Subscribe to Updates
Get the latest creative news from FooBar about art, design and business.
Author: kannadanewsnow09
ಬೆಳಗಾವಿ ಸುವರ್ಣಸೌಧ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಮುಖ್ಯಮಂತ್ರಿಗಳನ್ನು ಸನ್ಮಾನಿಸಿದರು. ಆ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. • ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲಾ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು. • ನಮ್ಮ ಸರ್ಕಾರ ಬಂದ ಬಳಿಕ ಪ್ರತಿ ಲೀಟರ್ ಹಾಲಿಗೆ ರೂ.5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಖರೀದಿಗೆ ರೂ.5 ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿದ್ದೇವೆ. • ಕಬ್ಬಿನ ತೂಕದಲ್ಲಿ ಸಕ್ಕರೆ ಕಾರ್ಖಾನೆಗಳು ಮಾಡುವ ಮೋಸವನ್ನು ತಪ್ಪಿಸಲು, ಇಳುವರಿ ನಿಗದಿಯನ್ನು ವೈಜ್ಞಾನಿಕವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. • ಭೂ ಸುಧಾರಣಾ ಕಾಯ್ದೆಗೆ ಹಿಂದಿನ ಸರ್ಕಾರ ಮಾಡಿರುವ…
ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರಿಂದ ರಾಜ್ಯ ಸರ್ಕಾರ ಮೀನಾ ಮೇಷ ಏಣಿಸದೇ ಈ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಮಾಜಿ ಶಾಸಕ, ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೇಂದ್ರ ಸರ್ಕಾರ ಪ್ರಸಕ್ತವಾಗಿ ತೊಗರಿ ಖರೀದಿಗೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಿವರಾಜಸಿಂಗ್ ಚೌವಾಣ ಅವರನ್ನು ಪತ್ರಿಕಾ ಹೇಳಿಕೆಯಲ್ಲಿ ತೇಲ್ಕೂರ ಅಭಿನಂದಿಸಿ. ಕೇಂದ್ರ ಸರ್ಕಾರ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಸಹ ಸ್ವಾಗತ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಿನಿಂದಲೇ ರೈತರ ನೊಂದಣಿ ಪ್ರಕ್ರಿಯೆ ಆರಂಭಿಸಿ ವಾರದೊಳಗೆ ತೊಗರಿ ಖರೀದಿ ಶುರು ಮಾಡಬೇಕೆಂದಿದ್ದಾರೆ. ಸಾವಿರ ರೂ ಪ್ರೋತ್ಸಾಹ ಧನ ನೀಡಲಿ ಅತಿವೃಷ್ಟಿ ಯಿಂದ ತೊಗರಿ ಬೆಳೆ ಹಾನಿಯಾಗಿ ಅಲ್ಲಲ್ಲಿ ಅಲ್ಪ ಸ್ವಲ್ಪ ಬೆಳೆ ಉಳಿದು ರಾಶಿಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ…
ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ. ಇದು ಸತ್ಯ ..!ರಾಯರ ಮಹಿಮೆ ಇದು ನೇರವಾಗಿ ನೋಡಿ..! ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು.ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರು ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟವು ಮಂಜಿನಂತೆ ಕರಗುವುದು. ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ,ಐದು ಬಾರಿ,ಒಂಭತ್ತು ಬಾರಿ,ಇಪ್ಪತೊಂದು ಬಾರಿ,ಸಾವಿರದ ಎಂಟು ಬಾರಿ ಜಪಿಸಬಹುದು. ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗಲಿಲ್ಲವಾದರು ಗುರುರಾಯರ ವಿಶೇಷ ದಿನವಾದ…
ಬೆಂಗಳೂರು: ನಗರದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪ್ರೋಟೋಟೈಪ್ ರೈಲನ್ನು ಅಂದರೆ ಚಾಲಕ ರಹಿತ ರೈಲನ್ನು ಇಂದು ಬಿ ಎಂ ಆರ್ ಸಿ ಎಲ್ ಅನಾವರಣಗೊಳಿಸಿದೆ. ಆ ಮೂಲಕ ಶೀಘ್ರದಲ್ಲೇ ಪಿಂಕ್ ಲೈನ್ ಯೋಜನೆ ಆರಂಭದ ಮುನ್ಸೂಚನೆಯನ್ನು ನೀಡಲಾಗಿದೆ. ಇಂದು ಬೆಂಗಳೂರಿನ ಪಿಂಕ್ ಲೈನ್ ಮೂಲ ಮಾದರಿಯನ್ನು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್, ಬಿಇಎಂಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶಾಂತನು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು. ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗಾವರಣವರೆಗೆ ಸುಮಾರು 21.25 ಕಿಲೋಮೀಟರ್ ಗುಲಾಬಿ ಮಾರ್ಗವು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವು ಡಿಸೆಂಬರ್ 2023 ಅಥವಾ 2027ರಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಅಂದಹಾಗೇ ನಮ್ಮ ಮೆಟ್ರೋದ ಪಿಕ್ ಲೈನ್ ರೈಲು ಚಾಲಕ ರಹಿತ ರೈಲಾಗಿದೆ. ಮೊದಲ ಹಂತದಲ್ಲಿ ಐದು ಹೊಸ ಚಾಲಕ ರಹಿತ ರೈಲನ್ನು ಓಡಿಸೋದಕ್ಕೆ ಬಿಎಂಆರ್ ಸಿಎಲ್ ಮುಂದಾಗಿದೆ. ಡಿಸೆಂಬರ್.15ರ ನಂತ್ರ…
ಬಾಂಗ್ಲಾದೇಶ: ಗುರುವಾರ 13ನೇ ರಾಷ್ಟ್ರೀಯ ಸಂಸತ್ ಚುನಾವಣೆಯನ್ನು ಫೆಬ್ರವರಿ 12, 2026 ರಂದು ನಡೆಸುವುದಾಗಿ ಘೋಷಿಸಲಾಗಿದೆ. ಇದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರದ ಮೊದಲ ಸಾರ್ವತ್ರಿಕ ಚುನಾವಣೆಯಾಗಿದೆ. ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ನಸೀರುದ್ದೀನ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಈ ಘೋಷಣೆ ಮಾಡಿದರು. ದೇಶವು “ಮುಕ್ತ ಮತ್ತು ಪ್ರಜಾಪ್ರಭುತ್ವ ಮತದಾನ” ನಡೆಸಬಹುದು ಎಂದು ಜಗತ್ತಿಗೆ ಪ್ರದರ್ಶಿಸಲು ಸಿದ್ಧವಾಗಿದೆ ಎಂದು ಹೇಳಿದರು. ನಾಗರಿಕರು ನಕಲಿ ಸುದ್ದಿ ಮತ್ತು ವದಂತಿಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಅವರು ಒತ್ತಾಯಿಸಿದರು, ಚುನಾವಣೆಗೆ ಮುನ್ನ ಇವು ದೊಡ್ಡ ಸವಾಲುಗಳಾಗಿವೆ ಎಂದು ಕರೆದರು. ಸಾರ್ವತ್ರಿಕ ಚುನಾವಣೆ ಮತ್ತು ಜುಲೈ ಚಾರ್ಟರ್ ಜನಾಭಿಪ್ರಾಯ ಸಂಗ್ರಹಣೆಗೆ ಮತದಾನ ಫೆಬ್ರವರಿ 12 ರಂದು ಏಕಕಾಲದಲ್ಲಿ ನಡೆಯಲಿದೆ ಎಂದು ಸಿಇಸಿ ದೃಢಪಡಿಸಿತು. ಒಟ್ಟು 300 ಸಂಸದೀಯ ಸ್ಥಾನಗಳಿಗೆ ಮತದಾನ ನಡೆಯಲಿದೆ ಮತ್ತು ಅನಿವಾಸಿ ಬಾಂಗ್ಲಾದೇಶಿಯರು ನಾಳೆಯಿಂದ ಡಿಸೆಂಬರ್ 25 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವೇಳಾಪಟ್ಟಿಯ ಪ್ರಕಾರ, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ…
ಬೆಳಗಾವಿ ಸುವರ್ಣ ಸೌಧ: ರಾಜ್ಯದ ಸಾರಿಗೆ ಇಲಾಖೆಯಲ್ಲಿ ನಕಲಿ ದಾಖಲೆ ನೀಡಿ ಬಡ್ತಿ ಪಡೆದಿದ್ದವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಗ್ ಶಾಕ್ ನೀಡಿದ್ದಾರೆ. ಅದೇ ನಕಲಿ ದಾಖಲೆ ನೀಡಿ ಬಡ್ತಿ ಪಡೆದಿದ್ದರೇ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ ಅವರ ಪ್ರಶ್ನೆಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಉತ್ತರಿಸಿದರು. ಸಾರಿಗೆ ಇಲಾಖೆಯಲ್ಲಿ ಲಿಪಿಕ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ನಕಲಿ ಸೇವಾನುಭವ ಪ್ರಮಾಣ ಪತ್ರ ಪಡೆದಿರುವುದು ರುಜುವಾತಾದಲ್ಲಿ, ಅವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹೇಳಿದ್ದಾರೆ. https://twitter.com/KarnatakaVarthe/status/1999017229992734972 https://kannadanewsnow.com/kannada/sharavati-pumped-storage-hydropower-project-will-not-harm-the-environment-minister-k-j-george/ https://kannadanewsnow.com/kannada/why-heart-attacks-spike-in-winter-doctor-explains-risks-and-prevention-tips/
ಬೆಳಗಾವಿ ಸುವರ್ಣಸೌಧ: ಉತ್ತರ ಕನ್ನಡ ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ 2,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಪ್ರಶ್ನೆಗೆ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರ ಉತ್ತರಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸುವವರಿಗೆ ಮಾಹಿತಿಯ ಕೊರತೆ ಇದೆ. ಜನಪ್ರತಿನಿಧಿಗಳು, ಪರಿಸರವಾದಿಗಳ ತಕಾರರು ಬಂದಾಗ ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ತಜ್ಞರು, ಅಧಿಕಾರಿಗಳಿಂದ ಪರಿಶೀಲಿಸಿ, ಅವರಿಂದ ವರದಿ ಪಡೆದುಕೊಂಡಿದ್ದೇನೆ. ಈಗಲೂ ಶಾಸಕರಿಗೆ ಪರಿಸರ ಹಾನಿ ಕುರಿತಂತೆ ಯಾವುದೇ ಸಂಶಯಗಳಿದ್ದಲ್ಲಿ, ಅವುಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುವುದು. ಈ ಯೋಜನೆಯಲ್ಲಿ ಸುರಂಗ ಮಾರ್ಗವನ್ನು ಮಾಡಲಾಗುವುದಿಲ್ಲ, ಬದಲಿಗೆ ಪೈಪ್‍ಲೈನ್ ಅಳವಡಿಸಿ, ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೆ ತಂದು ಅರಣ್ಯೀಕರಣ ಮಾಡಲಾಗುವುದು.…
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಹೊಸದಾಗಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ವೆಬ್ ಸೈಟ್ ನಲ್ಲಿ ಲಿಂಕ್ ತೆರೆದಿದ್ದು, ಡಿ.12ರಂದು ಸಂಜೆ 5ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು, ಮೂರನೇ ಸುತ್ತಿನಲ್ಲಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕದ ಅನ್ವಯ ಇಚ್ಛೆಗಳನ್ನು ದಾಖಲಿಸಬಹುದು. 3ನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ಸಿಕ್ಕಿರುವವರು ಕೂಡ ವೈದ್ಯಕೀಯ ಕೋರ್ಸ್ ಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿ.13ರಂದು ಬೆಳಿಗ್ಗೆ 10ಕ್ಕೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಅದೇ ದಿನ ಮಧ್ಯಾಹ್ನ 2ಗಂಟೆಗೆ ವೈದ್ಯಕೀಯ ಕೋರ್ಸ್ ನ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ದಂತ ವೈದ್ಯಕೀಯ ಕೋರ್ಸ್ ನ ಅಂತಿಮ ಫಲಿತಾಂಶವನ್ನು ಡಿ.13ರಂದು ಮಧ್ಯಾಹ್ನ 3ಗಂಟೆಗೆ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.15ರೊಳಗೆ ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು…
ಬೆಳಗಾವಿ: ಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ ಇಲಾಖೆಗಳಲ್ಲಿ ಶೇ. 2 ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಕ್ರೀಡಾ ಮೂಲಸೌಕರ್ಯ ವೃದ್ಧಿ ಹಾಗೂ ಕಬ್ಬಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಬಗ್ಗೆ ಮಾಹಿತಿ ಕೋರಿದ್ದರು. ರಾಜ್ಯ ಸರ್ಕಾರ ಒಲಂಪಿಕ್ಸ್, ಪಾರಾಒಲಂಪಿಕ್ಸ್, ಕಾಮನ್ವೆಲ್ತ್, ಏಷಿಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಪದಕವಿಜೇತರಾದ 13 ಕ್ರೀಡಾಪಟುಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ 70 ಕಾನ್ಸ್ಟೇಬಲ್ ಗಳಿಗೆ ನೇರ ನೇಮಕಾತಿ ಹಾಗೂ 14 ಪಿಎಸ್ ಐ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ ಇಲಾಖೆಗಳಲ್ಲಿ ಶೇ. 2 ರಷ್ಟು ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ…
ಬೆಂಗಳೂರು: ವಿವಿಧ ಕಂಪನಿಗಳಲ್ಲಿ ಇಂಟರ್ ಶಿಪ್‌ಗಾಗಿ ಪ್ರವೇಶ ಪಡೆದುಕೊಳ್ಳಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಡಿಸೆಂಬರ್ 26 ರವರೆಗೆ ವಿಸ್ತರಿಸಿದೆ. ವಿಟಿಯು ಹಾಗೂ ಸ್ವಾಯತ್ತ, ಸಂಯೋಜಿತ ಕಾಲೇಜುಗಳಲ್ಲಿ 7 ಮತ್ತು 8ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಇಂಟರ್ ಶಿಪ್‌ಗೆ ಪ್ರವೇಶ ಪಡೆದುಕೊಳ್ಳಲು ಈ ಹಿಂದೆ ಡಿಸೆಂಬರ್ 15 ಕೊನೆಯ ದಿನವೆಂದು ನಿಗದಿ ಪಡಿಸಿತ್ತು. ವಿದ್ಯಾರ್ಥಿಗಳ ಮನವಿಯ ಮೇರೆಗೆ ವಿಟಿಯು ಇದೀಗ ಡಿಸೆಂಬರ್ 26ರವರೆಗೆ ವಿಸ್ತರಣೆ ಮಾಡಿರುವುದಾಗಿ ವಿಟಿಯು ಪ್ರಕಟಣೆ ತಿಳಿಸಿದೆ. https://kannadanewsnow.com/kannada/brother-kills-brother-for-scolding-mother-in-bengaluru/ https://kannadanewsnow.com/kannada/why-heart-attacks-spike-in-winter-doctor-explains-risks-and-prevention-tips/














