Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: 2026 ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮುಖ್ಯ) ಬರೆಯಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency -NTA) ಒಂದು ಪ್ರಮುಖ ಸಲಹೆಯನ್ನು ನೀಡಿದೆ. ಯಾವುದೇ ವ್ಯತ್ಯಾಸಗಳು, ದೂರುಗಳು ಅಥವಾ ನಂತರದ ಹಂತದಲ್ಲಿ ನಿರಾಕರಣೆಯನ್ನು ತಪ್ಪಿಸಲು, ಜೆಇಇ ಮುಖ್ಯ 2026 ಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನವೀಕರಿಸಲಾಗಿದೆಯೆ ಎಂದು ಎನ್‌ಟಿಎ ಆಕಾಂಕ್ಷಿಗಳನ್ನು ಖಚಿತಪಡಿಸಿಕೊಳ್ಳುವಂತೆ ಕೇಳಿದೆ. ಕಳೆದ ಕೆಲವು ವರ್ಷಗಳಂತೆ, ಎನ್‌ಟಿಎ ಜೆಇಇ ಮುಖ್ಯ 2026 ಅನ್ನು ( JEE Main 2026 ) ಎರಡು ಅವಧಿಗಳಲ್ಲಿ ನಡೆಸಲಿದೆ: ಸೆಷನ್ 1 ಜನವರಿ 2026 ರಲ್ಲಿ ನಡೆಯಲಿದೆ ಮತ್ತು ಎರಡನೇ ಅವಧಿ ಏಪ್ರಿಲ್ 2026 ರಲ್ಲಿ ನಡೆಯಲಿದೆ. ಟೈಮ್ಸ್ ನೌ ಡಿಜಿಟಲ್ ವರದಿ ಮಾಡಿರುವಂತೆ, ಜೆಇಇ ಮುಖ್ಯ 2026 ಸೆಷನ್ 1 ರ ಆನ್‌ಲೈನ್ ಅರ್ಜಿ ನಮೂನೆಯು ಅಕ್ಟೋಬರ್ 2025 ರಲ್ಲಿ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಸದ್ಯಕ್ಕೆ, ಆಕಾಂಕ್ಷಿಗಳು ಜನವರಿ ಅವಧಿಗೆ ಮಾತ್ರ…
ಕಲಬುರ್ಗಿ: ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಜನರು ಕುಪಿತರಾಗಿದ್ದಾರೆ. ಎಲ್ಲಿ ನಮ್ಮ ಮೇಲೆ ಬೀಳುತ್ತಾರೋ ಎಂಬಂತಿದೆ ಸಚಿವರ ಪರಿಸ್ಥಿತಿ. ರಾಜ್ಯ ಸರಕಾರ ತೀಕ್ಷ್ಣ- ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಲವೆಡೆ ಶೇ 100ರಷ್ಟು ಬೆಳೆ ನಾಶವಾಗಿದೆ. ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಸ್ಥಳೀಯ ನಾಯಕರು ಸಮಸ್ಯೆ ಇರುವಲ್ಲಿಗೆ ತೆರಳಿ ಸರಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು. ರೈತರಿಗೆ ಪರಿಹಾರ ಮೊದಲು ಕೊಡಿ ಎಂದು ಆಗ್ರಹಿಸಿದರು. ಅಧಿಕಾರದಲ್ಲಿ ಇರುವವರು ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು. ವಿಜಯೇಂದ್ರ ಅವರು ತೀರ್ಮಾನಿಸಿ ಒಂದೆರಡು ದಿನದಲ್ಲೇ ಇಲ್ಲಿಗೆ ಬಂದಿದ್ದೇವೆ. ಉಸ್ತುವಾರಿ ಸಚಿವರು ಅವರವರ ಜಿಲ್ಲೆಗೆ ಹೋಗಿ ಉಸ್ತುವಾರಿ ಕಾರ್ಯ ಮಾಡಬೇಕಿತ್ತು. ರೈತರ ಸಮಸ್ಯೆ ಪರಿಹರಿಸಬೇಕಿತ್ತು. ಪರಿಹಾರ ಕೊಡಬೇಕಿತ್ತು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಬಿಹಾರ ಚುನಾವಣೆ ನಂತರ ಮೋದಿ ಸರಕಾರಕ್ಕೆ ಅಂತ್ಯ…
ಬೆಂಗಳೂರು: ಅಕ್ಟೋಬರ್.2ರಂದು ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶಿಸಿದೆ. ದಿನಾಂಕ: 02-10-2025 (ಗುರುವಾರ) ದಂದು “ಗಾಂಧಿ ಜಯಂತಿ” ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು(ಆರೋಗ್ಯ & ಶಿಕ್ಷಣ) ರವರು ತಿಳಿಸಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಂದ ಜಾತಿಗಣತಿ ತರಬೇತಿ ಕಾರ್ಯಗಾರಕ್ಕೆ ಭೇಟಿ ಹಾಗೂ ಪರಿಶೀಲನೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ಕಾರ್ಯ 2025ರ ತರಬೇತಿ ಕಾರ್ಯಗಾರಕ್ಕೆ ಭೇಟಿ ಹಾಗೂ ಪರಿಶೀಲನೆ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ. ವಿ. ರವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ 2025ರ ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಿ ಗಣತಿದಾರರಿಗೆ ಹಾಗೂ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಆಯುಕ್ತರು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ…
ಶಿವಮೊಗ್ಗ: ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಜೀವನದಲ್ಲಿ ಆರ್ಥಿಕ ಸ್ವಾವಲಂಭನೆಯ ಜೊತೆಗೆ ಅವರ ಜೀವನ ಗುಣಮಟ್ಟವನ್ನು ಸುಧಾರಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಧು ಎಚ್.ಎಂ. ತಿಳಿಸಿದರು. ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಯಾಗಿದ್ದು, ಇದರಲ್ಲಿ ಅನ್ನಭಾಗ್ಯ ಯೋಜನೆಯು ಹಸಿವು ಮುಕ್ತ ಜಿಲ್ಲೆಯನ್ನಾಗಿಸಲು ಸಹಕಾರಿಯಾಗಿದೆ ಎಂದರು. ಬಡವರ ಆಶಾಕಿರಣವಾಗಿರುವ ಅನ್ನಭಾಗ್ಯ ಯೋಜನೆಯು ಹಸಿವು ಮುಕ್ತ ಭಾರತ ಮತ್ತು “ಸುಸ್ಥಿರ ಅಭಿವೃದ್ಧಿ ಗುರಿ 2030” ತಲುಪಲು ಸಹಕಾರಿಯಾಗಿದೆ ಎಂದರು. 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಅಥವಾ ಐ.ಟಿ. ಪಾವತಿ ಮಾಡುತ್ತಿರುವ ಕುಟುಂಬಗಳ ಬಿ.ಪಿ.ಎಲ್. ಕಾರ್ಡುಗಳನ್ನು ಅನರ್ಹ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಬಲೀಕರಣ ಮಾಡಲು ಸಹಕಾರಿಯಾಗಿರುವ ಗೃಹಲಕ್ಷ್ಮೀ ಯೋಜನೆಯ ಹಣವು ಜೂನ್-25 ಮಾಹೆಯವರೆಗೆ ಬಿಡುಗಡೆಯಾಗಿದೆ, 2044 ಐಟಿ,…
ಶಿವಮೊಗ್ಗ : ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ತಮ್ಮ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜಿ.ಪಂ ಸಿಇಓ ಹೇಮಂತ್.ಎನ್ ಸಲಹೆ ನೀಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ನಜೀರ್‌ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ-ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಲೀಡ್ ಬ್ಯಾಂಕ್‌ಗಳು ಆ ಭಾಗದಲ್ಲಿ ತಮ್ಮ ಬ್ರಾಂಚ್‌ಗಳನ್ನು ಸ್ಥಾಪಿಸಿಕೊಳ್ಳಬೇಕು. ಭದ್ರಾವತಿಯ ಗ್ರಾಮೀಣ ಹಾಗೂ ಹೋಬಳಿಗಳಲ್ಲಿ ಈಗಾಗಲೇ ಐಡಿಬಿಐ ಬ್ಯಾಂಕ್ ತನ್ನ ಬ್ರಾಂಚ್ ತೆರೆದಿದೆ. ಸೊರಬ, ಮುಡುಬ, ದೊಡಮಘಟ್ಟ ಭಾಗಗಳಲ್ಲಿ ಬ್ಯಾಂಕ್‌ಗಳ ಅವಶ್ಯಕತೆ ಇದೆ. ಹಾಗೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೂ ಕೂಡ ಇದ್ದಾರೆ. ಹಾಗಾಗಿ ಈ ಭಾಗಗಳಲ್ಲಿ ಶಾಖೆಯನ್ನು ತೆರೆದರೆ ರೈತರಿಗೆ, ಸ್ವ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ರ್ಕಾರದಿಂದ…
ಬೆಂಗಳೂರು: ರಾಜ್ಯಾಧ್ಯಂತ ಶೇ.70ರಿಂದ 95ರಷ್ಟು ಮಹಿಳೆಯರ ಜೀವನ ಮಟ್ಟವು ಗ್ಯಾರಂಟಿಗಳಿಂದ ಸುಧಾರಣೆಯಾಗಿರುವುದಾಗಿ ಲೋಕನೀತಿ – ಸಿಎಸ್‌ಡಿಎಸ್, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂಡೆಸ್ ಆಕ್ಷನ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ. ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿದ್ದು, ರಾಜ್ಯಾದ್ಯಂತ ಶೇ.70 ರಿಂದ 95 ರಷ್ಟು ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದಿದೆ. ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮಿ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ಶೇ.88 ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ. ಶೇ.83 ರಷ್ಟು ಮಹಿಳೆಯರು ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ ವೆಚ್ಚ, ಪರೀಕ್ಷೆಗಳು ಮತ್ತು ಔಷಧಿಗಳ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿವೆ. ಈ ಅಂಶಗಳು ಲೋಕನೀತಿ – ಸಿಎಸ್‌ಡಿಎಸ್, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂಡೆಸ್…
ತುಮಕೂರು: ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಬಹಳ ವೇಗವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯ ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯದಾದ್ಯಂತ ಪ್ರಾರಂಭವಾಗಿದೆ. ರಾಜ್ಯದಲ್ಲಿ 12285ಬ್ಲಾಕ್ ಗಳಲ್ಲಿ ಸಮೀಕ್ಷೆ ನೆಡೆಯಲ್ಲಿದ್ದು, ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ಒಟ್ಟು 6544 ಬ್ಲಾಕ್ ಗಳಲ್ಲಿ, ಒಟ್ಟು 7,55,483 ಮನೆಗಳನ್ನು ಒಳಗೊಂಡಂತೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಬೆರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರಿನಲ್ಲಿ ವೇಗವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಚಿಕ್ಕನಾಯಕನಹಳ್ಳಿ 13125, ಗುಬ್ಬಿ 2055, ಕೊರಟಗೆರೆ 10000, ಕುಣಿಗಲ್ 14000, ಮಧುಗಿರಿ 13000, ಶಿರಾ 15000, ತಿಪಟೂರು17000, ಪಾವಗಡ 10000, ತುರುವೇಕೆರೆ 10000, ತುಮಕೂರು 26000 ಮನೆಗಳ…
ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ನಿರ್ಮಿತ ಚಲನಚಿತ್ರಗಳು ಮತ್ತು ಪೀಠೋಪಕರಣಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸುವುದಾಗಿ ಹೇಳಿದ್ದಾರೆ, ವಿದೇಶಿ ಸ್ಪರ್ಧೆಯಿಂದ ದುರ್ಬಲಗೊಂಡಿರುವ ಕೈಗಾರಿಕೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ, ಡೊನಾಲ್ಡ್ ಟ್ರಂಪ್ ಇತರ ದೇಶಗಳು ಯುಎಸ್ ಚಲನಚಿತ್ರೋದ್ಯಮವನ್ನು “ಕದಿಯುತ್ತಿವೆ” ಎಂದು ಆರೋಪಿಸಿದರು, ಕ್ಯಾಲಿಫೋರ್ನಿಯಾ “ವಿಶೇಷವಾಗಿ ತೀವ್ರ ಹೊಡೆತಕ್ಕೆ ಒಳಗಾಗಿದೆ” ಎಂದು ಹೇಳಿದರು. ಅವರು ಯುನೈಟೆಡ್ ಸ್ಟೇಟ್ಸ್ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುವುದಾಗಿ ಘೋಷಿಸಿದರು. “ನಮ್ಮ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಿಂದ, ಇತರ ದೇಶಗಳು ‘ಮಗುವಿನಿಂದ ಕ್ಯಾಂಡಿ’ಯನ್ನು ಕದಿಯುವಂತೆ ಕದ್ದಿವೆ” ಎಂದು ಅವರು ಸೋಮವಾರ ಹೇಳಿದರು. ಡೊನಾಲ್ಡ್ ಟ್ರಂಪ್ ಮೊದಲು ಮೇ ತಿಂಗಳಲ್ಲಿ ಅಂತಹ ಸುಂಕಗಳ ಕಲ್ಪನೆಯನ್ನು ಮಂಡಿಸಿದ್ದರು, ಆದರೆ ಆ ಸಮಯದಲ್ಲಿ ಸ್ವಲ್ಪ ಸ್ಪಷ್ಟತೆಯನ್ನು ನೀಡಿದ್ದರಿಂದ ಮನರಂಜನಾ ಉದ್ಯಮದ ಕಾರ್ಯನಿರ್ವಾಹಕರು ಈ ಪ್ರಸ್ತಾಪದ ಬಗ್ಗೆ ಅನಿಶ್ಚಿತರಾಗಿದ್ದರು. ನೆಟ್‌ಫ್ಲಿಕ್ಸ್ ಷೇರುಗಳು 1.4% ರಷ್ಟು ಕುಸಿದವು ಮತ್ತು…
ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವೈದ್ಯಕೀಯ ಶಾಖೆಯು ಬೆಂಗಳೂರಿನ ಅನುಗ್ರಹ ಸಮುದಾಯ ಕೇಂದ್ರದಲ್ಲಿ ಇಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಉದ್ಘಾಟಿಸಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಒಬ್ಬ ದಾನಿಯ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದು ಹೇಳಿದರು. ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ.ಪ್ರಭಾವತಿ ಗಜಲಕ್ಷ್ಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವ, ಅದರ ಆವರ್ತನ, ಅರ್ಹ ದಾನಿಗಳು, ರಕ್ತದಾನದಿಂದ ದಾನಿಗೆ ಮತ್ತು ಸಮಾಜಕ್ಕೆ ಆಗುವ ಅನುಕೂಲಗಳನ್ನು ಕುರಿತು ವಿವರಿಸಿದರು. ಲೂಯಿಸ್ ಅಮುಯಿಥನ್, ಡಿಐಜಿ/ರೈಲ್ವೆ ಸುರಕ್ಷತಾ ಪಡೆ/ನೈಋತ್ಯ ರೈಲ್ವೆ, ಶ್ರೇಯಾಂಸ್ ಚಿಂಚ್‌ವಾಡೆ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (RPF), ಡಾ. ಸಿದ್ದಪ್ಪ ದಿಂಡಾವರ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಡಾ.ವಿಶ್ವನಾಥ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಕೇಶವುಲು, ಸಹಾಯಕ ಸಿಬ್ಬಂದಿ ಅಧಿಕಾರಿ/ಬೆಂಗಳೂರು, ಇತರ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ…
ಬೆಂಗಳೂರು: ಬಿಎಂಟಿಸಿಯ ನೂತನ ಅಧ್ಯಕ್ಷರಾಗಿ ವಿ.ಎಸ್ ಆರಾಧ್ಯ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರನ್ನು ಇಂದು ರಾಜ್ಯ ಸರ್ಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿತ್ತು. ದಿನಾಂಕ 29-09-2025 ರಂದು ವಿ.ಎಸ್.ಆರಾಧ್ಯ ರವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಈ ಅಧಿಕಾರ ವಹಿಸುವ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು. https://kannadanewsnow.com/kannada/asi-on-duty-at-minister-zameer-ahmeds-janata-darshan-dies/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/