Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ 19 ಕಾರ್ಯಕರ್ತೆಯರು ಮತ್ತು 59 ಸಹಾಯಕಿಯರ ಹುದ್ದೆಗಳನ್ನು ಗೌರವಧನ ಸೇವೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಡಿ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಭದ್ರಾವತಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವೆಬ್‌ಸೈಟ್ ಅಥವಾ ಭದ್ರಾವತಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವುದು. https://kannadanewsnow.com/kannada/kset-exam-2025-provisional-results-announced-check-the-result-like-this/ https://kannadanewsnow.com/kannada/does-drinking-water-while-standing-harm-your-knees-read-what-science-says/
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹೆಚ್.ಯು ವೈದ್ಯನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಇವರಲ್ಲದೇ ಉಪಾಧ್ಯಕ್ಷರಾಗಿ ದೇಶಾದ್ರಿ ಹೊಸ್ಮನೆ, ಕಾರ್ಯದರ್ಶಿಯಾಗಿ ದೀಪಕ್ ಸಾಗರ್ ಸೇರಿದಂತೆ ನೂತನ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಘಟಕದ KUWJ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಮ್ಮ ನಾಡು ಸಾಪ್ತಾಹಿಕ ಪುರವಣೆಯ ಮುಖ್ಯಸ್ಥರಾದಂತ ಹೆಚ್.ಯು ವೈದ್ಯನಾಥ್ ಅವರನ್ನು ಜಿಲ್ಲಾಧ್ಯಕ್ಷರಾಗಿ, ಉಪಾಧ್ಯಕ್ಷರನ್ನಾಗಿ ಶಿಕಾರಿಪುರದ ಜನಹೋರಾಟ ಪತ್ರಿಕೆಯ ವರದಿಗಾರ ಹುಚ್ರಾಯಪ್ಪ.ಕೆ.ಎಸ್, ಶಿವಮೊಗ್ಗದ ಹೊಸದಿಗಂತ ಜಿಲ್ಲಾ ವರದಿಗಾರ ಸತ್ಯನಾರಾಯಣಪ್ಪ.ಕೆ ಹಾಗೂ ನಮ್ಮ ನಾಡು ಪತ್ರಿಕೆಯ ಸುದ್ದಿ ಸಂಪಾದಕ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿಯಾಗಿ ಡಿಡಿ ನ್ಯೂಸ್ ವರದಿಗಾರ ಆರ್.ಎಸ್ ಹಾಲಸ್ವಾಮಿ, ಕಾರ್ಯದರ್ಶಿಯಾಗಿ ಸಾಗರದ ವಿಜಯವಾಣಿ ವರದಿಗಾರ ದೀಪಕ್ ಸಾಗರ್, ಸುವರ್ಣ ನ್ಯೂಸ್ ವರದಿಗಾರ ರಾಜೇಶ್ ಕಾಮತ್ ಹಾಗೂ ಹೊಸ ದಿಗಂತ ಪತ್ರಿಕೆಯ…
ಪಾಟ್ನಾ: 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಸೋತ ಒಂದು ದಿನದ ನಂತರ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಶನಿವಾರ ರಾಜಕೀಯವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ರೋಹಿಣಿ ಆಚಾರ್ಯ ಅವರು, ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ನಿರಾಕರಿಸುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ… ಮತ್ತು ನಾನು ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. https://twitter.com/RohiniAcharya2/status/1989622444865589333 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 25 ಸ್ಥಾನಗಳನ್ನು ಗಳಿಸುವ ಮೂಲಕ ಭಾರಿ ಹಿನ್ನಡೆ ಅನುಭವಿಸಿದ ಒಂದು ದಿನದ ನಂತರ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕುಲಪತಿ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಶನಿವಾರ ರಾಜಕೀಯವನ್ನು ತ್ಯಜಿಸುವುದಾಗಿ ಮತ್ತು ತಮ್ಮ ಕುಟುಂಬದೊಂದಿಗೆ ಸಂಬಂಧವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. https://kannadanewsnow.com/kannada/deshadri-hosmane-appointed-as-vice-president-of-shivamogga-district-karnataka-working-journalists-association/ https://kannadanewsnow.com/kannada/does-drinking-water-while-standing-harm-your-knees-read-what-science-says/
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ನಮ್ಮ ನಾಡು ಪತ್ರಿಕೆಯ ಸುದ್ದಿ ಸಂಪಾದಕರಾದಂತ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ಯ ಶಿವಮೊಗ್ಗ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ ಮಾಡಿರುವುದಾಗಿ ಜಿಲ್ಲಾಧ್ಯಕ್ಷರಾದಂತ ಹೆಚ್.ಯು ವೈದ್ಯನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಆರ್.ಎಸ್ ಹಾಲಸ್ವಾಮಿ ಘೋಷಿಸಿದ್ದಾರೆ. ದೇಶಾದ್ರಿ ಹೊಸ್ಮನೆ ಅವರು ಕನ್ನಡ ಪ್ರಭ, ಸಮಯ ಟಿವಿ, ಉದಯ ನ್ಯೂಸ್, ಸಿನಿ ಲಹರಿಯನ್ನು ಕೆಲಸ ಮಾಡಿದಂತ ಅನುಭವ ಹೊಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ದೇಶಾದ್ರಿ ಹೊಸ್ಮನೆ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿ ಆದೇಶಿಸಿತ್ತು. ಇದೀಗ ದೇಶಾದ್ರಿ ಹೊಸ್ಮನೆ ಅವರು ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೀಗೆ ನೇಮಕಗೊಂಡಂತ ದೇಶಾದ್ರಿ ಹೊಸ್ಮನೆ ಅವರಿಗೆ ಕನ್ನಡ ನ್ಯೂಸ್ ನೌ ಹೃತ್ಪೂರ್ವಕ ಅಭಿನಂದನೆ, ಶುಭಾಶಯವನ್ನು ತಿಳಿಸುತ್ತದೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ದೀಪಕ್ ಸಾಗರ್ ಅವರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ, ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದೀಪಕ್ ಸಾಗರ್ ಅವರನ್ನು ಶಿವಮೊಗ್ಗ ಜಿಲ್ಲಾ ಘಟಕದ ಕೆಯುಡಬ್ಲ್ಯೂಜೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾಧ್ಯಕ್ಷರಾದಂತ ಹೆಚ್.ಯು ವೈದ್ಯನಾಥನ್, ಪ್ರಧಾನ ಕಾರ್ಯದರ್ಶಿ ಆರ್.ಎಸ್ ಹಾಲಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅಂದಹಾಗೇ ದೀಪಕ್ ಸಾಗರ್, ಡಿಡಿ ನ್ಯೂಸ್ ಶಿವಮೊಗ್ಗ ಜಿಲ್ಲಾ ಕರೆಸ್ಪಾಂಡೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಪ್ರಜಾವಾಣಿ, ವಿದ್ಯುನ್ಮಾನ ಮಾಧ್ಯಮಗಳಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ. ಪ್ರಸ್ತುತ ಸಾಗರ ತಾಲ್ಲೂಕು ವಿಜಯವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವಂತ ದೀಪಕ್ ಸಾಗರ್ ಅವರನ್ನು ಶಿವಮೊಗ್ಗ ಜಿಲ್ಲಾ ಘಟಕದ ಕೆಯುಡಬ್ಲ್ಯೂಜೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಅವರಿಗೆ ಕೆಎನ್ಎನ್ ಸಂಸ್ಥೆಯೂ ಹೃತ್ಪೂರ್ವಕವಾಗಿ ಅಭಿನಂದನೆ, ಶುಭಾಶಯವನ್ನು ಕೋರುತ್ತಿದೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು https://kannadanewsnow.com/kannada/nda-wins-by-a-landslide-in-bihar-bjp-bursts-crackers-and-distributes-sweets-in-sagar-to-celebrate/…
ಶಿವಮೊಗ್ಗ: ಬಿಹಾರ ವಿಧಾನಸಭೆಯಲ್ಲಿ ಎನ್ ಡಿ ಎ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರದಂದು ಸಾಗರದಲ್ಲಿ ಬಿಜೆಪಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಮಾತನಾಡಿದಂತ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮತದಾರರ ಸೆಳೆಯಲು ಅನೇಕ ಗಿಮಿಕ್ ಮಾಡಿಯೂ ವಿಫಲವಾಗಿದೆ. ಬಿಹಾರದ ಪ್ರಜ್ಞಾವಂತ ಮತದಾರ ನರೇಂದ್ರ ಮೋದಿ ಅವರು ರಾಷ್ಟçಕ್ಕೆ ನೀಡಿರುವ ಸಮರ್ಥ ನಾಯಕತ್ವ ಹಾಗೂ ಬಿಹಾರದಲ್ಲಿನ ಎನ್.ಡಿ.ಎ. ಮೈತ್ರಿಕೂಟದ ಕಾರ್ಯವೈಖರಿಗೆ ಮನಸೋತು ತಮ್ಮ ಮತ ನೀಡಿದ್ದಾರೆ ಎಂದರು. ರಾಹುಲ್ ಗಾಂಧಿ ಮೀನು ಹಿಡಿಯುವ ನಾಟಕ ಮಾಡಿದ್ದು ಜನರಿಗೆ ಅರ್ಥವಾಗಿದೆ. ಸರ್ಕಾರಿ ಉದ್ಯೋಗ, ಮಹಿಳೆಯರ ಖಾತೆಗೆ ಹಣ ಸೇರಿ ಅನೇಕ ಆಮೀಷಗಳನ್ನು ಮತದಾರರಿಗೆ ಒಡ್ಡಲಾಗಿತ್ತು. ಆದರೆ ಇದೆಲ್ಲಾ ಸುಳ್ಳು ಭರವಸೆ ಎನ್ನುವುದನ್ನು ಮನಗಂಡ ಮತದಾರ ಮಹಾಘಟಬಂಧನ್‌ಗೆ ಬೆಂಬಲ ನೀಡಿದೆ ಅತ್ಯಂತ ಕೆಳಹಂತಕ್ಕೆ ತಲುಪುವಂತೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ, ಕರ್ನಾಟಕದಲ್ಲೂ ಬಿಜೆಪಿ ನೇತೃತ್ವದ NDA ಅದ್ವಿತೀಯ…
ಆರೋಗ್ಯವಾಗಿರಲು ಸಾಕಷ್ಟು ನೀರು ಸೇವನೆ ಅತ್ಯಗತ್ಯ. ದೇಹವು ಹೈಡ್ರೇಟೆಡ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ದಿನವಿಡೀ ಸಾಕಷ್ಟು ನೀರು ಕುಡಿಯಲು ವೈದ್ಯರು ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಸಾಕಷ್ಟು ನೀರು ಸೇವನೆ ಮಾಡದಿರುವುದು ನಿರ್ಜಲೀಕರಣ, ಆಯಾಸ, ತಲೆನೋವು, ತಲೆತಿರುಗುವಿಕೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗ ಪ್ರಶ್ನೆ ಉದ್ಭವಿಸೋದು ಹಾಲು, ಜ್ಯೂಸ್ ಮತ್ತು ಇತರ ಪಾನೀಯಗಳಿಗೆ ಮುಕ್ತಾಯ ದಿನಾಂಕ ಇರುವಂತೆಯೇ, ನೀರಿಗೂ ಮುಕ್ತಾಯ ದಿನಾಂಕವಿದೆಯೇ? ಇದನ್ನು ವಿವರವಾಗಿ ಮುಂದಿ ಓದಿ ತಿಳಿಯಿರಿ. ನೀರು ಕೆಟ್ಟು ಹೋಗುತ್ತದೆಯೇ? ಶುದ್ಧ ನೀರು ಬ್ಯಾಕ್ಟೀರಿಯಾ ಅಥವಾ ಕಲ್ಮಶಗಳಿಂದ ಮುಕ್ತವಾಗಿರುವುದರಿಂದ ಅದು ತಾನಾಗಿಯೇ ಕೆಟ್ಟು ಹೋಗುವುದಿಲ್ಲ. ನೀರನ್ನು ಕೊಳಕು ಪಾತ್ರೆಯಲ್ಲಿ ಅಥವಾ ಕಲುಷಿತ ವಾತಾವರಣದಲ್ಲಿ ಸಂಗ್ರಹಿಸದ ಹೊರತು, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆಗಳು ಬಹಳ ಕಡಿಮೆ. ಆದಾಗ್ಯೂ, ನೀರನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಅದು ಕುಡಿಯಲು ಅಸುರಕ್ಷಿತವಾಗಬಹುದು. ವಾಸ್ತವವಾಗಿ, ನೀರಿನ ಸುರಕ್ಷತೆಯು ಸಂಪೂರ್ಣವಾಗಿ ಪಾತ್ರೆ ಮತ್ತು ಅದನ್ನು ಸಂಗ್ರಹಿಸುವ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಬಾಟಲ್ ನೀರಿನ ಶೆಲ್ಫ್ ಜೀವಿತಾವಧಿ ಹೆಚ್ಚಿನ ಪ್ಯಾಕ್ ಮಾಡಲಾದ…
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಗೆಲುವು ಸಾಧಿಸಿದ ಕೆಲವೇ ಗಂಟೆಗಳ ನಂತರ, ಪಕ್ಷವು ಮಾಜಿ ಕೇಂದ್ರ ಸಚಿವ ಆರ್‌ಕೆ ಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಿತು. ಮೂಲಗಳ ಪ್ರಕಾರ, ಮಾಜಿ ಕೇಂದ್ರ ಸಚಿವರ ವಿರುದ್ಧ ಅವರ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಹೇಳಿಕೆಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ನಾಯಕರು ಎನ್‌ಡಿಎ ನಾಯಕತ್ವವನ್ನು ಪ್ರಶ್ನಿಸಿ ಬಿಹಾರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಬಿಹಾರದ ಅರ್ರಾಹ್‌ನ ಮಾಜಿ ಸಂಸದ ಸಿಂಗ್ ಪಕ್ಷದ ಚಟುವಟಿಕೆಗಳಿಗೆ ವಿರುದ್ಧವಾಗಿ ಪರಿಗಣಿಸಲಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. “ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ. ಇದು ಶಿಸ್ತಿನ ವ್ಯಾಪ್ತಿಗೆ ಬರುತ್ತದೆ. ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಪಕ್ಷಕ್ಕೆ ಹಾನಿಯನ್ನುಂಟುಮಾಡಿದೆ. ಆದ್ದರಿಂದ, ನಿರ್ದೇಶನದಂತೆ, ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಮತ್ತು ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬುದನ್ನು ವಿವರಿಸಲು…
ನಮ್ಮ ಮನೆಗಳಲ್ಲಿ ಅಥವಾ ನಮ್ಮ ಸುತ್ತಮುತ್ತಲಿನ ಜನರಿಂದ ನಾವು ಇಂತಹ ಅನೇಕ ವಿಷಯಗಳನ್ನು ಕೇಳುತ್ತೇವೆ, ಅದರಲ್ಲಿ ನಿಂತು ನೀರು ಕುಡಿಯುವುದರಿಂದ ಮೊಣಕಾಲು ಸಮಸ್ಯೆಗಳು ಉಂಟಾಗುತ್ತವೆ ಎಂಬ ಅಂಶವೂ ಸೇರಿದೆ. ಇದು ಎಷ್ಟು ನಿಜ? ವಿಜ್ಞಾನ ಹೇಳೋದೇನು ಅಂತ ಮುಂದೆ ಓದಿ. ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬೇಕು. ಇದರಲ್ಲಿ ಎಷ್ಟು ಸತ್ಯವಿದೆ ಮತ್ತು ಎಷ್ಟು ಸುಳ್ಳು ಎಂದು ತಿಳಿಸಿ. 1 /7 ಈ ಹೇಳಿಕೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳ ಮೇಲೆ ಯಾವುದೇ ನೇರ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 2 /7 ವಾಸ್ತವವಾಗಿ, ಮೊಣಕಾಲು ಹಾನಿಗೆ ಕಾರಣ ನೀರು ಕುಡಿಯುವುದಲ್ಲ, ಬದಲಾಗಿ ದೇಹದ ತೂಕ ಹೆಚ್ಚಾಗುವುದು, ದೇಹದಲ್ಲಿ ಜೀವಸತ್ವಗಳ ಕೊರತೆ ಮತ್ತು ಮೂಳೆ ಬಲಕ್ಕೆ ಸಂಬಂಧಿಸಿದ ಸಮಸ್ಯೆಗಳು. 3 /7 ನಿಂತು ನೀರು ಕುಡಿಯುವುದರಲ್ಲಿನ ಒಂದೇ…
ದಕ್ಷಿಣಕನ್ನಡ : ಜಿಲ್ಲೆಯ ಬಂಟ್ವಾಳದಲ್ಲಿ ಫುಟ್ ಪಾತ್ ಒಂದಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಆರು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಸಿಗ್ನಲ್ ಬಳಿ ಸರಣಿ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಎರಡು ಟ್ಯಾಂಕರ್ ಹಾಗೂ ಆಟೋರಿಕ್ಷಾ ಕಾರಿನ ಮಧ್ಯ ಸರಣಿ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಟ್ಯಾಂಕರ್ ಹಿಂದೆ ಕಾರು ಹಾಗು ಆಟೋರಿಕ್ಷಾ ನಿಂತಿದ್ದವು. ಈ ವೇಳೆ ಹಿಂದಿನಿಂದ ಬಂದು ಮತ್ತೊಂದು ಟ್ಯಾಂಕರ್ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಎದುರಿಗೆ ನಿಂತಿದ್ದ ಕಾರಿಗೆ ಗುದ್ದಿದೆ. ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಆಟೋ ರಿಕ್ಷಾ ಅಪ್ಪಚ್ಚಿಯಾಗಿದೆ. ಆಟೋರಿಕ್ಷಾ ಚಾಲಕ ಹಾಗೂ ಇಬ್ಬರು…














