Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ : ಸಮಾಜದಲ್ಲಿ ಈಗಲೂ ಆಚರಣೆಯಲ್ಲಿರುವ ಅಸ್ಪೃಶ್ಯತೆ ನಿರ್ಮೂಲನೆಗೆ ಪ್ರತಿಯೊಬ್ಬರು ದೃಢ ಸಂಕಲ್ಪ ಮಾಡಬೇಕೆಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಕಿ ಮತ್ತು ಬಲವರ್ಧನ ಸಮಿತಿಯ ಸಂಚಾಲಕಿ ಪಿ.ಯಶೋಧ ರವರು ಕರೆ ನೀಡಿದರು. ಮದ್ದೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಹಲವು ಇಲಾಖೆಗಳ ವತಿಯಿಂದ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಅನ್ವಯ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರ ಕುರಿತು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿರುವುದು ವಿಷಾದನೀಯ. ಜನಾಂದೋಲನದ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಅಸ್ಪೃಶ್ಯತೆ ತೊಲಗಿಸಲು ಸಾಧ್ಯ. ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ಮಾನೋಭಾವದಿಂದ ನೋಡಿದಾಗ ಅಸ್ಪೃಶ್ಯತೆ, ಜಾತಿ ಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಬಹುದು ಎಂದು ಅಭಿಪ್ರಾಯಪಟ್ಟರು. ಭಾರತದ ಉಪ ಖಂಡಗಳಲ್ಲಿ ಮಾತ್ರ ಈ ರೀತಿಯ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಕೇವಲ ಹುಟ್ಟುವಿನಿಂದ…
ಮಂಡ್ಯ: ಜಿಲ್ಲೆಯಲ್ಲಿ ಸಾರಿಗೆ ಬಸ್ ಒಂದು ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ಏರಿದೆ. ರಸ್ತೆ ಬದಿಯಲ್ಲಿನ ರೈಲಿಂಗ್ಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದಂತ 60ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳ ಬಳಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ರೈಲಿಂಗ್ಸ್ ಗೆ ಡಿಕ್ಕಿಯನ್ನು ಕೆ ಎಸ್ ಆರ್ ಟಿ ಸಿ ಬಸ್ ಹೊಡೆದಿದೆ. ಆ ಬಳಿಕ ಬಸ್ ನಿಂತಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ 60ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿರುವುದಾಗಿ ತಿಳಿದು ಬಂದಿದೆ. ಕೆ.ಆರ್.ಪೇಟೆಯಿಂದ ಭೇರ್ಯ ಕಡೆಗೆ 60.ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಬಸ್ ಇದಾಗಿದೆ. ಧಿಡೀರ್ ಬಸ್ ಬ್ರೇಕ್ ಫೇಲ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರೈಲಿಂಗ್ಸ್ ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರು…
ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಗಳಲ್ಲಿ ತೆರವಾಗಿರುವ ಬೋಧಕ ಸಿಬ್ಬಂದಿ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರ ಶಿಕ್ಷಕರ ಗೌರವಧನ ಪಾವತಿಗಾಗಿ ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಡಿಸೆಂಬರ್-2025 ರಿಂದ ಮಾರ್ಚ್-2026 ರವರೆಗೆ (4 ತಿಂಗಳು) ಗೌರವಧನ ಪಾವತಿಸಲು ಲೆಕ್ಕಶೀರ್ಷಿಕೆ: 2202-02-197-1-01-300 (2202- 00-102-0-62-324) ರಡಿ ರೂ.4375.75 ಲಕ್ಷಗಳನ್ನು ಹಾಗೂ ಲೆಕ್ಕಶೀರ್ಷಿಕೆ:2515-00- 197-1-10-300 (2515-00-102-0-63-005) ರಡಿ ರೂ.373.75 ಲಕ್ಷಗಳನ್ನು ಬಿಡುಗಡೆ ಮಾಡಿ ಹೊರಡಿಸಿರುವ ಸಂಖ್ಯೆ: ಆಇ 298 323-6/2026, ದಿನಾಂಕ:16.02.2026ರ ಸರ್ಕಾರಿ ಆದೇಶದ ಪ್ರತಿಯನ್ನು ಕಡತದಲ್ಲಿರಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಕಡತ ಹಿಂದಿರುಗಿಸಿದೆ ಎಂದಿದೆ. ರಾಜ್ಯದ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ತೆರವಾಗಿರುವ ಶಿಕ್ಷಕರ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಡಿಸೆಂಬರ್-2025 ರಿಂದ ಮಾರ್ಚ್-2026ರವರೆಗೆ (4 ತಿಂಗಳು) ಗೌರವಧನ…
ಶಿವಮೊಗ್ಗ: ಜಿಲ್ಲೆ ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ KRDCL ವತಿಯಿಂದ ರೂ. 125.67ಕೋಟಿಗಳ ಅಂದಾಜು ವೆಚ್ಚದ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೇ ಮಸಾoತ್ಯದೊಳಗೆ ಜನಸಂಚಾರಕ್ಕೆ ಮುಕ್ತ ಗೊಳಿಸಿ ಕೊಡಲಾಗುವುದು ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಅವರು ಇಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಹಿಂನೀರಿನ ಲಾಂಚ್ ನಲ್ಲಿ ಪ್ರಯಾಣಿಸಿ, ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿದರು. ನಂತರ ಮಾತನಾಡಿದ ಅವರು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಅಗತ್ಯವಿರುವ 56.14 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದ ಅವರು ಮೇ ಮಾಹೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳಿಸಲಾಗುವುದು ಎಂದರು. ಈ ಸೇತುವೆಯ ನಿರ್ಮಾಣದಿಂದಾಗಿ ಶರಾವತಿ ಸಂತ್ರಸ್ತ ಗ್ರಾಮಗಳಿರುವ ಆರು ಪಂಚಾಯಿತಿಗಳ ನಿವಾಸಿಗಳಿಗೆ ಹಾಗೂ ಸಾಗರ…
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಎಪ್‌ಸ್ಟೀನ್ ಫೈಲ್ಸ್’ (Epstein Files) ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸುವ ಮುನ್ನ ಎಚ್ಚರವಿರಲಿ. ಜನರ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು, ಈ ಹೆಸರಿನಲ್ಲಿ ದೊಡ್ಡ ಮಟ್ಟದ ಡೇಟಾ ಕಳ್ಳತನದ ಜಾಲವನ್ನು ಹೆಣೆದಿದ್ದಾರೆ ಎಂದು ಸರ್ಕಾರಿ ಏಜೆನ್ಸಿಗಳು ಮತ್ತು ಸೈಬರ್ ತಜ್ಞರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೇಗೆ ವಂಚನೆ ಗೊತ್ತಾ? ಸೈಬರ್ ತಜ್ಞರ ಪ್ರಕಾರ, ಬಳಕೆದಾರರು ಈ ವಿಷಯದ ಬಗ್ಗೆ ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಅನೇಕ ನಕಲಿ ವೆಬ್‌ಸೈಟ್‌ಗಳ ಲಿಂಕ್‌ಗಳು ಕಾಣಿಸಿಕೊಳ್ಳುತ್ತವೆ. ಇವು ನೋಡಲು ಅಧಿಕೃತ ಮತ್ತು ನಂಬಿಕಸ್ತ ವೆಬ್‌ಸೈಟ್‌ಗಳಂತೆಯೇ ಇರುತ್ತವೆ. ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, “ರಹಸ್ಯ ಕಡತಗಳನ್ನು ನೋಡಲು ನಿಮ್ಮ Gmail ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಅಪಾಯಗಳೇನು? ಬಳಕೆದಾರರು ಕುತೂಹಲಕ್ಕೆ ಬಿದ್ದು ತಮ್ಮ ಜಿಮೇಲ್ ವಿವರಗಳನ್ನು ನಮೂದಿಸಿದ ಕೂಡಲೇ ಹ್ಯಾಕರ್ಸ್‌ಗಳ ಆಟ ಶುರುವಾಗುತ್ತದೆ: ಮಾಹಿತಿ…
ಬೆಂಗಳೂರು: ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರವರಿ 27 (ಶುಕ್ರವಾರ) ರಂದು ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಶನಿವಾರ (ಫೆ. 28) ಬೆಳಿಗ್ಗೆ 5:05ಕ್ಕೆ ತಾಳಗುಪ್ಪ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ಫೆಬ್ರವರಿ 28 (ಶನಿವಾರ) ರಂದು ಬೆಳಿಗ್ಗೆ 9:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ಸೇರಲಿದೆ. ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಳು ಹಾಲ್ಟ್, ಆನಂದಪುರಂ, ಅಡ್ಡೇರಿ ಹಾಲ್ಟ್ ಮತ್ತು ಸಾಗರ…
ಕೂದಲು ಉದುರುವ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಏಕೆಂದರೆ ಇಂದಿನ ಪರಿಸ್ಥಿತಿ ಹೀಗಿದೆ. ಎಲ್ಲೆಂದರಲ್ಲಿ ಧೂಳು, ಕೊಳಕು ಇದೆ. ಕೂದಲು ಉದುರುವಿಕೆಗೆ ಪ್ರಮುಖ ಕಾರಣವೆಂದರೆ ಕೂದಲಿನಲ್ಲಿರುವ ಹೆಚ್ಚುವರಿ ಕೊಳೆ. ಅದೂ ಅಲ್ಲದೆ ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ದೇಹದಲ್ಲಿನ ಹಾರ್ಮೋನ್ ಬದಲಾವಣೆಯೂ ಇದಕ್ಕೆ ಕಾರಣ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಕೂದಲು ಉದುರುವಿಕೆಗೆ ಕಾರಣ ಏನೇ…
ತುಮಕೂರು: ಜಿಲ್ಲೆಯಲ್ಲಿ ಸಿನಿಮಾ ಮಾದರಿಯಲ್ಲಿ ದರೋಡೆ ಕೃತ್ಯ ಎಸಗಲಾಗಿದೆ. ಈ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಹೊರ ರಾಜ್ಯದಿಂದ ಬಂದು ಸಿನಿಮಾ ಮಾದರಿಯಲ್ಲಿ ದರೋಡೆಯನ್ನು ಖದೀಮರು ನಡೆಸಿದ್ದರು. ಇಂತಹ ದರೋಡೆ ಕೋರರನ್ನು ಕೃತ್ಯ ಎಸಗಿದ ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆ ಕೋರರು ಮಾಲು ಸಹಿತ ಪೊಲೀಸರು ಬಂಧಿಸಿದ್ದಾರೆ. ದರೋಡೆ ಕೋರನ ಬಳಿ ಇದ್ದಂತ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಅರವಿಂದ್, ದುಂಗರ್ ಸಿಂಗ್, ಮಹೇಂದ್ರ, ಮಧುಸಿಂಗ್ ಸೇರಿದಂತೆ ರಾಜಸ್ಥಾನ ಮೂಲದ ನಾಲ್ವರು ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/shivamogga-accidental-fire-at-mescom-transformer-repair-center-in-sagar-loss-of-lakhs-of-rupees/
ಶಿವಮೊಗ್ಗ : ಸಾಗರದ ಮೆಸ್ಕಾಂ ಕಚೇರಿ ಹಿಂಭಾಗದಲ್ಲಿರುವ ಟ್ರಾನ್ಸ್ಫರ‍್ಮರ್ ರಿಪೇರಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ 4ಕ್ಕೆ ಶಾರ್ಟ್ಸರ್ಕ್ಯೂಟ್‌ನಿಂದ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಜೋಗ ರಸ್ತೆಯ ಮೆಸ್ಕಾಂ ಕಚೇರಿ ಹಿಂಭಾಗದ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಇರುವ ಟಿ.ಸಿ. ರಿಪೇರಿ ಕೇಂದ್ರದಕ್ಕ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ವ್ಯಾಪಕವಾಗಿ ಆವರಿಸಿದ ಬೆಂಕಿ ಕೆನ್ನಾಲಿಗೆಗೆ ರಿಪೇರಿಗೆ ಬಂದಿದ್ದ 15ಕ್ಕೂ ಹೆಚ್ಚು ಟಿ.ಸಿ.ಗಳು ಸುಟ್ಟು ಭಸ್ಮವಾಗಿದೆ. ಇದರ ಜೊತೆಗೆ ತಾಲ್ಲೂಕಿನ ಬೇರೆಬೇರೆ ಭಾಗಗಳಲ್ಲಿ ಅಳವಡಿಸಲು ತಂದಿದ್ದ ಐದಾರು ಹೊಸ ಟಿ.ಸಿ.ಗಳು ಸಹ ಸುಟ್ಟು ಹೋಗಿದೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಎಳೆಯುವ ವೈಂಡಿ ವೈರ್‌ಗಳು ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಬೆಂಕಿಯ ಕೆನ್ನಾಲಿಗೆ ಹಳೆಯ ಮತ್ತು ಹೊಸ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು ೨೦ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ರಿಪೇರಿ ಕೇಂದ್ರದ ಮೇಲ್ಚಾವಣಿ…
ಮೈಸೂರು: ಮಾರಿಕಾಂಬಾ ದೇವಿ ಜಾತ್ರೆ ಮಹೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರ–ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ರೈಲನ್ನು (16581/16582) ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನಿರ್ಧರಿಸಿದೆ. ಅದರಂತೆ, ಮಾರ್ಚ್ 1ರಂದು (ಭಾನುವಾರ) ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16581 ಶಿವಮೊಗ್ಗದ ಬದಲಾಗಿ ತಾಳಗುಪ್ಪದವರೆಗೆ ಸಂಚರಿಸಲಿದೆ. ಮರಳಿ, ರೈಲು ಸಂಖ್ಯೆ 16582 ಶಿವಮೊಗ್ಗಕ್ಕೆ ಬದಲಾಗಿ ತಾಳಗುಪ್ಪದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ವಿಸ್ತರಣೆಯು ಕೇವಲ ಒಂದು ಟ್ರಿಪ್ ಗೆ ಮಾತ್ರ ಅನ್ವಯಿಸಲಿದೆ. ರೈಲು ಸಂಖ್ಯೆ 16581 ಯಶವಂತಪುರದಿಂದ ಮಧ್ಯರಾತ್ರಿ 12:15ಕ್ಕೆ ಹೊರಟು, ಅಂದು ಬೆಳಿಗ್ಗೆ 09:00 ಗಂಟೆಗೆ ತಾಳಗುಪ್ಪ ತಲುಪಲಿದೆ. ಅಂದೇ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 16582 ತಾಳಗುಪ್ಪದಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 04:45ಕ್ಕೆ ಯಶವಂತಪುರ ತಲುಪಲಿದೆ. ಶಿವಮೊಗ್ಗ ಟೌನ್ ನಿಂದ ಮುಂದಕ್ಕೆ ಈ ರೈಲು ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಳು ಹಾಲ್ಟ್, ಆನಂದಪುರಂ,…














