Author: kannadanewsnow09

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಆಗಸ್ಟ್ 20ರಂದು ಕ್ಲೇಮ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಆ ಪ್ರಕಾರ ಮೂಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಆನ್ ಲೈನ್ ಅರ್ಜಿಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಆಧರಿಸಿ ಕ್ಲೇಮ್ ಸ್ಲಿಪ್ ಅನ್ನು ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಂಡು, ಆ ಪ್ರಕಾರ ಮೂಲ ದಾಖಲೆಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ನಂತರ ಪ್ರವೇಶ ಸಂದರ್ಭದಲ್ಲಿ ಅವುಗಳನ್ನು ಕಾಲೇಜಿಗೆ ಸಲ್ಲಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಂಬಿಎ, ಎಂಸಿಎ ಗೆ ಮಾತ್ರ ಅನ್ವಯವಾಗುವ ಹಾಗೆ ವಿಶೇಷ ವರ್ಗ, ಮಾಜಿ ಸೈನಿಕರ ಕೋಟಾದಡಿ ಸೀಟು ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಆ.22ರಂದು ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಅವರು ವಿವರಿಸಿದ್ದಾರೆ.

Read More

ಮುಂಬೈ : ಜಿಯೋ ಟ್ರೂ 5ಜಿ ಕಡೆಯಿಂದ ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ. ಹಬ್ಬದ ಋತುವಿಗೆ ನಿಜವಾಗಿಯೂ ಹಬ್ಬದ ವಾತಾವರಣವನ್ನು ಸೃಷ್ಟಿಸುವಂಥ ಅನುಕೂಲಗಳನ್ನು ಇದರಿಂದ ಪ್ರಿಪೇಯ್ಡ್ ಗ್ರಾಹಕರು ಪಡೆಯಲಿದ್ದಾರೆ. ಜಿಯೋದಿಂದ ಹೊಸದಾಗಿ ಅನಿಯಮಿತವಾಗಿ ಪ್ಲಾನ್ ಗಳನ್ನು ಘೋಷಣೆ ಮಾಡಲಾಗಿದೆ. ಆರಂಭಿಕ ಪ್ಯಾಕ್ 349 ರೂಪಾಯಿಯನ್ನು ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ 2600 ರೂಪಾಯಿ ಮೌಲ್ಯದ ಅನುಕೂಲಗಳು ದೊರೆಯಲಿವೆ. ಭಾರತದ ಅತ್ಯುತ್ತಮ ನೆಟ್ ವರ್ಕ್ ಎನಿಸಿರುವ ಜಿಯೋ ಅತ್ಯುತ್ತಮವಾದ ಪ್ಲಾನ್ ಗಳನ್ನು ನೀಡುವುದನ್ನು ಮುಂದುವರಿಸಿದ್ದು, ತನ್ನ ಗ್ರಾಹಕರಿಗೆ ಇದರ ಮೂಲಕ ಉತ್ತಮವಾದ ಅನುಭವವನ್ನು ದೊರಕಿಸುತ್ತಿದೆ. ಹೀಗೆ ಮಾಡುತ್ತಿರುವುದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಸುಸ್ಥಿರತೆ ಬಲಪಡಿಸುವ ತನ್ನ ಬದ್ಧತೆಯನ್ನು ಸಹ ಕಾಪಾಡಿಕೊಂಡುಬಂದಿದೆ. ಈ ಹೊಸ ಟ್ರೂ 5ಜಿ ಪ್ಲಾನ್ ಆರಂಭಿಕ ಪ್ಯಾಕ್ 349ರೊಂದಿಗೆ ಸಿಗುವ ಅನುಕೂಲಗಳು ಹೀಗಿವೆ: * ಅನಿಯಮಿತವಾದ 5ಜಿ ಡೇಟಾ 349 ರೂಪಾಯಿ ಮೌಲ್ಯದ್ದು ದೊರೆಯಲಿದೆ. * ಜಿಯೋ ಹಾಟ್ ಸ್ಟಾರ್ ನಲ್ಲಿ 90 ದಿನಗಳ ಅವಧಿಗೆ 299 ರೂಪಾಯಿ ಮೌಲ್ಯದಲ್ಲಿ ಉಚಿತ ಕ್ರಿಕೆಟ್…

Read More

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟವು ಆನ್‌ಲೈನ್ ಗೇಮಿಂಗ್ ಮಸೂದೆಯನ್ನು ಅನುಮೋದಿಸಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ವರ್ಚುವಲ್ ವಲಯವನ್ನು ನಿಯಂತ್ರಿಸುವುದು ಮತ್ತು ಅಕ್ರಮ ಬೆಟ್ಟಿಂಗ್ ಅನ್ನು ತಡೆಯುವುದು ಪ್ರಸ್ತಾವಿತ ಕಾನೂನು ಉದ್ದೇಶವಾಗಿದೆ. ಡಿಜಿಟಲ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸೆಲೆಬ್ರಿಟಿಗಳ ಅನುಮೋದನೆಗಳಿಗೆ ಸಂಬಂಧಿಸಿದ ಹೆಚ್ಚುತ್ತಿರುವ ವಂಚನೆಯಿಂದ ಪ್ರೇರೇಪಿಸಲ್ಪಟ್ಟ ಈ ಮಸೂದೆಯು ಎಲ್ಲಾ ವೇದಿಕೆಗಳನ್ನು ಸ್ಪಷ್ಟ ಕಾನೂನು ಚೌಕಟ್ಟಿನ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದೆ. ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ. ಆನ್‌ಲೈನ್ ಗೇಮಿಂಗ್ ಮಸೂದೆ ಎಂದರೇನು? ಆನ್‌ಲೈನ್ ಗೇಮಿಂಗ್ ಮಸೂದೆಯು ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಯಂತ್ರಿಸಲು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಪ್ರಯತ್ನಿಸುತ್ತದೆ. ಮಸೂದೆಯು ಈ ಕೆಳಗಿನ ಕಳವಳಗಳನ್ನು ಎತ್ತಿ ತೋರಿಸುತ್ತದೆ: ವ್ಯಸನ. ವಂಚನೆ. ಜೂಜಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನುಗಳಲ್ಲಿನ ಅಸಂಗತತೆಗಳು. ಇದು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ, ವಿಶೇಷವಾಗಿ ನೈಜ-ಹಣದ ಆಟಗಳನ್ನು ನೀಡುವವರ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಪ್ರಸ್ತಾಪಿಸುತ್ತದೆ. ಇದು ಆನ್‌ಲೈನ್ ಗೇಮಿಂಗ್‌ಗಾಗಿ ಕೇಂದ್ರ ನಿಯಂತ್ರಕವಾಗಿ…

Read More

ಮೈಸೂರು: ಹಬ್ಬದ ದಿನಗಳಲ್ಲಿನ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು, ಸುಗಮವಾದ ಟಿಕೆಟ್ ಬುಕ್ಕಿಂಗ್‌ನ್ನು ಖಚಿತಪಡಿಸಲು, ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಮತ್ತು ರೈಲುಗಳಲ್ಲಿ ಉಭಯಮುಖಿ ಬಳಕೆಯನ್ನು ಖಾತ್ರಿ ಪಡಿಸಲು, ರೈಲ್ವೆ ಇಲಾಖೆಯು “ಹಬ್ಬದ ಪ್ರಯಾಣಕ್ಕಾಗಿ ರೌಂಡ್ ಟ್ರಿಪ್ ಪ್ಯಾಕೇಜ್ ಯೋಜನೆ” ಎಂಬ ಹೆಸರಿನಲ್ಲಿ ಪ್ರಯೋಗಾತ್ಮಕ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ, ನಿರ್ದಿಷ್ಟ ಅವಧಿಯಲ್ಲಿ ಹೊರಡುವ ಹಾಗೂ ಹಿಂತಿರುಗುವ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ರಿಯಾಯಿತಿ ಲಭ್ಯವಾಗುತ್ತದೆ. ಹಿಂತಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು, ಹೋಗುವ ಪ್ರಯಾಣದ ವಿವರಗಳಂತೆ ಇರಬೇಕು. ಈ ಯೋಜನೆಯಡಿ ಟಿಕೆಟ್‌ಗಳ ಬುಕ್ಕಿಂಗ್ 14.08.2025ರಿಂದ ಆರಂಭವಾಗಿದೆ. ಹೊರಡುವ ಪ್ರಯಾಣದ ಟಿಕೆಟ್‌ಗಳನ್ನು 13.10.2025 ರಿಂದ 26.10.2025ರವರೆಗೆ ಇರುವ ಪ್ರಯಾಣ ದಿನಾಂಕಗಳಿಗೆ ಮೊದಲು ಬುಕ್ ಮಾಡಬೇಕು. ಹಿಂತಿರುಗುವ ಟಿಕೆಟ್‌ಗಳನ್ನು ನಂತರ 17.11.2025 ರಿಂದ 01.12.2025ರವರೆಗೆ ಇರುವ ಪ್ರಯಾಣ ದಿನಾಂಕಗಳಿಗೆ ಕನೆಕ್ಟಿಂಗ್ ಪ್ರಯಾಣ ಸೌಲಭ್ಯ ಬಳಸಿ ಬುಕ್ ಮಾಡಬಹುದು. ಹಿಂತಿರುಗುವ ಟಿಕೆಟ್‌ಗಳಿಗೆ ಅಡ್ವಾನ್ಸ್ ರಿಸರ್ವೇಶನ್ ಅವಧಿ ಅನ್ವಯಿಸುವುದಿಲ್ಲ. ಈ ಸೌಲಭ್ಯವು ಎರಡೂ ದಿಕ್ಕಿನ ದೃಢೀಕೃತ ಟಿಕೆಟ್‌ಗಳಿಗೆ…

Read More

ಬೆಂಗಳೂರು: ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರೆ ಸುಜಾತಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವಂತ ದೂರುದಾರೆ ಸುಜಾತ ಭಟ್ ಅವರು, ಎಲ್ಲರೂ ಒಂದೊಂದು ರೀತಿ ತೇಜೋವಧೆ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ. ನನ್ನ ನೋವು ನನಗೆ ಗೊತ್ತು. ನನ್ನ ಮಗಳದ್ದು ಒಂದು ಸಣ್ಣ ಫೋಟೋ ಇದೆ. ಆ ಫೋಟೋದಲ್ಲಿರುವವಳೇ ನನ್ನ ಮಗಳು ಎಂದು ಸುಜಾತ ಭಟ್ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಇದರಲ್ಲಿ ಫೇಕ್ ಯಾವುದೂ ಇಲ್ಲ. ನಾನು ರಂಗಪ್ರಸಾದ್ ಅವರ ಮನೆಯಲ್ಲಿ ಇದ್ದಿದ್ದು ನಿಜ. ನಾನು ಕೇಳಿರೋದು ನನ್ನ ಮಗಳ ಅಸ್ಥಿ. ಅನಾಮಧೇಯ ವ್ಯಕ್ತಿ ಬಂದು ಶವಗಳನ್ನು ಹೂತಿದ್ದಾಗಿ ಹೇಳಿದ್ದ. ನನ್ನ ಮಗಳ ಅಸ್ಥಿ ಪಂಜರ ಸಿಕ್ಕಿದ್ರೆ ಕೊಡಿ ಎಂದು ಕೇಳಿದ್ದೆ ಎಂದರು. ಪೋಟೋದಲ್ಲಿ ಇರುವವಳು ನನ್ನ ಮಗಳು. ಅದು ಸತ್ಯ. ಒಬ್ಬ ವ್ಯಕ್ತಿ ರೀತಿ ತುಂಬಾ ಜನ ಇರುತ್ತಾರೆ ಅಲ್ವ? ನನ್ನ…

Read More

ಕಲಬುರಗಿ ; ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆಗೆ ಅನುಮೋದನೆ ನೀಡಲಾಯಿತು. ಇದರ ನಂತರ, ಆನ್‌ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವಾಗಿದೆ. ಈ ಮಸೂದೆಯನ್ನ ಬುಧವಾರ ಲೋಕಸಭೆಯಲ್ಲಿ ಮಂಡಿಸಬಹುದು. ಆನ್‌ಲೈನ್ ಗೇಮಿಂಗ್ ಮಸೂದೆಯ ಮೂಲಕ ಆನ್‌ಲೈನ್ ಗೇಮಿಂಗ್ ನಿಯಂತ್ರಿಸಲಾಗುವುದು. ಈ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದರು. ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಕ್ರಮವು ಎಲ್ಲಾ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ಕಂಪನಿಗಳ ಮೇಲೆ ಕೇಂದ್ರೀಕರಿಸುವ ಮೂಲಕ ಗೇಮಿಂಗ್ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಹೊಸ ಮಸೂದೆಯು ಕೆಲವು ಆನ್‌ಲೈನ್ ಆಟಗಳನ್ನು ನಿಷೇಧಿಸುವ ನಿಬಂಧನೆಗಳನ್ನು ಸಹ ಒಳಗೊಂಡಿದೆ. ಅಂದರೆ, ವ್ಯಸನ, ಆರ್ಥಿಕ ನಷ್ಟ ಅಥವಾ ಸಾಮಾಜಿಕ ಪರಿಣಾಮವನ್ನು ಉತ್ತೇಜಿಸುವ ಆಟಗಳನ್ನು ನಿಷೇಧಿಸಬಹುದು. ಅಲ್ಲದೆ, ನಿಯಂತ್ರಿಸಲ್ಪಡುವ ಆಟಗಳು ಚೆಸ್, ರಸಪ್ರಶ್ನೆ ಮತ್ತು ಇ-ಸ್ಪೋರ್ಟ್‌ಗಳಂತಹ ಕೌಶಲ್ಯ ಆಧಾರಿತ ಆಟಗಳಾಗಿವೆ,…

Read More

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ. ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಿದ್ದು, ಜನರಲ್ಲಿ ಜಾಗೃತಿ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು. https://twitter.com/KarnatakaVarthe/status/1957742336945086664 ವಿಧಾನ ಪರಿಷದ್ ನಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆ ಉತ್ತರಿಸಿದ ಅವರು, ಇತ್ತೀಚೆಗೆ ಹೃದಯಾಘಾತ, ಪ್ರಕರಣಗಳ ಸಂಖ್ಯೆ ಹೆಚ್ಚಳದ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು. ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ…

Read More

ವಿಧಾನಪರಿಷತ್ತು: ಮಂಗಳೂರು ನಗರದಲ್ಲಿ 675.51 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ತಿಳಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಮಂಗಳವಾರ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 675.51 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಒಂದು ಯೋಜನೆ ಪೂರ್ಣಗೊಂಡಿದೆ. 2026 ರ ಡಿಸೆಂಬರ್ ವೇಳೆಗೆ ಇನ್ನೆರಡು ಯೋಜನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಅಮೃತ್ ನೆರವಿನ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಹೂಡಿಕೆ ಕಾರ್ಯಕ್ರಮವಾದ ಜಲಸಿರಿ ಅಡಿ 316.51 ಕೋಟಿ ರೂಪಾಯಿ ವೆಚ್ಚದಲ್ಲಿ 8 ಒಳಚರಂಡಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಈಗಾಗಲೇ 5 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 3 ಕಾಮಗಾರಿಗಳು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಸಚಿವರು ಹೇಳಿದರು. ಮುದಗಲ್ ಪಟ್ಟಣಕ್ಕೆ ನೀರು…

Read More

ಹುಬ್ಬಳ್ಳಿ: ರೈಲ್ವೆ ಮಂಡಳಿಯು ವಿಜಯಪುರ–ಮಂಗಳೂರು ಸೆಂಟ್ರಲ್–ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲನ್ನು (ರೈಲು ಸಂಖ್ಯೆ 07377/07378) ನಿಯಮಿತ ಎಕ್ಸ್ ಪ್ರೆಸ್ ಸೇವೆಗೆ ಉನ್ನತೀಕರಿಸಲು ಅನುಮೋದನೆ ನೀಡಿದೆ. ಈ ರೈಲುಗಳು ಇನ್ನು ಮುಂದೆ ರೈಲು ಸಂಖ್ಯೆ 17377/17378 ವಿಜಯಪುರ–ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ ಪ್ರೆಸ್ ಎಂದು ಸಂಚರಿಸಲಿವೆ. ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ತನ್ನ ನಿಯಮಿತ ಸೇವೆಯನ್ನು ಸೆಪ್ಟೆಂಬರ್ 1, 2025 ರಿಂದ ಪ್ರಾರಂಭಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ ಪ್ರೆಸ್ ಸೆಪ್ಟೆಂಬರ್ 2, 2025 ರಿಂದ ತನ್ನ ಸಂಚಾರ ಆರಂಭಿಸಲಿದೆ. ಈ ಎರಡೂ ರೈಲುಗಳು ಈಗಿರುವ ವೇಳಾಪಟ್ಟಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ನಿರ್ವಹಣಾ ಮಾದರಿಯೊಂದಿಗೆ ಸಂಚರಿಸಲಿವೆ. https://kannadanewsnow.com/kannada/approval-of-the-karnataka-lake-conservation-and-development-authority-amendment-bill-2025-in-the-legislative-assembly/ https://kannadanewsnow.com/kannada/the-special-state-cabinet-meeting-scheduled-for-today-at-5-pm-has-been-postponed-to-730-pm/

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇಕರದಿಕೆಯ ಟಿ.ಎ ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷರಾಗಿ ಮನೋಜ್ ಕುಗ್ವೆ ಅವರು ಇಂದು ಪಗ್ರಹಣ ಮಾಡಿದರು. ಅವರೊಂದಿಗೆ ಇತರೆ ಪದಾಧಿಕಾರಿಗಳಿಗೂ ಶಿವಮೊಗ್ಗ ಜಿಲ್ಲಾಧ್ಯಕ್ಷ ಆರ್.ಮಂಜು ಕೇಬಲ್ ನೇಮಕಾತಿ ಪತ್ರವನ್ನು ವಿತರಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ, ಟಿಎ ನಾರಾಯಣಗೌಡ ಬಣದಿಂದ ಪಗ್ರಹಣ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದಂತ ಶಣ್ಮುಖ ಕೆಂಚಾಳಸರ ಅವರು, ಕರವೆಯಿಂದ ಕನ್ನಡ ಭಾಷಣೆ ಉಳಿಸಲು ಹೋರಾಟ ನಡೆಸುವಂತ ಕೆಲಸ ಮಾಡಲಾಗುತ್ತಿದೆ. ಸಾಗರ ತಾಲ್ಲೂಕು ಸಮಿತಿ ರಚನೆಯಾಗಿದೆ. ಜೋಗ ವ್ಯಾಪ್ತಿಯಲ್ಲೂ ಸಂಘಟನೆ ಕಟ್ಟಲಾಗುತ್ತದೆ. ಸಾಗರ ತಾಲ್ಲೂಕಿನ ಹೋಬಳಿ ಮಟ್ಟದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಕೆಲಸ ಮಾಡಲಾಗುವುದು. ಕನ್ನಡ ಭಾಷೆಗೆ ಕುತ್ತು ಬಂದಾಗ ಗ್ರಾಮ ಪಂಚಾಯ್ತಿ ಮಟ್ಟದಿಂದಲೂ ಹೋರಾಟಕ್ಕೆ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುವುದಾಗಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ…

Read More