Author: kannadanewsnow09

ಬೆಂಗಳೂರು: ನಟ ದರ್ಶನ್ ಪತ್ನಿ, ಪುತ್ರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗದಿಂದ ಪತ್ರ ಬರೆದು ಸೂಚಿಸಲಾಗಿದೆ. ಈ ಕುರಿತಂತೆ ಸಾಮಾಜಿಕ ಹೋರಾಟಗಾರರಾದಂತ ಬಿಆರ್ ಭಾಸ್ಕರ್ ಪ್ರಸಾದ್ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷಿ ಅವರಿಗೆ ಪತ್ರದಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಪ್ರತಿಸ್ಪಂದಿಸಿರುವಂತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಬರೆದಿರುವಂತ ಪತ್ರದಲ್ಲಿ  ಬಿ. ಆರ್ ಭಾಸ್ಕರ್ ಪುಸಾದ್, ಸಾಮಾಜಿಕ ಹೋರಾಟಗಾರರು, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರು ಆಯೋಗದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯಲ್ಲಿ ಅರ್ಜಿದಾರರು ಖ್ಯಾತ ನಟ ದರ್ಶನ್ ರವರ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳನ್ನು ಮುಂದೆ ಓದಿ. • ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 37ಲಕ್ಷ ರೈತರಿಗೆ ರೂ.28ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8362.68 ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಸಾಲವನ್ನು ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು. • ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ ರೂ.5,600 ಕೋಟಿಗಳಿಂದ ರೂ.3,236.11 ಕೋಟಿಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. • ರಾಜ್ಯದಲ್ಲಿ 28516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ…

Read More

ಮಹಾರಾಷ್ಟ್ರ: ಯಾವುದೇ ಹೋರಾಟದಲ್ಲಿ ಆರ್ ಎಸ್ ಎಸ್ ಭಾಗವಹಿಸುದಿಲ್ಲ. ಆದರೇ ರಾಮಮಂದಿರ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿತ್ತು. ಇನ್ಮುಂದೆ ಯಾವುದೇ ಹೋರಾಟದಲ್ಲಿ ಆರ್ ಎಸ್ ಎಸ್ ಭಾಗವಹಿಸಲ್ಲ ಎಂಬುದಾಗಿ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಮಹಾರಾಷ್ಟ್ರದ ನಾಗ್ಬುರದಲ್ಲಿ ಮಾತನಾಡಿದಂತ ಅವರು, 75 ವರ್ಷ ಆದವರು ಯಾರು ಕೂಡ ನಿವೃತ್ತಿ ಆಗುವ ಅಗತ್ಯವಿಲ್ಲ. ನಾನು ನಿವೃತ್ತಿ ಆಗುವುದಿಲ್ಲ. ಬೇರೆಯವರಿಗೂ ನಿವೃತ್ತಿ ಆಗಲು ಹೇಳಲ್ಲ. ಎಲ್ಲಿಯವರೆಗೂ ನಾವು ಇರುತ್ತೇವೆಯೋ ಅಲ್ಲಿಯವರೆಗೆ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿ ಅಧ್ಯಕ್ಷರ ನೇಮಕ ವಿಚಾರವಾಗಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಕೇವಲ ಸಲಹೆಗಳನ್ನು ಮಾತ್ರ ನೀಡುತ್ತೇವೆ ಎಂದರು. https://kannadanewsnow.com/kannada/10000-fine-even-if-not-drunk-car-owner-escalated-to-high-court-notice-to-the-government/ https://kannadanewsnow.com/kannada/cancellation-of-appointment-of-these-officials-of-the-states-health-department-state-government-issued-an-important-order/

Read More

ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರದ ಲೋಪ ಪ್ರಶ್ನಿಸಿ ಹೈಕೋರ್ಟ್ ಗೆ ಕಾರು ಮಾಲೀಕನೊಬ್ಬ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೊತೆಗೆ ತಾನು ಕುಡಿಯದೇ ಇದ್ದರೂ ಡ್ರಿಂಕ್ ಅಂಡ್ ಡ್ರೈವ್ ಯಂತ್ರದ ಲೋಪದಿಂದ ದಂಡ ವಿಧಿಸಿದ್ದನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಗೆ ಅಜಯ್ ಕುಮಾರ್ ಕಶ್ಯಪ್ ಎಂಬುವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕಾರು ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ತಡೆದಿದ್ದರು. ಡ್ರಿಂಕ್ ಅಂಡ್ ಡ್ರೈವ್ ಯಂತ್ರದ ಮೂಲಕ ಪತ್ತೆ ವೇಳೆಯಲ್ಲಿ ಎರಡು ಬಾರಿ ನೆಗೆಟಿವ್ ತೋರಿಸಿ, 3ನೇ ಬಾರಿ ಪಾಸಿಟಿವ್ ಬಂದಿತ್ತು ಎಂದಿದ್ದಾರೆ. ತಾನು ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಪಾಸಿಟಿವ್ ತೋರಿಸಿತ್ತು. ಕುಡಿದಿಲ್ಲವೆಂದರೂ ಒಪ್ಪದೇ ಪೊಲೀಸರು ಕಾರು ಸೀಜ್ ಮಾಡಿ 10,000 ದಂಡವನ್ನು ವಿಧಿಸಿದ್ದಾರೆ. ತಾವೇ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗಲೂ ನೆಗೆಟಿವ್ ಬಂದಿದೆ. ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರದಲ್ಲೇ ಲೋಪವಿದೆ ಎಂಬುದಾಗಿ ವಾದಿಸಿದ್ದಾರೆ. ರಾಜ್ಯ ಸರ್ಕಾರವನ್ನು ಹೈಕೋರ್ಟ್ ಏಕಸದಸ್ಯ ಪೀಠವು ಪ್ರಶ್ನಿಸಿದೆ. ಯಂತ್ರದಲ್ಲೇ…

Read More

ಮಂಡ್ಯ: ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಆಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್.25ರಿಂದ ನಾಲ್ಕು ದಿನಗಳ ಕಾಲ ಆಚರಣೆ ನಡೆಸಲಾಗುತ್ತದೆ ಎಂಬುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇಂದು ಈ ಸಂಬಂಧ ಮಂಡ್ಯದ ಜಿ.ಪಂ ಕಾವೇರಿ ಸಭಾಂಗಣದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸೆ.25 ರಿಂದ 28 ರ ವರಗೆ ನಾಲ್ಕು ದಿನ ಶ್ರೀರಂಗಪಟ್ಟಣ ದಸರಾ ನಡೆಸಲು ನಿರ್ಧರಿಸಲಾಗಿದೆ. ಶ್ರೀರಂಗಪಟ್ಟಣ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಈ ಬಳಿಕ ಮಾತನಾಡಿದಂತ ಅವರು, ಈ ಬಾರಿಯ ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಇರುತ್ತದೆ. ಸೆಪ್ಟೆಂಬರ್ 25 ರಿಂದ 28ರವರಗೆ ನಾಲ್ಕು ದಿನದ ದಸರಾ ಆಚರಣೆ ಮಾಡಲಾಗುತ್ತಿದೆ. ಉದ್ಘಾಟರ ಆಯ್ಕೆ ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡ್ತೇವೆ. ಆನೆಗಳನ್ನ ಜವಾಬ್ದಾರಿ DFO ಗೆ ಕೊಟ್ಟಿದ್ದೇವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೋಡ್ತೇವೆ.…

Read More

ಬೆಂಗಳೂರು: ಧರ್ಮಸ್ಥಳ ವಿಷಯದಲ್ಲಿ ಷಡ್ಯಂತ್ರ್ಯ, ಪಿತೂರಿ ನಡೆಸಿದವರಿಗೆ ಆ ಮಂಜುನಾಥ ಸ್ವಾಮಿಯೇ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗುಡುಗಿದರು. ನಗರದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ರಚನೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದರಲ್ಲದೆ ಕೆಲವು ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್ ಐಟಿ ರಚನೆ ಮಾಡಲಾಗಿದೆ ಎಂದು ಕಿಡಿಕಾರಿದರು. ಧರ್ಮಸ್ಥಳದ ವಿಚಾರದಲ್ಲಿ ಈ ಸರ್ಕಾರ ನಡೆದುಕೊಂಡಿದ್ದು ಸರಿಯಲ್ಲ, ಅದಕ್ಕೆ ಮುಂದಿನ ದಿನಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಶಿಕ್ಷೆ ನೀಡುವುದು ಖಚಿತ. ಆರಂಭಿಕ ಹಂತದಿಂದ ಕೂಡ ಸರ್ಕಾರ ಸರಿಯಾಗಿ ನಡೆದುಕೊಂಡಿಲ್ಲ. ಇಲ್ಲಿ ರಾಜಕೀಯ ಅಥವಾ ಧರ್ಮವನ್ನು ತರುವುದಿಲ್ಲ. ಆದರೆ ಕ್ಷೇತ್ರದ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಮಾತ್ರ ಅಪಮಾನ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದೆ. ಇದು ಅಕ್ಷಮ್ಯ ಎಂದು ಅವರು ಹೇಳಿದರು. ಆರಂಭದಿಂದಲೂ ತನಿಖೆಯ ನಾಟಕ ನಡೆದಿದೆ. ಸಿ.ಎಸ್. ದ್ವಾರಕಾನಾಥ್ ಎನ್ನುವ ವ್ಯಕ್ತಿ ಮೊದಲು ದೂರು ನೀಡಿರುತ್ತಾರೆ.…

Read More

ಹುಬ್ಬಳ್ಳಿ: ಬಳ್ಳಾರಿ ಮತ್ತು ತೋರಣಗಲ್ಲು ಯಾರ್ಡ್’ಗಳಲ್ಲಿ ಥಿಕ್ ವೆಬ್ ಸ್ವಿಚ್’ಗಳ ಕಾಮಗಾರಿಗಾಗಿ ಲೈನ್ ಬ್ಲಾಕ್ ಕೈಗೊಳ್ಳುವುದರಿಂದ, ಸೆಪ್ಟೆಂಬರ್ 03, 2025 ರಂದು ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳಿರುತ್ತವೆ. ರದ್ದು: ಗಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ (ರೈಲು ಸಂಖ್ಯೆ 57415), ಚಿಕ್ಕಜಾಜೂರು – ಗಂತಕಲ್ ಪ್ಯಾಸೆಂಜರ್ (57416 ) ಮತ್ತು ಹೊಸಪೇಟೆ – ಬಳ್ಳಾರಿ ಡೆಮು ವಿಶೇಷ (07397) ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 3, 2025 ರಂದು ಸಂಚಾರವನ್ನು ರದ್ದುಗೊಳಿಸಲಾಗಿದೆ. ಭಾಗಶಃ ರದ್ದು: ಸೆಪ್ಟೆಂಬರ್ 2ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 57405 ತಿರುಪತಿ – ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು ಗಂತಕಲ್ ಮತ್ತು ಕದಿರಿದೇವರಪಲ್ಲಿ ನಡುವೆ ಭಾಗಶಃ ರದ್ದುಗೊಂಡಿದೆ. ಇದು ಗಂತಕಲ್ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಸೆಪ್ಟೆಂಬರ್ 3ರಂದು ಕದಿರಿದೇವರಪಲ್ಲಿಯಿಂದ ಹೊರಡಬೇಕಿದ್ದ ರೈಲು ಸಂಖ್ಯೆ 57406 ಕದಿರಿದೇವರಪಲ್ಲಿ – ತಿರುಪತಿ ಪ್ಯಾಸೆಂಜರ್ ರೈಲು ಕದಿರಿದೇವರಪಲ್ಲಿ ಮತ್ತು ಗಂತಕಲ್ ನಡುವೆ ಭಾಗಶಃ ರದ್ದಾಗಿದ್ದು, ಇದು ತನ್ನ ನಿಗದಿತ ಸಮಯಕ್ಕೆ ಕದಿರಿದೇವರಪಲ್ಲಿಯ ಬದಲಾಗಿ ಗಂತಕಲ್ನಿಂದ ತನ್ನ…

Read More

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh -RSS) ಮುಖ್ಯಸ್ಥ ಮೋಹನ್ ಭಾಗವತ್ ( Mohan Bhagwat ) ಅವರು, ಭಾರತದಲ್ಲಿ ಕುಟುಂಬಗಳು ಆದರ್ಶಪ್ರಾಯವಾಗಿ ಮೂವರು ಮಕ್ಕಳನ್ನು ಹೊಂದಬೇಕು ಎಂದು ಹೇಳಿದರು. ಇದು ಕುಟುಂಬ ಜೀವನ ಮತ್ತು ದೇಶದ ಜನಸಂಖ್ಯಾ ಸಮತೋಲನ ಎರಡಕ್ಕೂ ಪ್ರಯೋಜನಕಾರಿ ಎಂದು ವಾದಿಸಿದರು. ಮೂರು ಮಕ್ಕಳನ್ನು ಹೊಂದುವುದು ಮುಖ್ಯ. ಮೂರು ಮಕ್ಕಳಿರುವ ಕುಟುಂಬಗಳಲ್ಲಿ, ಅವರು ಅಹಂ ಮತ್ತು ಪರಸ್ಪರ ಚಲನಶೀಲತೆಯನ್ನು ನಿರ್ವಹಿಸಲು ಕಲಿಯುತ್ತಾರೆ ಎಂದು ಮೋಹನ್ ಭಾಗವತ್ ಹೇಳಿದರು. ಭಾರತದ ಶಿಫಾರಸು ಮಾಡಲಾದ ಜನಸಂಖ್ಯಾ ನೀತಿಯು ಪ್ರತಿ ಕುಟುಂಬಕ್ಕೆ 2.1 ಮಕ್ಕಳು, ಆದರೆ “0.1 ಮಗು ಸಾಧ್ಯವಿಲ್ಲದ ಕಾರಣ, ಇದರರ್ಥ ಪರಿಣಾಮಕಾರಿಯಾಗಿ ಮೂರು ಎಂದು ಅವರು ಹೇಳಿದರು. ಜನಸಂಖ್ಯಾ ಕಾಳಜಿಯನ್ನು ಪರಿಹರಿಸಬೇಕು ಮತ್ತು ಮಕ್ಕಳಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಒಪ್ಪಿಕೊಂಡ ಮೋಹನ್ ಭಾಗವತ್, ಕುಟುಂಬಗಳು ಮೂರು ಮಕ್ಕಳನ್ನು ಹೊಂದಿರಬೇಕು. ಆದರೆ ಇನ್ನು ಮುಂದೆ ಇರಬಾರದು ಎಂದು ಒತ್ತಿ ಹೇಳಿದರು. https://kannadanewsnow.com/kannada/dinesh-k-patnaik-appointed-as-the-high-commissioner-of-india-to-canada/ https://kannadanewsnow.com/kannada/how-does-the-kargal-police-station-psi-know-about-the-person-who-attempted-suicide-at-the-world-famous-jog-falls/

Read More

ನವದೆಹಲಿ: ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ನವದೆಹಲಿ ತನ್ನ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಕೆನಡಾದಲ್ಲಿ ಬೀಡುಬಿಟ್ಟಿದ್ದ ಇತರ ಹಿರಿಯ ರಾಜತಾಂತ್ರಿಕರನ್ನು ಹಿಂತೆಗೆದುಕೊಂಡ ಸುಮಾರು ಒಂಬತ್ತು ತಿಂಗಳ ನಂತರ, ಹಿರಿಯ ರಾಜತಾಂತ್ರಿಕ ದಿನೇಶ್ ಕೆ ಪಟ್ನಾಯಕ್ ಅವರನ್ನು ಕೆನಡಾಕ್ಕೆ ಭಾರತದ ಮುಂದಿನ ಹೈಕಮಿಷನರ್ ಆಗಿ ನೇಮಿಸಲಾಗಿದೆ. ವಿದೇಶಾಂಗ ಸಚಿವಾಲಯ (MEA) ಗುರುವಾರ ಪಟ್ನಾಯಕ್ ಅವರ ನೇಮಕವನ್ನು ಪ್ರಕಟಿಸಿದೆ. ಪ್ರಸ್ತುತ ಸ್ಪೇನ್ ಸಾಮ್ರಾಜ್ಯದ ರಾಯಭಾರಿಯಾಗಿರುವ ದಿನೇಶ್ ಕೆ ಪಟ್ನಾಯಕ್ (IFS:1990) ಅವರನ್ನು ಕೆನಡಾಕ್ಕೆ ಭಾರತದ ಮುಂದಿನ ಹೈಕಮಿಷನರ್ ಆಗಿ ನೇಮಿಸಲಾಗಿದೆ. ಅವರು ಶೀಘ್ರದಲ್ಲೇ ಈ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 1990 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ ಪಟ್ನಾಯಕ್, ಪ್ರಸ್ತುತ ಸ್ಪೇನ್ ಸಾಮ್ರಾಜ್ಯದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಜೂನ್‌ನಲ್ಲಿ ಆಲ್ಬರ್ಟಾದಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರತಿರೂಪ…

Read More

ಬೆಂಗಳೂರು: ಮಂಗಳೂರಿನ ಉಳ್ಳಾಲದ ತಲಕವಾಡಿಯ ಟೋಲ್ ಗೇಟ್ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಘಟನೆಯ ಕುರಿತಂತೆ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷ ಅವರು ಈ ಕೆಳಕಂಡ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ : 28.08.2025 ರಂದು ವಿಭಾಗದ ಮಂಗಳೂರು-1ನೇ ಘಟಕದ ವಾಹನಸಂಖ್ಯೆ : KA19F3407 ಮಾರ್ಗಸಂಖ್ಯೆ : 129/130 ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ಚಾಲಕರಾಗಿ ಶ್ರೀ ನಿಜಲಿಂಗಪ್ಪ ಚಲವಾದಿ ಬಿ.ಸಂ: 309 ರವರು ಕರ್ತವ್ಯ ನಿರ್ವಹಿಸುವಾಗ ಸಮಯ ಸುಮಾರು 1230 – 1235 ರ ಸಮಯದಲ್ಲಿ ಕಾಸರಗೋಡು ನಿಂದ ನಿರ್ಗಮಿಸಿ ಸಮಯ 13:45 ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ…

Read More