Author: kannadanewsnow09

ವಿಜಯಪುರ : ವಖ್ಫ್ ಬೋರ್ಡ್ ಆಸ್ತಿ ಯಾರಪ್ಪನದು ಅಲ್ಲ, ಮಿಸ್ಟರ್ ಯತ್ನಾಳ್. ಅದು ದಾನಿಗಳು ಸಮುದಾಯಕ್ಕೆ ಕೊಟ್ಟಿರುವ ದಾನ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಿಜಯಪುರದಲ್ಲಿ ವಖ್ಫ್ ಅದಾಲತ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಖ್ಫ್ ಆಸ್ತಿ ಸರ್ಕಾರದಿಂದ ಪಡೆದಿಲ್ಲ, ಬದಲಿಗೆ ಸರ್ಕಾರಿ ಸಂಸ್ಥೆ ಗಳೇ ವಖ್ಫ್ ಆಸ್ತಿ ಒತ್ತುವರಿ ಮಾಡಿವೆ. ಖಬರಸ್ಥಾನಕ್ಕೆ ಹೊರತು ಪಡಿಸಿ ವಖ್ಫ್ ಬೋರ್ಡ್ ಗೆ ಸರ್ಕಾರ ಜಮೀನು ಕೊಟ್ಟಿಲ್ಲ. ವ್ಯವಸ್ಥಿತ ವಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೋಗಬೇಡಿ ಎಂದು ತಿಳಿಸಿದರು. ವಿಜಯಪುರದಲ್ಲಿ ಬೇರೆ ಯವರಿಗೆ ಸೇರಿದ ಆಸ್ತಿ ಗೆಲ್ಲಾ ಖಾತೆ ಮಾಡಿಸಿಕೊಳ್ಳಲು ಜಮೀರ್ ಅಹಮದ್ ಬರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವೇದಿಕೆಯಲ್ಲಿ ಮಾತನಾಡುತ್ತಾ ನೇರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ವಖ್ಫ್ ಆಸ್ತಿ ನಿಮ್ಮಪ್ಪ ನದೂ ಅಲ್ಲ, ನಮ್ಮಪ್ಪನ ದು ಅಲ್ಲ. ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟ ದೇವರ ಆಸ್ತಿ…

Read More

ನವದೆಹಲಿ : ಉಪಗ್ರಹ ಸಂವಹನಕ್ಕಾಗಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಪರಿಷ್ಕೃತ ಸಮಾಲೋಚನಾ ಪತ್ರವನ್ನು ನೀಡುವಂತೆ ರಿಲಯನ್ಸ್ ಜಿಯೋ ಕಂಪನಿಯು ಟೆಲಿಕಾಂ ನಿಯಂತ್ರಕ ‘ಟ್ರಾಯ್’ಗೆ ಒತ್ತಾಯಿಸಿದೆ. ಉಪಗ್ರಹ ಮತ್ತು ಭೂ ಸೇವೆಗಳ ನಡುವೆ ಸಮಾನ ಅವಕಾಶವನ್ನು ಖಾತರಿಪಡಿಸುವ ಪ್ರಮುಖ ಅಂಶಗಳನ್ನು ವರದಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸುವ ಮೂಲಕ ಪರಿಷ್ಕೃತ ಪತ್ರ ನೀಡಿವಂತೆ ಕಂಪನಿ ಕೇಳಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಅವರಿಗೆ ಕಂಪನಿ ಪತ್ರ ಬರೆದಿದ್ದು, ‘ಕೆಲವು ಉಪಗ್ರಹ ಆಧಾರಿತ ವಾಣಿಜ್ಯ ಸಂವಹನ ಸೇವೆಗಳಿಗೆ ಸ್ಪೆಕ್ಟ್ರಮ್ ನಿಯೋಜನೆ ಮಾಡುವ ಸಂಬಂಧ ನಿಯಮಗಳು ಮತ್ತು ಷರತ್ತುಗಳಿಗೆ’ ನಿಯಮಗಳನ್ನು ಶಿಫಾರಸು ಮಾಡುವ ಸಮಾಲೋಚನಾ ಪತ್ರವನ್ನು ಪರಿಷ್ಕರಿಸುವಂತೆ ಕೋರಿದೆ. ಉಪಗ್ರಹ ಆಧಾರಿತ ಮತ್ತು ಭೂ ಪ್ರದೇಶ ಸೇವೆಗಳ ನಡುವೆ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳುವ ನಿರ್ಣಾಯಕ ವಿಷಯವನ್ನು ಸಮಾಲೋಚನಾ ಪತ್ರವು ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದು ನಮಗೆ ಆಶ್ಚರ್ಯವಾಗಿದೆ. ಈ ಲೋಪವು ಈ ಸೇವೆಗಳ ನಡುವೆ ಸಮಾನ ಅವಕಾಶವನ್ನು ರೂಪಿಸುವ ಅಗತ್ಯವನ್ನು ಪರಿಹರಿಸುವ…

Read More

ಮಂಡ್ಯ: ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಂಡ್ಯದ ಮದ್ದೂರಿನ ತರಮ್ಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಗೃಹ ಸಚಿವ ಪರಮೇಶ್ವರ್ -ಸತೀಶ್ ಜಾರಕಿಹೋಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದ.? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗಧಿ ಮಾಡಕ್ಕಾಗುತ್ತಾ? ಎಂದು ಪ್ರಶ್ನಿಸಿದರು. ಅವಧಿಗೂ ಮುನ್ನ ಚುನಾವಣೆ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ. ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅನುಭವ ಇಲ್ಲ ಅದಕ್ಕೆ ಆತರ ಅಂತಾರೆ ಅಷ್ಟೆ. ಯಾವ ಸರ್ಕಾರ ಬಂದ್ರು ಅವರಿಗೆ ಅಧಿಕಾರ ಸಿಕ್ಕುದ್ರುನು ಪೂರ್ಣ ಅವಧಿಯನ್ನ ಮುಗಿಸೋಕೆ ಯಾವತ್ತು ರೆಡಿ ಇಲ್ಲ. ಅವರು ಜ್ಯೋತಿಷ್ಯ ಹೇಳೋದಾದ್ರೆ ಹೇಳಿ ನಮ್ಮವರು ಇದ್ದಾರೆ ಒಳ್ಳೆಯ ಜ್ಯೋತಿಷ್ಯ…

Read More

ಗುರುಗ್ರಾಮ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಒಂದು ದಿನದ ಮಟ್ಟಿಗೆ ಡೆಲಿವರಿ ಏಜೆಂಟ್ ಆಗಿ ಮಾರ್ಪಟ್ಟಿದ್ದರು, ಆದರೆ ಆರ್ಡರ್ ಸಂಗ್ರಹಿಸುವಾಗ ಗುರುಗ್ರಾಮದ ಪ್ರಮುಖ ಮಾಲ್ ಅಥವಾ ಮಾಲ್ ಲಿಫ್ಟ್ಗೆ ಪ್ರವೇಶವನ್ನು ನಿರಾಕರಿಸಿದ ನಂತರ ಅವರ ಅನುಭವವು ಸುಗಮವಾಗಿ ಸಾಗಲಿಲ್ಲ. ಉಪಾಹಾರ ಗೃಹದಿಂದ ವಿತರಣಾ ಪ್ಯಾಕೇಜ್ ಪಡೆಯಲು ಅವರು ಮತ್ತೊಂದು ಪ್ರವೇಶದ್ವಾರದಿಂದ ಮೆಟ್ಟಿಲುಗಳನ್ನು ಹತ್ತಬೇಕಾಯಿತು. ಡೆಲಿವರಿ ಏಜೆಂಟರು ಎದುರಿಸುತ್ತಿರುವ ಸವಾಲುಗಳ ಮೊದಲ ಅನುಭವವನ್ನು ಪಡೆಯಲು ಗೋಯಲ್ ಮತ್ತು ಅವರ ಪತ್ನಿ ಗ್ರೇಸಿಯಾ ಮುನೋಜ್ ವಿತರಣಾ ಕಾರ್ಯನಿರ್ವಾಹಕರ ಪಾತ್ರವನ್ನು ವಹಿಸಿಕೊಂಡರು. ಜೊಮ್ಯಾಟೊ ಡೆಲಿವರಿ ಸಮವಸ್ತ್ರ ಧರಿಸಿದ ಗೋಯಲ್ ಗುರುಗ್ರಾಮದ ಆಂಬಿಯನ್ಸ್ ಮಾಲ್ಗೆ ಪ್ರವೇಶಿಸಿದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆದು ಮತ್ತೊಂದು ಪ್ರವೇಶದ್ವಾರವನ್ನು ತೆಗೆದುಕೊಳ್ಳುವಂತೆ ಹೇಳಿದರು. ಘಟನೆಗಳ ಅನುಕ್ರಮದ ವೀಡಿಯೊವನ್ನು ಪೋಸ್ಟ್ ಮಾಡಿದ ಗೋಯಲ್, ಮಾಲ್ಗಳು ವಿತರಣಾ ಏಜೆಂಟರ ಬಗ್ಗೆ ಹೆಚ್ಚು ಮಾನವೀಯವಾಗಿರಬೇಕು. ಅವರ ಪರಿಸ್ಥಿತಿಗಳನ್ನು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಗಮನಸೆಳೆದರು. “ನನ್ನ ಎರಡನೇ ಆದೇಶದ ಸಮಯದಲ್ಲಿ, ಎಲ್ಲಾ ವಿತರಣಾ ಪಾಲುದಾರರಿಗೆ…

Read More

ಬೆಂಗಳೂರು: ಇ-ಖಾತಾ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಬರುವ ಅಗತ್ಯ ಇಲ್ಲ. ಬದಲಾಗಿ ಮನೆಯಿಂದಲೇ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರಿನಲ್ಲಿ 21 ಲಕ್ಷ ನಿವೇಶನಗಳಿವೆ. ಈ ನಿವೇಶನಗಳ ಡ್ರಾಪ್ಟ್ಗಳನ್ನು ಬಿಬಿಎಂಪಿ ಈಗಾಗಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ಆಸ್ತಿ ಮಾಲೀಕರು ಈ ಡ್ರಾಪ್ಟ್ ಗಳನ್ನು ನೋಡಿ, ಅಗತ್ಯ ದಾಖಲೆಗಳನ್ನು ವೆಬ್ಸೈಟ್ ನಲ್ಲೇ ಲಗತ್ತಿಸುವ ಮೂಲಕ ಯಾವುದೇ ಕಚೇರಿಗೆ ಹೋಗದೆ ಮನೆಯಿಂದಲೇ ಶಾಶ್ವತ ಇ-ಖಾತಾ ಪಡೆದುಕೊಳ್ಳಬಹುದು” ಎಂದು ಅವರು ತಿಳಿಸಿದರು. ಇ-ಖಾತಾ ಹೆಲ್ಪ್ ಡೆಸ್ಕ್ ಇ-ಖಾತಾ ಪಡೆಯುವ ಸಂಬಂಧ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಗಮನದಲ್ಲಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯುವ ಮೂಲಕ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ…

Read More

ಬಳ್ಳಾರಿ : ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿಗೆ ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಗಳ ವಿವರ ಚರ್ಮ ಕುಶಲಕರ್ಮಿ ಕುಟುಂಬಗಳ ತರಬೇತಿ ಪಡೆಯಲು ಅಧ್ಯಯನ ಪ್ರವಾಸ ಯೋಜನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯಡಿ ಮೂರು ವರ್ಷಗಳ ಡಿಪ್ಲೋಮಾ ಇನ್ ಲೆದರ್ ಅಂಡ್ ಫ್ಯಾಷನ್ ಟೆಕ್ನಾಲಜಿ (ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀðಣರಾಗಿರಬೇಕು). ಸ್ವಯಂ ಉದ್ಯೋಗಗಳಾದ ಸ್ವಾವಲಂಭಿ ಅಥವಾ ಸಂಚಾರಿ ಮಾರಾಟ ಮಳಿಗೆ, ನೇರ ಸಾಲ ಯೋಜನೆ, ಚರ್ಮ ಶಿಲ್ಪಿ ಯೋಜನೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ ಯೋಜನೆ, ಪಾದುಕೆ ಕುಟೀರ ಯೋಜನೆ ಹಾಗೂ ಮಾರುಕಟ್ಟೆ ಸಹಾಯಧನ ಯೋಜನೆ ಹಾಗೂ ಡಾ.ಬಾಬು ಜಗಜೀವನ ರಾಂ ಚರ್ಮಕಾರರ ವಸತಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. ಆಸಕ್ತ ಅರ್ಹ ಅರ್ಜಿದಾರರು ಅ.30ರೊಳಗಾಗಿ ನಿಗಮದ ವೆಬ್‌ಸೈಟ್‌ನ https://suvidha.karnataka.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿಯ ಪ್ರತಿಯನ್ನು ಸ್ವ-ವಿವರದೊಂದಿಗೆ…

Read More

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಡೆಡ್ ಲೈನ್ ಇಲ್ಲ. ಹೀಗಾಗಿ ಸಾರ್ವಜನಿಕರು ಗಾಬರಿಯಾಗುವ ಅಥವಾ ಆತುರಪಡುವ ಅಗತ್ಯ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗಧಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ. ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ” ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. “ನಕಲಿ ನೋಂದಣಿ ಪ್ರಕರಣಗಳನ್ನು ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ…

Read More

ಬೆಂಗಳೂರು: ಮೈಸೂರಿನ ಪ್ರಸಿದ್ಧ ದಸರಾ ಮಹೋತ್ಸವದ ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ತೆರವುಗೊಳಿಸಲು, ರೈಲು ಸಂಖ್ಯೆ 17301/17302 ಮೈಸೂರು-ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ತಾತ್ಕಾಲಿಕ ನಿಲುಗಡೆಗಳ ವಿವರಗಳು ಈ ಕೆಳಗಿನಂತಿವೆ: ಅಕ್ಟೋಬರ್ 9 ರಿಂದ ಅಕ್ಟೋಬರ್ 13, 2024 ರವರೆಗೆ ಮೈಸೂರಿನಿಂದ ಪ್ರಾರಂಭವಾಗುವ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಬೆಳಗುಳ (9:43/9:44 PM), ಸಾಗರಕಟ್ಟೆ (9:56/9:57 PM) , ಹೊಸ ಅಗ್ರಹಾರ (10:29/10:30 PM), ಅಕ್ಕಿಹೆಬ್ಬಾಳು (10:37/10:38 PM), ಬೀರಹಳ್ಳಿ ಹಾಲ್ಟ್ (10:43/10:44 PM) ಮತ್ತು ಮಾವಿನಕೆರೆ (11:09/11:10 PM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರುತ್ತದೆ. ಅಕ್ಟೋಬರ್ 11, 2024 ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾವಿನಕೆರೆ (3:22/3:23 AM), ಬೀರಹಳ್ಳಿ ಹಾಲ್ಟ್ (4:02/4:03 AM), ಅಕ್ಕಿಹೆಬ್ಬಾಳು (4:09/4:10 AM), ಹೊಸ…

Read More

ಬೆಂಗಳೂರು : ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್ಸಿ ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಅವರು ಇಂದು ಕೃಷ್ಣಾದಲ್ಲಿ ಸರ್ಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು. ಯುಪಿಎಸ್ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. 371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ…

Read More

ಬೆಂಗಳೂರು: ಮೈಸೂರು ದಸರಾ ವೀಕ್ಷಣೆಗೆ ತೆರಳುತ್ತಿರೋರಿಗೆ ಗುಡ್ ನ್ಯೂಸ್ ಎನ್ನುವಂತೆ KSRTCಯಿಂದ ದಸರಾ ವಿಶೇಷ ಬಸ್ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ನಾಡಹಬ್ಬ ದಸರಾ ಪ್ರಯುಕ್ತ ನಾಡಿನ ಜನತೆಗೆ ಆರಾಮದಾಯಕ, ಸುರಕ್ಷಿತ ಮತ್ತು ಬೇಡಿಕೆಯನುಸಾರ ತ್ವರಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಇಂದು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ಅಲಂಕೃತ ದಸರಾ ವಿಶೇಷ ವಾಹನಗಳಿಗೆ ಪೂಜೆ ಸಲ್ಲಿಸುವ ಮುಖೇನ ಚಾಲನೆ ನೀಡಲಾಯಿತು. ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ದಸರಾ ಕ್ಯಾಂಪ್ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಕೋಲಾರ ಹಾಗೂ ಮೈಸೂರು ವಿಭಾಗಗಳಿಂದ ಒಟ್ಟು 700 ಹೆಚ್ಚುವರಿ ವಾಹನಗಳನ್ನು ಬೆಂಗಳೂರು ಮೈಸೂರು‌ ನಡುವೆ ಕಾರ್ಯಾಚರಣೆ ಮಾಡಲಾಗುತ್ತದೆ. ಇದರೊಂದಿಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳಿಗೆ 2000 ವಿಶೇಷ ಬಸ್ಸುಗಳ ಕಾರ್ಯಾಚರಣೆ‌ ನಡೆಯಲಿದೆ. ಈ ಸಂದರ್ಭದಲ್ಲಿ ನಿಗಮದ ಹಿರಿಯ ಅಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರಿಯ ವಿಭಾಗ ಮತ್ತು ಕೆಂಪೇಗೌಡ…

Read More