Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರವರೆಗೆ (ಹಳದಿ ಮಾರ್ಗ) ಮೆಟ್ರೋ ರೈಲು ಸಂಚಾರವನ್ನು 11.08.2025 ರಿಂದ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮವಾಗಿ, ವಿಶೇಷವಾಗಿ ಆನೇಕಲ್ ಹಾಗೂ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಗರಿಷ್ಠ ಸಮಯಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಅಂತಿಮ ಹಂತದ ಸಂಪರ್ಕವನ್ನು (Last Mile Connectivity) ಸುಧಾರಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪರಸ್ಪರ ಸಂಯೋಜನೆ ಮಾಡಿಕೊಂಡು ವಿಶೇಷ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಯ ಭಾಗವಾಗಿ, ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಬಿಎಂಟಿಸಿ ವತಿಯಿಂದ 04 (ನಾಲ್ಕು) ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್…

Read More

ಮಂಡ್ಯ : ಜಿಲ್ಲೆಯಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಜಿಲ್ಲೆಗೆ ಕಾರ್ಖಾನೆಗಳು ಬರಬೇಕು ಹಾಗಾಗಿ ಸಾತನೂರು ಫಾರ್ಮ್ ನಲ್ಲಿ ಕಾಡಾಗೆ ಸೇರಿದ ಸರ್ವೇ ನಂ 257 ರಲ್ಲಿರುವ 90 ಎಕರೆ ಜಾಗವನ್ನು ಇಂದು ವೀಕ್ಷಣೆ ಮಾಡಲಾಗಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಸೋಮವಾರ ಹೇಳಿದರು. ಮಂಡ್ಯ ನಗರ ಬಳಿಯ ಸಾತನೂರು ಫಾರ್ಮ್ ನಲ್ಲಿ ಖಾಲಿ ಇರುವ ಜಾಗವನ್ನು ಅಧಿಕಾರಿಗಳ ಜೊತೆಗೆ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸದರಿ ಜಾಗ ಅಚ್ಚುಕಟ್ಟಾದ ಪ್ರದೇಶವಾಗಿದೆ. ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೈಗಾರಿಕೆಗೆ ಮೀಸಲಿಡಬೇಕು. ಈಗಾಗಲೇ ಮುಖ್ಯಮಂತ್ರಿಗಳು , ಉಪಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಸದರಿ ಜಾಗಕ್ಕೆ ಕಾರ್ಖಾನೆಗಳು ಬರುವುದೇ ಆದರೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಕೈಗಾರಿಕೆಗೆ ಮೀಸಲಿಡೋಣ ಎಂದು ಹೇಳಿದ್ದಾರೆ ಎಂದರು. ಹಾಗಾಗಿ ಇಂದು ಸ್ಥಳವನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ. ಜಾಗವು ಉತ್ತಮವಾಗಿದ್ದು ಮೂರು ಕಡೆಯಿಂದ ರಸ್ತೆ ಕೂಡಿದೆ. ನೀರಿನ ಸೌಲಭ್ಯವು ಸೂಕ್ತವಾಗಿದ್ದು ನಗರಕ್ಕೆ ಹೊಂದಿಕೊಂಡಂತೆ ಇದೆ. ವಿದೇಶದಗಳಿಂದ ಬರುವ ಕಾರ್ಖಾನೆಗಳಿಗಾಗಿ ನೀಡಬೇಕಾದ…

Read More

ಮಂಡ್ಯ : ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಆತನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಜರುಗಿದೆ. ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಮಹದೇವಸ್ವಾಮಿ ಅಲಿಯಾಸ್ ಬೋಟಿ ಮಹದೇವ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ. ಮೃತ ವ್ಯಕ್ತಿ ಮಹದೇವಸ್ವಾಮಿ ಕೆ.ಎಂ.ದೊಡ್ಡಿಯಲ್ಲಿ ಬೀದಿ ಬದಿ ಹೋಟೆಲ್ ನಡೆಸುತ್ತಿದ್ದು, ದೊಡ್ಡಅರಸಿನಕೆರೆ ಚಿಕ್ಕಮಾಯಿಗಯ್ಯ ಎಂಬುವವರ ಮನೆಯಲ್ಲಿ ಬಾಡಿಗೆಗೆ ಪಡೆದು ವಾಸವಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಬಿಟ್ಟು ನಾಪತ್ತೆಯಾಗಿದ್ದನು. ಈತನ ಪತ್ನಿ ನಾಪತ್ತೆಯಾದ ಗಂಡನನ್ನು ಸಾಕಷ್ಟು ಹುಡುಕಿ ಸಾಕಾಗಿದ್ದರು. ಬಳಿಕ, ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದಲೂ ಮನೆ ಬಾಡಿಗೆಗೆ ನೀಡಿದ್ದ ಮಾಯಿಗಯ್ಯ ಅವರ ಪತ್ನಿ ಗೀತಾ ಎಂಬುವವರು ಬಾಡಿಗೆ ನೀಡುವಂತೆ ಕೇಳಿದ್ದರು. ಆದರೆ ಬಾಡಿಗೆ ನೀಡಲು ಮಹದೇವಸ್ವಾಮಿ ಇಲ್ಲದಿರುವ ಕಾರಣ ಈತನ ತಮ್ಮ…

Read More

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ. ಪರೀಕ್ಷೆ ನಡೆದು ಕೇವಲ ಎಂಟು ದಿನಗಳಲ್ಲೇ ಫಲಿತಾಂಶವನ್ನೂ ಪ್ರಕಟಿಸಿದ್ದು ಆಕ್ಷೇಪಣೆಗಳು ಇದ್ದಲ್ಲಿ ಜನವರಿ 7ರೊಳಗೆ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ಇದಲ್ಲದೆ, ವಿವಿಧ ಹುದ್ದೆಗಳ ನೇಮಕಾತಿ ಸಂಬಂಧದ ಕನ್ನಡ ಕಡ್ಡಾಯ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. https://kannadanewsnow.com/kannada/miscreants-shoot-dead-another-hindu-man-in-bangladesh/ https://kannadanewsnow.com/kannada/conspiracy-by-the-state-government-to-cover-up-the-bellary-shootout-hdk-makes-serious-allegations/

Read More

ಬಾಂಗ್ಲಾದೇಶ: ಬಾಂಗ್ಲಾದಲ್ಲಿ ಹಿಂದೂಗಳ ಹತ್ಯಾ ಸರಣಿ ಮುಂದುವರೆದಿದೆ. ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆಯಾಗುತ್ತಿದೆ. ಈಗಾಗಲೇ ನಾಲ್ಕೈದು ಹಿಂದೂಗಳನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡಲಾಗಿದೆ. ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. https://kannadanewsnow.com/kannada/more-facilities-for-e-assets-11a-account-and-multi-storey-building-applications-will-be-available-soon-minister-priyank-kharge/ https://kannadanewsnow.com/kannada/necessary-steps-will-be-taken-to-fulfill-the-demands-of-ocean-artisans-mla-gopalakrishna-belur-assures/

Read More

ಬೆಂಗಳೂರು: ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ-11ಬಿ ಖಾತೆಗಳನ್ನು ಎರಡು ವಾರಗಳ ಕಾಲವಾಧಿಯಲ್ಲಿ ನಮೂನೆ-11ಎ ಖಾತೆಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮತ್ತು ಹೊಸ ಬಡಾವಣೆ ಮತ್ತು ಬಹುಮಹಡಿ (ಅಪಾರ್ಟ್‌ಮೆಂಟ್‌) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಟಾನಗೊಳಿಸಲು ಇಲಾಖೆ ಬದ್ದವಾಗಿದ್ದು, ಅದರನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲಾಗಿರುತ್ತದೆ. ಈವರೆಗೆ ಆನ್‍ಲೈನ್ ಮೂಲಕ 21,429 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅನುಮೋದನೆಗಾಗಿ ವಿವಿಧ ಹಂತದಲ್ಲಿ ಬಾಕಿ ಇರುತ್ತದೆ. ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳಿಕರಿಸಲು ಕ್ರಮವಹಿಸಲಾಗುತ್ತಿದೆ, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು…

Read More

ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ನಿಗಮದ ಪ್ರತಿಷ್ಠಿತ ಸಾರಿಗೆ ಬಸ್ಸುಗಳ ಪ್ರಯಾಣದ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಕರಾರಸಾ ನಿಗಮವು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದ್ದು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಆಯ್ದ ಮಾರ್ಗಗಳಾದ ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡ 5 ರಿಂದ 15 ರವರೆಗೆ ರಿಯಾಯಿತಿ ನೀಡಲಾಗಿದೆ. ಸದರಿ ರಿಯಾಯಿತಿಯು…

Read More

ಶಿವಮೊಗ್ಗ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸ್ಥಳಕ್ಕೆ ತೆರಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮನೆ ಮಂಜೂರಾತಿ ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಕರಕುಶಲ ಕ್ರಮಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಲೋಕೇಶ ಕುಮಾರ್ ಗುಡಿಗಾರ್, ಕರಕುಶಲ ಕಲೆಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುಶಲಕರ್ಮಿಗಳ ಬದುಕು ಸಂಕಷ್ಟದಲ್ಲಿದೆ. ಕೆಲಸ ಮಾಡಲು ಶ್ರೀಗಂಧ ಸಿಗುತ್ತಿಲ್ಲ. ಜೊತೆಗೆ ಸರ್ಕಾರದ ಯಾವ ಸೌಲಭ್ಯವೂ ಕುಶಲಕರ್ಮಿಗಳನ್ನು ತಲುಪುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡರು. ವಿಶ್ವ 1, ವಿಶ್ವ 2 ಹಾಗೂ ಪಶ್ಚಿಮಘಟ್ಟ ಡಿಸಿಎಚ್ ಯೋಜನೆಯಡಿ ಕುಶಲಕರ್ಮಿಗಳು, ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ವಸತಿ ಯೋಜನೆ ತಲುಪುತ್ತಿಲ್ಲ. 22 ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡು ಕುಶಲಕರ್ಮಿಗಳಿಗೆ ಮನೆ…

Read More

ಸಾಗರ : ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಿದೆ. ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಾಗರ ನಗರಕ್ಕೆ 2 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂದು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ಸಾಗರ ನಗರಸಭೆಯ 1.50 ಕೋಟಿ ರೂ. ಹಣವನ್ನು ಸಹ ರಸ್ತೆ ನಿರ್ಮಾಣಕ್ಕೆ ಮೀಸಲು ಇರಿಸಿದೆ. ಫೆಬ್ರವರಿ 3ರಂದು ಮಾರಿಕಾಂಬಾ ಜಾತ್ರೆ ಪ್ರಾರಂಭಗೊಳ್ಳಲಿದೆ. ಅಷ್ಟರೊಳಗೆ ನಗರವನ್ನು ಸುಂದರವಾಗಿ ನಿರ್ಮಿಸಬೇಕಾಗಿದೆ. ಈಗಾಗಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬಾರೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಸಣ್ಣಮನೆ ಸೇತುವೆ ಬಳಿ ಕಾಮಗಾರಿ ವೀಕ್ಷಣೆ ನಡೆಸಿ ಶೀಘ್ರ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪೊಲೀಸ್ ಸ್ಟೇಷನ್ ವೃತ್ತವನ್ನು ಅಭಿವೃದ್ದಿಪಡಿಸುವುದು, ಪೊಲೀಸ್ ಠಾಣೆಯನ್ನು ಬೇರೆ ಕಡೆ ವರ್ಗಾಯಿಸಲು ಸಹ ಸೂಚಿಸಿದೆ ಎಂದು ತಿಳಿಸಿದರು.…

Read More

ಭೂಲೋಕದ ಪ್ರಾಣಿ ಹಾಗೂ ಪಕ್ಷಿಗಳು ಹೆಚ್ಚಾಗಿ ದೇವರ ವಾಹನವೆಂದು ಪರಿಗಣಿಸಿ ದೇವರ ಅಂಶ ಅಥವಾ ಅನುಗ್ರಹ ಇದೆ ಎಂದು ನಾವು ಪೂಜಿಸುತ್ತೇವೆ. ಆದರೆ “ಬೆಕ್ಕನ್ನು’ ಅಪಶಕುನ ಎನ್ನುತ್ತಾರೆ. ಬೆಕ್ಕಿಗೆ ವಿಶೇಷ ಮನ್ನಣೆ ಕೊಡದಿರಲು ಕಾರಣವಿದೆ. ಪುರಾಣ ಕಥೆ ಪ್ರಕಾರ “ಸಮುದ್ರಮಂಥನ” ದ ಕಾಲಕ್ಕೆ ಹೋದರೆ ಮಂಥನದಲ್ಲಿ ಮೊದಲು ಬಂದ ಕಾರ್ಕೋಟಕ “ವಿಷ” ವನ್ನು ಲೋಕಕಲ್ಯಾಣಾರ್ಥವಾಗಿ ಶಿವನೇ ಸ್ವೀಕರಿಸಿ ನಂಜುಂಡೇಶ್ವರನಾದ. ಮಂಥನ ಮುಂದು ವರೆದಾಗ ಅಶ್ವ, ಗಜ, ಚಂದ್ರ, ಅಪ್ಸರೆಯರು, ಗಂಧರ್ವರು ಬರುತ್ತಿದ್ದಂತೆ ದೇವಿ ಮಹಾಲಕ್ಷ್ಮಿಯ ಜೊತೆ ಅವಳ ಅಕ್ಕ ‘ಅಲಕ್ಷ್ಮಿ’ ರಾಕ್ಷಸರ ಜೊತೆ ಹೊರ ಬಂದಳು ಹಾಗೆ ಬರುವಾಗ ಅಲಕ್ಷ್ಮಿ ಜೊತೆ ‘ಬೆಕ್ಕು’ ಬಂದಿತು. ಲಕ್ಷ್ಮಿ ಜೊತೆ ಬಂದ ಬೆಕ್ಕನ್ನು ಯಾರೂ ವಾಹನ ಮಾಡಿಕೊಳ್ಳಲಿಲ್ಲ ಕೊನೆಗೆ ಅದು ಜೇಷ್ಠಾ ಲಕ್ಷ್ಮಿಯ ವಾಹನವಾಯಿತು. ಅಲ್ಲದೆ ಜೇಷ್ಠಾ ಲಕ್ಷ್ಮಿ ಆಸುರರ ಶಕ್ತಿಯನ್ನು ಆಶ್ರಯಿಸಿದಳು. ತಂಗಿ ಲಕ್ಷ್ಮಿ ವಿಷ್ಣುವಿನ ಆಶ್ರಯ ಪಡೆದು “ಮಹಾಲಕ್ಷ್ಮಿ” ಆಗಿ ಸಂಪತ್ತಿನ ಒಡತಿ ಎಂದು ಪೂಜಿಸಿದರು. ಅಕ್ಕ ಜೇಷ್ಠಾ ಲಕ್ಷ್ಮಿಯನ್ನು ಅಲಕ್ಷಿಸಿದ…

Read More