Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ರಾಯಚೂರು: ಜಿಲ್ಲೆಯಲ್ಲಿ ಮನೆಯ ಮುಂದೆ ಆಡ ಆಡುತ್ತಿದ್ದಾಗಲೇ ಘೋರ ದುರಂತವೊಂದು ಸಂಭವಿಸಿದೆ. ಸಾರಿಗೆ ಬಸ್ ಹರಿದು 5 ವರ್ಷದ ಬಾಲಕನೊಬ್ಬ ದುರ್ಮರಣ ಹೊಂದಿದ್ದಾನೆ. ರಾಯಚೂರು ಜಿಲ್ಲೆಯ ಗಬ್ಬೂರು ಪಟ್ಟಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ ಹರಿದು 5 ವರ್ಷದ ಬಾಲಕಿ ದಿವ್ಯಶ್ರೀ ಸಾವನ್ನಪ್ಪಿದ್ದಾಳೆ. ಗಬ್ಬೂರಿನಿಂದ ಗೂಗಲ್ ಗ್ರಾಮಕ್ಕೆ ಕೆಕೆ ಆರ್ ಟಿಸಿ ಬಸ್ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. https://kannadanewsnow.com/kannada/a-terrible-accident-in-the-state-three-killed-in-collision-between-bus-and-cruiser/ https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಉಡುಪಿ: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಭೀಕರ ಅಪಘಾತ ಎನ್ನುವಂತೆ ಬಸ್, ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿಯಾರು ಗ್ರಾಮದ ಬಳಿಯಲ್ಲಿ ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂರು ಸ್ಥಳದಲ್ಲೇ ದುರ್ಮರಣ ಹೊಂದಿದರೇ, 8 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/newlywed-commits-suicide-2-months-after-marrying-for-love-bored-with-living-in-the-village/ https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಕಲಬುರ್ಗಿ: ಸಹೋದರಿಯರೆಲ್ಲ ಸಿಟಿಯಲ್ಲಿ ಇದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿ ಇರಬೇಕು ಎಂಬ ಬೇಸರದಿಂದ ಪ್ರೀತಿಸಿ ಮದುವೆಯಾಗಿದ್ದಂತ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರ್ಗಿಯ ಸಿದ್ದೇಶ್ವರ ಕಾಲೋನಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಕೇವಲ 2 ತಿಂಗಳಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವಂತ ಶಾಕಿಂಗ್ ಘಟನೆ ನಡೆದಿದೆ. ಅನಸೂಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ತನ್ನ ಅತ್ತೆ ಮಗನಾಗಿದ್ದಂತ ಅವಿನಾಶ್ ಎಂಬುವರನ್ನು ಅನಸೂಯಾ ಪ್ರೀತಿಸಿ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮದುವೆಯಾದ ಬಳಿಕ ಗಂಡನ ಜೊತೆಯಲ್ಲಿ ಹಳ್ಳಿಯಲ್ಲಿ ವಾಸ ಮಾಡೋದಕ್ಕೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಅನಸೂಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಯಾದ ನಂತ್ರ ಅನುಸೂಯ ತನ್ನ ಗಂಡನೊಂದಿಗೆ ಹಳ್ಳಿಯಲ್ಲಿ ವಾಸವಿದ್ದರು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೂ ಅನುಸೂಯ ಒಳಗಾಗಿದ್ದರು ಎನ್ನಲಾಗಿದೆ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಅಂದಹಾಗೆ ಅನುಸೂಯಾಗೆ ಮೂವರು ಸಹೋದರಿಯರಿದ್ದು, ಅವರೆಲ್ಲರೂ ತಮ್ಮ ಗಂಡಂದಿರೊಂದಿಗೆ ಬೆಂಗಳೂರು, ಮುಂಬೈನಲ್ಲಿ ನೆಲೆಸಿದ್ದರು. ತಾನು ಹಳ್ಳಿ ಬಿಟ್ಟು, ಸಿಟಿಗೆ…
ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಜಮಖಂಡಿ ಹಾಲಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿಗೆ ಶಾಕ್ ಎನ್ನುವಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಾಗಲಕೋಟೆಯ ಜಮಖಂಡಿಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ 50ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ಕಾರ್ಯಕರ್ತರು ಸಿಡಿದೆದ್ದು ಈ ನಿರ್ಧಾರ ಕೈಗೊಂಡಿದ್ದಾರೆ. ಉಮೇಶ್ ಅಲಮೇಲಕರ್, ಗದಿಗೆಪ್ಪ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಜಮಖಂಡಿ ನಗರದ ರಮಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಘೋಷಣೆಯನ್ನು ಕೂಡ ಕೂಗಲಾಗಿದೆ. https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯ ಲಂಚಾವತಾರದ ಚರ್ಚೆಗೆ ಬಿಜೆಪಿ ವಿಧಾನಸಭೆಯಲ್ಲಿ ಒತ್ತಾಯಿಸಿತು. ಇದಕ್ಕೆ ಸ್ಪೀಕರ್ ಅನುಮತಿ ನೀಡಲಿಲ್ಲ. ಹೀಗಾಗಿ ಸದನಲ್ಲಿ ಗದ್ದಲ, ಕೋಲಾಹಲಕ್ಕೂ ಕಾರಣವಾಯಿತು. ಈ ಹಿನ್ನಲೆಯಲ್ಲಿ ಸದನ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಲಾಗಿದೆ. ವಿಧಾನಸಭೆಯಲ್ಲಿ ರಾಜ್ಯ ಅಬಕಾರಿ ಇಲಾಖೆಯ ಲಂಚ ಪ್ರಕರಮದ ಚರ್ಚೆಗೆ ಬಿಜೆಪಿ ಒತ್ತಾಯಿಸಿತು. ಈ ಲಂಚಾವತಾರದ ಹಿಂದೆ ಕೇರಳ, ಒಡಿಶಾಗೆ ಹಣ ಸಂದಾಯದ ಗುಮಾನಿಯನ್ನು ಬಿಜೆಪಿಯ ವಿಪಕ್ಷ ನಾಯಕ ಆರ್.ಅಶೋಕ್ ವ್ಯಕ್ತ ಪಡಿಸಿದರು. ಅದರ ಚರ್ಚೆಗೆ ಅವಕಾಶ ನೀಡುವಂತೆಯೂ ಒತ್ತಾಯಿಸಿದರು. ಇದಷ್ಟೇ ಅಲ್ಲದೇ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರ ರಾಜೀನಾಮೆಗೂ ವಿಪಕ್ಷಗಳು ಪಟ್ಟು ಹಿಡಿದವು. ಇದರಿಂದಾಗಿ ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಏರ್ಪಟ್ಟಿತು. ಈ ಹಿನ್ನಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸಭೆ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು. https://kannadanewsnow.com/kannada/prabhakar-kores-departure-from-the-post-of-kle-working-president-sudden-withdrawal-of-nomination/ https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಬೆಳಗಾವಿ: ಕೆಎಲ್ಇ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಸುದೀರ್ಘ 40 ವರ್ಷಗಳ ಕಾಲ ಪ್ರಭಾಕರ ಕೋರೆ ನೊಗ ಹೊತ್ತಿದ್ದರು. ಇದೀಗ ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಸಲ್ಲಿಸಿದ್ದಂತ ನಾಮಪತ್ರವನ್ನು ದಿಢೀರ್ ಹಿಂಪಡೆಯುವ ಮೂಲಕ, ಕಾರ್ಯಾಧ್ಯಕ್ಷ ಸ್ಥಾನದಿಂದ ಪ್ರಭಾಕರ ಕೋರೆ ನಿರ್ಗಮಿಸಿದ್ದಾರೆ. ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪ್ರಭಾಕರ ಕೋರೆ ನಾಮಪತ್ರವನ್ನು ಸಲ್ಲಿಸಿದ್ದರು. ಆದರೇ ದಿಢೀರ್ ಬೆಳವಣಿಗೆ ಎನ್ನುವಂತೆ ತಮ್ಮ ನಾಮಪತ್ರವನ್ನು ಹಿಂಪಡೆದು ಅಚ್ಚರಿಯನ್ನು ಮೂಡಿಸಿದ್ದಾರೆ. ಪ್ರಭಾಕರ ಕೋರೆ ಅವರು 1984ರಲ್ಲಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾಗಿ ಗದ್ದುಗೆಗೆ ಏರಿದ್ದರು. ಆ ಬಳಿಕ ಸುದೀರ್ಘ 40 ವರ್ಷಗಳ ಕಾಲ ಕಾರ್ಯಾಧ್ಯಕ್ಷರ ಹುದ್ದೆಯನ್ನು ಪ್ರಭಾಕರ ಕೋರೆ ನಿರ್ವಹಿಸಿದ್ದರು. ಪ್ರಭಾಕರ ಕೋರೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆ ಎಲ್ ಇ ಸಂಸ್ಥೆಗಳ ಸಂಖ್ಯೆ ಕೇವಲ 40 ಆಗಿತ್ತು. ಇದೀಗ ಇದು 240 ಅಂಗ ಸಂಸ್ಥೆಗಳ ಬೃಹತ್ ಸಂಸ್ಥೆಯಾಗಿ…
ಉತ್ತರ ಪ್ರದೇಶ: ಇಲ್ಲಿನ ಜೌನ್‌ಪುರದಲ್ಲಿ ಅಂಗವಿಕಲರ ಕೋಟಾದ ಮೂಲಕ ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ಯುವಕನೊಬ್ಬ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿರುವ ಶಾಕಿಂಗ್ ಘಟನೆ ನಡೆದಿದೆ. ಆದರೇ ಆತ ಪೊಲೀಸರಿಗೆ ತನ್ನ ಕುಟುಂಬಕ್ಕೆ ಹಲ್ಲೆಯ ಸುಳ್ಳು ಕಥೆಯನ್ನು ಹೇಳಿದ್ದಾನೆ. ಆದಾಗ್ಯೂ, ಪೊಲೀಸ್ ತನಿಖೆಯಲ್ಲಿ ಯುವಕನ ಮೇಲೆ ಯಾವುದೇ ಹೊರಗಿನವರು ದಾಳಿ ಮಾಡಿಲ್ಲ. ಆತ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಯುವಕ ತನ್ನ ಎಡಗಾಲಿನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ, ಹೆಬ್ಬೆರಳು ಮಾತ್ರ ಉಳಿದಿತ್ತು. ಇದನ್ನು ತನ್ನ ಗೆಳತಿಗೂ ತಿಳಿಸಿದ್ದಾನೆ. ಯುವಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೂರಜ್ ಭಾಸ್ಕರ್ (24) ಖಲೀಲ್‌ಪುರದ ನಿವಾಸಿ. ಅವರ ಕುಟುಂಬದಲ್ಲಿ ಅವರ ತಾಯಿ, ಅಣ್ಣ ಮತ್ತು ಅಕ್ಕ ಇದ್ದಾರೆ. ಅವರ ಸಹೋದರ ಉದ್ಯೋಗದಲ್ಲಿದ್ದಾರೆ. ಸೂರಜ್ ಡಿ-ಫಾರ್ಮಾ ಪದವಿ ಪಡೆದಿದ್ದು, ಮೂರು ವರ್ಷಗಳಿಂದ ಎಂಬಿಬಿಎಸ್‌ಗೆ ತಯಾರಿ ನಡೆಸುತ್ತಿದ್ದಾರೆ. ಜನವರಿ 18 ರ ರಾತ್ರಿ, ಅವರು ನಿರ್ಮಾಣ…
ಕೋಲಾರ: ಜಿಲ್ಲೆಯಿಂದ ಶಬರಿಮಲೆಗೆಂದು ಪ್ರವಾಸಕ್ಕೆ ತೆರಳಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವಂತ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿಯ ರವಿ(40) ಎಂಬಾತನೇ ಶಬರಿಮಲೆಗೆಂದು ಹೋಗಿ ನಾಪತ್ತೆಯಾಗಿರುವಂತ ವ್ಯಕ್ತಿಯಾಗಿದ್ದಾರೆ. ಶಬರಿಮಲೆಗೆ ತೆರಳಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಬಳಿಕ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ಅಲ್ಲಿಂದ ಇದ್ದಕ್ಕಿಂದ್ದಂತೆ ರವಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ತಿರುಚಂದೂರ್ ಗೆ ತೆರಳಿದ್ದಂತ ರವಿ ಕಾಣಿಸುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು, ತಿರುಚಂದೂರ್ ಪೊಲೀಸ್ ಠಾಣೆಗೆ ತೆರಳಿ ರವಿ ನಾಪತ್ತೆಯ ಬಗ್ಗೆ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವಂತ ತಿರುಚಂದೂರ್ ಠಾಣೆಯ ಪೊಲೀಸರು ರವಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/metal-object-weighing-half-a-kilogram-found-during-excavation-in-lakkundi/ https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಗದಗ: ಜಿಲ್ಲೆಯಲ್ಲಿ ಮನೆಯೊಂದರ ಪಾಯ ಅಗೆಯುವ ಸಂದರ್ಭದಲ್ಲಿ ಬಂಗಾರ ದೊರೆತಿತ್ತು. ಆ ಬಳಿಕ ಸುರಕ್ಷಿತ ಸ್ಥಳವೆಂದು ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ನಡೆಸುತ್ತಿದೆ. ಇಂದು ಉತ್ಖನನದ ವೇಳೆಯಲ್ಲಿ ಲಕ್ಕುಂಡಿಯಲ್ಲಿ ಲೋಹದ ವಸ್ತುವೊಂದು ಪತ್ತೆಯಾಗಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 8ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಇಂದು ವೀರಭದ್ರೇಶ್ವರ ದೇವಸ್ಥಾನದ ಬಳಿಯಲ್ಲಿ ಉತ್ಖನನ ನಡೆಸುತ್ತಿದ್ದಂತ ಸಂದರ್ಭದಲ್ಲಿ ಅರ್ಧ ಕೆಜಿಯಷ್ಟು ತೂಕದ ಲೋಹದ ವಸ್ತುವೊಂದು ಪತ್ತೆಯಾಗಿದೆ. https://kannadanewsnow.com/kannada/rape-of-a-woman-murder-of-a-man-are-minor-incidents-mp-rajashekar-hitnals-controversial-statement/
ಕೊಪ್ಪಳ: ಮಹಿಳೆಯ ಮೇಲಿನ ಅತ್ಯಾಚಾರ, ವ್ಯಕ್ತಿಯೊಬ್ಬನ ಕೊಲೆಯಂತಹ ಘಟನೆಗಳು ಸಣ್ಣ ಘಟನೆಗಳಾಗಿದ್ದಾವೆ ಎಂಬುದಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದ್ದಾರೆ. ಆ ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಲಘುವಾಗಿ ಮಾತನಾಡಿ, ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ. ಕೊಪ್ಪಳದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದಂತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಅವರು, ಜಿಲ್ಲೆಯ ಸಾಣಾಪುರದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ನಡೆದಿತ್ತು. ಈ ಸಣ್ಣ ಘಟನೆಯನ್ನು ಮಾಧ್ಯಮಗಳು ದೊಡ್ಡದಾಗಿ ವೈಭವೀಕರಿಸಿದ್ದವು. ಇದರಿಂದ ಕೊಪ್ಪಳದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂಬುದಾಗಿ ಹೇಳಿದ್ದಾರೆ. ಕೊಪ್ಪಳದ ಸಾಣಾಪುರದಲ್ಲಿ ನಡೆದಿದ್ದಂತ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಮಾಧ್ಯಮಗಳು ವೈಭವೀಕರಿಸಿ, ಸುದ್ದಿ ಮಾಡಿದ್ದರಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟೇ ಬಿದ್ದಿದೆ. ಶೇ.50ರಷ್ಟು ಪ್ರವಾಸಿಗರ ಸಂಖ್ಯೆಯೇ ಇಳಿಕೆಯಾಗಿದೆ ಎಂದಿದ್ದಾರೆ. ಕಳೆದ ಮಾರ್ಚ್ ನಲ್ಲಿ ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ನಡಿತ್ತು. ಒಡಿಶಾ ಪ್ರವಾಸಿಗ ಬಿಬಾಶ್ ಎಂಬಾತನ ಮೃತದೇಹವು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಎರಡು ಕೃತ್ಯವನ್ನು…














