Author: kannadanewsnow09

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆ.ವಿ ಮಾನ್ಯತಾ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 30.08.2025 (ಶನಿವಾರ)ದ ಇಂದು ಬೆಳಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶೋಭಾ ನಗರ, ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ ದೇವ್ ಐಎನ್ಎನ್ ಪ್ಯಾರಡೈಸ್ ನೂರ್ ನಗರ, ಮಾಜಿ ಸೈನಿಕ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲಾಲಿ ಲೇಔಟ್, ಬಾಲಾಜಿ ಲಾಲಿ ಲೇಔಟ್, ಬಾಲಾಜಿ ಲಾಲಿ ಲೇಔಟ್ ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನ ಸೌಧ ಲೇಔಟ್, ಕರ್ನಾಟಕ ಕಾಲೇಜು, ಇಂಡಿಯನ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. 220/66/11ಕೆ.ವಿ ಐಟಿಐ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 30.08.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ…

Read More

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಗುಡ್ ನ್ಯೂಸ್ ಎನ್ನುವಂತೆ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಈ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೂರ್ವ-ನೇಮಕಾತಿ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/08/2025 ಸಂಜೆ 6:00 ಗಂಟೆ ಆಗಿರುತ್ತದೆ. ​ಅರ್ಜಿಯನ್ನು ಆನ್ ಲೈನ್ ಮೂಲಕ ಮಾತ್ರವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ: https://swdservices.karnataka.gov.in/petccoaching/PCHomeKan.aspx ಆಗಿದೆ. https://twitter.com/SWDGoK/status/1961288596117492017

Read More

ಬೆಂಗಳೂರು: ಶಾಖಾ ಸಂಘಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಮಹತ್ವದ ಮಾಹಿತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಹಂಚಿಕೊಂಡಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಗಿರಿಗೌಡ ಸುತ್ತೋಲೆ ಹೊರಡಿಸಿದ್ದು,ರಾಜ್ಯದ ಕೆಲವು ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳು ತಮ್ಮ ಶಾಖೆಯ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ಕೋರಿ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ನೇರವಾಗಿ ಶಾಖಾ ಸಂಘಗಳ ಲೆಟರ್‌ಹೆಡ್ ಮುಖಾಂತರ ಪತ್ರ ವ್ಯವಹರಿಸಿರುವುದು ಕಂಡುಬಂದಿರುತ್ತದೆ ಎಂದಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ; ಸಾರ್ವತ್ರಿಕ ವರ್ಗಾವಣೆ/ವರ್ಗಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಯನ್ವಯ ವಿನಾಯಿತಿ ಕಲ್ಪಿಸಲಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಶಾಖಾ ಸಂಘಗಳು ರಾಜ್ಯ ಸಂಘದ ಗಮನಕ್ಕೆ ತರದೇ ನೇರವಾಗಿ ಚುನಾಯಿತರಲ್ಲದ ನಿರ್ದೆಶಕರೂ ಸೇರಿದಂತೆ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಪತ್ರ…

Read More

ಬೆಂಗಳೂರು: ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಆಯಾ ನಿಗಮಗಳ ಅಡಿಯಲ್ಲಿ 5 ಲಕ್ಷದವರೆಗೆ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪರಿಶಿಷ್ಟ ಜಾತಿ ಸಮುದಾಯದ ಮಹಿಳೆಯರನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕವಾಗಿ ಅವರನ್ನು ಸಬಲೀಕರಣಗೊಳಿಸಲು ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ಮಹಿಳಾ ಸ್ವಸಹಾಯ ಸಂಘಗಳ(ಕನಿಷ್ಠ 10 ಸದಸ್ಯರು) ವಿವಿಧ ಉದ್ದೇಶದ ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ನೀಡಲಾಗುವುದು. https://twitter.com/SWDGoK/status/1956006687610933446 ಘಟಕ ವೆಚ್ಚ: ರೂ. 5.00 ಲಕ್ಷ ಸಹಾಯಧನ: ರೂ. 2.50 ಲಕ್ಷ ಸಾಲ: ರೂ. 2.50 ಲಕ್ಷ (ಶೇ. 4 ರಷ್ಟು ಬಡ್ಡಿ ದರ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.09.2025. ಈ ಕೆಳಗಿ‌ನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು: https://sevasindhu.karnataka.gov.in…

Read More

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶದ ಆದೇಶವನ್ನು ರದ್ದು ಪಡಿಸಿ, ಹಿಂಪಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ. ಅಲ್ಲದೇ ಅಭಿಮಾನ್ ಸ್ಟುಡಿಯೋದ ಅರಣ್ಯ ಭೂಮಿ ಹಿಂಪಡೆಯುತ್ತಿರುವ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ಅವರು ಪತ್ರ ಬರೆದಿದ್ದಾರೆ. ಅದರಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.22 (78-18ಗು), ಸರ್ವ ನಂ.26 (62-20ುದ ಪ್ರದೇಶವನ್ನು ತುರಹಳ್ಳಿ ಕಾಯಿ, ಅರಣ್ಯ ಪ್ರದೇಶವೆಂದು ಉಲ್ಲೇಖ(1)ರ ಪತ್ರದಲ್ಲಿ ಘೋಷಣೆ ಮಾಡಿಲಾಗಿರುತ್ತದೆ ಎಂದಿದ್ದಾರೆ. CHO AFD-54-FGL-69, Bangalore dated: 09.04.1969 ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20ಎಕರೆ ಪ್ರದೇಶವನ್ನು ಟಿ.ಎನ್.ಬಾಲಕ್ಕ ರವರಿಗೆ ಅಭಿಮಾನ್ ಚಿತ್ರ ಸುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ…

Read More

ಬೆಂಗಳೂರು: ಶಾಸಕರ ಶಿಫಾರಸ್ಸು ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿರುವಂತ ಕರ್ನಾಟಕ ಹೈಕೋರ್ಟ್, ತಹಶೀಲ್ದಾರ್ ಎಸ್.ವೆಂಕಟೇಶಪ್ಪ ವರ್ಗಾವಣೆ ರದ್ದಿಗೆ ನಕಾರ ವ್ಯಕ್ತ ಪಡಿಸಿದೆ. ಬಂಗಾರಪೇಟೆ ಶಾಸಕರ ಶಿಫಾರಸ್ಸಿನಂತೆ ತಹಶೀಲ್ದಾರ್ ಎಸ್ ವೆಂಕಟೇಶಪ್ಪ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ರದ್ದು ಪಡಿಸಲು ಕೆಎಟಿ ಕೂಡ ನಿರಾಕರಿಸಿತ್ತು. ಹೀಗಾಗಿ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ನಿಯಮದಂತೆ ವರ್ಗಾವಣೆಗೆ ಮುಖ್ಯಮಂತ್ರಿಗಳ ಅನುಮತಿ ಪಡೆಯಲಾಗಿದೆ. ಸ್ಥಳೀಯ ನಿವಾಸಿಗಳ ದೂರಿದ್ದರಿಂದ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ವಾದ ಒಪ್ಪಿ ವರ್ಗಾವಣೆ ಮಾಡಿರುವುದನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ವಿಶೇಷ ಸಂದರ್ಭಗಳಲ್ಲಿ ಸಿಎಂ ಸಮ್ಮತಿಯೊಂದಿಗೆ ವರ್ಗಾವಣೆಗೆ ಅವಕಾಶವಿದೆ ಎಂಬುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಜಿ ಪಂಡಿತ್, ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು. ಈ ಮೂಲಕ ಶಾಸಕರ ಶಿಫಾರಸ್ಸು ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.

Read More

ಡೆಹ್ರಾಡೂನ್: ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದ ಸರಣಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಗರ್ವಾಲ್ ಮತ್ತು ಕುಮಾವೂನ್ ಪ್ರದೇಶಗಳಲ್ಲಿ ಒಂದು ಡಜನ್‌ಗೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ನಿರಂತರ ಮಳೆಯಿಂದ ಉಲ್ಬಣಗೊಂಡ ನೈಸರ್ಗಿಕ ವಿಕೋಪಗಳು ಚಮೋಲಿ, ರುದ್ರಪ್ರಯಾಗ, ತೆಹ್ರಿ ಮತ್ತು ಬಾಗೇಶ್ವರ ಜಿಲ್ಲೆಗಳಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿವೆ, ಮನೆಗಳು ಕೊಚ್ಚಿಹೋಗಿವೆ, ಮೂಲಸೌಕರ್ಯಗಳಿಗೆ ಹಾನಿಯಾಗಿವೆ ಮತ್ತು 35 ಕ್ಕೂ ಹೆಚ್ಚು ಜಾನುವಾರುಗಳನ್ನು ಸಮಾಧಿ ಮಾಡಿವೆ. ಹಿಮಾಲಯನ್ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳು ಮಾನ್ಸೂನ್ ಪ್ರೇರಿತ ಮೇಘಸ್ಫೋಟಗಳು ಮತ್ತು ಸಂಬಂಧಿತ ನೈಸರ್ಗಿಕ ವಿಕೋಪಗಳ ತೀವ್ರ ಪರಿಣಾಮದಿಂದ ಬಳಲುತ್ತಿವೆ. ವಿಶೇಷವಾಗಿ ಶುಕ್ರವಾರ, ಉತ್ತರಾಖಂಡಕ್ಕೆ ವಿನಾಶಕಾರಿ ದಿನವೆಂದು ಸಾಬೀತಾಯಿತು, ಏಕೆಂದರೆ ರಾಜ್ಯದ ವಿವಿಧ ಭಾಗಗಳಲ್ಲಿ ಮೇಘಸ್ಫೋಟದ ವರದಿಗಳು ವ್ಯಾಪಕ ಭೀತಿಯನ್ನು ಉಂಟುಮಾಡಿದವು. ಧಾರಾಕಾರ ಮಳೆಯು ಬೃಹತ್ ಅವಶೇಷಗಳನ್ನು ಉರುಳಿಸಿ, ಹಲವಾರು ಮನೆಗಳನ್ನು ಮುಳುಗಿಸಿ, ರಸ್ತೆಗಳಿಗೆ ತೀವ್ರ ಹಾನಿಯನ್ನುಂಟುಮಾಡಿತು. ದೃಢಪಡಿಸಿದ ಸಾವುನೋವುಗಳಲ್ಲಿ ದೇವಲ್ (ಚಮೋಲಿ) ನಲ್ಲಿ ಇಬ್ಬರು, ಕಪ್ಕೋಟ್…

Read More

ಬೆಂಗಳೂರು: ಪತ್ರಕರ್ತರಿಗೆ ಈ ಹಿಂದೆ ರೈಲ್ವೆ ಇಲಾಖೆಯಿಂದ ರಿಯಾಯಿತಿ ದರ ಪಾಸ್ ವಿತರಣೆ ಮಾಡಲಾಗಿತ್ತು. ಆದರೇ ಈ ಪಾಸ್ ಸ್ಥಗಿತಗೊಳಿಸಲಾಗಿತ್ತು. ಇಂತಹ ರೈಲ್ವೆ ರಿಯಾಯಿತಿ ಪಾಸ್ ಮುಂದುವರೆಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು ಭೇಟಿಯಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರದ ರೈಲ್ವೆ & ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಪತ್ರಕರ್ತರಿಗೆ ಮೊದಲಿದ್ದಂತೆ ರೈಲ್ವೆ ರಿಯಾಯಿತಿ ಪಾಸ್ ಮುಂದುವರಿಸಲು ಮನವಿ ಮಾಡಲಾಯಿತು ಎಂದಿದೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಕುರಿತು ಹೊರತಂದಿರುವ ಅಮೃತ ಬೀಜ ಪುಸ್ತಕವನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಚಿವರಿಗೆ ನೀಡಿದರು ಎಂದು ಹೇಳಿದೆ. https://twitter.com/kuwj_r/status/1961446335330357587 https://kannadanewsnow.com/kannada/do-you-know-what-forest-minister-eshwar-khandre-said-about-abhiman-studio-regaining-its-land/ https://kannadanewsnow.com/kannada/cm-siddaramaiah-said-that-vote-theft-has-happened-from-congress-let-the-people-respond-r-ashok/

Read More

ಬೀದರ್: ಅಭಿಮಾನ್ ಸ್ಟುಡಿಯೋ ಮಂಜೂರು ಮಾಡುವಾಗ ಸ್ಟುಡಿಯೋ ಹೊರತಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಕೆ ಮಾಡದಂತೆ ಷರತ್ತು ವಿಧಿಸಲಾಗಿತ್ತು. ಇಲ್ಲಿ 10 ಎಕರೆ ಅರಣ್ಯ ಭೂಮಿಯಿದ್ದು ಇದನ್ನು ಮರಳಿ ಪಡೆಯಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೀದರ್ ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಮರಳಿ ಸರ್ಕಾರಕ್ಕೆ ಪಡೆಯುವ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಎಚ್.ಎಂ.ಟಿ. ವಶದಲ್ಲಿರುವುದು ಅರಣ್ಯ ಭೂಮಿ ಎಂದು ತಮಗೆ ತಿಳಿದ ಕೂಡಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ. ಅದೇ ರೀತಿ ಯಾವುದು ಅರಣ್ಯ ಭೂಮಿಯೋ ಅದು ಅರಣ್ಯವಾಗಿ ಉಳಿಯತ್ತೆ ಎಂದರು. ಮೇರುನಟ ದಿವಂಗತ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಗೌರವ ಇದೆ. ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ನೀಡುವ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಮಾಡುತ್ತಾರೆ ಎಂದು ಉತ್ತರಿಸಿದರು. https://kannadanewsnow.com/kannada/this-notice-regarding-the-transfer-related-to-the-state-government-employees-association/ https://kannadanewsnow.com/kannada/cm-siddaramaiah-said-that-vote-theft-has-happened-from-congress-let-the-people-respond-r-ashok/

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದು ಹೇಳಿದ್ದು, ಈ ಕುರಿತು ಜನತೆಗೆ ಉತ್ತರ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದು ಹೇಳಿದ್ದು, ಈಗ ಅವರೇ ಹೋರಾಟಕ್ಕೆ ಸೇರಿದ್ದಾರೆ. ಕಾಂಗ್ರೆಸ್‌ ಪರವಾಗಿ ಅವರು ಹೇಗೆ ಹೋರಾಡುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್‌ ಮಾಡುತ್ತಿರುವ ಹೋರಾಟ ಸುಳ್ಳು ಎಂದು ಸಾಬೀತಾಗಿದೆ. ಬಿಜೆಪಿ ಮೇಲೆ ಮಾಡಿರುವ ಸುಳ್ಳು ಎಂದು ಸಾಬೀತಾಗಿದೆ. ಮತಗಳ್ಳತನ ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದು ತಿಳಿದುಬಂದಿದೆ. ಸಿ.ಎಂ.ಇಬ್ರಾಹಿಂ ಬಾದಾಮಿ ಕ್ಷೇತ್ರದಲ್ಲಿ ಮತ ಖರೀದಿಸಿದ್ದೇನೆಂದು ಹೇಳಿದ್ದಾರೆ. ಈ ಬಗ್ಗೆ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಡಿ.ಕೆ.ಶಿವಕುಮಾರ್‌ ಒಬ್ಬಂಟಿಯಾಗಿ ಬಿಹಾರ ಚುನಾವಣೆಗೆ ಹೋದರೆ, ಸಿಎಂ ಸಿದ್ದರಾಮಯ್ಯ ತಂಡ ಬೇರೆ ಕಡೆ ಚುನಾವಣೆಗೆ ಹೋಗಿದೆ. ಡಿ.ಕೆ.ಶಿವಕುಮಾರ್‌ ಬಂಡೆಯಂತೆ ಆಗುತ್ತಿದ್ದಾರೆ. ಇವರು ಚಾಮುಂಡಿ ಬೆಟ್ಟವನ್ನು ಹಿಂದೂಗಳ ಆಸ್ತಿಯಲ್ಲ ಎನ್ನುವುದಾದರೆ, ಈ ದೇವಸ್ಥಾನಕ್ಕೆ ಯಾವಾಗ ಮುಲ್ಲಾಗಳನ್ನು ಹಾಗೂ ಪಾದ್ರಿಗಳನ್ನು…

Read More