Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಇಂದು ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪುತ್ರಿಯ ಭವಿಷ್ಯಕ್ಕೆ ನಾನು ನೆರವಾಗುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗುರುಪ್ರಸಾದ್ ತಾನು ಮಾಡಿದಂತ ಸಿನಿಮಾದಿಂದ ಬಂದ ಹಣದಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೇ ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡು ಬಿಟ್ಟ. ಆತನ ಪತ್ನಿ ಗರ್ಭಿಣಿ ಹಾಗೂ ಇರುವ ಪುತ್ರಿಯನ್ನು ನೋಡಿದ್ರೇ ಬೇಜಾರಾಗುತ್ತದೆ. ನಾನು ಗುರುಪ್ರಸಾದ್ ಅವರ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು. ಎದ್ದೇಳು ಮಂಜುನಾಥ ಚಿತ್ರದ ನಂತ್ರ ರಂಗನಾಯಕಿ ಸಿನಿಮಾ ಮಾಡಿದ್ವಿ. ಈ ಬಳಿಕ ಗುರುಪ್ರಸಾದ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಉಟ್ಟಾಗಿತ್ತು. ಆ ಬಳಿಕ ನಾನು ಅವರು ಮಾತನಾಡಿದ್ದು ಅಷ್ಟಕ್ಕೇ ಅಷ್ಟೇ ಆಗಿತ್ತು. ಯಾವುದಾದರೂ ಕಾರ್ಯಕ್ರಮದಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆನು ಎಂದರು. ನಾನು ಗುರುಪ್ರಸಾದ್ ಎರಡನೇ ಮದುವೆಯಾಗುವ ಸಂದರ್ಭದಲ್ಲೂ ಬುದ್ಧಿ ಹೇಳಿದ್ದೆ. ಅದೂ ಅಲ್ಲದೇ ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯೊಂದಿಗೇ ಗುರುಪ್ರಸಾದ್ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಆ…
ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ನ 14 ವರ್ಷದ ಬಾಲಕ ಆದಿತ್ಯ ಶರ್ಮಾ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ದುರಂತವಾಗಿ ಸಾವನ್ನಪ್ಪಿದ್ದಾನೆ. ಆತನ ಹೊಟ್ಟೆಯಲ್ಲಿದ್ದಂತ 65 ಲೋಹಗದ ವಸ್ತುಗಳನ್ನು ಹೊರತೆಗೆದ ತಕ್ಷಣವೇ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬ್ಯಾಟರಿಗಳು, ಸರಪಳಿಗಳು, ರೇಜರ್ ಬ್ಲೇಡ್ ತುಣುಕುಗಳು ಮತ್ತು ಸ್ಕ್ರೂಗಳು ಸೇರಿದಂತೆ ವಸ್ತುಗಳು ತೀವ್ರ ತೊಡಕುಗಳನ್ನು ಉಂಟುಮಾಡಿದ್ದವು. ಐದು ಗಂಟೆಗಳ ಕಾರ್ಯವಿಧಾನದ ಹೊರತಾಗಿಯೂ, ಆದಿತ್ಯ ಶಸ್ತ್ರಚಿಕಿತ್ಸೆಯ ಸ್ವಲ್ಪ ಸಮಯದ ನಂತರ ಕರುಳಿನ ಸೋಂಕಿಗೆ ಬಲಿಯಾದರು. ಅಕ್ಟೋಬರ್ 13 ರಂದು ಆದಿತ್ಯ ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆಯನ್ನು ಅನುಭವಿಸಲು ಪ್ರಾರಂಭಿಸಿದಾಗ ಅಗ್ನಿಪರೀಕ್ಷೆ ಪ್ರಾರಂಭವಾಯಿತು ಎಂದು ಅಮರ್ ಉಜಾಲಾ ವರದಿ ಮಾಡಿದ್ದಾರೆ. ವೈದ್ಯಕೀಯ ಪ್ರತಿನಿಧಿಯಾಗಿರುವ ಅವರ ತಂದೆ ಸಂಚೇತ್ ಶರ್ಮಾ ಮುಂದಿನ ವಾರಗಳಲ್ಲಿ ಆಗ್ರಾ, ಜೈಪುರ, ಅಲಿಗಢ, ನೋಯ್ಡಾ ಮತ್ತು ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಹಾಯವನ್ನು ಕೋರಿದರು. ಅಲಿಗಢದ ಆಸ್ಪತ್ರೆಯಲ್ಲಿ, ಸಿಟಿ ಸ್ಕ್ಯಾನ್ ಆರಂಭದಲ್ಲಿ ಮೂಗಿನ ತಡೆಯನ್ನು ಗುರುತಿಸಿತು, ಅದನ್ನು ವೈದ್ಯರು ತೆಗೆದುಹಾಕಿದರು, ಆದರೆ…
ನವದೆಹಲಿ: ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸಲು, ಎನ್ಪಿಸಿಐ ಆಟೋ ಟಾಪ್-ಅಪ್ ವೈಶಿಷ್ಟ್ಯವನ್ನು ಪರಿಚಯಿಸಿತು. ಇದು ನಿಗದಿತ ಮಿತಿಗಿಂತ ಕಡಿಮೆಯಾದ ನಂತರ ಬಳಕೆದಾರರ ಯುಪಿಐ ಲೈಟ್ ವ್ಯಾಲೆಟ್ ಅನ್ನು ಸ್ವಯಂಚಾಲಿತವಾಗಿ ಮರುಪೂರಣ ಮಾಡುತ್ತದೆ. ಬಳಕೆದಾರರು ರೀಚಾರ್ಜ್ ಮೊತ್ತವನ್ನು ಮುಂಚಿತವಾಗಿ ವ್ಯಾಖ್ಯಾನಿಸಬಹುದು ಮತ್ತು ರೀಚಾರ್ಜ್ ಗಳನ್ನು ದಿನಕ್ಕೆ ಐದು ಬಾರಿ ಮಿತಿಗೊಳಿಸಬಹುದು, ತ್ವರಿತ, ಕಡಿಮೆ ಮೌಲ್ಯದ ಪಾವತಿಗಳಿಗೆ ನಿರಂತರ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. “ಯುಪಿಐ ಲೈಟ್ ಯಾವುದೇ ಸಮಯದಲ್ಲಿ ಗರಿಷ್ಠ 12000 ಯುಪಿಐ ಲೈಟ್ ಬ್ಯಾಲೆನ್ಸ್ ಮಿತಿಯೊಂದಿಗೆ 1500 ಕ್ಕಿಂತ ಕಡಿಮೆ ಪಿನ್ ರಹಿತ ವಹಿವಾಟುಗಳನ್ನು ಅನುಮತಿಸುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ” ಎಂದು ಎನ್ಪಿಸಿಐ ಹೇಳಿದೆ. ಯುಪಿಐ ಲೈಟ್ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು, ಯುಪಿಐ ಲೈಟ್ನಲ್ಲಿ ಆಟೋ ಟಾಪ್-ಅಪ್ ಅನ್ನು ಪರಿಚಯಿಸಲಾಗುತ್ತಿದೆ, ಈ ಹೊಸ ವೈಶಿಷ್ಟ್ಯದೊಂದಿಗೆ, ಯುಪಿಐ ಲೈಟ್ ಬ್ಯಾಲೆನ್ಸ್ ಅನ್ನು ಬಳಕೆದಾರರು ಆಯ್ಕೆ ಮಾಡಿದ ಮೊತ್ತದಿಂದ ಸ್ವಯಂಚಾಲಿತವಾಗಿ ಮರುಭರ್ತಿ ಮಾಡಲಾಗುತ್ತದೆ. ಆರಂಭದಲ್ಲಿ ಆಗಸ್ಟ್ 27, 2024 ರಂದು ಪ್ರಾರಂಭಿಸಲಾದ ಈ ವೈಶಿಷ್ಟ್ಯವು ಬಳಕೆದಾರರಿಗೆ…
ಶ್ರೀನಗರ: ಅಪರಿಚಿತ ಬಂದೂಕುಧಾರಿಗಳು ಭಾನುವಾರ ಮಧ್ಯಾಹ್ನ ಶ್ರೀನಗರದಲ್ಲಿ ಸಿಆರ್ಪಿಎಫ್ ವಾಹನದ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಆದರೆ ಅದು ಗುರಿಯನ್ನು ತಪ್ಪಿ ರಸ್ತೆಯಲ್ಲಿ ಸ್ಫೋಟಗೊಂಡಿದೆ. ಇದರಿಂದಾಗಿ 12ಕ್ಕೂ ಹೆಚ್ಚು ಪಾದಚಾರಿಗಳು ಮತ್ತು ಶಾಪರ್ಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರ ನಗರದ ಪ್ರವಾಸಿ ಸ್ವಾಗತ ಕೇಂದ್ರ (ಟಿಆರ್ಸಿ) ಕ್ರಾಸಿಂಗ್ ಬಳಿ ಸಿಆರ್ಪಿಎಫ್ ಮೊಬೈಲ್ ಬಂಕರ್ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗ್ರೆನೇಡ್ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಗ್ರೆನೇಡ್ ಗುರಿಯನ್ನು ತಪ್ಪಿ ರಸ್ತೆಯಲ್ಲಿ ಸ್ಫೋಟಗೊಂಡು ಒಂದು ಡಜನ್ಗೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶೋಧಕ್ಕಾಗಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಹಿರಿಯ ಪೊಲೀಸ್ ಮತ್ತು ಸಿಆರ್ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾರಾಂತ್ಯದ ರಜಾದಿನದ ಕಾರಣ ಅಂಗಡಿಗಳು ಇತ್ಯಾದಿಗಳು ಮುಚ್ಚಲ್ಪಟ್ಟಿರುವುದರಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಭಾನುವಾರದ ಮಾರುಕಟ್ಟೆ’ (ಬೆಚ್ಚಗಿನ ಬಟ್ಟೆಗಳು, ಕಂಬಳಿಗಳು, ಜಾಕೆಟ್ಗಳು, ಪಾತ್ರೆಗಳು, ಪಾತ್ರೆಗಳು, ಬೂಟುಗಳು ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು) ಇರುವುದರಿಂದ ಗ್ರೆನೇಡ್ ಸ್ಫೋಟಗೊಂಡ ಸ್ಥಳವು ಭಾನುವಾರದಂದು…
ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ದಾರಿಯ ಮಧ್ಯೆಯೇ ಆಂಬುಲೆನ್ಸ್ ಕೆಟ್ಟು ನಿಂತಿರುವುದಾಗಿ ತಿಳಿದು ಬಂದಿದೆ. ಗುರುಪ್ರಸಾದ್ ಅವರು ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿದ್ದಂತ ಬಾಡಿಗೆ ಫ್ಲ್ಯಾಟ್ ನಲ್ಲಿ ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸ್ಥಳಕ್ಕೆ ತೆರಳಿದ್ದಂತ ಪೊಲೀಸರು, ನೇಣಿನ ಕುಣಿಕೆಯಿಂದ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ನಟ ಗುರುಪ್ರಸಾದ್ ಶವವನ್ನು ಸಾಗಿಸುತ್ತಿದ್ದಂತ ಆಂಬುಲೆನ್ಸ್ ಯಶವಂತಪುರ ಬಳಿಯಲ್ಲಿ ದಾರಿ ಮಧ್ಯೆಯೇ ಕೆಟ್ಟು ನಿಂತಿರುವುದಾಗಿ ತಿಳಿದು ಬಂದಿದೆ. ಆಂಬುಲೆನ್ಸ್ ಕೆಟ್ಟು ನಿಂತ ಕಾರಣ, ಮತ್ತೊಂದು ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಗುರುಪ್ರಸಾದ್ ಪಾರ್ಥೀವ ಶರೀರವನ್ನು ಸಾಗಿಸಲಾಗಿದೆ ಎನ್ನಲಾಗುತ್ತಿದೆ. https://kannadanewsnow.com/kannada/good-news-for-passengers-special-train-services-for-chhath-puja/ https://kannadanewsnow.com/kannada/bjp-will-fight-against-land-grabbing-to-appease-muslims-r-ashoka/
ರಾಮನಗರ: ಕನ್ನಡ ಚಿತ್ರರಂಗದ ಹೆಸರಾಂತ ಗುರುಪ್ರಸಾದ್ ಅವರ ಸಾವಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಚುನಾವಣಾ ಪ್ರಚಾರದ ನಡುವೆ ಚನ್ನಪಟ್ಟಣದ ಚೆಕ್ಕರೆ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು; ಗುರು ಪ್ರಸಾದ್ ಒಬ್ಬ ಪ್ರತಿಭಾನ್ವಿತ ನಿರ್ದೇಶಕ. ಅವರು ಉತ್ತಮ ಚಿತ್ರಗಳನ್ನು ನೀಡಿದ ಪ್ರತಿಭಾನ್ವಿತ ನಿರ್ದೇಶಕ. ಅವರ ಸಾವಿನ ವಿಷಯ ಕೇಳಿ ಬಹಳ ನೋವಾಯಿತು. ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿದರು. ಚಿತ್ರರಂಗದಲ್ಲಿ ಲಾಭ ನಷ್ಟ ಸೋಲು ಗೆಲುವು ಸಾಮಾನ್ಯ. ಚಿತ್ರರಂಗದವರು ಸಮಾಜಕ್ಕೆ ಸಂದೇಶ ಕೊಡುವವರು. ಅಂತವರು ಸೋಲಿನಿಂದ ಧೃತಿಗೆಡಬಾರದು. ಅದು ಜನರ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ಯಾವುದೇ ಸಮಸ್ಯೆ ಬಂದರೂ ಧೃತಿಗೆಡಬೇಡಿ, ಮುಂದೆ ಹೆಜ್ಜೆ ಇಡಿ. ನಾವು ನಿಮ್ಮ ಜೊತೆಗಿರುತ್ತೇವೆ. ಎಲ್ಲವನ್ನೂ ಎದುರಿಸಿ ಎಂದು ಕೇಂದ್ರ ಸಚಿವರು ಮನವಿ ಮಾಡಿದರು.
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಛತ್ ಪೂಜೆ ಹಬ್ಬದ ಸಮಯದಲ್ಲಿ ಹೆಚ್ಚುವರಿ ರಶ್ ಅನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಕೆ ಎಸ್ ಆರ್ ಬೆಂಗಳೂರು-ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಏಕಮುಖ ವಿಶೇಷ ರೈಲು ಸಂಚರಿಸಲಿದೆ. ವಿವರಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ. 06259/06260 ಕೆ ಎಸ್ ಆರ್ ಬೆಂಗಳೂರು-ದಾನಾಪುರ-ಎಸ್ ಎಂ ವಿ ಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್) ರೈಲು ಸಂಖ್ಯೆ 06259 ನವೆಂಬರ್ 4, 2024 ರಂದು (ಸೋಮವಾರ) 12:00 PM ಕೆ ಎಸ್ ಆರ್ ಬೆಂಗಳೂರಿನಿಂದ ಹೊರಡುತ್ತದೆ ಮತ್ತು ನವೆಂಬರ್ 6, 2024 ರಂದು 9:00 AM ಕ್ಕೆ ದಾನಪುರವನ್ನು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06260 ದಾನಪುರದಿಂದ ನವೆಂಬರ್ 8, 2024 ರಂದು ರಾತ್ರಿ 8:50 ಕ್ಕೆ ಹೊರಟು ನವೆಂಬರ್ 10, 2024 ರಂದು ಸಂಜೆ 5:40 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ತಲುಪುಲಿದೆ. ರೈಲು…
ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋತಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ದೂರಿದರು. ಗ್ಯಾರಂಟಿಗಳಿಂದಾಗಿ ಮಣ್ಣು ಎತ್ತಿ ಹಾಕಲು ಕೂಡ ಹಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ವಕ್ಫ್ ಬೋರ್ಡ್ *ಮುಸ್ಲಿಮರ ಬೋರ್ಡ್* ಆಗಿ ಬದಲಾಗಿದ್ದು, ದೇವಸ್ಥಾನ, ಸ್ಮಶಾನ, ಶಾಲೆ, ರೈತರ…
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಎರಡನೇ ಮದುವೆ ಆಗಿದ್ದಂತ ನಟ, ನಿರ್ದೇಶಕರ ಗುರುಪ್ರಸಾದ್ ಅವರು ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೇ ತೊಳಲಾಡುತ್ತಿದ್ದರು. ಇದೇ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಪದೇ ಪದೇ ಸಾಲಗಾರರು ಮನೆಗೆ ಬರ್ತಾರೆ ಅಂತ ಮನೆ ಕೂಡ ಮೂರು ಬಾರಿ ಬೆಂಗಳೂರಲ್ಲಿ ಬದಲಾವಣೆ ಮಾಡಿದ್ದರಂತೆ. ಜಯನಗರ, ಕನಕಪುರ, ಅಶೋಕ ನಗರದಲ್ಲಿ ಮನೆ ಮಾಡಿದ್ದರು. ಕೊನೆ ಕೊನೆಗೆ ಒಂಟಿಯಾಗಿ ಕೂಡ ವಾಸವಾಗಿದ್ದರು. ಇನ್ನೂ ಗುರುಪ್ರಸಾದ್ ಈ ಬಗ್ಗೆ ನಟ ಜಗ್ಗೇಶ್ ಅವರ ಜೊತೆಗೆ ಹಂಚಿಕೊಂಡಿದ್ದರು. ಸಮಾಧಾನಿಸಿ ಕಳುಹಿಸಿದ್ದಾಗಿ ಹೇಳಿದ್ದಾರೆ.
ಬೆಂಗಳೂರು: ಬಿಜೆಪಿಯವರು ಗೋಸುಂಬೆಗಿಂತ ಹೆಚ್ಚು ವೇಗವಾಗಿ ಬಣ್ಣ ಬದಲಿಸುವವರು! ರೈತರಿಗೆ ವಕ್ಫ್ ಬೋರ್ಡ್ ಮಂಡಳಿ ನೋಟಿಸ್ ನೀಡಿದ್ದನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿಗರು ತಮ್ಮ ಸರ್ಕಾರದ ಆಡಳಿತಾವಧಿಯಲ್ಲೂ ರೈತರಿಗೆ ನೋಟಿಸ್ ನೀಡಿದ್ದರು. ವಕ್ಫ್ಮಂಡಳಿಗೆ ಬಿಜೆಪಿ ಬೆಂಬಲವಾಗಿ ನಿಂತಿತ್ತು, ರೈತರ ಭೂಮಿ ಕಸಿಯಲು ಕುಮಕ್ಕು ನೀಡಿತ್ತು ಎನ್ನುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತುಗಳೇ ಸಾಕ್ಷಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು “ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು, ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ, ₹2000 ಕೋಟಿ ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು, ನಿಮ್ಮ ಜೊತೆಗೆ ನಾವಿದ್ದೇವೆ“ ಇದು ಅಂದಿನ ಸಿಎಂ ಬೊಮ್ಮಯಿಯವರ ಮಾತು ಎಂದಿದ್ದಾರೆ. ಎರಡು ನಾಲಿಗೆಯ ಬಿಜೆಪಿಯವರಿಗೆ ಒಂದಷ್ಟು ಪ್ರಶ್ನೆಗಳು… – ವಕ್ಫ್ ಮಂಡಳಿ ಇಂದು ನೋಟಿಸ್ ನೀಡುವುದಕ್ಕೆ ಹಿಂದಿನ ಸಿಎಂ ಅವರ ನಿರ್ದೇಶನ ಕಾರಣ…