Author: kannadanewsnow09

ಹಾಸನ: ಭಾರತ ಮತ್ತು ಪಾಕ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಆಪರೇಷನ್ ಸಿಂಧೂರ್ ಗೆ ಪ್ರತಿಯಾಗಿ ನಿನ್ನೆಯಿಂದ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇಂತಹ ದಾಳಿಯನ್ನು ಭಾರತೀಯ ಸೇನೆ ಅಷ್ಟೇ ತೀವ್ರವಾಗಿ ಪ್ರತ್ಯುತ್ತರ ನೀಡಿ ವಿಫಲಗೊಳಿಸುತ್ತಿದೆ. ಇದರ ನಡುವೆ ಭಾರತೀಯ ಸೇನೆಗೆ ಬಲ ತುಂಬಲು ನಾವು ಸಿದ್ಧ ಎಂಬುದಾಗಿ ನಿವೃತ್ತ ಯೋಧರು ಬೆಂಬಲ ಸೂಚಸಿಸಿದ್ದಾರೆ. ಈ ಸಂಬಂಧ ಹಾಸನದ ಉದಯಗಿರಿ ಬಡಾವಣೆಯಲ್ಲಿನ ಸೈನಿಕರ ಭವನದಲ್ಲಿ ತುರ್ತು ಸಭೆಯನ್ನು ನಿವೃತ್ತ ಯೋಧರು ನಡೆಸಿದರು. ಈ ಸಭೆಯಲ್ಲಿ ಕರೆ ಬಂದರೇ ಸೇವೆ ಸಲ್ಲಿಸಲು ಸಿದ್ಧರಾಗುವಂತ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ಮೂಲಕ ಭಾರತೀಯ ಸೇನೆಗೆ ಬಲ ತುಂಬಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ.

Read More

ಮಂಗಳೂರು: ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸುತ್ತಿರುವಂತ ಆಪರೇಷನ್ ಸಿಂಧೂರ್ ಕುರಿತಂತೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಧಿಕ್ಕಾರ ಆಪರೇಷನ್ ಸಿಂಧೂರ್ ಎಂಬುದಾಗಿ ದೇಶ ವಿರೋಧಿ ಪೋಸ್ಟ್ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವಂತ ರೇಷ್ಮಾ ಎಂಬ ವಿದ್ಯಾರ್ಥಿನಿಯೇ ಹೀಗೊಂದು ದೇಶ ವಿರೋಧಿ ಪೋಸ್ಟ್ ನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರೋದು. ನನ್ನ ಮನೆಯ ದೀಪಕ್ಕೆ ಅವನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ. ಅಲ್ಲಿ ನಂದಿ ಹೋಯಿತು ಬೆಳಕು. ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ ಬೆಳಕಿನ ವಿಜೃಂಭಣೆಗಾಗಿ ಹೋರಾಟ. ಜಯಸಿದ್ದು ಕತ್ತಲು, ಎಲ್ಲೆಲ್ಲೂ ಕತ್ತಲು ಎಂಬುದಾಗಿ ಹೇಳಿದ್ದಾರೆ. ಕೊನೆಗೆ #dikkaraoperationsindurua ಎಂಬುದಾಗಿ ಹ್ಯಾಷ್ ಟ್ಯಾಗ್ ಹಾಕಿದ್ದಾರೋ. ಇದೀಗ ವಿದ್ಯಾರ್ಥಿನಿ ರೇಷ್ಮಾ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ದೇಶ ವಿರೋಧಿ ಪೋಸ್ಟ್ ಹಾಕಿದಂತ ರೇಷ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯ ಕೇಳಿ ಬಂದಿದೆ.…

Read More

ನವದೆಹಲಿ: ಮೇ 8 ರ ಗುರುವಾರ ಸಂಜೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಸೇರಿದಂತೆ ಪಾಕಿಸ್ತಾನದ ಭಾರತದ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡ ನಂತರ, ಭಾರತೀಯ ನೌಕಾಪಡೆಯೂ ಕ್ರಮ ಕೈಗೊಂಡಿದೆ. ಈಗ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರಿ ಮೇಲೆ ದಾಳಿ ಮಾಡಿದೆ. ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಐಎನ್ಎಸ್ ವಿಕ್ರಾಂತ್ ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ನೌಕಾ ದಾಳಿಯು ಕರಾಚಿ ಬಂದರು ಸೇರಿದಂತೆ ನಗರದಾದ್ಯಂತ ದೊಡ್ಡ ಬೆಂಕಿಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಟಿವಿ ವರದಿ ತಿಳಿಸಿದೆ.

Read More

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇಸ್ಲಾಮಾಬಾದ್ ನಿವಾಸದಿಂದ 20 ಕಿ.ಮೀ ದೂರದಲ್ಲಿ ದೊಡ್ಡ ಸ್ಫೋಟದ ವರದಿಗಳು ಹೊರಬಂದಿವೆ.

Read More

ನವದೆಹಲಿ: ಭಾರತೀಯ ನೌಕಾಪಡೆಯಿಂದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಿಯೋಜನೆಯನ್ನು ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಜ್ಜುಗೊಳಿಸಲಾಗಿದೆ. ಭಾರತೀಯ ನೌಕಾಪಡೆಯು ತನ್ನ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಕಾರವಾರ ಕರಾವಳಿಯ ಬಳಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನ ಸ್ಟ್ರೈಕ್ ಗ್ರೂಪ್ ವಿಮಾನವಾಹಕ ನೌಕೆ, ವಿಧ್ವಂಸಕ, ಫ್ರಿಗೇಟ್, ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಮತ್ತು ಇತರ ಬೆಂಬಲ ಹಡಗುಗಳನ್ನು ಒಳಗೊಂಡಿದೆ.

Read More

ನವದೆಹಲಿ: ಭಾರತ ಈವರೆಗೆ ಪಾಕಿಸ್ತಾನದ 56 ಡ್ರೋನ್ ದಾಳಿಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಇದಲ್ಲದೆ, ಭಾರತವು ಪಾಕಿಸ್ತಾನದ ಎರಡು ಜೆಎಫ್ -17 ಮತ್ತು ಒಂದು ಎಫ್ -16 ಫೈಟರ್ ಜೆಟ್ ಗಳನ್ನು ಹೊಡೆದುರುಳಿಸಿದೆ.  ಜಮ್ಮು ನಾಗರಿಕ ವಿಮಾನ ನಿಲ್ದಾಣ, ಸಾಂಬಾ, ಆರ್ ಎಸ್ ಪುರ, ಅರ್ನಿಯಾ ಮತ್ತು ನೀಘ್ಬೌರಿಂಗ್ ಪ್ರದೇಶದ ಮೇಲೆ ಪಾಕಿಸ್ತಾನ ದಾಳಿ ನಡೆಸಿದ ನಂತರ ಈ ಘಟನೆ ನಡೆದಿದೆ. ಆದಾಗ್ಯೂ, ಅವುಗಳಲ್ಲಿ ಹೆಚ್ಚಿನವುಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ತಡೆದಿದೆ. ಜಮ್ಮು ವಿಭಾಗದ ಕಿಶ್ತ್ವಾರ್ನಲ್ಲಿ ಸಂಪೂರ್ಣ ಬ್ಲಾಕ್ಔಟ್ ಜಾರಿಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ಸೈರನ್ಗಳು ಕೇಳಿಬರುತ್ತಿವೆ. ಜಮ್ಮು ವಿಭಾಗದ ಅಖ್ನೂರ್ನಲ್ಲಿಯೂ ಬ್ಲ್ಯಾಕೌಟ್ ಜಾರಿಗೊಳಿಸಲಾಗಿದೆ ಮತ್ತು ಸೈರನ್ಗಳನ್ನು ಕೇಳಲಾಗುತ್ತಿದೆ. ಜಮ್ಮುವಿನಲ್ಲಿ ಸಂಪೂರ್ಣ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಆಪರೇಷನ್ ಸಿಂಧೂರ್ ಮೂಲಕ ಪ್ರತಿಕ್ರಿಯಿಸಿದೆ, ಇದರಲ್ಲಿ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಿಖರ ದಾಳಿಯ ಮೂಲಕ ಗುರಿಯಾಗಿಸಲಾಗಿದೆ. ಭಾರತೀಯ ವಾಯುನೆಲೆಗಳ ಮೇಲಿನ ಯಾವುದೇ ಹಾನಿಯಾಗಿಲ್ಲ. ಸುರಕ್ಷಿತವಾಗಿರುವುದಾಗಿ ಭಾರತ ಹೇಳಿದೆ.

Read More

ನವದೆಹಲಿ: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ರದ್ದುಪಡಿಸಲಾಗಿದೆ. ಪಂಜಾಬ್ ತಂಡವು 10.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದ್ದಾಗ ವಿದ್ಯುತ್ ಕಡಿತಗೊಳಿಸಲಾಗಿತ್ತು.  ಆದರೆ ನಂತರ ತಂಡಗಳು ಮತ್ತು ಪ್ರೇಕ್ಷಕರನ್ನು ಅವರ ಭದ್ರತೆಗಾಗಿ ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು. ಪ್ರಭ್ಸಿಮ್ರನ್ ಸಿಂಗ್ 28 ಎಸೆತಗಳಲ್ಲಿ 50 ರನ್ ಗಳಿಸಿದರೆ, ಅವರ ಆರಂಭಿಕ ಪಾಲುದಾರ ಪ್ರಿಯಾಂಶ್ ಆರ್ಯ 34 ಎಸೆತಗಳಲ್ಲಿ 70 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವು ಮೊದಲ ಇನ್ನಿಂಗ್ಸ್ನಲ್ಲಿ 10.1 ಓವರ್ಗಳ ನಂತರ ರದ್ದಾಗಿದೆ. ಅಧಿಕೃತ ಪ್ರಸಾರಕರು “ಎಚ್ಪಿಸಿಎ ಕ್ರೀಡಾಂಗಣದಲ್ಲಿ ಗಮನಾರ್ಹ ತಾಂತ್ರಿಕ ವೈಫಲ್ಯ” ವನ್ನು ದೂಷಿಸಲು ಪ್ರಯತ್ನಿಸಿದರೆ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಸುದ್ದಿ ಸಂಸ್ಥೆ ಐಎಎನ್ಎಸ್ಗೆ ಮಾತನಾಡಿ, ಜಮ್ಮುವಿನಲ್ಲಿ ಹೊರಡಿಸಲಾದ ರೆಡ್ ಅಲರ್ಟ್ ಆಧಾರದ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಿಬಿಕೆಎಸ್ ಮತ್ತು ಡಿಸಿ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.

Read More

ನವದೆಹಲಿ: ಪಾಕಿಸ್ತಾನದಿಂದ ಡ್ರೋನ್, ಕ್ಷಿಪಣಿ ಮೂಲಕ ಜಮ್ಮುವಿನ ವಾಯುನೆಲೆ, ರಾಜಸ್ಥಾನದ ಜೈಸಲ್ಮೇರ್ ಮೇಲೆ ದಾಳಿಯನ್ನು ನಡೆಸಲಾಯಿತು. ಈ ದಾಳಿಯನ್ನು ಭಾರತ ಸಂಪೂರ್ಣವಾಗಿ ವಿಫಲಗೊಳಿಸಿದೆ. ಜಮ್ಮು, ರಾಜಸ್ಥಾನದ ವಾಯು ನೆಲೆಯ ಮೇಲೆ ಪಾಕಿಸ್ತಾನ ನಡೆಸಿದಂತ ದಾಳಿಯನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಭಾರತದ ವಾಯು ನೆಲೆಯ ಮೇಲೆ ಪಾಕಿಸ್ತಾನ ದಾಳಿಯನ್ನು ನಡೆಸುತ್ತಿದ್ದಂತೇ, ಜಮ್ಮು, ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಬ್ಲಾಕ್ ಔಟ್ ಮಾಡಲಾಯಿತು. ಈ ಬಳಿಕ ಭಾರತೀಯ ವಾಯು ಪಡೆಯ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಸಕ್ರೀಯಗೊಳಿಸಿದಂತ ಸೇನೆಯು, ಪಾಕಿಸ್ತಾನದ ಡ್ರೋನ್, ಕ್ಷಿಪಣಿ, ಫೈಟರ್ ಜೆಟ್ ಗಳನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪಾಕಿಸ್ತಾನದಿಂದ ಭಾರತದ ಮೇಲೆ ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದಂತ ಆಕ್ರಮಣವನ್ನು ಅಷ್ಟೇ ತ್ವರಿತವಾಗಿ ಭಾರತೀಯ ಸೇನೆ ವಿಫಲಗೊಳಿಸಿದ್ದು, ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/breaking-major-surgery-to-the-administrative-machinery-by-the-state-government-transfer-of-9-kas-officers-kas-officer-transfer/ https://kannadanewsnow.com/kannada/breaking-several-killed-in-drone-attacks-in-12-places-in-pakistan-prime-minister-shehbaz-sharif-calls-emergency-meeting/

Read More

ಬೆಂಗಳೂರು: ಶಾಸಕ ಸ್ಥಾನದಿಂದ ಗಾಲಿ ಜನಾರ್ಧನ ರೆಡ್ಡಿಯನ್ನು ಅನರ್ಹಗೊಳಿಸಲಾಗಿದೆ. ಈ ಮೂಲಕ ಸಿಬಿಐ ಸ್ಪೆಷಲ್ ಕೋರ್ಟ್ ನಿಂದ ಶಿಕ್ಷೆಗೆ ಒಳಗಾಗಿರುವಂತ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಶಾಸಕ ಸ್ಥಾನದಿಂದ ಜನಾರ್ಧನ ರೆಡ್ಡಿ ಮುಂದಿನ 6 ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕರಾಗಿದ್ದಂತ ಜನಾರ್ಧನ ರೆಡ್ಡಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮೇ,6ರಿಂದ ಅನ್ವಯವಾಗುವಂತೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಅಂದಹಾಗೇ ಸಿಬಿಐ ಕೋರ್ಟ್ ನಿಂದ ಜನಾರ್ಧನ ರೆಡ್ಡಿ ಅವರನ್ನು ಮೈನಿಂಗ್ ಕೇಸಲ್ಲಿ ದೋಷಿ ಎಂಬುದಾಗಿ ಆದೇಶಿಸಿತ್ತು. ಅಲ್ಲದೇ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. https://kannadanewsnow.com/kannada/breaking-several-killed-in-drone-attacks-in-12-places-in-pakistan-prime-minister-shehbaz-sharif-calls-emergency-meeting/ https://kannadanewsnow.com/kannada/breaking-major-surgery-to-the-administrative-machinery-by-the-state-government-transfer-of-9-kas-officers-kas-officer-transfer/

Read More

ಶ್ರೀನಗರ:  ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅನೇಕ ಪಾಕಿಸ್ತಾನಿ ಶಸ್ತ್ರಾಸ್ತ್ರಗಳು ದಾಳಿ ನಡೆಸಿದ ನಂತರ ಗುರುವಾರ ತಡರಾತ್ರಿ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಪಾಕಿಸ್ತಾನ ನಡೆಸಿದಂತ ಡ್ರೋನ್, ಕ್ಷಿಪಣಿ ದಾಳಿಯನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಅಷ್ಟೇ ಯಶಸ್ವಿಯಾಗಿ ತಟಸ್ಥಗೊಳಿಸಲಾಗಿದೆ. ಹೌದು ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ತ್ವರಿತವಾಗಿ ಸಕ್ರಿಯಗೊಳಿಸಲಾಯಿತು. ಎಲ್ಲಾ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೊಡೆಯುವ ಮೊದಲು ತಡೆದು, ಧ್ವಂಸಗೊಳಿಸಿದೆ. https://twitter.com/AdityaRajKaul/status/1920496177906106809 ಪಾಕಿಸ್ತಾನದ ಡ್ರೋನ್ ದಾಳಿಯ ಕಾರಣ ಜಮ್ಮುವಿನಲ್ಲಿ ನಗರದಾದ್ಯಂತ ವಿದ್ಯುತ್ ಕಡಿತಕ್ಕೆ ಕಾರಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೆಚ್ಚಿನ ಭಾಗಗಳಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಯಿತು. https://twitter.com/sidhant/status/1920499336347042046

Read More