Author: kannadanewsnow09

ಬೆಂಗಳೂರು: ನಾಳೆ ರಾಜ್ಯಾಧ್ಯಂತ ಗಾಂಧಿ ಮತ್ತು ನೋಟು ಚಿತ್ರ ಬಿಡುಗಡೆಯಾಗಲಿದೆ. ಇದೊಂದು ಮಕ್ಕಳ ಚಿತ್ರದ ಜೊತೆಗೆ, ಕುಟುಂಬ ಸಮೇತರಾಗಿ ನೋಡುವಂತ ಸಿನಿಮಾವಾಗಿದೆ. ತಪ್ಪದೇ ಎಲ್ಲರೂ ಹೋಗಿ ಚಿತ್ರವನ್ನು ನೋಡಿ, ತಂಡವನ್ನು ಹಾರೈಸುವಂತೆ ಗೀತರಚನಾಕಾರ ಡಾ.ವಿ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ. ಇಂದು ಅವರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನಾಳೆ ಗಾಂಧಿ ಮತ್ತು ನೋಟು ಚಿತ್ರ ತೆರೆಕಾಣದಲಿದೆ. ಇದೊಂದು ನೋಟಿನ ಮೇಲೆ ಗಾಂಧಿ ಚಿತ್ರ ಇರಬೇಕೇ ಬೇಡವೇ ಎನ್ನುವಂತ ಕಥಾಹಂತರವನ್ನು ಒಳಗೊಂಡಿದೆ. ಸಂಭಾಷಣಾಕಾರ ಗುರುಪ್ರಸಾದ್ ಅವರು ಕತೆಯನ್ನು ಚೆನ್ನಾಗಿ ನೋಡುಗರನ್ನು ಸೆಳೆಯುವಂತೆ ಹೆಣೆದಿದ್ದಾರೆ. ಶಾರ್ಟ್ ಫಿಲ್ಮ್ ಅನ್ನು ಬಿಗ್ ತೆರೆಗೆ ತಂದಿದ್ದಾರೆ ಎಂದರು. ತಮಾಷೆ, ಎಲ್ಲರಿಗೂ ಇಷ್ಟವಾಗುವಂತ ಕತೆಯಿದೆ. ಮಕ್ಕಳು ತುಂಬಾ ಇಷ್ಟ ಪಡುವಂತೆ ಚಿತ್ರವಿದು. ಮಲೆನಾಡು ಪ್ರದೇಶದಲ್ಲಿ, ಸಾಗರದ ಹಿನ್ನೀರು ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದರ ಪ್ರಮುಖ ಪಾತ್ರದಲ್ಲಿ ನನ್ನ ಮಗಳು ದಿವಿಜ ನಾಗೇಂದ್ರ ಪ್ರಸಾದ್ ನಟಿಸಿದ್ದಾಳೆ. ತಂದೆಯಾಗಿ ನನಗೆ ಮಗಳ ನಟನೆ ಬಗ್ಗೆ ಖುಷಿಯಿದೆ. ನಿಮಗೆಲ್ಲ ಮೆಚ್ಚುಗೆಯಾಗುವಂತಿದೆ.…

Read More

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಕುಮಾರರು ಯಾರನ್ನೋ ಸಂತಸ ಪಡಿಸಲು ಹಾಗೂ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ದಸರಾ ಉತ್ಸವ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನ; ಇದು ಅಕ್ಷಮ್ಯ ಅಪರಾಧ ಎಂದು ವಿಶ್ಲೇಷಿಸಿದರು. ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದರು. ತಕ್ಷಣ ದೆಹಲಿ ಹೈಕಮಾಂಡಿನ ಒತ್ತಡ ಬಂದು ಕ್ಷಮಾಪಣೆ ಕೇಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನದು ಒಡೆದಾಳುವ ನೀತಿಯ ಸಂಸ್ಕøತಿ. ಹಾಗಾಗಿ ಕಾಂಗ್ರೆಸ್ ಸರಕಾರ…

Read More

ಬೆಳ್ತಂಗಡಿ: ಸುಳ್ಳು ದೂರು ಆರೋಪದಲ್ಲಿ ಯಾವುದೇ ಕ್ಷಣದಲ್ಲಾದರೂ ಸುಜಾತ ಭಟ್ ಅವರನ್ನು ಎಸ್ಐಟಿ ಬಂಧಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ವಿರುದ್ಧ ಸುಳ್ಳು ದೂರು ಆರೋಪ ಕೇಳಿ ಬಂದಿತ್ತು. ಸುಳ್ಳು ಸಾಕ್ಷಿ ಸೃಷ್ಟಿ ಆರೋಪದಲ್ಲಿ ಅವರನ್ನು ಎಸ್ಐಟಿ ಬಂಧಿಸಲಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಬೆಳ್ತಂಗಡಿಯ ಎಸ್ಐಟಿ ಪೊಲೀಸ್ ಠಾಣೆಗೆ ವಿಚಾರಣೆಗೆ ಸುಜಾತಾ ಭಟ್ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದರು. ಎಲ್ಲವೂ ಸುಳ್ಳು ಹೇಳಿರೋದಾಗಿ ತಪ್ಪೊಪ್ಪಿಕೊಂಡಿದ್ದರು. ಅನನ್ಯಾ ಭಟ್ ಎಂಬ ಮಗಳು ಇಲ್ಲ ಎಂಬುದಾಗಿಯೂ ಸುಜಾತಾ ಭಟ್ ಎಸ್ಐಟಿ ಮುಂದೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ದೂರುದಾರೆ ಸುಜಾತಾ ಭಟ್ ಅವರನ್ನು ಎಸ್ಐಟಿ ಪ್ರಕರಣದಲ್ಲಿ ಸುಳ್ಳು ದೂರು ನೀಡಿದ್ದರಿಂದ ಬಂಧಿಸೋ ಸಾಧ್ಯತೆ ಇದೆ. https://kannadanewsnow.com/kannada/actor-anirudh-met-cm-siddaramaiah-discussion-about-the-opening-of-vishnuvardhans-tomb/ https://kannadanewsnow.com/kannada/mangaluru-five-killed-in-bus-auto-rickshaw-collision-at-ullal-talapady/

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಟ ಅನಿರುದ್ಧ್ ಭೇಟಿಯಾಗಿದ್ದಾರೆ. ಇಂದಿನ ಭೇಟಿಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಕುರಿತಂತೆ ಚರ್ಚೆ ನಡೆಸಿದರು. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ನಟ ಅನಿರುದ್ಧ್ ಭೇಟಿಯಾದರು. ಅವರೊಂದಿಗೆ ನಟ ವಿಷ್ಣು ವರ್ಧನ್ ಸಮಾಧಿ ತೆರವು ವಿಚಾರವಾಗಿ ಚರ್ಚಿಸಿದರು. ಅಲ್ಲದೇ ಸಮಾಧಿ ತೆರವಿನ ಹಿಂದಿನ ಕಾರಣ ಸೇರಿದಂತೆ ವಿವಿಧ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದಾಗಿ ತಿಳಿದು ಬಂದಿದೆ. https://kannadanewsnow.com/kannada/on-the-30th-a-seminar-on-ambedkars-perspective-in-the-media-will-be-held-in-chitradurga/ https://kannadanewsnow.com/kannada/mangaluru-five-killed-in-bus-auto-rickshaw-collision-at-ullal-talapady/

Read More

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್.‌ ಅಂಬೇಡ್ಕರ್‌ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್‌.ಸಿ. ಎಸ್‌.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಗಸ್ಟ್‌ 30 ರಂದು “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಕ್ರಾಂತಿಕಾರಿ ಚಿಂತನೆಗಳು, ಇಂದಿನ ದಿನದಲ್ಲಿಯೂ ಅವುಗಳ ಪ್ರಸ್ತುತತೆ, ಪತ್ರಕರ್ತರಾಗಿ ಅವರ ಕೊಡುಗೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಿನ ಹಾದಿ ಮುಂತಾದ ವಿಷಯಗಳ ಚರ್ಚೆಗೆ ಈ ವಿಚಾರ ಸಂಕಿರಣವು ವೇದಿಕೆಯಾಗಲಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು ತಿಳಿಸಿದ್ದಾರೆ. ಹಿರಿಯ ಪತ್ರಕರ್ತ…

Read More

ಮಂಗಳೂರು: ಇಲ್ಲಿನ ಉಳ್ಳಾಲದ ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಮಂಗಳೂರಿನ ಉಳ್ಳಾಲದ ತಲಪಾಡಿಯ ಟೋಲ್ ಗೇಟ್ ಬಳಿಯಲ್ಲಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಕೆಸಿ ರೋಡ್ ನಿಂದ ತೆರಳುತ್ತಿದ್ದಂತ ಆಟೋ ರಿಕ್ಷಾ ಹಾಗೂ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕೆಸಿ ರೋಡ್ ಮೂಲದವರೆನ್ನಲಾದಂತ ಐವರು ಮೃತಪಟ್ಟಿರೋದಾಗಿ ಹೇಳಲಾಗುತ್ತಿದೆ. ಮೃತರಲ್ಲಿ ನಾಲ್ವರು ಮಹಿಳೆಯರು, ಮಗು ಕೂಡ ಸೇರಿದೆ. ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/newspaper-distributors-agents-are-the-backbone-of-journalism-cm-media-advisor-k-v-prabhakar/ https://kannadanewsnow.com/kannada/breaking-big-twist-in-dharmasthala-case-sowjanyas-mother-files-complaint-with-sit-against-masked-man-chinnaiah/

Read More

ಮೈಸೂರು: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ‌ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಪ್ರಾಯಪಟ್ಟರು. ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಸಮ್ಮೇಳನ‌ ಉದ್ಘಾಟಿಸಿ ಮಾತನಾಡಿದರು. ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹಿರಾತುದಾರರನ್ನೂ ಸಂಸ್ಥೆಯ ಜೊತೆ ಬೆಸೆಯುತ್ತಾರೆ. (ಪತ್ರಿಕೆಗಳ ಒಳಗೆ ಜಾಹಿರಾತು ಕರಪತ್ರ ಹಾಕುವ insertion) ಎಂದರು. ಸುದ್ದಿಗಳು, ಪತ್ರಿಕೆಗಳು ಹಳತಾಗುವ ಮೊದಲು, ಓದುಗರ ಕೈಗೆ ಕಾಫಿ ಲೋಟ ಬರುವ ಮೊದಲು ಪತ್ರಿಕಾ ವಿತರಕರು ಓದುಗರ ಮನೆ ಬಾಗಿಲಿಗೆ ತಲುಪುತ್ತಾರೆ. ಇದಕ್ಕಾಗಿ ಕೋಳಿ ಕೂಗುವ ಮೊದಲೇ ಮನೆಯಿಂದ ಎದ್ದು ಹೊರಡುತ್ತಾರೆ. ನಾವು ಪತ್ರಕರ್ತರು ಬೆಚ್ಚಗೆ ಮಲಗಿರುವಾಗ ಮಳೆ, ಚಳಿ…

Read More

ಶಿವಮೊಗ್ಗ : ಶಂಕರಯ್ಯ, ಶಿವಮೊಗ್ಗ ಇವರು ವ್ಯವಸ್ಥಾಪಕರು, ಓಲಾ ಸರ್ವೀಸ್ ಸೆಂಟರ್ ಶಿವಮೊಗ್ಗ, ಎಂ.ಡಿ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈ.ಲಿ ಬೆಂಗಳೂರು ಹಾಗೂ ವ್ಯವಸ್ಥಾಪಕರು ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈವೆಟ್ ಲಿ. ಬೆಂಗಳೂರು ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ. ದೂರುದಾರರು ಆನ್‌ಲೈನ್ ಮೂಲಕ ರೂ.1,51,071 ಪಾವತಿಸಿ ದಿ:26/5/2022 ರಂದು ಒಂದು ಓಲಾ ಎಲೆಕ್ಟ್ರಿಕಲ್ ಸ್ಕೂಟರನ್ನು ಬುಕ್ ಮಾಡಿದ್ದು, ದಿ:10/6/2022 ರಂದು ಪಡೆದುಕೊಂಡಿರುತ್ತಾರೆ. ಈ ಸ್ಕೂಟರ್ 8 ವರ್ಷಗಳ ಬ್ಯಾಟರಿ ವಾರಂಟಿ ಮತ್ತು ಇತರೇ ಭಾಗಗಳಿಗೆ ಮೂರು ವರ್ಷಗಳ ವಾರೆಂಟಿ ಹೊಂದಿರುತ್ತದೆ. ಸ್ಕೂಟರ್‌ನ್ನು ವಶಕ್ಕೆ ಪಡೆದ ನಂತರ ದಿ:10/07/2022 ರಂದು ಗಾಡಿ ಸ್ಟಾರ್ಟ್ ಆಗದಿರುವುದರಿಂದ ದಿ:12/7/2022 ರಂದು ರಿಪೇರಿಗಾಗಿ ಬಿಟ್ಟಿದ್ದು ಸಂಸ್ಥೆಯವರು ರಿಪೇರಿ ಮಾಡಿ ನೀಡಿರುತ್ತಾರೆ. ತದನಂತರ ದಿ:9/1/2025 ರಂದು ಪುನಃ ಸ್ಟಾರ್ಟ್ ಆಗದಿರುವುದರಿಂದ 1 ನೇ ಎದುರುದಾರರಿಗೆ ಈ ಬಗ್ಗೆ…

Read More

ಬೆಂಗಳೂರು: ಅಂತೂ ಇಂತೂ ಆಂಕರ್ ಅನುಶ್ರೀ ವಿವಾಹವು ರೋಷನ್ ಜೊತೆಗೆ ನೆರವೇರಿದೆ. ಮದುವೆಯ ಬಳಿಕ ಆಂಕರ್ ಅನುಶ್ರೀ ಅವರು ರೋಷನ್ ಹಾಗೂ ನನ್ನನ್ನು ಅಪ್ಪು ಸೇರಿಸಿದ್ದಾಗಿ ಆಂಕರ್ ಅನುಶ್ರೀ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಆಂಕರ್ ಅನುಶ್ರೀ ಹಾಗೂ ರೋಷನ್ ವಿವಾಹದ ಬಳಿಕ ನವ ದಂಪತಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೋಷನ್ ರಾಮಮೂರ್ತಿ ಕುಶಾಲ ನಗರದವರಾಗಿದ್ದಾರೆ. ಅವರು ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದಾರೆ ಎಂದರು. ರೋಷನ್ ಅಪ್ಪು ಸರ್ ಅಭಿಮಾನಿಯಾಗಿದದಾರೆ. ಪುನೀತ್ ಪರ್ವದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆನು. ಪುನೀತ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂಬುದಾಗಿ ಪುನೀತ್ ರಾಜ್ ಕುಮಾರ್ ನೆನೆದು ಆಂಕರ್ ಅನುಶ್ರೀ ಭಾವುಕರಾಗಿ ಕಣ್ಣೀರಾಕಿದರು. https://kannadanewsnow.com/kannada/shivamogga-on-the-30th-there-will-be-a-power-outage-in-these-areas-of-the-district/ https://kannadanewsnow.com/kannada/breaking-big-twist-in-dharmasthala-case-sowjanyas-mother-files-complaint-with-sit-against-masked-man-chinnaiah/

Read More

ಶಿವಮೊಗ್ಗ : ಶಿವಮೊಗ್ಗ ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದ 66 ಕೆವಿ ಕೇಂದ್ರದ ಅಬ್ಬಲಗೆರೆ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ ಮತ್ತು ಹುಣಸೋಡು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.30 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅಬ್ಬಲಗೆರೆ, ಕೊಮ್ಮನಾಳು, ಬನ್ನಿಕೆರೆ, ಬೀರನಕೆರೆ, ಬಿಕ್ಕೋನಹಳ್ಳಿ, ಕುಂಚೇನಹಳ್ಳಿ ಮೇಲಿನ/ಕೆಳಗಿನ ತಾಂಡ, ಕಲ್ಲಾಪುರ, ಗೋಂದಿಚಟ್ನಹಳ್ಳಿ, ಮೇಲಿನಹನಸವಾಡಿ, ಹೊಳೆಹನಸವಾಡಿ, ಬೆಳಲಕಟ್ಟೆ, ಕಲ್ಲಗಂಗೂರು, ಹುಣಸೋಡು, ಮೋಜಪ್ಪಹೊಸೂರು, ಬಸವನಗಂಗೂರು, ಮತ್ತೋಡು ಹಾಗೂ ಸುತ್ತುಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Read More