Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ:05/01/2026 ರಿಂದ 10 ದಿನಗಳ ಕಾಲ ನಿರುದ್ಯೋಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರವನ್ನು ಏರ್ಪಡಿಸಿದ್ದು, ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 50 ವರ್ಷ ವಯಸ್ಸಿನ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ಡಿ. 30ರಂದು ಬೆಳಿಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ…
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ 2019-20 ರಿಂದ 2024-25 ನೇ ಸಾಲಿನವರೆಗೂ ಎಸ್.ಎಫ್.ಸಿ ಯೋಜನೆಯಡಿ ಬಾಕಿ ಉಳಿದಿರುವ ಅನುದಾನದಲ್ಲಿ ಹೊಲಿಗೆ ಯಂತ್ರ ಪಡೆಯಲು ಅಸಕ್ತರಿಂದ ಅರ್ಜಿ ಅಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 07/01/2026ರೊಳಗಾಗಿ ಸಲ್ಲಿಸುವಂತೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ www.hosanagaratown.mrc.gov.in ವೆಬ್‌ಸೈಟ್‌ನ್ನು ಹಾಗೂ ಕಚೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸುವುದು.
ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ (ಫೆ.10, 2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರಬೇಕು) ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಹೊಸ ವಿದ್ಯಾರ್ಥಿಗಳಿಂದ ಮಾತ್ರ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ದಿ: 09/12/2026 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ವೆಬ್‌ಸೈಟ್ https://bcwd.karnataka.gov.in, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222129 ನ್ನು ಸಂಪರ್ಕಿಸುವುದು.
ಬೆಂಗಳೂರು: ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ ಆರ್ಭಟಿಸುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಣಕ್ಕಾಗಿ ಸಾರ್ವಜನಿಕರು ಈ ಕ್ರಮಗಳನ್ನು ಅನುಸರಿಸುವಂತೆ ಸರ್ಕಾರ ಸೂಚಿಸಿದೆ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಂಗನ ಕಾಯಿಲೆ ತಡೆಗಟ್ಟಲು ಸಾರ್ವಜನಿಕರು ಏನು ಮಾಡಬೇಕು ಅಂದ್ರೆ ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈತುಂಬಾ ಬಟ್ಟೆ ಧರಿಸುವಂತೆ ತಿಳಿಸಿದೆ. ಕಾಡು, ತೋಟಕ್ಕೆ ಹೋಗುವಾಗ DEPA ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿಕೊಳ್ಳಿ. ಕಾಡು, ತೋಟದಿಂದ ಬಂದ ನಂತ್ರ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಹಾಗೂ ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ, ಸೋಪು ಬಳಸಿ ತೊಳೆಯಿರಿ ಎಂದಿದೆ. ಉಣ್ಣೆ ನಿವಾರಕ ಔಷಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಸಿ. ಮಂಗಗಳು ಸತ್ತಿರುವುದು ಕಂಡು ಬಂದರೇ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದೆ. ಒಣಗಿದ ಎಲೆಗಳು ಸೋಂಕಿತ ಉಣ್ಣೆಗಳನ್ನು ಹೊಂದಿರಬಹುದಾಗಿದ್ದರಿಂದ ಕಾಡಿನಿಂದ ಒಣಗಿದ ಎಲೆಗಳನ್ನು ತಂದು ಮನೆ ಅಥವಾ ಮನೆಯ ಸುತ್ತಮುತ್ತ ರಾಶಿ ಹಾಕಬೇಡಿ. ಕೈ ಗವಸುಗಳನ್ನು ಧರಿಸದೇ ಸತ್ತ…
ಚಿಕ್ಕಮಗಳೂರು: ಸರ್ಕಾರಿ ಕಾರಿಗೆ ಇಲಾಖೆಯ ಹೆಸರು ಹಾಕಿಕೊಳ್ಳುವುದು ಮಾಮೂಲಿ. ಪೊಲೀಸ್ ಆದರೇ ಪೊಲೀಸ್, ಕಂದಾಯ ಇಲಾಖೆ ಆದರೇ ಕಂದಾಯ, ಅಬಕಾರಿ ಇಲಾಖೆ ಆದರೇ ಅಬಕಾರಿ ಅಂತ ಹೀಗೆ. ಆದರೇ ಇಲ್ಲೊಬ್ಬ ಪೊಲೀಸ್ ಅಧಿಕಾರಿ ತನ್ನ ಸ್ವಂತ ಕಾರಿಗೆ ಪೊಲೀಸ್ ಅಂತ ನಾಮಫಲಕ ಹಾಕಿಕೊಂಡು ಫ್ಯಾಮಿಲಿ ಸಹಿತ ಟ್ರಿಪ್ ಗೆ ತೆರಳಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಇಂತಹ ಅಧಿಕಾರಿಗೆ ಕಾನೂನು ಬಿಸಿ ಮುಟ್ಟಿಸಿದಂತ ಪಿಎಸ್ಐ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಹೊಸ ವರ್ಷದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ವಾಹನಗಳನ್ನು ಬಣಕಲ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇಣುಕಾ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ವಾಹನವಾಗಿದ್ದರೂ ಪೊಲೀಸ್ ಎನ್ನುವಂತ ನಾಮಫಲಕವೊಂದನ್ನು ಹಾಕಿದ್ದು ಕಂಡು ಬಂದಿದೆ. ಸ್ವಂತ ವಾಹನಕ್ಕೆ ಪೊಲೀಸ್ ಎಂಬುದಾಗಿ ನಾಮಫಲಕ ಹೊಂದಿದ್ದನ್ನು ಪರಿಶೀಲಿಸಿದಾಗ, ಅವರು ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ ಫ್ಯಾಮಿಲಿ ಟ್ರಿಪ್ ಬಂದಿರೋದು ತಿಳಿದು ಬಂದಿದೆ. ಕರ್ತವ್ಯದಲ್ಲಿ…
ಮೈಸೂರು: ನಗರದ ಪ್ರಸಿದ್ಧ ಅರಮನೆಯ ಮುಂಭಾಗದಲ್ಲೇ ಭೀಕರ ಅವಘಡ ಉಂಟಾಗಿದೆ. ಬಲೂನ್ ಗೆ ನೈಟ್ರೋಜನ್ ಗ್ಯಾಸ್ ತುಂಬಿಸುವಾಗ ಸ್ಪೋಟಗೊಂಡಿರುವಂತ ಘಟನೆ ನಡೆದಿದೆ. ಮೈಸೂರಿನ ಅರಮನೆ ಮುಂಭಾಗದಲ್ಲಿ ಬಲೂನುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುತ್ತಿದ್ದಾಗಲೇ ಸ್ಪೋಟ ಸಂಭವಿಸಿದೆ. ಇದರಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೇ, ಮಹಿಳೆ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೃಷ್ಣರಾಜ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ನಿಮ್ಮ ಅತೃಪ್ತ ಪೂರ್ವಜರಿಂದ ಅನೇಕ ತೊಂದರೆಗಳಾಗುತ್ತಿರುತ್ತವೆ. ಆದರೇ ಅದು ಗಮನಕ್ಕೆ ಬರೋದಿಲ್ಲ. ಹಾಗಾದ್ರೆ ಅದಕ್ಕೆ ಕಾರಣ, ಪರಿಹಾರ ವಿಧಾನ ಹೇಗೆ ಅಂತ ಮುಂದೆ ಓದಿ. ೧. ಅತೃಪ್ತ ಪೂರ್ವಜರಿಂದ ತೊಂದರೆಯಾಗಲು ಕಾರಣ ಮತ್ತು ಅದರ ಸ್ವರೂಪ ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆ ಪಡೆಯಲು ದತ್ತನ ನಾಮಜಪ ಏಕೆ ಅವಶ್ಯಕ ಎಂಬುದನ್ನು ಈ ಕೆಳಗಿನ ಹಂತಗಳಲ್ಲಿ ವಿವರವಾಗಿ ತಿಳಿದುಕೊಳ್ಳೋಣ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ,…
ಬೆಂಗಳೂರು: ಫ್ಯಾನ್ಸ್ ವಾರ್ ತಾರಕಕ್ಕೇರಿದ್ದ ವೇಳೆಯಲ್ಲೇ, ವಿಜಯಲಕ್ಷ್ಮಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ಟ್ರೋಲ್ ಪೇಜ್ ಅಡ್ಮಿನ್ ತಲೆಬಾಗಿದ್ದಾನೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ವಿಜಯಲಕ್ಷ್ಮೀ ಅವರೇ ನನ್ನನ್ನು ಕ್ಷಮಿಸುವಂತೆ ಟ್ರೋಲ್ ಪೇಜ್ ಅಡ್ಮಿನ್ ಕ್ಷಮೆ ಕೋರಿದ್ದಾನೆ. ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಜೋರಾಗಿದೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ನೆಟ್ಟಿಗನಿಗೂ ವಿಜಯಲಕ್ಷ್ಮಿ ಸೈಬರ್ ಠಾಣೆಗೆ ತೆರಳಿ ದೂರು ನೀಡಿ ಕಾನೂನಿನ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಕಾನೂನು ಸಂಕಷ್ಟ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗೆ ಎದುರಾಗಿತ್ತು. ಈ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನಿಂದ ಕ್ಷಮೆ ಕೋರಲಾಗಿದೆ. ವಿಜಯಲಕ್ಷ್ಮೀಗೆ ಕ್ಷಣೆಯನ್ನು ಟ್ರೋಲ್ ಪೇಜ್ ಅಡ್ಮಿನ್ ಕೋರಿದ್ದಾನೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ನನ್ನು ಕ್ಷಮಿಸಿ ಅಂತ ವಿಜಯಲಕ್ಷ್ಮೀಯನ್ನು ಯುವಕ ಕೋರಿದ್ದಾನೆ. https://kannadanewsnow.com/kannada/people-will-beat-me-with-slippers-mla-balakrishna-lashes-out-at-tahsildar-again/
ಜಾಮ್‌ನಗರ/ ಜಕಾರ್ತಾ : ಇಂಡೋನೇಷ್ಯಾದಲ್ಲಿ ಹರಡಿದ ಗಂಭೀರ ರೋಗ ‘ಇಇಎಚ್‌ವಿ’ (Elephant endotheliotropic herpesvirus) ಸುಮಾತ್ರನ್ ಆನೆಗಳನ್ನು ಕೊಲ್ಲುತ್ತಿದೆ. ಇದನ್ನು ಪರಿಹರಿಸಲು, ಇಂಡೋನೇಷ್ಯಾದ ಅರಣ್ಯ ಸಚಿವಾಲಯ (ಕೆಮೆಂಟೆರಿಯನ್ ಕೆಹುಟಾನನ್) ಭಾರತದ ಗುಜರಾತ್‌ನ ಜಾಗತಿಕ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ ವಂತಾರದಿಂದ ತಾಂತ್ರಿಕ ಬೆಂಬಲವನ್ನು ಪಡೆಯುತ್ತಿದೆ. ಅನಂತ್ ಅಂಬಾನಿ ಸ್ಥಾಪಿಸಿದ ವಂತಾರ, ಇಇಎಚ್‌ವಿಯಿಂದ ಉಂಟಾಗುವ ಸಾವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆನೆ ಚಿಕಿತ್ಸೆ, ರೋಗದ ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆರೈಕೆ ಕ್ಷೇತ್ರದಲ್ಲಿ ಪರಿಣತಿಯೊಂದಿಗೆ ಇಂಡೋನೇಷ್ಯಾದ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ. ಸುಮಾತ್ರನ್ ಆನೆಗಳು ಈಗಾಗಲೇ ಅಳಿವಿನ ಅಪಾಯದಲ್ಲಿವೆ ಮತ್ತು ಐಯುಸಿಎನ್‌ನಿಂದ ಅಳಿವಿನಂಚಿನಲ್ಲಿರುವ ಎಂದು ವರ್ಗೀಕರಿಸಲಾಗಿದೆ. ರಿಯಾವ್ ಪ್ರಾಂತ್ಯದ ಸೆಬಂಗಾ ಆನೆ ಸಂರಕ್ಷಣಾ ಕೇಂದ್ರದಲ್ಲಿ ಇಇಎಚ್‌ವಿಯ ಯುವ ಆನೆ ಸಾವನ್ನಪ್ಪಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರ ನಂತರ, ಇಂಡೋನೇಷ್ಯಾ ಸರ್ಕಾರವು ತನ್ನ ಸ್ಥಳೀಯ ಪಾಲುದಾರ ಫೌನಾ ಲ್ಯಾಂಡ್ ಇಂಡೋನೇಷ್ಯಾದ ಮೂಲಕ, ರೋಗವನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಮತ್ತು ಆನೆಗಳಿಗೆ ಉತ್ತಮ ಚಿಕಿತ್ಸೆ ನೀಡಲು ‘ವಂತಾರ’ದ ತಾಂತ್ರಿಕ…
ಮಾರ್ವಾಡಿಗಳು ಈ ಲಕ್ಷ್ಮೀ ಕುಬೇರ ಪೂಜೆಯನ್ನು ಬಹಳ ವಿಮರ್ಶಾತ್ಮಕವಾಗಿ ನೆರವೇರಿಸುತ್ತಾರೆ. ನಮ್ಮ ಮನೆಯಲ್ಲಿ ಲಕ್ಷ್ಮೀ ಕುಬೇರ ಪೂಜೆಯನ್ನು ಅತ್ಯಂತ ವಿಮರ್ಶಾತ್ಮಕವಾಗಿ ಮಾಡುವುದಾಗಲಿ ಅಥವಾ ಕುಬೇರನನ್ನು ಅತ್ಯಂತ ಸರಳವಾಗಿ ಪೂಜಿಸುವುದಾಗಲಿ ಅದರೊಂದಿಗೆ ಈ ಮಂತ್ರವನ್ನು ಪಠಿಸಬೇಕು. ಈ ಕುಬೇರ ಪೂಜೆಯನ್ನು ಯಂತ್ರವನ್ನು ಇಟ್ಟುಕೊಂಡು, ಪೆಟ್ಟಿಗೆಯನ್ನು ಇಟ್ಟು, ಮಂತ್ರಗಳನ್ನು ಪಠಿಸುವ ಮೂಲಕ ಬಹಳ ವಿಮರ್ಶಾತ್ಮಕವಾಗಿ ನಡೆಸಲಾಗುತ್ತದೆ. ಅಷ್ಟರ ಮಟ್ಟಿಗೆ ಈ ಪೂಜೆ ಮಾಡಬಹುದೋ ಗೊತ್ತಿಲ್ಲ. ಆದರೆ ಮಂಗಳವಾರ ಮತ್ತು ಶುಕ್ರವಾರ ಸಂಜೆ ನಮ್ಮ ಮನೆಯಲ್ಲಿ ಈ ಪೂಜೆಯನ್ನು ಮಾಡಬಹುದಷ್ಟೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ…














