Author: kannadanewsnow09

ಬೆಂಗಳೂರು: “ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ ಕೆಂಪೇಗೌಡರ ರಕ್ತದ ಗುಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದರು. ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು. “ಇದೆಲ್ಲವೂ ಹಳೇ ವಿಡಿಯೋ ಎಂದು ಸ್ವತಃ ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯುತ್ತಾನೆ, ಈ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ನಾಯಕ ದೇವರಾಜೇಗೌಡ ಅವರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಮಾಧ್ಯಮಗಳಿಗೂ ತಿಳಿಸಿದ್ದಾರೆ. ಹೀಗಿರುವಾಗ ನನಗೂ ಈ ಪ್ರಕರಣಕ್ಕೂ ಏನು ಸಂಬಂಧ? ಎಂದು ಕೇಳಿದರು. ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನೆಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಈಗ ಮಾತ್ರವಲ್ಲ, ಬಹಳ ವರ್ಷಗಳಿಂದ ಅವರು ಹಾಗೂ ಅವರ…

Read More

ಗೋಕಾಕ್ : ಮೊದಲು ಹಾಗೂ ಎರಡನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ, ಎನ್ ಡಿಎ ಅಧಿಕಾರಕ್ಕೆ ಬರುವುದಿಲ್ಲ. ತಮಗೆ ಸ್ಪಷ್ಟ ಸೋಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಮೋದಿಯವರು ಹತಾಶರಾಗಿದ್ದು, ಭಯಾನಕ ಸುಳ್ಳುಗಳಿಂದ ಭಾರತೀಯ ದಾರಿತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಪರವಾಗಿ ಮತ ಮತಯಾಚಿಸಿ ಮಾತನಾಡಿದರು. ಬೆಲೆಏರಿಕೆ, ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ಮಾಡನಾಡುವುದಿಲ್ಲ. 2014 ಹಾಗೂ 2019 ರಲ್ಲಿ ಭಾರತೀಯರಲ್ಲಿ ಭ್ರಮೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಒಂದೇ ಒಂದು ಭರವಸೆಗಳನ್ನೂ ಈಡೇರಿಸಲಿಲ್ಲ. ಪ್ರತಿ ಬಾರಿ ಕೇವಲ ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವಂತೆ ಸುಳ್ಳುಗಳನ್ನು ಹೇಳುತ್ತಿಲೇ ಇದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಸಂಪೂರ್ಣ ಹತಾಶರಾಗಿ ಹೆಚ್ಚೆಚ್ಚು ಸುಳ್ಳುಗಳನ್ನು ಹೇಳಿ ಹೇಳಿ ಎಷ್ಟು ಸಾಧ್ಯವೋ ಅಷ್ಟು ಭಾರತೀಯರ ದಾರಿತಪ್ಪಿಸಿ ಲಾಭ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ. ಬಿಜೆಪಿಯೇತರರು ದಲಿತರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದೆ…

Read More

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನ ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಿಂದ ಕ್ಯಾಂಪಾ ಕೋಲಾ ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ. ಅಂದ ಹಾಗೆ ಕ್ಯಾಂಪಾ ಕೋಲಾ ಎಂಬುದು ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆಗಿದೆ. ಈ ಅಭಿಯಾನವು ವಿಭಿನ್ನ ವಿಧಾನದ ಭರವಸೆಯನ್ನು ನೀಡುತ್ತದೆ. ಇದರ ಜತೆಗೆ ನೈಜ ಭಾರತೀಯರನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪಾರಮ್ಯ ಹಾಗೂ ಸಂಕಲ್ಪ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ನಿರಂತರವಾಗಿ ಹೊಸ ದಿಗಂತವನ್ನು ಬೆನ್ನಟ್ಟುವ ಯುವ ಭಾರತದ ಧೈರ್ಯಶಾಲಿ ಮನೋಭಾವಕ್ಕೆ ಗೌರವ ಸಮರ್ಪಣೆ ಮಾಡುತ್ತದೆ. “ಕಠಿಣ ಕೆಲಸಗಳನ್ನು ಮಾಡುವಂಥ ಭಾರತೀಯರಿಗೆ, ತಮ್ಮ ಉನ್ನತ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ನಮ್ಮ ಸಂವಹನವಾಗಿದ್ದು, ಕೈಗೆಟುಕುವ ಬೆಲೆಗೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕೆ ಇದು ನಮ್ಮ ಪಾಲಿಗೆ ಪಯಣದ ಆರಂಭವಾಗಿದೆ,” ಎಂದು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸಿಒಒ ಆದ ಕೇತನ್ ಮೋದಿ ಹೇಳಿದ್ದಾರೆ. ಆರ್…

Read More

ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದಿದ್ದಂತ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಆರೋಪಿ ಫಯಜ್ ನನ್ನು ಪೊಲೀಸರು ಬಂಧಿಸಿದ್ದರು. ಈ ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಹುಬ್ಬಳ್ಳಿಯ ಕಾರ್ಪೊರೇಟರ್ ಪುತ್ರಿಯಾಗಿದ್ದಂತ ನೇಹಾ ಹಿರೇಮಠನನ್ನು ಕಾಲೇಜಿನ ಆವರಣದಲ್ಲೇ ಆರೋಪಿ ಫಯಜ್ ಚಾಕುವಿನಿಂದ ಇರಿದು 14 ಬಾರಿ ಹತ್ಯೆಗೈದಿದ್ದನು. ಈ ಪ್ರಕರಣ ಇಡೀ ರಾಜ್ಯ, ದೇಶದ ಜನತೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ. ಅಲ್ಲದೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಸೂಚಿಸಲಾಗಿದೆ. ಈ ಬೆನ್ನಲ್ಲೇ ಆರೋಪಿ ಫಯಜ್ ನನ್ನು ಹುಬ್ಬಳ್ಳಿಯ 1ನೇ ಜೆಎಂಎಫ್ ಸಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಅಂದಹಾಗೇ ಆರೋಪಿ ಫಯಜ್ ನನ್ನು ಬಂಧನದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆದಿತ್ತು. 6 ದಿನಗಳ ಕಾಲ ವಶಕ್ಕೆ ಪಡೆದಿದ್ದಂತ ಸಿಐಡಿಯ ಕಾಲಾವಧಿ, ಇಂದು ಅಂತ್ಯಗೊಂಡಿತ್ತು. ಆರೋಪಿ ಫಯಜ್ ನನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಗಿತ್ತು. ಕೋರ್ಟ್…

Read More

ಚಿಂಚೋಳಿ : ಕೋಮುವಾದಿ ಬಿ.ಜೆ.ಪಿ. ಸಮಾಜ ಒಡೆದು, ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದು, ದೇಶದ ಉಳಿವಿಗಾಗಿ ಎಲ್ಲ ಜಾತ್ಯತೀತ ಶಕ್ತಿಗಳೂ ಒಗ್ಗೂಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿಂದು ಶೋಷಿತ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಶೋಷಿತರ ನಡುವೆಯೇ ಎಡ- ಬಲ ಎಂಬಿತ್ಯಾದಿ ಭೇದ ಭಾವವನ್ನು ಬಿಜೆಪಿ ಹುಟ್ಟುಹಾಕುತ್ತಿದೆ. ಬಿಜೆಪಿಗೆ ಮೊದಲ ಹಂತದ ಚುನಾವಣೆ ಬಳಿಕ ಈ ಬಾರಿ ಸೋಲು ನಿಶ್ಚಿತ ಎಂದು ಅರಿವಾಗಿದ್ದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮಾತನಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದರು. ಬಿಜೆಪಿ 2004ರ ಚುನಾವಣೆಗೆ ಮುನ್ನ ಜನರಿಗೆ ಸ್ವರ್ಗವನ್ನೇ ಧರೆಗಿಳಿಸುವಂತೆ ಆಶ್ವಾಸನೆ ನೀಡಿತ್ತು. ಅಚ್ಛೇದಿನವೂ ಬರಲಿಲ್ಲ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಬದಲಾಗಿ ಬಡವರ ಬದುಕು…

Read More

ನಾಸಿಕ್: ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಟ್ರಕ್ ಡಿಕ್ಕಿ ಹೊಡೆದ ನಂತರ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯನ್ನು ಗಮನಿಸಿದರೆ, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಚಂದ್ವಾಡ್ ಬಳಿಯ ರೌದ್ ಘಾಟ್ನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮಾರಣಾಂತಿಕ ಅಪಘಾತದ ನಂತರ ಸ್ಥಳೀಯರು ಸಹಾಯಕ್ಕೆ ಧಾವಿಸಿದರು. ಬೆಳಿಗ್ಗೆ 10:45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ನಲ್ಲಿ ಟೈರ್ ಸ್ಫೋಟಗೊಂಡಿದ್ದರಿಂದ ಅಪಘಾತ ಸಂಭವಿಸಿದೆ. ರಾಹುದ್ ಘಾಟ್ ನಲ್ಲಿ ಅಪಘಾತಗಳು ಸಾಮಾನ್ಯ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/prajwal-case-pm-modi-deve-gowdas-family-directly-responsible-dk-suresh/ https://kannadanewsnow.com/kannada/breaking-team-india-announced-for-t20-world-cup-2019-kl-rahul-dismissed-as-rohit-sharma-to-lead-india/

Read More

ಬೆಂಗಳೂರು: ಇಂದು ರಾಜ್ಯಾಧ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ-2ರ ಇತಿಹಾಸ ಮತ್ತು ಫಿಜಿಕ್ಸ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ 55,402 ವಿದ್ಯಾರ್ಥಿಗಳು ಹಾಜರಾಗಿದ್ರೇ, 6,878 ಮಂದಿ ಗೈರಾಗಿದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರು ನಾರ್ಥನಲ್ಲಿ ಪರೀಕ್ಷೆಗೆ 5555 ಮಂದಿ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 5035 ಮಂದಿ ಹಾಜರಾಗಿದ್ದಾರೆ. 520 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದಿದೆ. ಇನ್ನೂ ಬೆಂಗಳೂರು ನಾರ್ಥ್ ನಲ್ಲಿ 7498 ಮಂದಿಯಲ್ಲಿ 6743 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 592, ರಾಮನಗರ 542, ಬಳ್ಳಾರಿಯಲ್ಲಿ 1848, ಬಾಗಲಕೋಟೆ 1346, ವಿಜಯಪುರ 383, ಬೀದರ್ 1577, ಚಿತ್ರದುರ್ಗ 1694, ಚಿಕ್ಕಮಗಳೂರು 530 ವಿದ್ಯಾರ್ಥಿಗಳು ಇಂದು ನಡೆದಂತ ಇತಿಹಾಸ ಮತ್ತು ಫಿಜಿಕ್ಸ್ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದೆ. ಇಂದಿನ ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆಗೆ 62,280 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 55,402 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 6,878 ಮಂದಿ ಗೈರಾಗಿದ್ದಾರೆ. ಇಂದು ಶೇ.88.96ರಷ್ಟು ಹಾಜರಾತಿ ಇದೆ ಎಂದು ಹೇಳಿದೆ. https://kannadanewsnow.com/kannada/prajwal-case-pm-modi-deve-gowdas-family-directly-responsible-dk-suresh/ https://kannadanewsnow.com/kannada/important-information-from-kea-for-those-who-have-applied-for-the-post-of-va-and-are-facing-fee-payment-issues/

Read More

ಬೆಂಗಳೂರು: 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಈಗಾಗಲೇ ಅನೇಕರು ಅರ್ಜಿಯನ್ನು ಸಲ್ಲಿಸಿದ್ದೀರಿ. ಅರ್ಜಿ ಸಲ್ಲಿಸಿದ ನಂತ್ರ ಶುಲ್ಕ ಪಾವತಿಸಿದಂತ ಅನೇಕರು ಕೆಲ ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ಕೆಇಎ ಪರಿಹಾರ ನೀಡಿದ್ದು, ಆ ಬಗ್ಗೆ ಮುಂದೆ ಓದಿ. ಈ ಕುರಿತಂತೆ ಇಂದು ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, VAO ಶುಲ್ಕ ಪಾವತಿಗೆ ಪರಿಹಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ ಈ ವಿಳಾಸಕ್ಕೆ ಇ-ಮೇಲ್ (vaopayment@gmail.com) ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು ಎಂದಿದೆ. https://twitter.com/KEA_karnataka/status/1785237109680537712 ಅಂದಹಾಗೆ ದಿನಾಂಕ 05-04-2024ರ ಇಂದಿನಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ದಿನಾಂಕ 04-05-2024 ಅರ್ಜಿ ಸಲ್ಲಿಸಲು…

Read More

ಮೈಸೂರು: ದಲಿತ ನಾಯಕ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅನಾರೋಗ್ಯದ ಕಾರಣ ನಿನ್ನೆ ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ, ಇಂದು ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಿನ್ನೆ ಸಾರ್ವಜನಿಕರ ದರ್ಶನಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಗಣ್ಯರು, ಕುಟುಂಬಸ್ಥರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದು, ಅಂತಿಮ ನಮನವನ್ನು ಸಲ್ಲಿಸಿದ್ದರು. ಇಂದು ಮೈಸೂರಿನ ಅಶೋಕಪುರಂನಲ್ಲಿರುವಂತ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಗಾಗಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಟ್ರಸ್ಟ್ ಆವರಣದಲ್ಲಿ ಬೌದ್ಧ ಬಿಕ್ಷುಗಳ ಸಮ್ಮುಖದಲ್ಲಿ ಸಂಸದ ವಿ.ಶ್ರೀನಿವಾಸ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿತು. ಈ ಮೂಲಕ ದಲಿತ ನಾಯಕ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಣ್ಣಲ್ಲಿ ಮಣ್ಣಾಗಿದ್ದಾರೆ. https://kannadanewsnow.com/kannada/multiple-people-stabbed-at-london-tube-station-video-of-man-with-sword-goes-viral/ https://kannadanewsnow.com/kannada/prajwal-case-pm-modi-deve-gowdas-family-directly-responsible-dk-suresh/

Read More

ಲಂಡನ್: ಈಶಾನ್ಯ ಲಂಡನ್ನ ಹೈನಾಲ್ಟ್ ಟ್ಯೂಬ್ ನಿಲ್ದಾಣದ ಬಳಿ ಹಲವಾರು ಪಾದಚಾರಿಗಳು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಇರಿದ ಆರೋಪದ ಮೇಲೆ ಅಮನ್ ಅವರನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾರೆ. ಹಲ್ಲೆಗೊಳಗಾದಂತವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಪುರುಷನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಇದು ಬಂದಿದೆ. https://twitter.com/wesstreeting/status/1785216136566460423 ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ಇಲ್ಫೋರ್ಡ್ ಉತ್ತರದ ಲೇಬರ್ ಸಂಸದ ವೆಸ್ ಸ್ಟ್ರೀಟಿಂಗ್, “ಹೈನಾಲ್ಟ್ನಲ್ಲಿ ನಿರ್ಣಾಯಕ ಘಟನೆಯನ್ನು ಘೋಷಿಸಲಾಗಿದೆ. ನಿಲ್ದಾಣ ಮತ್ತು ರಸ್ತೆ ಮುಚ್ಚುವಿಕೆಗಳು ಜಾರಿಯಲ್ಲಿವೆ. ಪೊಲೀಸರು, ಆಂಬ್ಯುಲೆನ್ಸ್ ಸೇವೆ ಮತ್ತು ಅಗ್ನಿಶಾಮಕ ದಳ ಸ್ಪಂದಿಸುತ್ತಿದೆ. ಒಬ್ಬ ಪುರುಷನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. https://twitter.com/BNONews/status/1785227494452322370 https://kannadanewsnow.com/kannada/pornographic-video-case-prajwal-revannas-driver-reveals-explosive-details/ https://kannadanewsnow.com/kannada/prajwal-case-pm-modi-deve-gowdas-family-directly-responsible-dk-suresh/

Read More