Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಇಂದು ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇಂದಿನ ಪರೀಕ್ಷೆಗೆ 5.26 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೇ, 12,533 ಮಂದಿ ಗೈರು ಆಗಿದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಇಂದು ದ್ವಿತೀಯ ಪಿಯುಸಿ ಗಣಿತ, ಶಿಕ್ಷಣ, ಲಾಜಿಕ್ ಮತ್ತು ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ 5,39,479 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂಬುದಾಗಿ ತಿಳಿಸಿದೆ. ಇಂದು ನಡೆದಂತ ದ್ವಿತೀಯ ಪಿಯುಸಿ ಎರಡನೇ ದಿನದ ಪರೀಕ್ಷೆಗೆ 5,26,946 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 12,533 ವಿದ್ಯಾರ್ಥಿಗಳು ಗೈರು ಹಾಜರಿದ್ದಾರೆ. ಇಂದಿನ ಪರೀಕ್ಷೆಯ ಹಾಜರಾತಿ ಪ್ರಮಾಣ ಶೇ.97.68 ಆಗಿದೆ. ಯಾವುದೇ ಪರೀಕ್ಷಾ ಅಕ್ರಮವಾಗಲೀ, ಡಿಬಾರ್ ಆಗಲಿ ನಡೆದಿಲ್ಲ ಎಂಬುದಾಗಿ ತಿಳಿಸಿದೆ. https://kannadanewsnow.com/kannada/bird-flu-outbreak-in-kerala-health-department-issues-guidelines-adherence-to-these-rules-mandatory/ https://kannadanewsnow.com/kannada/breaking-kalaburagi-man-commits-suicide-after-wifes-harassment/
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಶೇ.99 ಅಂಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೀಡಿರುವುದಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬಜೆಟ್ ಗೂ ಮುನ್ನಾ ವಿಧಾನಮಂಡಲದ ಉಭಯ ಸನದಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಂವಿಧಾನ ಮುಖ್ಯಸ್ಥರು, ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯದ ಸರ್ಕಾರದ ಸಾಧನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯದ ಮುನ್ನೋಟವನ್ನು ಬಹಳ ಸಂತೋಷದಿಂದ ಮಂಡಿಸಿದ್ದಾರೆ. ನಮ್ಮ ಸರ್ಕಾರ ಕಳೆದ ಆಯವ್ಯಯದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕೃಷಿ, ಹೈನುಗಾರಿಕೆ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ವಸತಿ, ಬಂಡವಾಳ ಹೂಡಿಕೆ, ರೇಷ್ಮೆ, ಮೂಲಭೂತ ಸೌಕರ್ಯ, ಶಿಕ್ಷಣ ಸೇರಿದಂತೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಬಗ್ಗೆ ಶ್ಲಾಘಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ನಮ್ಮ ಬಜೆಟ್ನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಘೋಷಣೆ ಮಾಡಿದ್ದ 334 ಭರವಸೆಗಳಲ್ಲಿ 331 ಭರವಸೆಗಳನ್ನು ಜಾರಿ ಮಾಡಿ ಜನಕಲ್ಯಾಣಕ್ಕೆ…
ನವದೆಹಲಿ: ಪಾಡ್ಕಾಸ್ಟರ್ ರಣವೀರ್ ಅಲ್ಲಾಬಾಡಿಯಾ ಅವರು ತಮ್ಮ ಕಾರ್ಯಕ್ರಮಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವ ಭರವಸೆಗೆ ಒಳಪಟ್ಟು ರಣವೀರ್ ಶೋ ಪ್ರಸಾರವನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದಾಗ್ಯೂ, ನ್ಯಾಯಾಲಯವು ಅಲ್ಲಾಬಾಡಿಯಾ ತನ್ನ ಪಾಡ್ಕಾಸ್ಟ್ನಲ್ಲಿ ತನ್ನ ವಿರುದ್ಧದ ಪ್ರಕರಣದ ಬಗ್ಗೆ ಮಾತನಾಡುವುದನ್ನು ನಿಷೇಧಿಸಿದೆ. ಯೂಟ್ಯೂಬ್ ಶೋನಲ್ಲಿ ಅಶ್ಲೀಲತೆಯನ್ನು ಉತ್ತೇಜಿಸಿದ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಲ್ಲಾಬಾಡಿಯಾ, ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅವಕಾಶ ನೀಡುವಂತೆ ಸೋಮವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಲ್ಲಾಬಾಡಿಯಾ ಅವರ ಮನವಿಯನ್ನು ವಿರೋಧಿಸಿದರು, ವಿವಾದಾತ್ಮಕ ಇಂಡಿಯಾಸ್ ಗಾಟ್ ಲೇಟೆಂಟ್ ಶೋನಲ್ಲಿ ಅವರ ಹೇಳಿಕೆಗಳು “ಅಶ್ಲೀಲ, ವಿಕೃತ” ಎಂದು ಹೇಳಿದರು. ತಮ್ಮ ವಿರುದ್ಧ ದಾಖಲಾದ ಅನೇಕ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಅಲ್ಲಾಬಾಡಿಯಾ ಮತ್ತು ಆಶಿಶ್ ಚಂಚ್ಲಾನಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. https://kannadanewsnow.com/kannada/bird-flu-outbreak-in-kerala-health-department-issues-guidelines-adherence-to-these-rules-mandatory/ https://kannadanewsnow.com/kannada/breaking-kalaburagi-man-commits-suicide-after-wifes-harassment/
ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾಧ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಅವುಗಳನ್ನು ಪಾಲಿಸುವಂತೆ ತಿಳಿಸಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಯಾವುದೇ ಕಾರಣಕ್ಕೂ ಹಸಿ ಮಾಂಸ ತಿನ್ನದಂತೆ ಸಲಹೆ ಮಾಡಿದೆ. ಮಾಂಸವನ್ನು ಚೆನ್ನಾಗಿ ಬೇಯಿಸಿಯೇ ತಿನ್ನುವಂತೆ ಸೂಚಿಸಿದೆ. ಇನ್ನೂ ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶದಲ್ಲಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾರೂ ಓಡಾಡುವಂತಿಲ್ಲ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಕ್ಕೆ ಜ್ವರ ಬಂದರೇ 10 ಕಿಲೋಮೀಟರ್ ವ್ಯಾಪ್ತಿಯನ್ನು ಸರ್ವೆಲೆನ್ಸ್ ಪ್ರದೇಶ ಎಂಬುದಾಗಿ ಗುರುತಿಸಲಾಗುತ್ತದೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಓಡಾಡಕ್ಕೆ ನಿಷೇಧ ಹೇರಲಾಗಿದೆ. https://kannadanewsnow.com/kannada/ayodhya-one-suspected-terrorist-arrested-for-planning-attack-on-ram-temple/ https://kannadanewsnow.com/kannada/breaking-kalaburagi-man-commits-suicide-after-wifes-harassment/
ನವದೆಹಲಿ: ಹರಿಯಾಣದ ಫರಿದಾಬಾದ್ನಲ್ಲಿ ಬಂಧಿಸಲ್ಪಟ್ಟ ಶಂಕಿತ ಅಬ್ದುಲ್ ರೆಹಮಾನ್ ಬಗ್ಗೆ ಪ್ರಮುಖ ಬಹಿರಂಗಪಡಿಸಲಾಗಿದೆ. ಭದ್ರತಾ ಸಂಸ್ಥೆಗಳ ಮೂಲಗಳ ಪ್ರಕಾರ, ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಅಬ್ದುಲ್ ರೆಹಮಾನ್ ಅವರನ್ನು ಬಳಸುತ್ತಿತ್ತು. ಈ ಉದ್ದೇಶಕ್ಕಾಗಿ ಐಎಸ್ಐ ಅಬ್ದುಲ್ ರೆಹಮಾನ್ನನ್ನು ಸಿದ್ಧಪಡಿಸಿತ್ತು. ಅಬ್ದುಲ್ ರೆಹಮಾನ್ ಐಎಸ್ಐ ಜೊತೆ ಸಂಪರ್ಕದಲ್ಲಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪಡೆದ ಮಾಹಿತಿಯ ಪ್ರಕಾರ, ಭಯೋತ್ಪಾದಕ ಅಬ್ದುಲ್ ಹಲವಾರು ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಅಬ್ದುಲ್ ರೆಹಮಾನ್ ಫೈಜಾಬಾದ್ನಲ್ಲಿ ಮಟನ್ ಅಂಗಡಿಯೊಂದನ್ನು ನಡೆಸುತ್ತಿದ್ದು, ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ. ರಾಮ ಮಂದಿರ ನಿರ್ಮಾಣವಾದಾಗಿನಿಂದ ಅಯೋಧ್ಯೆಯನ್ನು ಭಯೋತ್ಪಾದಕರು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಆದರೆ, ಅಬ್ದುಲ್ ನನ್ನು ಬಂಧಿಸುವ ಮೂಲಕ ತನಿಖಾ ಸಂಸ್ಥೆಗಳು ಐಎಸ್ ಐನ ಪ್ರಮುಖ ಪಿತೂರಿಯನ್ನು ವಿಫಲಗೊಳಿಸಿವೆ. ಹ್ಯಾಂಡ್ ಗ್ರೆನೇಡ್ ಬಳಸಿ ಅಯೋಧ್ಯೆ ರಾಮ ದೇವಾಲಯದ ಮೇಲೆ ದಾಳಿ ಮಾಡುವ ಮೂಲಕ ಭಾರಿ ವಿನಾಶವನ್ನು ಸೃಷ್ಟಿಸುವುದು ಭಯೋತ್ಪಾದಕ ಅಬ್ದುಲ್ ರಹಮಾನ್ ಅವರ ಯೋಜನೆಯಾಗಿತ್ತು. ಪಿತೂರಿಯ…
ಬೆಂಗಳೂರು: ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿಯವರು ಏನೆಲ್ಲ ಮಾಡಿದ್ದರೆನ್ನವುದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರ ಭಾಷಣವನ್ನು ಟೀಕಿಸುವುದಕ್ಕೂ ಮುನ್ನ ಬಿಜೆಪಿಯವರು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ. ಸೋಮವಾರ ಆರಂಭಗೊಂಡ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಮಾಡಿದ ರಾಜ್ಯಪಾಲರ ಭಾಷಣದ ಬಗ್ಗೆ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು. ಎಥಿಕ್ಸ್ ಕಮಿಟಿ ವಿಚಾರ ಗೊತ್ತಿಲ್ಲ ಸಚಿವರ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ ಅಶ್ಲೀಲ ಪದ ಪ್ರಯೋಗ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾನು ಇಂದು ಬೆಂಗಳೂರಿಗೆ ಬಂದಿದ್ದು, ನಿಮಗೆ (ಮಾಧ್ಯಮ) ಎಷ್ಟು ಮಾಹಿತಿ ಇದೆಯೋ, ಅಷ್ಟೇ ಮಾಹಿತಿ ನನಗೂ…
ಬೆಂಗಳೂರು: ನಗರದಲ್ಲಿ ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಗುಡ್ ನ್ಯೂಸ್ ಎನ್ನುವಂತೆ ಉಚಿತ ಆಟೋ ಚಾಲನಾ ತರಬೇತಿಗೆ ಚಾಲನೆ ನೀಡಲಾಗಿದೆ. ಇಂದು ಸಾವಿರಾರು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನ ತರಬೇತಿ ನೀಡುವ ಉಪಕ್ರಮಕ್ಕೆ ಚಾಲನೆ ನೀಡಲಾಯಿತು. ಬಿ. ಪ್ಯಾಕ್, ಶ್ರೀ ಕೃಷ್ಣ ವೆಲ್ ನೆಸ್ ಸೆಂಟರ್ ಹಾಗೂ ಆದರ್ಶ ಆಟೋ ಯೂನಿಯನ್ ಸಹಭಾಗಿತ್ವದಲ್ಲಿ ಈ ತರಬೇತಿ ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಇದಾಗಿದೆ. ಶ್ರೀ ಕೃಷ್ಣ ವೆಲ್ನೇಸ್ ಸೆಂಟರ್ ನ ಮುಖ್ಯಸ್ಥೆ ಮಿಮಿ ಪಾರ್ಥಸಾರಥಿ, ಬಿ. ಪ್ಯಾಕ್ ಸಂಸ್ಥೆಯ ಡಾ.ಸಿ. ಸಂಪತ್, ರಾಘವೇಂದ್ರ ಪೂಜಾರಿ , ಹರ್ಷಿತ ವಿ ಕಾವೇರಿ ಕೇದಾರಾನಾಥ್, ಮಂಜುನಾಥ್ ಉಪಸ್ಥಿತರಿದ್ದರು. https://kannadanewsnow.com/kannada/champions-trophy-2025-india-to-take-on-australia-in-semi-finals/ https://kannadanewsnow.com/kannada/breaking-kalaburagi-man-commits-suicide-after-wifes-harassment/
ನವದೆಹಲಿ: ಕಾಯುವಿಕೆ ಮುಗಿದಿದೆ. ಭಾರತದ ಮುಂದಿನ ಹಾದಿ ಸೇರಿದಂತೆ ಸೆಮಿಫೈನಲ್ ಪಂದ್ಯಗಳು ಸಜ್ಜಾಗಿವೆ. ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 44 ರನ್ ಗಳಿಂದ ಮಣಿಸಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ನಡೆಯಲಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಮತ್ತೊಂದು ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಈಗಾಗಲೇ ತಮ್ಮ ಸೆಮಿಫೈನಲ್ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದರೆ ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. https://twitter.com/BCCI/status/1896236425106067909 ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಅಭಿಯಾನವನ್ನು ಭಾರತವು ಬಾಂಗ್ಲಾದೇಶದ ವಿರುದ್ಧ ಆರು ವಿಕೆಟ್ಗಳ ಜಯದೊಂದಿಗೆ ಪ್ರಾರಂಭಿಸಿತು, ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆರು ವಿಕೆಟ್ಗಳ ಗೆಲುವು ಸಾಧಿಸಿತು. ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರಬಲ ಗೆಲುವು ಸಾಧಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರ…
ಬೆಂಗಳೂರು: ಬಜೆಟ್ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾಡಿರುವ ಭಾಷಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ರಾಜ್ಯದ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಬಗ್ಗೆ ಹೊಂದಿರುವ ದೂರದೃಷ್ಟಿ ವ್ಯಕ್ತವಾಗಿದೆ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಸರಕಾರವು ಕ್ವಿನ್ ಸಿಟಿ, ವಿಮಾನ ನಿಲ್ದಾಣಗಳ ನಿರ್ಮಾಣ, ಏರ್-ಸ್ಟ್ರಿಪ್ ಅಭಿವೃದ್ಧಿ, ಸಿಗ್ನೇಚರ್ ಪಾರ್ಕ್ ಮುಂತಾದ ಮಹತ್ವದ ಯೋಜನೆಗಳ ಬಗ್ಗೆ ಹೊಂದಿರುವ ಬದ್ಧತೆ ಯನ್ನು ರಾಜ್ಯಪಾಲರ ಭಾಷಣದಲ್ಲಿ ಕಾಣಬಹುದು’ ಎಂದಿದ್ದಾರೆ. ಸರಕಾರವು ಸಮಗ್ರ ಕೈಗಾರಿಕಾ ಪ್ರಗತಿಗೆ ಸಂಕಲ್ಪ ಮಾಡಿದ್ದು, ಮೂಲಸೌಕರ್ಯ ಅಭಿವೃದ್ಧಿಗೂ ಅದ್ಯತೆ ನೀಡುತ್ತಿದೆ. ಇವುಗಳ ಜತೆಗೆ ತೋಟಗಾರಿಕೆ ವಲಯದ ವಿಸ್ತರಣೆ, ಹೊಸ ತಳಿಗಳ ಸಂಶೋಧನೆ ಮೂಲಕ ರೈತ ಸಮುದಾಯದ ಏಳ್ಗೆಯತ್ತಲೂ ಚಿತ್ತ ನೆಟ್ಟಿದೆ. ಇದು ನಮ್ಮ ಸಮತೋಲನದ ದೃಷ್ಟಿಯನ್ನು ಸಂಕೇತಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರಿಗೆ ಭದ್ರತೆಯ ಭಾವನೆ ಒದಗಿಸಿದೆ. ಕಲ್ಯಾಣ…
ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಕಂಬ ಸ್ಥಳಾಂತರ ಕಾಮಗಾರಿ ಇರುವುದರಿಂದ ಎಂಆರ್ಎಸ್ ವಿದ್ಯುತ್ ವಿತರಣಾ ಕೇಂದ್ರದ ಪುರಲೆ ಫೀಡರ್-3 11 ಕೆವಿ ಮಾರ್ಗ ಮುಕ್ತತೆ ನೀಡಲು ಮಾ.5 ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗು ವಿದ್ಯುತ್ ಕೆಳಕಂಡ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ. ನಗರದ ಗುರುಪುರ, ಪುರಲೆ, ಸುಬ್ಬಯ್ಯ ಆಸ್ಪತ್ರೆ, ಮಂಜುನಾಥ ಬಡಾವಣೆ, ವೆಂಕಟೇಶ ನಗರ, ಹಸೂಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾವಾಗಲಿದ್ದು, ಈ ಪ್ರದೇಶದ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಗರ ಉಪವಿಭಾಗ-1 ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.