Author: kannadanewsnow09

ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ರ ಕಲಬುರಗಿ ಘಟಕ-1 ರಿಂದ ಕಲಬುರಗಿ-ಮೈಸೂರು (ಅಮೋಘವರ್ಷ) ಮತ್ತು ಕಲಬುರಗಿ-ಚಿತ್ರದುರ್ಗ ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲುಬುರಗಿ ವಿಭಾಗ-1 ರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ. ಕಲಬುರಗಿ-ಮೈಸೂರು ಬಸ್ ಸಂಚಾರವು ಕಲುಬುರಗಿ ಬಸ್ ನಿಲ್ದಾಣದಿಂದ ಸಂಜೆ 05 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಮತ್ತು ಪಾಂಡವಪುರ ಮಾರ್ಗದ ಮೂಲಕ ಬೆಳಿಗ್ಗೆ 07 ಗಂಟೆಗೆ ಮೈಸೂರು ತಲುಪುತ್ತದೆ. ಪುನಃ ಮೈಸೂರು ಬಸ್ ನಿಲ್ದಾಣದಿಂದ ಸಂಜೆ 05.30 ಗಂಟೆಗೆ ನಿರ್ಗಮಿಸಿ ಬೆಳಿಗ್ಗೆ 07.30 ಗಂಟೆಗೆ ಕಲಬುರಗಿ ಗೆ ತಲುಪುತ್ತದೆ. ಕಲಬುರಗಿ-ಚಿತ್ರದುರ್ಗ ಬಸ್ ಸಂಚಾರವು ಕಲುಬುರಗಿ ಬಸ್ ನಿಲ್ದಾಣದಿಂದ ರಾತ್ರಿ 10.45 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಗಂಗಾವತಿ ಮತ್ತು ಹೊಸಪೇಟೆ ಮಾರ್ಗದ ಮೂಲಕ ಬೆಳಿಗ್ಗೆ 08 ಗಂಟೆಗೆ ಚಿತ್ರದುರ್ಗ…

Read More

ಬೆಂಗಳೂರು: ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ ಎಂದಿದ್ದಾರೆ. ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ…

Read More

ಸಂಕ್ರಾಂತಿ ಪರ್ವಪುಣ್ಯಕಾಲದ ಆಚರಣೆಯನ್ನು ಮಾಡಬೇಕು. ಈ ಸಮಯದಲ್ಲಿ ಸ್ನಾನ,ದಾನ,ಪಿತೃತರ್ಪಣ ಮುಂತಾದ ಕಾರ್ಯವನ್ನು ಮಾಡಬೇಕು. ಸಂಕ್ರಾಂತಿ ಸ್ವರೂಪ : ಯೌವನಾವಸ್ಥೆಯ ಪಕ್ಷಿಜಾತಿಯ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖಮಾಡಿ, ವಾಯವ್ಯಕ್ಕೆ ದೃಷ್ಟಿನೆಟ್ಟು, ಪಶ್ಚಿಮದೆಡೆಗೆ ಹೊರಟಿದ್ದಾಳೆ. ಶ್ವೇತ ಬಣ್ಣದ ಹತ್ತಿ ಬಟ್ಟೆ ತೊಟ್ಟು, ದಂಡ ಆಯುಧ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಅಪೂಪ (ಕರಿದ ಸಿಹಿ) ಉಂಡು, ವಜ್ರ, ಹವಳ, ಕೇದಿಗೆ ಪುಷ್ಪ, ಗೋಪಿಚಂದನದಿಂದ ಅಲಂಕೃತಳಾಗಿ ಕುಳಿತಿದ್ದಾಳೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ,…

Read More

ಬಳ್ಳಾರಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅವರ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿ ಪತ್ರ ಬರೆದು, ಕರ್ನಾಟಕದ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆಯನ್ನು ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಬರೆದ ಪತ್ರದ ಸಾರಾಂಶ ಇಂತಿದೆ. ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆ ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಧೈರ್ಯವಾಗಿ ನಿಂತ ನಾಯಕರಿಂದಲೇ ಈ ನಾಡಿನ ಪ್ರಗತಿಪರ ರಾಜಕೀಯ ಸಂಸ್ಕೃತಿ ಬೆಳೆದಿದೆ. ಆ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ನಾಯಕರಲ್ಲಿ ದಿವಂಗತ ದೇವರಾಜ…

Read More

ಚಿತ್ರದುರ್ಗ: ಜಿಲ್ಲೆಯಲ್ಲಿ ಮರಕ್ಕೆ ಬೊಲೆರೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದಂತ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಬಳಿಯಲ್ಲಿ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರನ್ನು ನಾಗತಿಹಳ್ಳಿಯ ಅರುಣ್(32), ಹನುಮಂತ(32) ಎಂಬುದಾಗಿ ಗುರುತಿಸಲಾಗಿದೆ. ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮದಲ್ಲಿ ಅಡಿಕೆ ಲೋಡ್ ಇಳಿಸಿ ವಾಪಾಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಅಂದನೂರು ಗ್ರಾಮದ ಬಳಿಯಲ್ಲಿ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಬೊಲೆರೋ ವಾಹನದಲ್ಲಿದ್ದಂತ ಆರು ಕಾರ್ಮಿಕರಿಗೆ ಗಾಯವಾಗಿದ್ದರೇ, ಇಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. https://kannadanewsnow.com/kannada/karnataka-janapada-academy-invites-applications-for-fellowship/ https://kannadanewsnow.com/kannada/do-you-know-what-a-woman-desires-from-her-husband/

Read More

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅಕಾಡೆಮಿಯ ವೆಬ್‍ಸೈಟ್‍ನಲ್ಲಿ ತಿಳಿಸಿರುವ ಶೀರ್ಷಿಕೆಗಳನ್ನು ಆಧರಿಸಿ ಕ್ಷೇತ್ರಕಾರ್ಯ ನಡೆಸಿ ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಿಕೊಡಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿಪಡಿಸಿರುವ ಒಂದು ಶೀರ್ಷಿಕೆಯನ್ನು ಆಯ್ಕೆ ಮಾಡಿ 5 ಪುಟಗಳ ಸಾರಲೇಖ ಬರೆದು ಜನವರಿ 23 ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಇವರಿಗೆ ಕಳುಹಿಸಿಕೊಡಬೇಕು. ಆಯ್ಕೆಯಾದ 15 ಅಭ್ಯರ್ಥಿಗಳಿಗೆ ಫೆಲೋಶಿಪ್ ಕಾರ್ಯ ನಡೆಸಲು ಆದೇಶ ನೀಡಲಾಗುವುದು. ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇತರೆ ವಿವರಗಳಿಗಾಗಿ ಅಕಾಡೆಮಿಯ ವೆಬ್‍ಸೈಟ್ https://janapada.karnataka.gov.in ನಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ್ ತಿಳಿಸಿದ್ದಾರೆ. https://kannadanewsnow.com/kannada/high-priority-given-to-education-sector-maddur-mla-k-m-uday/ https://kannadanewsnow.com/kannada/do-you-know-what-a-woman-desires-from-her-husband/

Read More

ನವದೆಹಲಿ: ಬೆಂಗಳೂರಿನ ನಾಯಂಡನಹಳ್ಳೀ ರೇಲ್ವೆ ನಿಲ್ದಾಣದಲ್ಲಿ ಈ ಕೆಳಕಂಡ ನಾಲ್ಕು ರೈಲುಗಳನ್ನು ನಿಲುಗಡೆಗೊಳಿಸಲು ಅನುಮತಿ ನೀಡಿರುವುದಾಗಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ೧) ರೈಲು ಸಂಖ್ಯೆ : 16215/16216 ; ಮೈಸೂರು – ಕೆ.ಎಸ್. ಆರ್. ಸಿಟಿ ೨) ರೈಲು ಸಂಖ್ಯೆ : 17307 /17308 – ಮೈಸೂರು –ಬಾಗಲಕೋಟೆ –ಬಸವ ಎಕ್ಸಪ್ರೆಸ್ ೩) ರೈಲು ಸಂಖ್ಯೆ 16235/16236 : ಟುಟಿಕೋರಿನ್ – ಮೈಸೂರು ಎಕ್ಸಪ್ರೆಸ್ ೪) ರೈಲು ಸಂಖ್ಯೆ 16535/16536 ; ಮೈಸೂರು – ಪಂಡಾರಪುರ ಗೊಲ್ಗುಂಬಜ್ ಎಕ್ಸಪ್ರೆಸ್ ಈ ರೈಲುಗಳನ್ನು ನಾಯಂಡನಹಳ್ಳಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸುವಂತೆ ಸಾರ್ವಜನಿಕರ ಒತ್ತಡವಿತ್ತು. ಹಲವು ಭಾರಿ ಸಾರ್ವಜನಿಕರ ನನ್ನಲ್ಲಿ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಯನ್ನು ಪರಿಗಣಿಸಲು ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈಲು ನಿಲುಗಡೆಗೆ ಕ್ರಮ ಜರುಗಿಸಲಾಗಿತ್ತು. ರೇಲ್ವೆ ಇಲಾಖೆ ಪ್ರಯಾಣಿಕರ ಹಿತದೃಷ್ಟಿಯಿಂದ ಮೇಲ್ಕಂಡ ನಾಲ್ಕು ರೈಲುಗಳಿಗೆ ನಾಯಂಡನಹಳ್ಳಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ…

Read More

ಮಂಡ್ಯ : ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುವುದನ್ನು ವಿದ್ಯಾರ್ಥಿಗಳು ಅರಿತು ಕಠಿಣ ಪರಿಶ್ರಮ ಪಟ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳಿಸಬೇಕೆಂದು ಮದ್ದೂರು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮದ್ದೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ಯೋಜನೆಯಡಿ 70.53 ಲಕ್ಷ ರೂ.ವೆಚ್ಚದ ಕಟ್ಟಡದ ನವೀಕರಣ ಕಾಮಗಾರಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡು ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದರು. ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಸರ್ಕಾರದಿಂದ ನೂತನ ಕೊಠಡಿಗಳ ನಿರ್ಮಾಣ, ಪ್ರಯೋಗಾಲಯ, ಶೌಚಗೃಹ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಜತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶೇಷ ಅನುದಾನ ತಂದು ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು…

Read More

ನವದೆಹಲಿ: ದೆಹಲಿಯಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಮತ್ತು ಭಾರತದ ಟಾಪ್-ಡಿವಿಷನ್ ಲೀಗ್‌ನ ಎಲ್ಲಾ 14 ಕ್ಲಬ್‌ಗಳ ಪ್ರತಿನಿಧಿಗಳೊಂದಿಗೆ ಕ್ರೀಡಾ ಸಚಿವಾಲಯ ನಡೆಸಿದ ಸಭೆಯ ನಂತರ ತಿಂಗಳುಗಳ ಬಿಕ್ಕಟ್ಟಿನ ನಂತರ 2025-26 ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಸೀಸನ್ ಅಂತಿಮವಾಗಿ ಪ್ರಾರಂಭದ ದಿನಾಂಕವನ್ನು ಹೊಂದಿದೆ. ನ್ಯಾಯಾಲಯದ ವಿವಾದದಿಂದಾಗಿ ಇಂಡಿಯನ್ ಸೂಪರ್ ಲೀಗ್ ಬಗ್ಗೆ ಸಾಕಷ್ಟು ಅನಿಶ್ಚಿತತೆ ಇತ್ತು ಆದರೆ ಇಂದು ಸರ್ಕಾರ ಮತ್ತು ಎಐಎಫ್‌ಎಫ್ ಮತ್ತು ಎಲ್ಲಾ 14 ಕ್ಲಬ್‌ಗಳ ಕ್ಲಬ್ ಪ್ರತಿನಿಧಿಗಳು ಲೀಗ್ ಅನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ವರದಿಗಾರರಿಗೆ ಮಾಹಿತಿ ನೀಡಿದರು. ಮೋಹನ್ ಬಗಾನ್, ಪೂರ್ವ ಬಂಗಾಳ, ಮೊಹಮ್ಮಡೆನ್ ಎಫ್‌ಸಿ, ಇಂಟರ್ ಕಾಶಿ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ಚೆನ್ನೈಯಿನ್ ಎಫ್‌ಸಿ, ಎಸ್‌ಸಿ ದೆಹಲಿ, ಬೆಂಗಳೂರು ಎಫ್‌ಸಿ, ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ, ಜಮ್ಶೆಡ್‌ಪುರ ಎಫ್‌ಸಿ, ಒಡಿಶಾ ಎಫ್‌ಸಿ, ಕೇರಳ ಬ್ಲಾಸ್ಟರ್ಸ್ ಮತ್ತು ಎಫ್‌ಸಿ ಗೋವಾ ಎಂಬ…

Read More

ಬೆಂಗಳೂರು: 2025-26ನೇ ಸಾಲಿನ ಎನ್ ಎಂ ಎಂ ಎಸ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಆದೇಶಿಸಿದೆ. ಈ ಕುರಿತಂತೆ ಕೆ ಎಸ್ ಕ್ಯೂ ಎ ಎ ಸಿಯ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದು, 2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್ -ಕಮ್ ಮೆರಿಟ್‌ ವಿದ್ಯಾರ್ಥಿ ವೇತನ (NMMS) ಪರೀಕ್ಷೆಯನ್ನು ದಿನಾಂಕ:18.01.2026 (ಭಾನುವಾರ)ರಂದು ನಡೆಸುವುದಾಗಿ ಉಲ್ಲೇಖ(2)ರ ಈ ಕಛೇರಿ ಜ್ಞಾಪನದಲ್ಲಿ ತಿಳಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ:01.02.2026 (ಭಾನುವಾರ)ರಂದು ನಿಗದಿಪಡಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ. ಹಾಗೂ ಈಗಾಗಲೇ NMMS ಪರೀಕ್ಷೆಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳನ್ನು ಬೇರೆ ಯಾವುದೇ ಪರೀಕ್ಷೆಗಳಿಗೆ ನೀಡದಂತೆ ಕ್ರಮವಹಿಸಲು ತಿಳಿಸಿದ್ದಾರೆ. https://kannadanewsnow.com/kannada/cm-tenure-should-be-discussed-about-quality-rather-than-quantity-mp-basavaraj-bommai/

Read More