Author: kannadanewsnow09

ಬಳ್ಳಾರಿ : ಸಂಡೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ವೃತ್ತಿಪರ ತರಬೇತಿ ಕೋರ್ಸ್ ಗಳಲ್ಲಿ ತರಬೇತಿ ಜೊತೆಗೆ ಶಿಷ್ಯವೇತನ ನೀಡಲು ಉದ್ದೇಶಿಸಲಾಗಿದ್ದು, ಪರಿಶಿಷ್ಟ ಪಂಗಡದ ಇಂಜಿನಿಯರಿAಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಐಎಸ್‌ಸಿ, ಐಐಟಿ ಮತ್ತು ಎನ್‌ಐಟಿ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ತರಬೇತಿ ನೀಡಲಾಗುತ್ತಿದ್ದು, ಒಟ್ಟು 200 ಇಂಜಿನೀಯರಿAಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದ್ದು, ರೂ.15000/- ಗಳ ಶಿಷ್ಯವೇತನ ಮತ್ತು ತರಬೇತಿ ನೀಡಲಾಗುತ್ತದೆ. ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಸಂಡೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಇದೇ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಏ.11 ಕೊನೆಯ ದಿನ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.08395-200073 ಗೆ ಸಂಪರ್ಕಿಸಬಹುದು ಎಂದು ಸಂಡೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/provisional-selection-list-for-anganwadi-worker-helper-posts-released/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ಬಳ್ಳಾರಿ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಆಯ್ಕೆಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ತಾತ್ಕಾಲಿಕವಾಗಿ ಆಯ್ಕೆಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಹಾನಗರಪಾಲಿಕೆ, ನಗರ ಸಭೆ, ಪ.ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತ್, ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಇದ್ದಲ್ಲಿ ಏ.22 (ರಜೆ ದಿನಗಳನ್ನು ಹೊರತುಪಡಿಸಿ) ರಂದು ಮಧ್ಯಾಹ್ನ 1.30ರೊಳಗೆ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/harry-brook-appointed-englands-new-white-ball-captain/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಇಂಗ್ಲೆಂಡ್ ಪುರುಷರ ವೈಟ್-ಬಾಲ್ ತಂಡಗಳ ಹೊಸ ನಾಯಕರಾಗಿ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು ಸೋಮವಾರ (ಏಪ್ರಿಲ್ 7) ನೇಮಿಸಲಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಿಂದ ಇಂಗ್ಲೆಂಡ್ ತಂಡವು ಗ್ರೂಪ್ ಹಂತದಿಂದ ಹೊರನಡೆದ ನಂತರ ಕಳೆದ ತಿಂಗಳು ಈ ಹುದ್ದೆಯಿಂದ ಕೆಳಗಿಳಿದ ಜೋಸ್ ಬಟ್ಲರ್ ಅವರ ಸ್ಥಾನವನ್ನು 26 ವರ್ಷದ ಆಟಗಾರ ವಹಿಸಿಕೊಂಡಿದ್ದಾರೆ. ಜನವರಿ 26, 2022 ರಂದು ವೆಸ್ಟ್ ಇಂಡೀಸ್ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಬ್ರೂಕ್ ಇಲ್ಲಿಯವರೆಗೆ ಇಂಗ್ಲೆಂಡ್ ಪರ 26 ಏಕದಿನ ಮತ್ತು 44 ಟಿ20ಐಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹಂಚಿಕೊಂಡ ಬಿಡುಗಡೆಯ ಪ್ರಕಾರ, “ಜನವರಿ 2022 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ 26 ವರ್ಷದ ಆಟಗಾರ ಇಂಗ್ಲೆಂಡ್‌ನ ವೈಟ್-ಬಾಲ್ ಸೆಟಪ್‌ನಲ್ಲಿ ಪ್ರಮುಖ ಭಾಗವಾಗಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ ದೇಶದ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಪ್ರಸ್ತುತ ಟೆಸ್ಟ್…

Read More

ಬೆಂಗಳೂರು: ಮಹಿಳಾ ಆಟೋ ಚಾಲಕಿರ ಸಂಖ್ಯೆ ಹೆಚ್ಚಾದರೆ, ಬೆಂಗಳೂರಿನಲ್ಲಿ ಮಹಿಳೆಯರು ಇನ್ನಷ್ಟು ಸುರಕ್ಷಿತವಾಗಿ ಆಟೋ ಸಂಚಾರ ಮಾಡಲು ಮುಂದಾಗುತ್ತಾರೆ ಎಂದು ಶಾಸಕ ಎಸ್‌. ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು. ಬಿ.ಪ್ಯಾಕ್ ಹಾಗೂ ಆದರ್ಶ ಆಟೋ ಸಹಯೋಗದಲ್ಲಿ”ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಆಟೋ ಬಳಸುವವರ ಪೈಕಿ ಮಹಿಳೆಯರೇ ಹೆಚ್ಚು. ಆದರೆ, ಕೆಲವೊಂದು ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿರುಕುಳದಂತ ಸುದ್ದಿ ಕೇಳಿಬರುತ್ತವೆ, ಮಹಿಳೆಯರೇ ಆಟೋ ಚಾಲನೆಗೆ ಇಳಿದರೆ, ಇತರೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸುರಕ್ಷಿತವಾಗಿ ಹಾಗೂ ಧೈರ್ಯವಾಗಿ ಯಾವ ಸಂದರ್ಭದಲ್ಲಾದರೂ ಆಟೋದಲ್ಲಿ ಸಂಚಾರ ಮಾಡಲು ಮುಂದಾಗುತ್ತಾರೆ. ಹೀಗಾಗಿ ಮಹಿಳೆಯರು ಹೆಚ್ಚು ಹೆಚ್ಚು ಆಟೋ ಚಾಲನಾ ವೃತ್ತಿಗೆ ಆಗಮಿಸಲಿ. ಇದರಿಂದ ಸ್ತ್ರೀ ಆರ್ಥಿಕವಾಗಿಯೂ ಸಬಲೀಕರಣರಾಗಲಿದ್ದಾರೆ ಎಂದು ಹೇಳಿದರು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಆಟೋ ಚಾಲನೆಯಲ್ಲೂ ಯಾರಿಗೇನು ಕಡಿಮೆ ಇಲ್ಲದಂತೆ ಮುಂದಾಗುತ್ತಿರುವುದು ಅಭಿನಂದನಾರ್ಹ. ಆಸಕ್ತ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ…

Read More

ಇಂದಿನ ದಿನಗಳಲ್ಲಿ ಹಣ ಮಾಡುವುದೊಂದೇ ಹಲವರ ಗುರಿಯಾಗಿದೆ. ಕಷ್ಟಪಟ್ಟು ಹಣ ಸೇರಿಸುವ, ಪ್ರಗತಿ ಬಯಸಿದವರೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಸಂಪಾದಿಸಲಾಗದೆ, ದುಡಿದ ಹಣವನ್ನು ಸೇರಿಸಲಾಗದೆ, ದುಂದುವೆಚ್ಚ, ಹಣದ ಕೊರತೆಯಿಂದ ಬಳಲುತ್ತಿದ್ದಾರೆ. ವ್ಯಾಲೆಟ್‌ಗಳು ಅಥವಾ ಪರ್ಸ್ ನಲ್ಲಿ ಹಣವನ್ನು ಇಡಲು ಪ್ರತಿಯೊಬ್ಬರೂ ಬಳಸುವ ಪ್ರಮುಖ ವಸ್ತುವಾಗಿದೆ. ಹೋಮ್ ಬ್ಯೂರೋ ವ್ಯವಹಾರದ ಗಲ್ಲ ಪೆಟ್ಟಿಗೆ ಕೂಡ ಇದರ ಪಕ್ಕದಲ್ಲಿದೆ. ಹಣವನ್ನು ಇಡಲು ಬಳಸುವ ಈ ಮನಿ ಪರ್ಸ್‌ನಲ್ಲಿ ಒಂದೇ ಒಂದು ವಸ್ತುವನ್ನು ಇರಿಸುವ ಮೂಲಕ ನಮ್ಮ ಹಣದ ಹರಿವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆಧ್ಯಾತ್ಮದ ಕುರಿತಾದ ಈ ಪೋಸ್ಟ್‌ನಲ್ಲಿ ಇದರ ಅರ್ಥ ಮತ್ತು ಅದನ್ನು ಹೇಗೆ ಇಟ್ಟುಕೊಳ್ಳುವುದು ಎಂದು ನಾವು ತಿಳಿದುಕೊಳ್ಳಬಹುದು . ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು…

Read More

ನವದೆಹಲಿ: ಉಜ್ವಲ (ಪಿಎಂಯುವೈ) ಮತ್ತು ಉಜ್ವಲೇತರ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಪ್ರಕಟಿಸಿದ್ದಾರೆ. “ಪಿಎಂಯುವೈ ಫಲಾನುಭವಿಗಳಿಗೆ, ಬೆಲೆ ಪ್ರತಿ ಸಿಲಿಂಡರ್ಗೆ 500 ರೂ.ಗಳಿಂದ 550 ರೂ.ಗೆ ಏರಲಿದೆ. ಇತರ ಗ್ರಾಹಕರಿಗೆ ಇದು 803 ರೂ.ಗಳಿಂದ 853 ರೂ.ಗೆ ಹೆಚ್ಚಾಗುತ್ತದೆ ಎಂದು ಪುರಿ ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಪ್ರತಿ ಲೀಟರ್ಗೆ ತಲಾ 2 ರೂ.ಗಳಷ್ಟು ಹೆಚ್ಚಿಸಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 13 ರೂ.ಗೆ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂ.ಗೆ ಹೆಚ್ಚಿಸಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಸುಂಕಗಳ ಹೆಚ್ಚಳವು “ಏಪ್ರಿಲ್ 8, 2025 ರಿಂದ ಜಾರಿಗೆ ಬರಲಿದೆ” ಎಂದು ಅದು ಹೇಳಿದೆ. https://twitter.com/ANI/status/1909199177344770284 ಹೆಚ್ಚಳವು ನಿಯತಕಾಲಿಕ ಪರಿಶೀಲನೆಗೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ಪ್ರತಿ 2-3 ವಾರಗಳಿಗೊಮ್ಮೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಇತ್ತೀಚಿನ…

Read More

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಕೆಲ ರೈಲುಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದರೇ, ಮತ್ತೆ ಕೆಲ ರೈಲುಗಳು ಸಂಚಾರವನ್ನು ತಡವಾಗಿ ಪ್ರಾರಂಭಿಸಲಿದ್ದಾವೆ. ಈ ರೈಲುಗಳ ಸೇವೆಯಲ್ಲಿ ಬದಲಾವಣೆ ಮೈಸೂರು ವಿಭಾಗದ ಹಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಕಾಲುವೆ ದಾಟುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ರೈಲು ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ರೈಲುಗಳ ಸಂಚಾರ ರದ್ದು: 1. ಏಪ್ರಿಲ್ 8, 10, 12, 14, 29, ಮೇ 3, 10 ಮತ್ತು ಜೂನ್ 10, 2025 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದಾಗಲಿದೆ. 2. ಜೂನ್ 10, 2025 ರಂದು ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳು ರದ್ದಾಗಲಿವೆ. ಈ ರೈಲುಗಳ ಸಂಚಾರ ಭಾಗಶಃ ರದ್ದು:…

Read More

ಹಾಸನ: ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದು ಯುವಕನೊಬ್ಬ ಕುಳಿತು ರಂಪಾಟ ಮಾಡಿದಂತ ಘಟನೆ ಹಾಸನದ ಬಿಎಂ ರಸ್ತೆಯಲ್ಲಿ ನಡೆದಿದೆ. ಯುವಕನನ್ನು ಕಚ್ಚಿದಂತ ಕೊಳಕ ಮಂಡಲ ಹಾವು, ಕಚ್ಚಿದ ಬಳಿಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹಾಸನದ ಬಿಎಂ ರಸ್ತೆಯಲ್ಲಿ ಯುವಕನೊಬ್ಬನಿಗೆ ಕೊಳಕ ಮಂಡಲ ಹಾವು ಕಚ್ಚಿದ್ದರಿಂದ ಅದನ್ನೇ ಕೈಯಲ್ಲಿ ಹಿಡಿದು ಖಾಸಗಿ ಬ್ಯಾಂಕ್ ಮುಂದೆ ಕುಳಿತಿದ್ದಾನೆ. ಆಸ್ಪತ್ರೆಗೆ ಹೋಗು ಅಂತ ಸಾರ್ವಜನಿಕರು ಬುದ್ಧಿ ಹೇಳಿದರೂ ಹೋಗದೇ ರಂಪಾಟ ಮೆರೆದಿದ್ದಾನೆ. ಕಚ್ಚಿದ ಹಾವನ್ನೇ ಗಟ್ಟಿಯಾಗಿ ಹಿಡಿದು ಕುಳಿತ ಕಾರಣ, ಯುವಕನ ಕೈಯಲ್ಲೇ ಹಾವು ಕೂಡ ಪ್ರಾಣ ಬಿಟ್ಟಿದೆ. ಈ ಮೂಲಕ ಹಾಸನದ ಬಿಎಂ ರಸ್ತೆಯ ಖಾಸಗಿ ಬ್ಯಾಂಕ್ ಮುಂದೆ ಶಾಕಿಂಗ್ ಎನ್ನುವಂತ ಘಟನೆ ನಡೆದಿದೆ. https://kannadanewsnow.com/kannada/haj-2025-why-saudi-arabia-has-temporarily-banned-visas-from-13-countries-including-india/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ನವದೆಹಲಿ: ಹಜ್ ಯಾತ್ರೆ-2025 ಸಮೀಪಿಸುತ್ತಿರುವುದರಿಂದ, ಸೌದಿ ಅರೇಬಿಯಾ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 14 ದೇಶಗಳ ನಾಗರಿಕರಿಗೆ ಕೆಲವು ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಕ್ಕಾ ಯಾತ್ರೆ ಮುಕ್ತಾಯಗೊಳ್ಳುತ್ತಿದ್ದಂತೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳ ಮೇಲಿನ ನಿಷೇಧವು ಜೂನ್ ಮಧ್ಯಭಾಗದವರೆಗೆ ಜಾರಿಗೆ ಬರಲಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ಮತ್ತು ಮೊರಾಕೊ ಸೇರಿದಂತೆ 14 ರಾಷ್ಟ್ರಗಳ ಮೇಲೆ ಈ ನಿಷೇಧವು ಪರಿಣಾಮ ಬೀರುತ್ತದೆ. ಸರಿಯಾದ ನೋಂದಣಿ ಇಲ್ಲದೆ ವ್ಯಕ್ತಿಗಳು ಹಜ್ ಮಾಡಲು ಪ್ರಯತ್ನಿಸುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಉಮ್ರಾ ವೀಸಾಗಳನ್ನು ಹೊಂದಿರುವ ವ್ಯಕ್ತಿಗಳು ಏಪ್ರಿಲ್ 13 ರವರೆಗೆ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಎಂದು ಪಾಕಿಸ್ತಾನದ ARY ಸೌದಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಿಂದೆ ಅನೇಕ ವಿದೇಶಿ ಪ್ರಜೆಗಳು ಉಮ್ರಾ ಅಥವಾ ಭೇಟಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿ ನಂತರ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರಿಗೆ ಶುಭಸುದ್ದಿಯೊಂದು ಹೊರ ಬಿದ್ದಿದೆ. ಪೌರ ಕಾರ್ಮಿಕರಿಗೆ ಕಾರ್ಮಿಕರ ದಿನವಾದಂತ ಮೇ.1ರಂದು ಖಾಯಂ ಮಾಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದಿದ್ದಾರೆ. ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ ಕರ್ತವ್ಯ ಅಂತ ತಿಳಿಸಿದ್ದಾರೆ. 2017ರಲ್ಲಿಯೂ 10,000 ಪೌರಕಾರ್ಮಿಕರ ಖಾಯಂಮಾತಿ, ವೇತನವನ್ನು ₹7,000 ದಿಂದ ₹17,000 ಸಾವಿರಕ್ಕೆ ಹೆಚ್ಚಳ ಮಾಡಿದ್ದು ನಾವೇ, ಎಲ್ಲ ಕಾಲಕ್ಕೂ ಶ್ರಮಿಕ ಜನರ ನಿಜವಾದ ಹಿತಚಿಂತಕರು ನಾವೇ ಎಂದು ಹೇಳಿದ್ದಾರೆ. https://twitter.com/KarnatakaVarthe/status/1909175792535498995 https://kannadanewsnow.com/kannada/good-news-for-pourakarmikas-state-govt-to-issue-appointment-letter-on-may-1/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More