Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ನೇರಪಾವತಿಯಡಿ (ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳ ಪೈಕಿ ರೋಸ್ಟರ್ / ಮೀಸಲಾತಿ ನಿಯಮಾವಳಿಗಳನ್ವಯ 12,692 ಪೌರಕಾರ್ಮಿಕರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ: 16-11-2024 ರಂದು ಪ್ರಚುರಪಡಿಸಲಾಗಿರುತ್ತದೆ. ಸದರಿ ಪೌರಕಾರ್ಮಿಕ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆಯುವ ಸಲುವಾಗಿ ಸೇವಾ ಸಿಂಧು ಪೋರ್ಟಲ್ನಲ್ಲಿ ಈಗಾಗಲೇ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ. ಸೇವಾ ಸಿಂಧು ಅರ್ಜಿದಾರರ ಪ್ರಮಾಣ ಪತ್ರ ಪೋರ್ಟಲ್ನಲ್ಲಿ ಪ್ರಮಾಣ ಪತ್ರ-1, ಪ್ರಮಾಣ ಪತ್ರ-2 ಮತ್ತು ಇನ್ನಿತರೇ ದಾಖಲಾತಿಗಳನ್ನು ಆಪ್ಲೋಡ್ ಮಾಡಬೇಕಾಗಿರುವ ಅವಶ್ಯಕತೆಯಿರುತ್ತದೆ. ತತ್ಸಂಬಂಧ ಪ್ರಮಾಣ ಪತ್ರ-1 ಮತ್ತು ಪ್ರಮಾಣ ಪತ್ರ-2 ಗಳನ್ನು ಸಿದ್ದಪಡಿಸಲು ತಗಲುವ ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದಲೇ ಭರಿಸಲು ಮಾನ್ಯ ಮುಖ್ಯ ಆಯುಕ್ತರು ತೀರ್ಮಾನಿಸಿರುತ್ತಾರೆ. ಆದ್ದರಿಂದ, ಸದರಿ ಪ್ರಮಾಣ ಪತ್ರಗಳನ್ನು ಸಿದ್ದಪಡಿಸಿ, ಆಪ್ಲೋಡ್ ಮಾಡಲು ಯಾವುದೇ ಅಮಿಷಗಳಿಗೆ ಒಳಗಾಗಬಾರದೆಂದು ಪೌರಕಾರ್ಮಿಕ ಹುದ್ದೆಗೆ ಆಯ್ಕೆಯಾಗಿರುವ, ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿರುವ ಅಭ್ಯರ್ಥಿಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು…
ನವದೆಹಲಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ಸಿಂಧೂ ನದಿ ನೀರು ಒಪ್ಪಂದ ರದ್ದು ಮುಂದುವರೆಯಲಿದೆ. ಭಯೋತ್ಪಾದನೆ ನಿಲ್ಲಿಸಿದ್ರೇ ಮಾತ್ರವೇ ನೀರು ಹರಿಸುವುದಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಖಡಕ್ ಸಂದೇಶವನ್ನು ಪಾಕ್ ಗೆ ನೀಡಿದ್ದಾರೆ. ಈ ಮೂಲಕ ನೀರು ಬಿಡಿ ಪ್ಲೀಸ್ ಎಂದ ಪಾಪಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವಂತ ಅವರು, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಶ್ವಾಸಾರ್ಹವಾಗಿ ಮತ್ತು ಬದಲಾಯಿಸಲಾಗದಂತೆ ಕೊನೆಗೊಳಿಸುವವರೆಗೆ ಸಿಂಧೂ ಜಲ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ಹೇಳಿದ್ದಾರೆ. ಕಾಶ್ಮೀರದ ಬಗ್ಗೆ ಚರ್ಚಿಸಲು ಉಳಿದಿರುವ ಏಕೈಕ ವಿಷಯವೆಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು. ನಾವು ಆ ಚರ್ಚೆಗೆ ಮುಕ್ತರಾಗಿದ್ದೇವೆ ಎಂದು ಹೇಳಿದರು. https://kannadanewsnow.com/kannada/steps-for-simplifying-the-journalist-monthly-scheme-cm-media-advisor-k-v-prabhakar/ https://kannadanewsnow.com/kannada/big-news-attention-to-the-rural-people-of-the-state-all-these-services-of-the-gram-panchayat-will-be-available-on-whatsapp-watch-video/
ಬೆಂಗಳೂರು: ನಿವೃತ್ತ ಪತ್ರಕರ್ತರ ಮಾಸಾಶನದಲ್ಲಿರುವ ಕಠಿಣ ಷರತ್ತುಗಳನ್ನು ಸರಳೀಕರಣ ಮಾಡಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ವಿಧಾನಸೌಧದಲ್ಲಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಿತು. ಅರ್ಹ ಪತ್ರಕರ್ತರಿಗೆ ಕೂಡಲೇ ಮಾಸಾಶನ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದಿದ್ದು, ವಾರ್ತಾ ಇಲಾಖೆ ಆಯುಕ್ತರ ಜೊತೆಗೆ ಮಾತನಾಡಲಾಗಿದೆ. ನಿಯಮಾವಳಿ ಸರಳೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಪ್ರಭಾಕರ್ ತಿಳಿಸಿದರು. ಪತ್ರಕರ್ತರ ಮಾಸಾಶನ ನೀಡಲು ಕಠಿಣ ಷರತ್ತುಗಳನ್ನು ಹಾಕಿರುವುದನ್ನು ಕೈಬಿಡಬೇಕು. ಅರ್ಜಿ ಹಾಕಿದ ಪತ್ರಕರ್ತರಿಗೆ ಮಾಸಾಶನ ಮಂಜೂರು ಮಾಡಲು ಈ ಕಠಿಣ ಷರತ್ತುಗಳು ಅಡ್ಡಿಯಾಗಿರುವ ಕಾರಣ ಈ ಯೋಜನೆಯಿಂದ ಬಹುಪಾಲು ಪತ್ರಕರ್ತರು ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೂ ಅವರ ನಿವೃತ್ತಿ ಸಂದರ್ಭದಲ್ಲಿ ಮಾಸಾಶನ ಯೋಜನೆ…
ಶಿವಮೊಗ್ಗ: ಶಿವಮೊಗ್ಗದ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯು ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಐಟಿಐ ಪ್ರವೇಶ ಪಡೆಯಲು (ಎನ್.ಸಿ.ವಿ.ಟಿ. ಯೋಜನೆಯಡಿಯಲ್ಲಿ) ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಎರಡು ವರ್ಷಗಳ ಕೋರ್ಸ್ಗಳಾದ ಎಲೆಕ್ಟ್ರಿಷಿಯನ್, ಎಲೆಕ್ಟಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ವರ್ಚುವಲ್ ಅನಾಲಿಸಿಸ್ ಆಂಡ್ ಡಿಸೆನರ್, ಸಿಎನ್ಸಿ ಮೆಷಿನಿಂಗ್ ಟೆಕ್ನಿಷಿಯನ್, ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ಕೋರ್ಸ್ಗಳಿಗೆ ಹಾಗೂ ಒಂದು ವರ್ಷದ ಕೋರ್ಸ್ಗಳಾದ ಸಿಓಪಿಎ ಮತ್ತು ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವುದು. ಆಸಕ್ತರು ಸಂಸ್ಥೆಯ ವೆಬ್ಸೈಟ್ www.cite.karnataka.gov.in ಮೂಲಕ ಮೇ 28 ರೊಳಗಾಗಿ ಅರ್ಜಿ ಸಲ್ಲಿಸಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ, ಆಧಾರ್ ಕಾರ್ಡ್, ಇತ್ತೀಚಿನ 2 ಪಾಸ್ಪೋರ್ಟ್ ಸೈಜ್ ಭಾವಚಿತ್ರ ಹಾಗೂ ಮೂಲ ದಾಖಲಾತಿಗಳನ್ನು ನಿಗಧಿತ…
ನವದೆಹಲಿ: ಪ್ರಯಾಣ ಕಂಪನಿ EaseMyTrip ನ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಶಾಂತ್ ಪಿಟ್ಟಿ, ಪ್ರತಿಸ್ಪರ್ಧಿ ಪ್ರಯಾಣ ಸಂಗ್ರಾಹಕ ಕಂಪನಿಯೊಂದು ತಮ್ಮ ವೆಬ್ಸೈಟ್ನಲ್ಲಿ ಲೋಪದೋಷವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಈ ಸೈಟ್ ಚೀನಾಕ್ಕೆ ಲಿಂಕ್ಗಳನ್ನು ಹೊಂದಿದೆ ಮತ್ತು ಟಿಕೆಟ್ಗಳನ್ನು ಬುಕ್ ಮಾಡಲು ವೇದಿಕೆಯನ್ನು ಬಳಸುವ ಭಾರತೀಯ ರಕ್ಷಣಾ ಪಡೆಗಳ ಸದಸ್ಯರಿಗೆ ಡೇಟಾ ಸುರಕ್ಷತೆಯನ್ನು ರಾಜಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. “ಭಾರತೀಯ ಸಶಸ್ತ್ರ ಪಡೆಗಳು ಚೀನಾದ ಒಡೆತನದ ವೇದಿಕೆಯ ಮೂಲಕ ರಿಯಾಯಿತಿ ಟಿಕೆಟ್ಗಳನ್ನು ಬುಕ್ ಮಾಡುತ್ತವೆ, ರಕ್ಷಣಾ ID, ಮಾರ್ಗ ಮತ್ತು ದಿನಾಂಕವನ್ನು ನಮೂದಿಸುತ್ತವೆ. ನಮ್ಮ ಶತ್ರುಗಳಿಗೆ ನಮ್ಮ ಸೈನಿಕರು ಎಲ್ಲಿ ಹಾರುತ್ತಿದ್ದಾರೆಂದು ತಿಳಿದಿದೆ” ಎಂದು ಪಿಟ್ಟಿ ಹಂಚಿಕೊಂಡರು. ನಂತರ ಅವರು “ಲೋಪದೋಷವನ್ನು ಬಹಿರಂಗಪಡಿಸಲು” ಸರಣಿ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡರು. ಒಂದು ಸ್ಕ್ರೀನ್ಶಾಟ್ ಸಶಸ್ತ್ರ ಪಡೆಗಳ ಸದಸ್ಯರಿಗೆ ಟಿಕೆಟ್ ಬುಕಿಂಗ್ನಲ್ಲಿ ರಿಯಾಯಿತಿಗಾಗಿ ಸೈಟ್ ಆಯ್ಕೆಯನ್ನು ಹೊಂದಿದೆ ಎಂದು ತೋರಿಸುತ್ತದೆ. ಆದಾಗ್ಯೂ, ಆಫರ್ ಪಡೆಯಲು, ಸಿಬ್ಬಂದಿ ತಮ್ಮ “ರಕ್ಷಣಾ ID” ಯನ್ನು ಹಂಚಿಕೊಳ್ಳಬೇಕು. ಒಂದು ದಿನದ ಹಿಂದೆ,…
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಗೌರವ ಧನವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ಸರ್ಕಾರಿ ಶಾಲಾ-ಕಾಲೇಜಿನ ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸಲಾದ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಅನುಕ್ರಮವಾಗಿ ರೂ.7500/- ಮತ್ತು ರೂ.8000/- ಗಳಿಗೆ ನಿಗಧಿಪಡಿಸಿ ಆದೇಶಿಸಲಾಗಿತ್ತು ಎಂದಿದ್ದಾರೆ. ಸದರಿ ಗೌರವ ಸಂಭಾವನೆಯನ್ನು ಪರಿಷ್ಕರಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರುಗಳಿಗೆ ರೂ.10000/- ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಅತಿಥಿ ಶಿಕ್ಷಕರುಗಳಿಗೆ ರೂ.10,500/- ಗಳ ಗೌರವ ಸಂಭಾವನೆಯನ್ನು ನಿಗಧಿಪಡಿಸಿಸಲಾಗಿತ್ತು ಎಂದು ತಿಳಿಸಿದ್ದಾರೆ. ಸದರಿ ಗೌರವ ಸಂಭಾವನೆಯನ್ನು ಪರಿಷ್ಕರಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರುಗಳಿಗೆ ರೂ.10000/- ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿನ…
ಶ್ರೀನಗರ: ಪಾಕಿಸ್ತಾನ ನಮ್ಮ ತಲೆಗೆ ಹೊಡೆದ್ರೆ, ನಾವು ಅವರ ಎದೆಯನ್ನೇ ಬಗೆಯುತ್ತೇವೆ ಎನ್ನುವ ಮೂಲಕ, ಪಾಕ್ ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಇಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀನಗರದಲ್ಲಿರುವಂತ ಸೇನೆಯ 15 ಕಾರ್ಪ್ಸ್ ಪ್ರಧಾನ ಕಚೇರಿಗೆ ತೆರಳಿ, ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಹೊಡೆದುರುಳಿಸಿದ ನಂತರ ಗಡಿಯಾಚೆಗಿನ ಶೆಲ್ ದಾಳಿಯ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಬೀಳಿಸಲಾದ ಪಾಕಿಸ್ತಾನಿ ಶೆಲ್ಗಳನ್ನು ರಾಜನಾಥ್ ಸಿಂಗ್ ಪರಿಶೀಲಿಸಿದರು. ಈ ಬಳಿಕ ಮಾತನಾಡಿದಂತ ಅವರು, ಪಾಕಿಸ್ತಾನದ ಚೌಕಿಗಳನ್ನು ನಾಶಪಡಿಸಿದ್ದಕ್ಕಾಗಿ ಸೈನಿಕರನ್ನು ಶ್ಲಾಘಿಸಿದ ರಾಜನಾಥ್ ಸಿಂಗ್, ಶತ್ರುಗಳು ಆಪ್ ಸಿಂಧೂರ್ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ ರೀತಿ – ನಾನು ಜಮ್ಮು ಮತ್ತು…
ಸಾಗರ : ಅತವಾಡಿ ಗ್ರಾಮದ ಮುಸ್ಲೀಂ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವನ್ನು ಸಾಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಖಂಡಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆತವಾಡಿ ಗ್ರಾಮದ ಅಬ್ದುಲ್ ಮುಹೀಬ್, ಆತನ ಪತ್ನಿ ಜುಬೇದಾ ಅವರ ಮೇಲೆ ಸಾಗರ ಪಟ್ಟಣದ ಪರಶುರಾಮ್ ಮತ್ತು ಅವರ ಪತ್ನಿ ಸವಿತಾ ಸೇರಿಕೊಂಡು ಇಪ್ಪತ್ತು ಜನರ ತಂಡ ಕಟ್ಟಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಅಬ್ದುಲ್ ಮುಹೀಬ್ ಕುಟುಂಬ ಆತವಾಡಿ ಗ್ರಾಮದಲ್ಲಿ 1.12 ಎಕರೆ ಜಾಗವನ್ನು ಹೊಂದಿದ್ದು, ಬಡತನದ ನಡುವೆಯೂ ಜೀವನ ಸಾಗಿಸುತ್ತಿದ್ದಾರೆ. 2015ರಿಂದಲೂ ಸಾಗರ ಪಟ್ಟಣದ ಪರಶುರಾಮ್ ಎಂಬಾತ ಈ ಜಮೀನು ಕಬಳಿಸಲು ಪ್ರಯತ್ನ ನಡೆಸುತ್ತಿದ್ದರು. ಇದಕ್ಕೆ ಮುಹೀಬ್ ಕುಟುಂಬ ಒಪ್ಪಿರಲಿಲ್ಲ. ಪದೇಪದೇ ಪರಶುರಾಮ್ ಅವರು ತಮ್ಮ ಸಂಗಡಿಗರೊಂದಿಗೆ ಸ್ಥಳಕ್ಕೆ ತೆರಳಿ ಬೆದರಿಕೆ ಹಾಕಿದ್ದಾರೆ ಎಂದರು. ಈಚೆಗೆ ಪರಶುರಾಮ್, ಸವಿತಾ ಅವರು ತಮ್ಮ ಜೊತೆ 20 ಜನರ…
ಬೆಂಗಳೂರು: ಪಿಜಿಸಿಇಟಿ-2025ಕ್ಕೆ ಅರ್ಜಿ ಸಲ್ಲಿಸುವ ನಿರೀಕ್ಷೆಯಲ್ಲಿದ್ದಂತ ವಿದ್ಯಾರ್ಥಿಗಳಿಗೆ ಕೆಇಎ ಗುಡ್ ನ್ಯೂಸ್ ನೀಡಿದೆ. ನಾಳೆ ಬೆಳಗ್ಗೆ 10 ಗಂಟೆಯವರೆಗೆ ಪಿಜಿ ಸಿಇಟಿ-2025ಕ್ಕೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, PGCET-25 ಗೆ ಅರ್ಜಿ ಸಲ್ಲಿಸಲು ಮೇ 16ರ ಬೆಳಿಗ್ಗೆ 10 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಅಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದೇ ಇರುವವರು ತಕ್ಷಣ ಅರ್ಜಿ ಸಲ್ಲಿಸುವುದು. ಅದರ ನಂತರ ದಿನಾಂಕ ವಿಸ್ತರಣೆ ಇರುವುದಿಲ್ಲ ಎಂದಿದೆ. https://twitter.com/KEA_karnataka/status/1922941009190642099
ಬಳ್ಳಾರಿ: ಜಿಲ್ಲೆಯಲ್ಲಿ ಡಕಾಯಿತಿ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಬಳಿಯಲ್ಲಿ ಡಕಾಯಿತ ಅಮರೇಶ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಂತ ಅಮರೇಶ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ. https://kannadanewsnow.com/kannada/big-news-good-news-for-state-property-owners-the-period-for-issuing-b-khata-has-been-extended-by-3-months/ https://kannadanewsnow.com/kannada/big-news-attention-to-the-rural-people-of-the-state-all-these-services-of-the-gram-panchayat-will-be-available-on-whatsapp-watch-video/












