Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದ ಸಂಚಾರಿ ಪೊಲೀಸರು ಅಮಾನವೀಯ ನಡೆಯನ್ನು ತೋರಿದ್ದಾರೆ. ಬೈಕ್ ಸವಾರನೊಬ್ಬನಿಗೆ ಬೂಟು ಕಾಲಿನಿಂದ ಮೂರ್ಛೆ ಹೋಗುವಂತೆ ಥಳಿಸಿದಂತ ಘಟನೆ ವಿಜಯನಗರ ಸಂಚಾರಿ ಠಾಣೆಯಲ್ಲಿ ನಡೆದಿದೆ. ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸರ ವಿರುದ್ಧ ಬೈಕ್ ಸವಾರನೊಬ್ಬ ಈ ಗಂಭೀರ ಆರೋಪವನ್ನು ಮಾಡಿದ್ದಾನೆ. ವಿಜಯನಗರ ಸಂಚಾರ ಠಾಣೆಯ ಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ಧಿಕಿ ಎಂಬುವರು ತಮಗೆ ಬೂಟು ಕಾಲಿನಿಂದ ಒದ್ದು ಥಳಿಸಿದ್ದಾಗಿ ಆರೋಪಿಸಿದ್ದಾನೆ. ವಿಜಯನಗರ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಥಳಿತದಿಂದ ಬೈಕ್ ಸವಾರ ಮೂರ್ಛೆ ಹೋಗಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಚಾರಿ ಪೊಲೀಸರ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. https://kannadanewsnow.com/kannada/pfi-joins-list-of-67-banned-terror-outfits-home-ministry-updates-list-of-67-banned-terror-outfits/ https://kannadanewsnow.com/kannada/sensex-gains-280-points-nifty-closes-at-22450/
ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ನಿಷೇಧವನ್ನು ಎದುರಿಸುತ್ತಿರುವ 67 ಭಯೋತ್ಪಾದಕ ಸಂಘಟನೆಗಳು ಮತ್ತು ಕಾನೂನುಬಾಹಿರ ಸಂಘಗಳ ಗುಂಪನ್ನು ಗೃಹ ಸಚಿವಾಲಯದ (ಎಂಎಚ್ಎ) ನವೀಕರಿಸಿದ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಗೃಹ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಯುಎಪಿಎ ಸೆಕ್ಷನ್ 35 ರ ಅಡಿಯಲ್ಲಿ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆಗಳು ಎಂದು ವರ್ಗೀಕರಿಸಲಾದ ಮತ್ತು ಕಾಯ್ದೆಯ ಮೊದಲ ಶೆಡ್ಯೂಲ್ನಲ್ಲಿ ಸೇರಿಸಲಾದ 45 ಸಂಘಟನೆಗಳ ಹೆಸರುಗಳಿವೆ. ಉಳಿದ 22 ಗುಂಪುಗಳನ್ನು ಯುಎಪಿಎ ಸೆಕ್ಷನ್ 3 (1) ರ ಅಡಿಯಲ್ಲಿ ಕಾನೂನುಬಾಹಿರ ಸಂಘಗಳು ಎಂದು ವರ್ಗೀಕರಿಸಲಾಗಿದೆ. ಈ ಸಂಘಟನೆಗಳಲ್ಲಿ ಅನೇಕವು ಭಾರತದಾದ್ಯಂತ ಉಗ್ರಗಾಮಿತ್ವ, ಪ್ರತ್ಯೇಕತಾವಾದ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ಎಂಎಚ್ಎ ಅಂತಹ ಪಟ್ಟಿಯನ್ನು ನವೀಕರಿಸುತ್ತಲೇ ಇರುತ್ತದೆ. ಈ ನಿಷೇಧಿತ ಸಂಘಟನೆಗಳ ಘೋಷಣೆಯು ತನ್ನ ಗಡಿಯೊಳಗೆ ಭಯೋತ್ಪಾದನೆ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ನಿಗ್ರಹಿಸುವ ಭಾರತದ ನಿರಂತರ ಪ್ರಯತ್ನಗಳ ಭಾಗವಾಗಿದೆ. ಯುಎಪಿಎ ಅಡಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳು ಆಸ್ತಿ ಮುಟ್ಟುಗೋಲು ಮತ್ತು ಕಾನೂನುಬಾಹಿರ…
1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು 2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ ಎಂದರೆ ತಗೊಂಡ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ…
ನವದೆಹಲಿ: ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕಗಳು ಸೋಮವಾರ ಬೆಳಿಗ್ಗೆ ಸಕಾರಾತ್ಮಕವಾಗಿಯೇ ಪ್ರಾರಂಭವಾದವು. ಬಿಎಸ್ಇ ಸೆನ್ಸೆಕ್ಸ್ 280 ಪಾಯಿಂಟ್ಗಳ ಏರಿಕೆಯೊಂದಿಗೆ 74,100 ಮಟ್ಟದಲ್ಲಿ 73,830 ಕ್ಕೆ ಪ್ರಾರಂಭವಾಯಿತು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 80 ಪಾಯಿಂಟ್ಸ್ ಏರಿಕೆಗೊಂಡು 22,480 ಮಟ್ಟಕ್ಕೆ ತಲುಪಿದೆ. ಸಕಾರಾತ್ಮಕ ಸ್ಥೂಲ ಅಂಶಗಳು ದಲಾಲ್ ಸ್ಟ್ರೀಟ್ ನಲ್ಲಿ ಮಾರುಕಟ್ಟೆ ಭಾವನೆಯನ್ನು ಹೆಚ್ಚಿಸಲು ಸಹಾಯ ಮಾಡಿದ ನಂತರ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಏರಿಕೆ ಕಂಡವು. ಬಿಎಸ್ಇ ಸೆನ್ಸೆಕ್ಸ್ 362.75 ಪಾಯಿಂಟ್ಸ್ ಏರಿಕೆಗೊಂಡು 74,191.66 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 121 ಪಾಯಿಂಟ್ಸ್ ಏರಿಕೆಗೊಂಡು 22,518.20 ಕ್ಕೆ ತಲುಪಿದೆ. ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ.ವಿ.ಕೆ.ವಿಜಯಕುಮಾರ್ ಮಾತನಾಡಿ, ಹತ್ತಿರದ ಮಾರುಕಟ್ಟೆ ಪ್ರವೃತ್ತಿಯು ಸಕಾರಾತ್ಮಕ ಪಕ್ಷಪಾತದೊಂದಿಗೆ ಸ್ಥಿರವಾಗಿರುವ ಸಾಧ್ಯತೆಯಿದೆ. https://kannadanewsnow.com/kannada/girls-should-not-blindly-believe-that-they-will-not-file-false-sexual-assault-cases-hc/ https://kannadanewsnow.com/kannada/gram-panchayat-member-arrested-on-charges-of-sexual-assault/
ಕೇರಳ: ಯಾವುದೇ ಮಹಿಳೆ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ ಎಂಬ ಕಲ್ಪನೆಯು ಇತ್ತೀಚಿನ ವರ್ಷಗಳಲ್ಲಿ ತನ್ನ ಸಂಪೂರ್ಣ ಸಿಂಧುತ್ವವನ್ನು ಕಳೆದುಕೊಂಡಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಂತಹ ಅನೇಕ ಆರೋಪಗಳು ನೈಜವಾಗಿದ್ದರೂ, ಅವುಗಳಲ್ಲಿ ಒಂದಷ್ಟು ಪ್ರಕರಣಗಳು ಕಪೋಲಕಲ್ಪಿತವಾಗಿದೆ. ಆಗಾಗ್ಗೆ ವೈಯಕ್ತಿಕ ದ್ವೇಷ ಅಥವಾ ಬಲವಂತದ ಲಾಭಗಳಿಗಾಗಿ ಅಸ್ತ್ರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮೇ 30, 2014 ಮತ್ತು ಏಪ್ರಿಲ್ 20, 2019 ರ ನಡುವೆ ಮದುವೆಯ ಸುಳ್ಳು ಭರವಸೆಯೊಂದಿಗೆ ಮಹಿಳೆಯನ್ನು ದಾರಿ ತಪ್ಪಿಸುವ ಮೂಲಕ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಪಟ್ಟಾಂಬಿಯ ಯುವಕನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿ ಎ ಬದರುದ್ದೀನ್ ಈ ಹೇಳಿಕೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪ್ರತಿ ಪ್ರಕರಣದ ಸಂದರ್ಭಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಇಂತಹ ಆರೋಪಗಳನ್ನು ಮುಖಬೆಲೆಗೆ ಸ್ವೀಕರಿಸಬಾರದು ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಸುಳ್ಳು ಆರೋಪಗಳನ್ನು ಕೆಲವೊಮ್ಮೆ ವೈಯಕ್ತಿಕ ಅಂಕಗಳನ್ನು ಇತ್ಯರ್ಥಪಡಿಸಲು ಅಥವಾ ಕಾನೂನುಬಾಹಿರ ಬೇಡಿಕೆಗಳನ್ನು ಪೂರೈಸಲು…
ಚಿತ್ರದುರ್ಗ: ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ಜಾತಿ ನಿಂದನೆ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೂರು ಕೂಡ ದಾಖಲಾಗಿದ್ದು, ಪೊಲೀಸರು ಗ್ರಾಮ ಪಂಚಾಯ್ತಿ ಸದಸ್ಯನನ್ನು ಬಂಧಿಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯ್ತಿ ಸದಸ್ ದೇವರಾಜ ವಿರುದ್ಧ, ಸಿರಿಗೆರೆ ಗ್ರಾಮ ಪಂಚಾಯ್ತಿ ಕ್ಲರ್ ಜಯರಾಮ್ ಎಂಬುವರು ಜಾತಿ ನಿಂದನೆ, ಲೈಂಗಿಕ ದೌರ್ಜನ್ಯದ ಆರೋಪದಡಿ ದೂರು ನೀಡಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಓಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಕ್ಲರ್ಕ್ ಜಯರಾಮ್ ನೀಡಿರುವಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರು ಆಧರಿಸಿ ಭರಮಸಾಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ಎಂಬುವರನ್ನು ಬಂಧಿಸಿದ್ದಾರೆ. https://kannadanewsnow.com/kannada/fake-currency-racket-busted-in-karnataka-four-accused-including-pc-arrested/ https://kannadanewsnow.com/kannada/fire-breaks-out-in-copra-godown-copra-worth-lakhs-of-rupees-gutted/
ರಾಯಚೂರು: ರಾಜ್ಯದಲ್ಲೇ ಬಹುದೊಡ್ಡ ಖೋಟಾನೋಟು ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದಂತ ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರಿನ ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಗರದಲ್ಲಿ ದಾಳಿಯನ್ನು ನಡೆಸಿ, ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದಂತ ಅಡ್ಡೆಯನ್ನು ಪತ್ತೆ ಹಚ್ಚಿದ್ದಾರೆ. ಈ ದಾಳಿಯ ವೇಳೆಯಲ್ಲಿ ಲಕ್ಷಾಂತರ ಮೌಲ್ಯದ ಖೋಟಾ ನೋಟು, ಅದಕ್ಕೆ ಬಳಸುತ್ತಿದ್ದಂತ ಪೂರಕ ವಸ್ತುಗಳಾದ ವೈಟ್ ಪೇಪರ್ ಜಪ್ತಿ ಮಾಡಿದ್ದಾರೆ. ಈ ದಾಳಿಯಲ್ಲಿ ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. https://kannadanewsnow.com/kannada/fire-breaks-out-in-copra-godown-copra-worth-lakhs-of-rupees-gutted/ https://kannadanewsnow.com/kannada/no-property-registration-without-e-khata-state-govt/
ಚಿತ್ರದುರ್ಗ: ಜಿಲ್ಲೆಯ ರೈತರೊಬ್ಬರಿಗೆ ಸೇರಿದಂತ ಕೊಬ್ಬರಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ಆವರಿಸಿದ್ದರಿಂದ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟು ಭಸ್ಮವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದಲ್ಲೇ ಇಂತಹ ಬೆಂಕಿ ಅವಘಡ ಸಂಭವಿಸಿದೆ. ರೈತ ಪರಮೇಶ್ ಎಂಬುವರಿಗೆ ಸೇರಿದಂತ ಕೊಬ್ಬರಿ ಗೋದಾಮು ಹೊತ್ತಿ ಉರಿದಿದೆ. ಕೊಬ್ಬರಿ ಗೋದಾಮಿಗೆ ಬೆಂಕಿ ಬಿದ್ದಂತ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಘಡದಲ್ಲಿ ರೈತ ಪರಮೇಶ್ ಗೆ ಸೇರಿದಂತೆ ಲಕ್ಷಾಂತರ ಮೌಲ್ಯದ ಕೊಬ್ಬರು ಸುಟ್ಟು ಭಸ್ಮವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/state-cabinet-expansion-in-may-i-am-hopeful-of-getting-a-ministerial-berth-says-salim-ahmed/ https://kannadanewsnow.com/kannada/four-persons-including-a-constable-arrested-in-connection-with-police-raid-on-fake-currency-racket-in-raichur/
ರಾಯಚೂರು: ಜಿಲ್ಲೆಯಲ್ಲಿ ಖೋಟಾನೋಟು ದಂಧೆಯಲ್ಲಿ ತೊಡಗಿದ್ದಂತ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಶಸ್ತ್ರ ಮೀಸಲಿ ಪಡೆಯ ಕಾನ್ಸ್ ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಖೋಟಾನೋಟು ದಂಧೆಯಲ್ಲಿ ತೊಡಗಿದ್ದಂತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಪೊಲೀಸರಿಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿಯನ್ನು ನಡೆಸಿದ್ದಾರೆ. ನಗರದಲ್ಲಿ ನಡೆಯುತ್ತಿದ್ದಂತ ಖೋಟಾ ನೋಟು ದಂಧೆಯ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಒಬ್ಬರು ಈ ದಂಧೆಯಲ್ಲಿ ಭಾಗಿಯಾದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/state-cabinet-expansion-in-may-i-am-hopeful-of-getting-a-ministerial-berth-says-salim-ahmed/ https://kannadanewsnow.com/kannada/no-property-registration-without-e-khata-state-govt/
ಹುಬ್ಬಳ್ಳಿ: ಮೇನಲ್ಲಿ ರಾಜ್ಯಸಚಿವ ಸಂಪುಟ ಸಭೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ವೇಳೆಯಲ್ಲಿ ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಅಂತ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ. ನಗರದಲ್ಲಿ ಸುದ್ದಿದಾಗರೊಂದಿಗೆ ಮಾತನಾಡಿದಂತ ಅವರು ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದಿಂದ ಶೀಘ್ರವೇ ಉಚ್ಚಾಚಿಸುವ ಮಾಹಿತಿ ಇದೆ ಎಂದರು. ಹೆಬ್ಬಾರ್ ಹಾಗೂ ಸೋಮಶೇಖರ್ ನಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಈಚೆಗೆ ಮುಖ್ಯಮಂತ್ರಿಗಳು ಮಂಡಿಸಿದಂತ ಬಜೆಟ್ ಅನ್ನು ಸ್ವಾಗತಿಸಿದ್ದಾರೆ. ಅವರು ಯಾವಾಗಲೋ ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂದರು. ಕೆಲವು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಲು ಉತ್ಸುಕರಾಗಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಪಕ್ಷದ ವರಿಷ್ಠರೊಂದಿಗೆ ಮಾತನಾಡಿ, ಸೇರ್ಪಡೆಗೊಳ್ಳಲಿದ್ದಾರೆ ಎಂದರು. https://kannadanewsnow.com/kannada/nasa-confirms-sunita-williams-return-date-to-earth-splashdown-time-sharing/ https://kannadanewsnow.com/kannada/no-property-registration-without-e-khata-state-govt/