Author: kannadanewsnow09

ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಬೇಸಿಗೆ ಬೆಳೆಗೆ ಯಾವುದೇ ರೀತಿಯ ಲೋಪವಾಗದಂತೆ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮದ್ದೂರು ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ಅವರ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕಾವೇರಿ ನೀರಾವರಿ ನಿಗಮದ ಮೂಲಕ 400 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳ ಅಭಿವೃದ್ಧಿ, ನಾಲೆಗಳ ಆಧುನಿಕರಣ ಹಾಗೂ ಹೂಳು ತೆಗೆಯುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಮುಂಬರುವ ಬೇಸಿಗೆ ಬೆಳೆ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬನ್ನಹಳ್ಳಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಶೀಘ್ರದಲ್ಲೇ…

Read More

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೇಮಿಸಿರುವಂತ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ. ಈ ಕುರಿತಂತೆ 71 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿ, ಇತ್ಯರ್ಥಪಡಿಸಿದೆ. ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ 71 ರಿಟ್ ಅರ್ಜಿ ಸಲ್ಲಿಸಿದ್ದವುಗಳನ್ನು ಇತ್ಯರ್ಥ ಪಡಿಸಲಾಗಿದೆ. ಅವಧಿ ಮುಗಿದ ನಗರಸಭೆ, ಪುರಸಭೆಗಳಿಗೆ ಸರ್ಕಾರ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಕ್ಷೇತ್ರ ಪುನರ್ವಿಂಗಡನೆಗೆ 150 ದಿನ ಬೇಕಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಸಂವಿಧಾನದ 243(ಯು) ನಂತೆ 5 ವರ್ಷ ಅವಧಿ ನಿಗದಿಯಾಗಿದೆ. ಅವಧಿ ಮುಗಿದ ಮೇಲೆ ಹಾಲಿ ಸದಸ್ಯ, ಅಧ್ಯಕ್ಷರನ್ನು ಮುಂದುವರಿಸಲಾಗದು. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂಬುದಾಗಿ ಸರ್ಕಾರ ವಾದಿಸಿತ್ತು. ಸರ್ಕಾರದ ಪರ ಹೆಚ್ಚುವರಿ ಎಜಿ ಪ್ರತಿಮಾ ಹೊನ್ನಾಪುರ ವಾದಿಸಿದರು. ಈ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಆಡಳಿತಾಧಿಕಾರಿ ನೇಮಕದಲ್ಲಿ ಮಧ್ಯಪ್ರವೇಶಿಸಲು ನಕಾರ ವ್ಯಕ್ತಪಡಿಸಿದೆ. https://kannadanewsnow.com/kannada/husband-commits-suicide-after-killing-wife-over-family-dispute/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ಬೆಂಗಳೂರು ದಕ್ಷಿಣ: ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿಯನ್ನು ಹತ್ಯೆಗೈದು ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ರಾಮನಗರ ತಾಲ್ಲೂಕಿನ ಹಾಲನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಹಾಲನಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿ ವತ್ಸಲ(25) ಹತ್ಯೆ ಮಾಡಿ, ಪತಿ ನವೀನ್(35) ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/allegations-of-opening-a-restaurant-illegally-fir-filed-against-bastin-pub-owned-by-actress-shilpa-shetty/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ಬೆಂಗಳೂರು: ಅವಧಿ ಮೀರಿ ಮಧ್ಯ ಸರಬರಾಜು ಮಾಡುತ್ತಿದ್ದ ಆರೋಪದಡಿ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಲ್ಲಿ ಇರುವಂತ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ನಲ್ಲಿ ಅವಧಿ ಮೀರಿ ಅನಧಿಕೃತವಾಗಿ ರೆಸ್ಟೋರೆಂಟ್ ತೆರೆಯುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 103 ಕೆಪಿ ಆಕ್ಟ್ ಅಡಿ ಸುಮೋಟೋ ದೂರನ್ನು ಪೊಲೀಸರು ದಾಖಲಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವಂತ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮತ್ತು ರೆಸ್ಟೋರೆಂಟ್ ಇದಾಗಿದೆ. ಇದಲ್ಲದೇ ರೆಸಿಡೆನ್ಸಿ ರಸ್ತೆಯಲ್ಲಿರುವ ಸೋರ್ ಬ್ಯಾರಿ ಪಬ್ ವಿರುದ್ಧವೂ ಕೇಸ್ ದಾಖಲಾಗಿದೆ. ಹೀಗೆ ಅವಧಿ ಮೀರಿ ಗ್ರಾಹಕರಿಗೆ ಅನುವು ಮಾಡಿಕೊಟ್ಟಿದ್ದ ಎರಡು ಪಬ್ ಗಳಿಗೆ ಪೊಲೀಸರು ಎಫ್ಐಆರ್ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ಪಬ್ ಗಳ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. https://kannadanewsnow.com/kannada/senior-congress-mla-shamanur-shivashankarappa-shivaikya-kailash-shiva-ganaradhana-on-december-26th/ https://kannadanewsnow.com/kannada/shamanur-shivashankarappa-cremated-with-full-government-honors-only-the-memory-of-the-generous-donor-remains/

Read More

ದಾವಣಗೆರೆ: ಭಾನುವಾರದಂದು ನಿಧನರಾದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು. ಈ ಬೆನ್ನಲ್ಲೇ ಡಿಸೆಂಬರ್.26ರಂದು ಕೈಲಾಸ ಶಿವ ಗಣರಾಧನೆ ನಡೆಯಲಿದೆ. ಈ ಕುರಿತಂತೆ ಶಾಮನೂರು ಕುಟುಂಬದಿಂದ ದಿನಾಂಕ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವ ಗಣರಾಧನೆಯನ್ನು ಡಿಸೆಂಬರ್.26ರಂದು ನಡೆಸುವುದಾಗಿ ತಿಳಿಸಿದೆ. ಡಿಸೆಂಬರ್.26, 2025ರಂದು ಮಧ್ಯಾಹ್ನ 12.30ಕ್ಕೆ ಕೈಲಾಸ ಶಿವಗಣರಾಧನೆ ನೆರವೇರಿಸಲಾಗುತ್ತದೆ. ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಶಿವಗಣರಾಧನೆ ನೆರವೇರಿಸುವುದಾಗಿ ಪುತ್ರ ಬಕ್ಕೇಶ್, ಗಣೇಶ್, ಮಲ್ಲಿಕಾರ್ಜನ್ ಕುಟುಂಬ ಆಹ್ವಾನಿಸಿದೆ. https://kannadanewsnow.com/kannada/shivashankarappas-funeral-with-full-government-honours-senior-congress-mla-shamanur-shivaikya/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಹಿರಿಯ ಶಾಸಕ ಶಆಮನೂರು ಶಿವೈಕ್ಯರಾದಂತೆ ಆಗಿದೆ. ಆ ಮೂಲಕ ಇನ್ಮುಂದೆ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ನೆನಪು ಮಾತ್ರವೇ ಆಗುವಂತಾಗಿದೆ. ಕಳೆದ 1 ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ನಿನ್ನೆಯ ಭಾನುವಾರದ ಸಂಜೆ 6.20ಕ್ಕೆ ಬಹು ಅಂಗಾಂಗ ವೈಫಲ್ಯದಿಂದ ಅವರು ನಿಧನರಾಗಿದ್ದರು. ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ದಾವಣಗೆರೆಯಲ್ಲಿ ನೀರವಮೌನವೇ ಆವರಿಸಿತ್ತು. ಕೊಡುಗೈ ದಾನಿಯ ಕೊನೆಯ ಯಾತ್ರೆಯಲ್ಲಿ ಜನಸಾಗರವೇ ಸೇರಿತ್ತು. ಭಾವುಕರಾಗಿಯೇ ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಇಂದು ದಾವಣಗೆರೆಯಲ್ಲಿ ಅಂತಿನ ದರ್ಶನದ ಬಳಿಕ ಕಲ್ಲೇಶ್ವರ ಮಿಲ್ ಗೆ ಶಾಮನೂರು ಶಿವಶಂಕರಪ್ಪ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿತ್ತು. ವೀರ ಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನಿ…

Read More

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಸಂವಿಧಾನಕ್ಕೆ ವಿರೋಧಿಯಾಗಿದೆ. ಈ ಕೂಡಲೇ ವಿಧೇಯಕವನ್ನು ವಾಪಸ್ ಪಡೆಯಬೇಕು ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶಗೌಡ ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಾಂಗ್ರೆಸ್‌ ಪಕ್ಷಕ್ಕೆ ರಾಜಕೀಯ ಲಾಭ ಆಗುವ ರೀತಿಯಲ್ಲಿ ವಾರ್ಡ್‌ ವಿಂಗಡಣೆ ಮಾಡಿದೆ. ಈ ವಿಂಗಡಣೆಯು ಸಾಕಷ್ಟು ನ್ಯೂನತೆಗಳಿಂದ ಕೂಡಿದೆ. ಬೆಂಗಳೂರು ಅಭಿವೃದ್ಧಿಗೆ ಮಾರಕವಾಗಿರುತ್ತದೆ. ಈ ವಿಧೇಯಕವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು. ರಾಜ್ಯ ಸರಕಾರವು ಸಂವಿಧಾನಕ್ಕೆ ವಿರೋಧವಾಗಿ ಜಿಬಿಎ ಕಾಯ್ದೆ ತಿದ್ದುಪಡಿ ಮಾಡಲು ವಿಧೇಯಕ ಮಂಡನೆ ಮಾಡಿರುವುದು ಖಂಡನೀಯ. ಕೊನೇ ಹಂತದಲ್ಲಿ ಬಿಲ್ ಮಂಡನೆ ಮಾಡಿ ಅಂಗೀಕಾರ ಪಡೆಯುವ ಹುನ್ನಾರವನ್ನು ಸರಕಾರ ನಡೆಸಿದೆ ಎಂದು ಅವರು ಆರೋಪಿಸಿದರು. ಚುನಾವಣೆ ನಡೆಸಲು ಹೊಸ ವಾರ್ಡ್ ಗಳಿಗೆ ಕಾರ್ಪೋರೇಟರ್ ಗಳನ್ನ ನಾಮನಿರ್ದೇಶನ ಮಾಡಲು ಸಂವಿಧಾನವು ಸರಕಾರಕ್ಕೆ ಅವಕಾಶ ನಿಡುವುದಿಲ್ಲ. 74ನೇ ತಿದ್ದುಪಡಿ ಕಾಯ್ದೆ 1992ರಿಂದ ಸ್ಥಾಪಿಸಲ್ಪಟ್ಟ ಪುರಸಭೆಯನ್ನು…

Read More

ನವದೆಹಲಿ: ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಗಂಭೀರ ಎಚ್ಚರಿಕೆ ನೀಡಿದರು. ರಾಜ್ಯಸಭೆಯಲ್ಲಿ ಸೋಮವಾರ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿಗಳು; ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಪ್ರಚಾರ ಮಾಡುತ್ತಾ ಹೋದರೆ, ಮತದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದರೆ ಅದರಿಂದ ಪ್ರತಿಪಕ್ಷಗಳಿಗೆ ಒಳ್ಳೆಯದು ಮಾಡುವುದಿಲ್ಲ ಎಂದು ಹೇಳಿದರು. ಪ್ರತಿಪಕ್ಷಗಳು ಪ್ರಧಾನಿಯವರ ಬಗ್ಗೆ ಹಾದಿಬೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕಟ್ಟದ್ದಾಗಿ ಟೀಕೆ ಮಾಡುತ್ತಿರುವ ಬಗ್ಗೆ ಮಾಜಿ ಪ್ರಧಾನಿಗಳು ಹರಿಹಾಯ್ದರು. “ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು. ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ ‘ವೋಟ್ ಚೋರಿ’ ಎಂಬ ಪದಗಳನ್ನು ಬಳಸುವುದರಿಂದ ನೀವು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ. ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು…

Read More

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಶೇ. 100 % ರಷ್ಟು ಪಲ್ಸ್ ಪೋಲಿಯೋ ಗುರಿ ಸಾಧಿಸಲು ಅಗತ್ಯ ಕ್ರಮವಹಿಸುವಂತೆ ಮುಖ್ಯ ಆಯಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕುರಿತು ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳ ಕಾಲ “ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರ” ಮದ ಭಾಗವಾಗಿ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಅಗತ್ಯ ಕ್ರಮವಹಿಸಿ ಶೇ. 100 % ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಾದ್ಯಂತ ಪಲ್ಸ್ ಫೋಲಿಯೋ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನರ್ಸಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ಬಳಸಿಕೊಂಡು ಎಲ್ಲರಿಗೂ ಪೊಲೀಯೋ ಹನಿ ಹಾಕುವ ಕಾರ್ಯವಾಗಬೇಕೆಂದು ಸೂಚನೆ ನೀಡಿದರು. ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೇ ಮತ್ತು ಮೆಟ್ರೊ ನಿಲ್ದಾಣ, ಮಾಲ್‌ ಗಳು, ಪ್ರಮುಖ ಉದ್ಯಾನವನಗಳು, ಪ್ರವಾಸಿ…

Read More

ನೀವು ಯಾವುದಾದರೂ ಮನೆ ಅಥವಾ ಅಂಗಡಿ ಕಟ್ಟಿ ಬೇಕಾಗಿರುವ ಸ್ಥಳದಲ್ಲಿ ಅಥವಾ ತೆಗೆದುಕೊಳ್ಳಬೇಕೆಂಬ ಅಪೇಕ್ಷೆ ಇದ್ದಲ್ಲಿ ಆ ಸ್ಥಳದಲ್ಲಿ ವಿನಾದರೂ ದೋಷಗಳಿವೆಯೇ ಯಾವ ದಿಕ್ಕಿಗೆ ಮನೆ ಅಥವಾ ಅಂಗಡಿಯನ್ನು ಕಟ್ಟಿದರೆ ಶ್ರೇಯಸ್ಸಾಗುತ್ತದೆ. ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564 ಹಾಗೂ ಆ ಸ್ಥಳವನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಯಾವ ರೀತಿ ಸರಿ ಪಡಿಸಿ ಕೊಳ್ಳಬೇಕು. ಮತ್ತು ಯಾವ ಆಯಾದಲ್ಲಿ ಯಾವ ರೀತಿಯಾಗಿ ಮನೆ ಯನ್ನು ಕಟ್ಟಬೇಕು ಆ ಮನೆಯ ಯಜ ಮಾನುನಯೇ ಸ್ಥಳಕ್ಕೆ ಸಾಲಾವಳಿ ಆಗಿ ಬರುತ್ತದೆಯೇ ಮತ್ತು ಆ ಮನೆಯ ಯಜಮಾನರಿಗೆ ಗುರುಬಲ ಇದೆಯೇ ಯಾವ ದೆಶೆ ನಡೆಯುತ್ತಿದೆ ಯಾವ ದಿಕ್ಕಿಗೆ ಜಾತಕದ ಪ್ರಕಾರ ಬಾಗಿಲನ್ನು…

Read More