Author: kannadanewsnow09

ಶ್ರೀನಗರ: ಶ್ರೀನಗರ ಗ್ರೆನೇಡ್ ದಾಳಿಗೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕರಿಗೆ ಬಲವಾದ ಪ್ರತಿಕ್ರಿಯೆ ನೀಡುವಂತೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು “ಹತ್ತಿಕ್ಕಲು” ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. “ಶ್ರೀನಗರದಲ್ಲಿ ನಡೆದ ಗ್ರೆನೇಡ್ ದಾಳಿಯ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಡಿಜಿಪಿ ನಳಿನ್ ಪ್ರಭಾತ್ ಮತ್ತು ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಭಯೋತ್ಪಾದಕರು ಮತ್ತು ಅವರ ಸಹಚರರನ್ನು ಶಿಕ್ಷಿಸಲು ಪರಿಣಾಮಕಾರಿ ಮತ್ತು ಬಲವಾದ ಪ್ರತಿಕ್ರಿಯೆಗಾಗಿ ಅವರು ಭದ್ರತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು” ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ನಾಗರಿಕರ ಮೇಲೆ ದಾಳಿ ಮಾಡಿದವರು ತಮ್ಮ ಕೃತ್ಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದರು. ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಅವರು ಹೇಳಿದರು. “ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಮತ್ತು ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ” ಎಂದು ಅವರು ಹೇಳಿದರು. ಶ್ರೀನಗರದ…

Read More

ನವದೆಹಲಿ: ದೇಶಾದ್ಯಂತ ಸಂತ್ರಸ್ತರಿಂದ 159 ಕೋಟಿ ರೂ.ಗಳ ಹಣವನ್ನು ವಂಚಿಸಲು ಮಾಡಿದ ವಿವಿಧ ಡಿಜಿಟಲ್ ಬಂಧನ ಹಗರಣಗಳನ್ನು ಒಳಗೊಂಡಿದೆ. ವಂಚಕರು ಶೆಲ್ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ನೂರಾರು ಸಿಮ್ ಕಾರ್ಡ್ಗಳನ್ನು ಪಡೆದರು ಮತ್ತು ನಕಲಿ ವಾಟ್ಸಾಪ್ ಖಾತೆಗಳನ್ನು ರಚಿಸಲು ಈ ಸಿಮ್ ಕಾರ್ಡ್ಗಳನ್ನು ಸಹ ಬಳಸಿದರು. ಪತ್ತೆಯಾಗದ ಈ ಸಿಮ್ಗಳು ನೀಡುವ ಅನಾಮಧೇಯತೆಯು ಸ್ಕ್ಯಾಮರ್ಗಳಿಗೆ ತಕ್ಷಣದ ಪತ್ತೆಯ ಕಡಿಮೆ ಅಪಾಯದೊಂದಿಗೆ ಸಂತ್ರಸ್ತರನ್ನು ವಂಚಿಸಲು ಅನುವು ಮಾಡಿಕೊಡುತ್ತದೆ. ಸೈಬರ್ ಅಪರಾಧಗಳಿಂದ ಬರುವ ಆದಾಯವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಲಾಂಡರಿಂಗ್ ಮಾಡಲು ಅನುಕೂಲವಾಗುವಂತೆ ಸ್ಕ್ಯಾಮರ್ಗಳು ತಮಿಳುನಾಡು, ಕರ್ನಾಟಕ ಮತ್ತು ಇತರ ಕೆಲವು ರಾಜ್ಯಗಳಲ್ಲಿ 24 ಶೆಲ್ ಕಂಪನಿಗಳನ್ನು ರಚಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಶೆಲ್ ಕಂಪನಿಗಳನ್ನು ಸಹ-ಕೆಲಸದ ಸ್ಥಳಗಳ ವಿಳಾಸಗಳಲ್ಲಿ ನೋಂದಾಯಿಸಲಾಗಿದೆ (ಅಲ್ಲಿ ನಿಜವಾದ ವ್ಯವಹಾರ ಉಪಸ್ಥಿತಿ ಅಸ್ತಿತ್ವದಲ್ಲಿಲ್ಲ) ಮತ್ತು ಅವರು ವ್ಯವಹಾರವನ್ನು ಪ್ರಾರಂಭಿಸಿದ್ದಕ್ಕೆ ಪುರಾವೆಯಾಗಿ ಕಂಪನಿಗಳ ರಿಜಿಸ್ಟ್ರಾರ್ ಮುಂದೆ ಫೈಲಿಂಗ್ಗಳಲ್ಲಿ ನಕಲಿ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಬಳಸಿದ್ದಾರೆ. ಅಪರಾಧದ ಆದಾಯವನ್ನು…

Read More

ಬೆಂಗಳೂರು: ನಾವು ವಕ್ಫ್ ಆಸ್ತಿ ವಿವಾದದ ನಂತ್ರ ರೈತರಿಗೆ ನೀಡಿದ್ದಂತ ನೋಟಿಸ್ ಹಿಂಪಡೆಯಲು ನಿರ್ಧರಿಸಿದ್ದೇವೆ. ಹೀಗಿದ್ದರೂ ನಾಳೆ ಬಿಜೆಪಿ ವಕ್ಫ್ ವಿವಾದದ ಬಗ್ಗೆ ಪ್ರತಿಭಟನೆ ನಡೆಸುತ್ತಿದೆ. ಇದರಲ್ಲಿ ರೈತರ ಹಿತಾಸಕ್ತಿ ಇಲ್ಲ. ಯಾವ ಸದುದ್ದೇಶವೂ ಇಲ್ಲ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು. ಕಾನೂನು ಬಾಹಿರವಾಗಿ…

Read More

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಅವರು ಇಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಕೂಡ ನೆರವೇರಿಸಲಾಗಿದೆ. ಇದೀಗ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದ್ದು, ಅದರಲ್ಲಿ ಏನಿದೆ ಅಂತ ಮುಂದೆ ಓದಿ. ಕನ್ನಡದ ಎದ್ದೇಳು ಮಂಜುನಾಥ, ಮಠ ಸಿನಿಮಾಗಳನ್ನು ನಿರ್ದೇಶಿಸಿದ್ದಂತ ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಸಾಲದ ಹೊಡೆತಕ್ಕೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮೃತದೇಹ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೇ ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಮಾದನಾಯಕನಹಳ್ಳಿಯ ಅಪಾರ್ಮೆಂಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದಂತ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಅಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು. ಇದೀಗ ವೈದ್ಯರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಅವರ ದೇಹಲು ಉಸಿರುಗಟ್ಟಿ ಮರಣಹೊಂದಿರುವುದಾಗಿ ತಿಳಿಸಿದೆ. https://kannadanewsnow.com/kannada/waqf-row-mp-basavaraj-bommai-demands-sit-or-cbi-probe/ https://kannadanewsnow.com/kannada/bollywood-actor-shah-rukh-khan-announces-quitting-smoking/

Read More

ನವದೆಹಲಿ: ನವೆಂಬರ್ 2 ರಂದು, ಶಾರುಖ್ ಖಾನ್ ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಅವರಿಗೆ ಚಲನಚಿತ್ರೋದ್ಯಮದಾದ್ಯಂತದ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ಅವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಮತ್ತು ಅವರ ಜೀವನದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ವಿಶೇಷ ಎಸ್ಆರ್ಕೆ ದಿನದ ಕಾರ್ಯಕ್ರಮಕ್ಕೆ ಹೋದರು. ಕಾರ್ಯಕ್ರಮವೊಂದರಲ್ಲಿ, ಶಾರುಖ್ ಖಾನ್ ಅವರು ಮಾಡುತ್ತಿರುವ ಸಕಾರಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದರು. ಅವರು ಧೂಮಪಾನವನ್ನು ತ್ಯಜಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪದ್ಮಶ್ರೀ ಪುರಸ್ಕೃತರ ಈ ಹೊಸ ನಿರ್ಧಾರವನ್ನು ಎಸ್ ಆರ್ ಕೆ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಎಸ್ ಆರ್ ಕೆ ಹೇಳಿದ್ದೇನು? “ಮತ್ತೊಂದು ಒಳ್ಳೆಯ ವಿಷಯ, ನಾನು ಇನ್ನು ಮುಂದೆ ಧೂಮಪಾನ ಮಾಡುವುದಿಲ್ಲ, ಹುಡುಗರೇ” ಎಂದು ಶಾರುಖ್ ಖಾನ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಅವರು ಉಸಿರಾಟದ ತೊಂದರೆ ಅನುಭವಿಸುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಅವರು ಚೆನ್ನಾಗಿದ್ದಾರೆ ಮತ್ತು “ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಈ ಪ್ರಕಟಣೆಯು ಅವರ ಅಭಿಮಾನಿಗಳು…

Read More

ಹಾವೇರಿ: ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣ ಎಸ್ ಐಟಿ ಅಥವಾ ಸಿಬಿಐ ತನಿಖೆ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವಕ್ಪ್ ಸಚಿವರಾದ ಜಮೀರದ ಅಹಮದ್ ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ  ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ನಾನು ಅಂದು ಹೇಳಿರುವುದು  ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿರುವಂತೆ ಕಾಂಗ್ರೆಸ್ ನ್…

Read More

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿಲ್ಸನ್ ಗಾರ್ಡನ್ನಿನ ಚಿತಾಗಾರದಲ್ಲಿ ನೆರವೇರಿಸಲಾಯಿತು. ಅಣ್ಣಾವ್ರು ಮುಟ್ಟಿದ ಗಟ್ಟ ತೆಗೆಸದ ನಟ ಗುರುಪ್ರಸಾದ್ ಪಂಚಭೂತಗಳಲ್ಲಿ ಲೀನರಾದರು. ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಅಪಾರ್ಮೆಂಟ್ ನಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಕೆ ಶರಣಾಗಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆಯಾಗಿ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಗುರುಪ್ರಸಾದ್ ಅವರ 2ನೇ ಪತ್ನಿ ಸುಮಿತ್ರಾ ಅವರ ಸಹೋದರರು ಅಂತಿಮ ವಿಧಿ ವಿಧಾನವನ್ನು ನೆರವೇರಿಸಿದರು. ಆ ಬಳಿಕ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಪಾರ್ತೀವ ಶರೀರದ ಅಂತ್ಯಕ್ರಿಯೆ ನೆರವೇರಿತು. ಈ ಮೂಲಕ ಡಾ.ರಾಜ್ ಕುಮಾರ್ ಅವರು ಮುಟ್ಟಿದ ಗಡ್ಡ ತೆಗೆಸದಂತ ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಇನ್ನೂ ನೆನಪು ಮಾತ್ರವೇ ಆಗಿದ್ದಾರೆ. ಈ ಸಂದರ್ಭದಲ್ಲಿ ಗುರುಪ್ರಸಾದ್ ಅವರ 2ನೇ…

Read More

ಆದ್ಯಂ ಕಾಯವಿಶುದ್ಧ್ಯರ್ಥಂ ದ್ವಿತೀಯಂ ಧರ್ಮಸಾಧನಮ್ ತೃತೀಯಂ ಮೋಕ್ಷದಂ ಪ್ರೋಕ್ತಂ ಏವಂ ತೀರ್ಥಂ ತ್ರಿಧಾಪಿಬೇತ್ ॥ ಮೊದಲನೆಯದು ಶರೀರಶುದ್ಧಿಗೆ, ಎರಡನೆಯದು ಧರ್ಮಸಾಧನೆಗೆ, ಮೂರನೆಯದು ಮೋಕ್ಷ ಪಡೆಯಲು ಮೂರು ಬಾರಿ ತೀರ್ಥಪ್ರಾಶನ ಮಾಡಬೇಕು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ,…

Read More

ಬೆಂಗಳೂರು: ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಅ.ನಾ.ಪ್ರಹ್ಲಾದರಾವ್ ಭಾರತದಲ್ಲೇ ಅತಿ ಹೆಚ್ಚು ಪದಬಂಧ ರಚಿಸಿದ ದಾಖಲೆಗೆ ಒಳಗಾಗಿದ್ದು, 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. 1975ರಲ್ಲಿ ಕೋಲಾರದ ಮೊದಲನ ದೈನಿಕ ಕೋಲಾರಪತ್ರಿಕೆ ಆರಂಭಗೊಂಡಾಗ ಪತ್ರಿಕೆಯ ವರದಿಗಾರನಾಗಿ ಪತ್ರಿಕಾರಂಗ ಪ್ರವೇಶಿಸಿದ ಇವರು 1979ರಲ್ಲಿ ಕೋಲಾರದಲ್ಲಿ ಕೆಲವು ಮಿತ್ರರ ಜೊತೆಯಾಗಿ ‘ಹೊನ್ನುಡಿ’ ದಿನಪತ್ರಿಕೆ ಆರಂಭಿಸಿ ಸ್ಥಾಪಕ ಸಂಪಾದಕರಾದರು. ಇದರ ಜೊತೆ ಹಿಂದೂಸ್ಥಾನ್ ಸಮಾಚಾರ್ ವಾರ್ತಾ ಸಂಸ್ಥೆಯ ಜಿಲ್ಲಾ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು. 1983ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿ 30 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಪ್ರಮುಖವಾಗಿ ಮಂಡ್ಯ ಹಾಗೂ ರಾಮನಗರ ಜಿಲ್ಲಾ ವಾರ್ತಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ ಹಾಗೂ…

Read More

ಬೆಂಗಳೂರು: ಶಕ್ತಿ ದೇವತೆ ಹಾಸನಾಂಬೆ ಜಾತ್ರೆ ಈ ಬಾರಿ ಅಭೂತಪೂರ್ವ ದಾಖಲೆಯನ್ನು ಬರೆದಿದೆ. 9 ದಿನಗಳ ಉತ್ಸವದಲ್ಲಿ 19 ಲಕ್ಷ ಭಕ್ತಾದಿಗಳು ದರ್ಶನ ಪಡೆದಿದ್ದಾರೆ. 9 ಕೋಟಿ ರೂಪಾಯಿ ಲಾಡ್ ಮತ್ತು ಟಿಕೆಟ್ ನಿಂದ ಸಂಗ್ರಹವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಹರಿದುಬಂದಿರುವುದು ಶಕ್ತಿ ಯೋಜನೆಯ ಪರಿಣಾಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, 24 ಗಂಟೆ ದೇವಿಯ ದರ್ಶನದ ವ್ಯವಸ್ಥೆ ಅದ್ಬುತವಾಗಿತ್ತು. ಬೀದರ್ ನಿಂದ ಚಾಮರಾಜನಗರದವರೆಗೆ ಬಳ್ಳಾರಿಯಿಂದ ಕೋಲಾರದವರೆಗೆ ಮಾತ್ರವಲ್ಲ ವಿವಿಧ ರಾಜ್ಯಗಳ ಭಕ್ತರು, ಬೇರೆ ದೇಶಗಳ ಭಕ್ತರೂ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದರು. ಉಚಿತ ಬಸ್ ಪ್ರಯಾಣ ಇರುವುದರಿಂದ ಇಷ್ಟು ಭಕ್ತರು ಬರಲು ಸಾಧ್ಯವಾಗಿದೆ. ಇದನ್ನು ನೋಡಿ ಸರ್ಕಾರಕ್ಕೆ ಹೆಮ್ಮೆಯಾಗುತ್ತಿದೆ. ಸಾರ್ಥಕ ಭಾವ ಮೂಡುತ್ತಿದೆ ಎಂದು ಹೇಳಿದರು. ಶಕ್ತಿ ಯೋಜನೆ ಮಹಿಳೆಯರ ಶಕ್ತಿ ವೃದ್ಧಿ ಮಾಡಿರುವುದರ ಜತೆಗೆ ನಮ್ಮ ಧಾರ್ಮಿಕ ಶಕ್ತಿಯನ್ನೂ ಹೆಚ್ಚಿಸಿದೆ ಎಂಬುದು ಸಾಕ್ಷಿ. ಮಾತ್ರವಲ್ಲ ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತ ಅಷ್ಟು ಸಮರ್ಪಕ…

Read More