Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಶುಕ್ರವಾರಕ್ಕೆ ಅಂತ್ಯವಾಗಲಿದೆ. ಯಾವುದೇ ಕಾರಣಕ್ಕೂ ಅವಧಿ ಮುಂದುವರಿಸುವ ನಿರ್ಧಾರ ಆಗಿಲ್ಲ. ಆನ್ಲೈನ್ನಲ್ಲಿ ಮಾಹಿತಿ ನೀಡುವವರಿಗೆ ನವೆಂಬರ್ 10ರ ವರೆಗೆ ಅವಕಾಶ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಮತ್ತು 5,52,57,205 ಜನರ ಅಂದರೇ ಶೇ.101.47 ಸಮೀಕ್ಷೆ ಮುಗಿದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಕಂಡುಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರು ಇರುತ್ತಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದರು. ಅಲ್ಲದೆ, ವಿದ್ಯುತ್ ಮೀಟರ್ಗಳು ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ. ಯಾಕೇ ಸಮೀಕ್ಷೆ…
ಬೆಂಗಳೂರು: KSHCOEA BMS ಸಂಘದ ಹೋರಾಟದ ಫಲ ಎನ್ನುವಂತೆ ಮೃತ ಪಟ್ಟಂತ NHM ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ವಿಮೆ ಚೆಕ್ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಸಂಘದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ KSHCOEA BMS ಸಂಘದ ಹೋರಾಟದ ಫಲವಾಗಿ ಗುಂಪು ವಿಮೆ ಯೋಜನೆಯನ್ನು AXIS BANK ಮೂಲಕ ಜಾರಿ ಮಾಡಲಾಗಿತ್ತು, ಅಪಘಾತ ವಿಮೆಗೆ 60 ಲಕ್ಷ ಹಾಗೂ ಸಹಜ ಸಾವಿಗೆ 10 ಲಕ್ಷ ವಿಮೆ ಯೋಜನೆ ರೂಪಿಸಲಾಗಿತ್ತು, ಈ ಯೋಜನೆಗೆ ಅಂದಿನ ಅಭಿಯಾನ ನಿರ್ದೇಶಕರಾದ ಡಾ. ನವೀನ್ ಭಟ್ ವೈ, IAS ಇವರು ವಿಶೇಷ ಮುತುವರ್ಜಿ ವಹಿಸಿ ಈ ಯೋಜನೆಯನ್ನು ಜಾರಿ ಗೊಳಿಸಿದ್ದರು ಎಂದಿದೆ. ಯೋಜನೆ ಜಾರಿ ನಂತರದ ದಿನದಿಂದ ಈ ವರೆಗೂ ಒಟ್ಟು 10 ಸಿಬ್ಬಂದಿಗಳು ಮೃತಪಟ್ಟಿದ್ದು ಅದರಲ್ಲಿ ಮೊದಲ ಪ್ರಕರಣವಾದ ರಾಜೇಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮೈಸೂರು ಜಿಲ್ಲೆ ಇಲ್ಲಿ ಕಿರಿಯ ಆರೋಗ್ಯ…
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10 ಮತ್ತು 12 ನೇ ತರಗತಿಯ 2026 ರ ಬೋರ್ಡ್ ಪರೀಕ್ಷೆಗಳ ವಿವರವಾದ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಹೇಳಿದಂತೆ ಪರೀಕ್ಷೆಗಳು ಫೆಬ್ರವರಿ 17, 2026 ರಂದು ಪ್ರಾರಂಭವಾಗಲಿವೆ. ತಾತ್ಕಾಲಿಕ ಪರೀಕ್ಷಾ ದಿನಾಂಕಗಳನ್ನು ಘೋಷಿಸಿದ ಕೆಲವು ದಿನಗಳ ನಂತರ ಈ ಅಂತಿಮ ದಿನಾಂಕ ಪಟ್ಟಿಯನ್ನು ಪ್ರಕಟಿಸಲಾಗಿದೆ; ತಾತ್ಕಾಲಿಕ ದಿನಾಂಕ ಪಟ್ಟಿಯನ್ನು ಸೆಪ್ಟೆಂಬರ್ 24 ರಂದು ಪ್ರಕಟಿಸಲಾಗಿದೆ. 2025 ರ CBSE ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸುವಾಗ, 2026 ರಲ್ಲಿ 10 ಮತ್ತು 12 ನೇ ತರಗತಿಗಳ ಎರಡೂ ಪರೀಕ್ಷೆಗಳು ಫೆಬ್ರವರಿ 17, 2026 ರಿಂದ ಪ್ರಾರಂಭವಾಗಲಿವೆ ಎಂದು CBSE ಘೋಷಿಸಿತ್ತು. ಅಲ್ಲದೆ, CBSE ಈಗ 10 ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸಲಿದೆ (NEP 2020 ರಲ್ಲಿ ಮಾಡಿದ ಶಿಫಾರಸುಗಳ ಪ್ರಕಾರ), ರಾಷ್ಟ್ರೀಯ ಶಿಕ್ಷಣ ಮಂಡಳಿಯು ಶಾಲೆಗಳು ಮತ್ತು ಇತರ ಪಾಲುದಾರರಿಗೆ ತಾತ್ಕಾಲಿಕ ಮಂಡಳಿಯ ದಿನಾಂಕ ಪಟ್ಟಿಯನ್ನು ಪರಿಶೀಲಿಸಲು…
ನವದೆಹಲಿ: ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಗುರುವಾರ ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದ್ದು, ನವೆಂಬರ್ 24 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೇಂದ್ರ ಕಾನೂನು ಸಚಿವಾಲಯದ ನ್ಯಾಯ ಇಲಾಖೆ ಅವರ ನೇಮಕಾತಿಯನ್ನು ಪ್ರಕಟಿಸುವ ಅಧಿಸೂಚನೆಯನ್ನು ಹೊರಡಿಸಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನವೆಂಬರ್ 23 ರಂದು ಹುದ್ದೆಯಿಂದ ನಿವೃತ್ತರಾಗುವ ನ್ಯಾಯಮೂರ್ತಿ ಭೂಷಣ್ ಆರ್ ಗವಾಯಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಅವರು ಸುಮಾರು 15 ತಿಂಗಳ ಕಾಲ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ಫೆಬ್ರವರಿ 9, 2027 ರಂದು 65 ವರ್ಷ ವಯಸ್ಸಾದ ನಂತರ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. “ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾದ ಶ್ರೀ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನವೆಂಬರ್ 24, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಸಂತೋಷಪಡುತ್ತಾರೆ” ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ X ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ. “ನಾನು ಅವರಿಗೆ ನನ್ನ…
ಬೆಂಗಳೂರು: ನಗರದ ಹೆಬ್ಬಾಳದ ಸಿಂಧಿ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಿದ್ದವಾದ ಕ್ರೆಸೆಂಡೊ 2025 ಎಂಬ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿಯರಾದ ಕುಸಿರವಿ ಮತ್ತು ತೇಜಸ್ವಿನಿ ಶರ್ಮ ಉದ್ಘಾಟಿಸಿದರು. ಇಂದು ಉದ್ಘಾಟನೆ ನೃತ್ಯದಲ್ಲಿ ವಿದ್ಯಾರ್ಥಿಗಳು ಬ್ರಹ್ಮಾಸ್ತ್ರ ಎಂಬ ಥೀಮಿನೊಂದಿಗೆ ಸೊಗಸಾದ ನೃತ್ಯವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ ಆಶಾ ರವರು ಅತಿಥಿಗಳನ್ನು ಸ್ವಾಗತಿಸಿ. ಕ್ರೆಸೆಂಡೋ ಉತ್ಸವವು ನಡೆದು ಬಂದ ಬಗೆಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಖುಷಿರವಿ ಅವರು ಮಾತನಾಡುತ್ತಾ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೋತ್ಸಾಹ ನೀಡುವಂತಹದ್ದು. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸೂಕ್ತ ಗಮನವಹಿಸಬೇಕು ಎಂದರು. ಚಲನಚಿತ್ರ ನಟಿಯಾದ ತೇಜಸ್ವಿನಿ ಶರ್ಮಾ ಅವರು ಮಾತನಾಡಿ ವಿದ್ಯಾರ್ಥಿಗಳು ಇಂದಿನ ಟೆಕ್ನಾಲಜಿಯನ್ನು ಬಳಸಿಕೊಂಡು ಉತ್ತಮವಾಗಿ ಬೆಳೆಯಬೇಕು ಎಂದರು. ಚಲನಚಿತ್ರ ನಿರ್ದೇಶಕರಾದ ವಿನಾಯಕ ಅವರು ತಮ್ಮ ನಿರ್ದೇಶನದ ಚಲನಚಿತ್ರ ವಾದ ಫುಲ್ ಮೀಲ್ಸ್ ನವಂಬರ್ 21ರಂದು…
ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮುಂಬೈನಲ್ಲಿ 17 ಮಕ್ಕಳು ಸೇರಿದಂತೆ 19 ಜನರನ್ನು ಅಪಹರಿಸಿದ ವ್ಯಕ್ತಿ ಪೊಲೀಸರ ಎನ್ ಕೌಂಟರ್ ನಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಗುಂಡು ಹಾರಿಸಿದ ನಂತರ ಗಾಯಗೊಂಡಿದ್ದ ವ್ಯಕ್ತಿಯನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದೆ. ಆದಾಗ್ಯೂ, ಇತ್ತೀಚಿನ ವರದಿಗಳ ಪ್ರಕಾರ ಆ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ, ಆದಾಗ್ಯೂ, ಅವರು ಪುಣೆಯವರು ಎಂದು ತಿಳಿದುಬಂದಿದೆ. ವೆಬ್ ಸರಣಿಯ ಆಡಿಷನ್ ನೆಪದಲ್ಲಿ ಆರ್ಯ ಮಕ್ಕಳನ್ನು ಎಲ್ & ಟಿ ಬಿಸಿನೆಸ್ ಪಾರ್ಕ್-ಗೇಟ್ ಸಂಖ್ಯೆ 5 ರ ದೂರದಲ್ಲಿರುವ ಮಹಾವೀರ್ ಕ್ಲಾಸಿಕ್ ಕಟ್ಟಡದಲ್ಲಿರುವ ಆರ್ಎ ಸ್ಟುಡಿಯೋಗೆ ಕರೆದಿದ್ದಾರೆ ಎಂದು ವರದಿಯಾಗಿದೆ. “ನಾವು 17 ಮಕ್ಕಳನ್ನು, ಒಬ್ಬ ಹಿರಿಯ ನಾಗರಿಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ರಕ್ಷಿಸಿದ್ದೇವೆ” ಎಂದು ಪೊಲೀಸ್ ಉಪ ಆಯುಕ್ತ ದತ್ತ ನಲವಾಡೆ ಹೇಳಿದರು. ಪೊವೈ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕ ತಕ್ಷಣ, ಒಂದು ತಂಡ ಸ್ಥಳಕ್ಕೆ ಧಾವಿಸಿತು. ಕ್ವಿಕ್ ರಿಯಾಕ್ಷನ್ ತಂಡ, ಬಾಂಬ್…
ಬೆಂಗಳೂರು: 2019ನೇ ವರ್ಷದ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಸ್ಯಾಂಡಲ್ ವುಡ್ ಹಿರಿಯ ನಟಿ ಉಮಾಶ್ರೀಗೆ ನೀಡಲಾಗಿದೆ. ಅಲ್ಲದೇ ಪುಟ್ಟಣ್ಣ ಕಣಗಾಲ್, ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಈ ಸಂಬಂಧ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2019ನೇ ಕ್ಯಾಲೆಂಡರ್ ವರ್ಷದ ಡಾ.ರಾಜ್ ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ.ವಿಷ್ಣುವರ್ಧನ್ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಹೀಗಿದೆ 2019ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 5 ಲಕ್ಷ ನಗದ ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಪುಟ್ಟಣ ಕಣ್ಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್ ಆರ್ ನಂಜುಂಡೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 5 ಲಕ್ಷ ನಗದು, 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.…
ನಮಸ್ಕಾರ ಪ್ರಿಯ ಬಂಧೂಗಳೇ ನಾವು ನಮ್ಮ ಮನಸ್ಸಿನಲ್ಲಿ ಇರುವ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಹಾಗೇನೆ ನಮ್ಮ ಜೀವನದಲ್ಲಿ ಇರುವ ಸಮಸ್ಯೆಗಳಿಂದ ಮುಕ್ತಿ ಹೊಂದಲು ದೇವಸ್ಥಾನಕ್ಕೆ ಹೋಗುತ್ತೇವೆ. ಏಕೆಂದರೆ ದೇವಸ್ಥಾನದಲ್ಲಿ ದೇವರಿಗೆ ನಮಸ್ಕರಿಸಿ ಕುಳಿತರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಏಕೆಂದರೆ ದೇವಸ್ಥಾನ ಒಂದು ಪವಿತ್ರವಾದ ತಾಣವಾಗಿದೆ ಅಲ್ಲಿ ಪ್ರಶಾಂತತೆ ತುಂಬಿರುತ್ತದೆ ಆ ದೇವರು ಆ ಪವಿತ್ರವಾದ ಜಾಗದಲ್ಲಿ ನೆಲೆಸಿದ್ದಾನೆ ಎನ್ನುವ ಭಕ್ತಿಭಾವ ನಮ್ಮ ಮನಸ್ಸಿನಲ್ಲಿ ಬೇರೂರಿರುತ್ತದೆ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು…
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವಂತ ಗಣ್ಯರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. 70ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 70 ಮಂದಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿದೆ. ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದ್ದು, ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಸಚಿವ ಶಿವರಾಜ ತಂಡರಗಿ ತಿಳಿಸಿದ್ದಾರೆ. ಪ್ರಶಸ್ತಿ ನೀಡಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಮೂವತ್ತುವರ್ಷಗಳ ಲೀಸ್ 5% ಗೈಡೆನ್ಸ್ ವ್ಯಾಲ್ಯೂ ಮೇಲೆ ಸೈಟು ಹಂಚಿಕೆ ಮಾಡಲು ನಿರ್ಧಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದು, ಅನುಮೋದನೆ ನೀಡಲಾಗಿದೆ. ಅಕ್ಟೋಬರ್.30, 2025ರ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿ ಮಾತನಾಡಿ, ಇಂದಿನ ಸಂಪುಟ ಸಭೆಯಲ್ಲಿ 26 ವಿಷಯಗಳ ಬಗ್ಗೆ ಚರ್ಚೆ ಆಗಿವೆ. ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ k ಶೋರ್ ಯೋಜನೆ ಅಡಿ 20 ಕೋಟಿ ಮೊತ್ತದದ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಕರಾವಳಿ ಮತ್ತು ಪಶ್ಚಿಮಘಟ್ಟ ಗಳಲ್ಲಿನ ಕುರಿತು ಯೋಜನೆ ಇದಾಗಿದೆ. ಕಾರವಾರ, ಮಲ್ಪೆ,ಹಳೆ ಮಂಗಳೂರು ಬಂದರುಗಳನ್ನು ಪಿಪಿಪಿ ಮಾದರಿಯಲ್ಲಿ ರಿಪೇರಿ ಮಾಡಿ ನಿರ್ವಹಣೆ ಮಾಡುಲು ತಯಾರಿಯಾಗಲಿದೆ. 40 ಕೋಟಿ ಯೋಜನಾ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಮಂಡ್ಯ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಿವೇಕಾನಂದ ಬಡಾವಣೆಯಲ್ಲಿ ಜಾಗ…














