Author: kannadanewsnow09

ಬೆಂಗಳೂರು: ಉದ್ಯೋಗದಾತರ ಮೂಲಕ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ಈಗಾಗಲೇ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಏ.16ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದಾದ ಬಳಿಕ ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷ ಉಮಾರೆಡ್ಡಿ, ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್, ಡೆವಲಪ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ತೇಜಸ್ ಎನ್.ಗೌಡ, ಎಫ್ ಕೆಸಿಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು. “ರಾಜ್ಯದಲ್ಲಿ ಉದ್ಯೋಗ ಸಮಸ್ಯೆಗಿಂತಲೂ ಕೌಶಲ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೌಶಲಭರಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಕಲಬುರಗಿ, ಕೊಪ್ಪಳ ಮತ್ತು ಮೈಸೂರನ್ನು ಕೇಂದ್ರೀಕರಿಸಿ ‘ಮಲ್ಟಿ ಸ್ಕಿಲ್ ಡೆವಲಪ್ ಮಂಟ್ ಸೆಂಟರ್’ಗಳನ್ನು ಸ್ಥಾಪಿಸಲಾಗುವುದು”, ಎಂದು ತಿಳಿಸಿದರು. ಕರ್ನಾಟಕ ವಾಣಿಜ್ಯ…

Read More

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಕೆಲವರು ಹಣ ವಸೂಲು ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬಂದಿದ್ದು, ಯಾರೂ ಮೋಸ ಹೋಗಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ನೇಮಕಾತಿ ವಿಚಾರವಾಗಿ ಮೋಸ ಹೋಗುವ ಪ್ರಕರಣಗಳು ಹೆಚ್ಚುತ್ತಿದೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಸಾರ್ವಜನಿಕರಿಂದ ಕೆಲವು ಅನಾಮಧೇಯ ವ್ಯಕ್ತಿಗಳು ಹಣ ವಸೂಲು ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದೆ. ಈ ಕುರಿತು ಪ್ರಸ್ತುತ ಸಾಕ್ಷ್ಯಾಧಾರಗಳು ಸಹ ಲಭ್ಯವಾಗಿವೆ. ಈ ಕುರಿತು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸಾಕ್ಷ್ಯಾಧಾರ ಸಮೇತ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಪ್ರಸ್ತುತ ಯಾವುದೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲಿರುವುದಿಲ್ಲ.…

Read More

ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇಂತಹ ದೇಶದ ಮೊದಲ ಲಿಫ್ಟ್ ಸೇತುವೆ ರಾಮೇಶ್ವರಂನ ಪಂಬನ್ ಪ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ. ಅದರ ವಿಶೇಷತೆ ಏನು ಅಂತ ಮುಂದಿದೆ ಓದಿ. ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ ಒಂದು ಕಾಲದಲ್ಲಿ ಆ ಭೂ ಭಾಗ ಸುತ್ತಲೂ ಸಮುದ್ರದಿಂದ ಆವೃತ್ತವಾಗಿ ದ್ವೀಪವಾಗಿತ್ತು. ಆ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದು ರೈಲ್ವೆ ಸಾರಿಗೆ ಸಂಚಾರದ ಮೂಲಕ. ಈಗ ರಸ್ತೆ, ರೈಲು ಮಾರ್ಗದ ಮೂಲಕ ಜೊತೆಗೆ ಬೆಸೆದುಕೊಂಡಿರೋದೇ ರಾಮೇಶ್ವರಂ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪಟ್ಟಣಕ್ಕೆ ರೈಲು ಸಾರಿಗೆ ಮೂಲಕ ಮತ್ತೊಮ್ಮೆ ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ಸಿದ್ಧವಾಗಿದೆ. ಇದಕ್ಕಾಗಿ ಭಾರತದ ಮೊದಲ…

Read More

ನವದೆಹಲಿ: ಶ್ರೀಲಂಕಾಗೆ ಮೂರು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ‘ಮಿತ್ರ ವಿಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇಬ್ಬರೂ ನಾಯಕರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು. ನಂತರ ಅವರು ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಧಾನಿ ಮೋದಿ ಅವರು ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದರು ಮತ್ತು ಈ ಗೌರವವು “ಹೆಮ್ಮೆಯ ವಿಷಯ” ಎಂದು ಹೇಳಿದರು. https://twitter.com/narendramodi/status/1908427629713142066 “ಈ ಗೌರವ ನನಗೆ ಮಾತ್ರವಲ್ಲ, ಇದು ಭಾರತದ 140 ಕೋಟಿ ಜನರಿಗೆ ಸೇರಿದೆ. ಇದು ಭಾರತ ಮತ್ತು ಶ್ರೀಲಂಕಾದ ಜನರ ನಡುವಿನ ಐತಿಹಾಸಿಕ ಮತ್ತು ಆಳವಾದ ಸ್ನೇಹಕ್ಕೆ ಗೌರವವಾಗಿದೆ. ಈ ಮನ್ನಣೆಗಾಗಿ, ಶ್ರೀಲಂಕಾ ಸರ್ಕಾರ, ಅಧ್ಯಕ್ಷ ದಿಸಾನಾಯಕೆ ಮತ್ತು ಈ ರಾಷ್ಟ್ರದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಮಾತುಕತೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ ಹೇಳಿದರು. “ಪ್ರಧಾನಿಯಾಗಿ, ಇದು ಶ್ರೀಲಂಕಾಕ್ಕೆ…

Read More

ಬೆಂಗಳೂರು: ರಾಜ್ಯಾಧ್ಯಂತ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ, ಬಾಕಿ ತಿಂಗಳ ಹಣ ಕೂಡ ಯಜಮಾನಿಯರ ಖಾತೆಗೆ ಜಮಾ ಆಗೋದಿಲ್ಲ. ಅದ್ಯಾಕೆ ಅಂತ ಮುಂದೆ ಸುದ್ದಿ ಓದಿ. ರಾಜ್ಯ ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂದಿಸಿದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಗೃಹಲಕ್ಷ್ಮಿ” ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ (ಫಲಾನುಭವಿಗಳ)ರ ಮಾಹಿತಿಗಾಗಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ತೋರಿಸುತ್ತಿರುವ ಫಲಾನುಭವಿಗಳು ಹಾಗೂ ಈಗಾಗಲೇ ದಾಖಾಲಾತಿಯನ್ನು ಸಲ್ಲಿಸಿರುವ ಫಲಾನುಭವಿಗಳ ಮಾಹಿತಿಗಾಗಿ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ಫಲಾನುಭವಿಗಳ ದತ್ತಾಂಶದ ಪರಿಶೀಲನೆಯ ಮಾಹಿತಿ ಸ್ವೀಕೃತವಾದ ನಂತರ ಫಲಾನುಭವಿಗಳಿಗೆ ಧನಸಹಾಯ ಪಾವತಿಸುವ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಾಗುತ್ತಿದೆ. ಈ ಹಿನ್ನಲೆಯಲ್ಲಿ ಅಲ್ಲಿಯವರೆಗೂ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಫಲಾನುಭವಿಗಳು ಮಾಹಿತಿಯನ್ನು ಪ್ರಧಾನ ಕಚೇರಿಗೆ ರವಾನಿಸದೇ ಇರುವಂತೆ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ…

Read More

ಬೆಂಗಳೂರು: ಏಪ್ರಿಲ್ 6ರ ಇಂದು ಶ್ರೀರಾಮ ನವಮಿ ಹಬ್ಬ”ದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ವಾರಾಂತ್ಯದ ಭಾನುವಾರದ ಇಂದು ಬೆಂಗಳೂರಲ್ಲಿ ನಾನ್ ವೆಜ್ ಸಿಗೋದಿಲ್ಲ. ದಿನಾಂಕ: 06-04-2025 ಭಾನುವಾರದಂದು “ಶ್ರೀರಾಮ ನವಮಿ ಹಬ್ಬ”ದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ರವರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರದ ಇಂದು ವೀಕೆಂಡ್ ನಲ್ಲಿ ನಾನ್ ವೆಜ್ ಪ್ರಿಯರಿಗೆ ಮಟನ್, ಚಿಕನ್ ಸಿಗೋದಿಲ್ಲ. ನಾಳೆಯಿಂದ ಬೆಂಗಳೂರಲ್ಲಿ ಮಾಂಸ ಮಾರಾಟ ಪುನರಾರಂಭವಾಗಲಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಬರೋಬ್ಬರಿ 55 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿವಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಆನೇಕಲ್ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀವ್ ಕುಮಾರ್ ಅವರನ್ನು ರಾಮನಗರ ಜಿಲ್ಲೆಯ ಕೋಡಿಹಳ್ಳಿ ಪೊಲೀಸ್ ಠಾಣೆಯ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬನ್ನೇರುಘಟ್ಟ ಠಾಣೆಯ ಸಿದ್ದನಗೌಡ ಜಲಪೂರ ಅವರನ್ನು ಆನೇಕಲ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಜಿಗಣಿ ಠಾಣೆಯ ಶಭಾನಾ ಭಾನು ಯಾಸೀನ್ ಮಾಕಂದಾರ್ ಅವರನ್ನು ಸರ್ಜಾಪುರ ಠಾಣೆಗೆ, ಸರ್ಜಾಪುರ ಠಾಣೆಯ ದುಂಡಪ್ಪ ಬಾರ್ಕಿ ಅವರನ್ನು ಮಾದನಾಯಕನಹಳ್ಳಿ ಠಾಣೆಗೆ, ಸೂರ್ಯನಗರ ಠಾಣೆಯ ಬಸವರಾಜು ಸವಟಗಿ ಅವರನ್ನು ತುಮಕೂರಿನ ನೊಣವಿನಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಎಂ ಗಂಗಪ್ಪ ಅವರನ್ನು ಬೆಂಗಳೂರಿನ ನಂದಗುಡಿ ಠಾಣೆಗೆ, ನಂದಗುಡಿ ಠಾಣೆಯ ವಿ ಸುಬ್ರಮಣಿ ಅವರನ್ನು ಹೊಸಕೋಟೆ ಸಂಚಾರ ಪೊಲೀಸ್ ಠಾಣೆಗೆ ವರ್ಗಾವರ್ಗಿ ಮಾಡಲಾಗಿದೆ.…

Read More

ಬೆಂಗಳೂರು: ಶಕ್ತಿ ಯೋಜನೆಯಿಂದಾಗಿ ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಹಾಗೂ ಆದಾಯದಲ್ಲೂ ಏರಿಕೆಯಾಗಿದೆ. ಕಳೆದ ವರ್ಷಕ್ಕಿತಂ ಈ ವರ್ಷ 3 ಕೋಟಿ ಹೆಚ್ಚಳವಾಗಿದೆ. ದಕ್ಷಿಣ ಭಾರತಾದ್ಯಂತ ಭಕ್ತರನ್ನು ಹೊಂದಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದ ವಾರ್ಷಿಕ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 71 ಕೋಟಿ ರೂ. ದಾಟಿದೆ. ಇದು ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು. ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಂಗ್ರಹವಾದ ನಗದು ಹಾಗೂ ಚಿನ್ನಾಭರಣ, ಚಂಡಿಕಾ ಹೋಮ ಸೇರಿ ವಿವಿಧ ಪೂಜೆಗಳಿಂದ ಬರುವ ಆದಾಯ, ನಿತ್ಯ ಪೂಜೆ, ಆನ್‌ಲೈನ್ ಪೂಜೆಗಳ ಆದಾಯವನ್ನು ಇದು ಒಳಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಕೊಲ್ಲೂರು ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ಕ್ಷೇತ್ರವಾಗಿದೆ. https://twitter.com/KarnatakaVarthe/status/1908515915450507394

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಹುಮುಖ್ಯ ಮಾಹಿತಿ ಎನ್ನುವಂತೆ ನೌಕರರು ತಮ್ಮ ಸಂಬಂಳದ ಖಾತೆಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜುಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೂ ಕಡ್ಡಾಯಗೊಳಿಸಲಾಗಿದೆ ಎಂದಿದೆ. ವಿವಿಧ ಬ್ಯಾಂಕುಗಳು ಒದಗಿಸುವ ಸಂಬಂಳ ಪ್ಯಾಕೇಜುಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕುಗಳು, ಅಂಚೆ ಕಚೇರಿಗಳು ನೀಡುವ ಪಿಎಂ ಜೆ ಜೆ ಬಿ ವೈ ಮತ್ತು ಪಿಎಂಎಸ್ ಬಿವೈ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ, ನೌಕರರಿಗೆ ಆದೇಶಿಸುವುದು ಅಂತ ತಿಳಿಸಿದೆ. ಬ್ಯಾಂಕುಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತ ಆಧಾರದ ಮೇಲೆ…

Read More

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ…

Read More