃಹತ್ ಧಾರ್ಮಿಕ ಪ್ರವಾಸಿ ಕೇಂದ್ರವಾಗಿಯೂ ಮಾರ್ಪಟ್ಟಿರೋದೇ ಇಷ್ಟೊಂದು ಆದಾಯದ ಜೊತೆಗೆ ತೆರಿಗೆ ಪಾವತಿಗೆ ಕಾರಣವಾಗಿದೆ. https://kannadanewsnow.com/kannada/use-of-fake-passport-will-attract-7-years-in-jail-rs-10-lakh-fine-govt/ https://kannadanewsnow.com/kannada/no-property-registration-without-e-khata-state-govt/

Read More

ನವದೆಹಲಿ: ಭಾರತದ ಒಳಗೆ ಬರೋದಕ್ಕೆ, ದೇಶದಿಂದ ಹೊರ ಹೋಗೋದಕ್ಕೆ ಇಲ್ಲವೇ ಇಲ್ಲಿ ನೆಲೆಸಲು ನಕಲಿ ಪಾಸ್ ಪೋರ್ಟ್ ಮತ್ತು ವೀಸಾ ಬಳಸಿದರೇ 7 ವರ್ಷ ಅಂತವರಿಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸುವಂತ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ವಿದೇಶಿಯರು ಮತ್ತು ವಲಸೆ ಸಂಬಂಧ ಪ್ರಸ್ತುತ ಇರುವಂತ ಹಲವು ಕಾಯ್ದೆಗಳನ್ನು ಒಟ್ಟುಗೂಡಿಸಿ, ವಲಸೆ ಮತ್ತು ವಿದೇಶಿಯರ ಮಸೂದೆ 2025 ಅನ್ನು ಸಂಸತ್ತಿನಲ್ಲಿ ಮಂಡಿಸಿದೆ. ಈ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಅನುಮೋದನೆ ದೊರೆತಿದೆ. ಈ ಹೊಸ ಮಸೂದೆಯ ಅನ್ವಯ ಹೋಟೆಲ್ ಗಳು, ವಿಶ್ವವಿದ್ಯಾಲಯಗಳು ಮತ್ತು ಇತರೆ ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ತಮ್ಮಲ್ಲಿರುವ ವಿದೇಶಿಯರ ಸಂಪೂರ್ಣ ಮಾಹಿತಿಯನ್ನು ಗೃಹ ಸಚಿವಾಲಯಕ್ಕೆ ಒದಗಿಸುವುದು ಕಡ್ಡಾಯವಾಗಿದೆ. ಈ ಮೂಲಕ ವೀಸಾ ಅವಧಇ ಮುಗಿದರೂ ಭಾರತದಲ್ಲೇ ವಾಸಿಸುತ್ತಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಇನ್ನೂ ವಿದೇಶಿಗರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳ ಮೇಲೆ…

Read More

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಪ್ರಖರತೆ ಹೆಚ್ಚಾಗಿದೆ. ಕರ್ನಾಟಕ ದಿನೇ ದಿನೇ ಕುದಿಯಲಾರಂಭಿಸಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ವಾಡಿಕೆಗಿಂತ 2-4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ರಾಜ್ಯದ ಶೇ.75ರಷ್ಟು ಭೌಗೋಳಿಕ ಪ್ರದೇಶಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ನಿಂದ 42.8 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಬಿಸಿಗಾಳಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರಗೊಂಡಿದೆ. ಬೀದರ್, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರಿನಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೂ ಈ ಬಾರಿ ಗರಿಷ್ಠ ತಾಪಮಾನ ದಾಖಲಾಗಿದೆ. ಭಾರತದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯೂ ಒಂದು. ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನಲ್ಲಿರುವ ಆಗುಂಬೆ ಸದಾ ಹಸಿರಿನಿಂದ ಕೂಡಿರುತ್ತದೆ. ಆದರೇ ಈಗ ಗರಿಷ್ಠ ತಾಪಮಾನ 36…

Read More

ನವದೆಹಲಿ: ಮತಾದರರ ಪಟ್ಟಿ ತಯಾರಿಸುವಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಟೀಕೆಯ ನಡುವೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕುರಿತು ಚರ್ಚಿಸಲು ನಾಳೆ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಸಭೆ ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ನಡೆಯಲಿರುವ ಈ ಸಭಎಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ, ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ಮತ್ತು ಯುಐಡಿಎಂ ಸಿಇಓ ಮೊದಲಾದವರು ಭಾಗಿಯಾಗಲಿದ್ದಾರೆ. ನಾಳೆ ನಡೆಯಲಿರುವಂತ ಸಿಇಸಿ ಸಭೆಯಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಸೇರಿದಂತೆ ನಕಲಿ ಮತದಾರರ ಪಟ್ಟಿ ತಡೆಯ ಮಹತ್ವದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಂತಿಮವಾಗಿ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದರೂ ಗೊಳಿಸಬಹುದಾಗಿದೆ. https://kannadanewsnow.com/kannada/heat-wave-conditions-rise-in-state-govt-asks-people-to-follow-this-health-advisory/ https://kannadanewsnow.com/kannada/no-property-registration-without-e-khata-state-govt/

Read More

ಬೆಂಗಳೂರು: : ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ರಾಜ್ಯ ಸರ್ಕಾರ ಸಲಹೆ ಮಾಡಿದೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮಾರ್ಚ್ ಯಿಂದ ಮೇ ವರೆಗೆ ವಾತಾರವಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಂತ ತಿಳಿಸಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5…

Read More