Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸದಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(NHM) ಗುತ್ತಿಗೆಯಾಧಾರದ ಮೇಲೆ ನೇಮಕಗೊಳ್ಳುವಂತ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಅದೇ ಈ ಹಿಂದೆ ಇದ್ದಂತ ವೇತನವನ್ನು ಪರಿಷ್ಕರಿಸಿದೆ. ಶೇ.25ರಷ್ಟು ವೇತನವನ್ನು ಹಚ್ಚಳ ಮಾಡಿದೆ. ಇಂದು ಪತ್ರಿಕಾ ಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಹಾಗೂ SNCU & ICU ದಲ್ಲಿ ಕಾರ್ಯ ನಿರ್ವಹಿಸುವ ಸ್ಟಾಫ್ ನರ್ಸ್ ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಸದರಿ ಹುದ್ದೆಗಳು NHM ಯೋಜನೆಯಡಿ ಈ ಕೆಳಕಂಡಂತೆ ಮಂಜೂರಾಗಿರುತ್ತವೆ ಎಂದಿದ್ದಾರೆ. ಸ್ಟಾಫ್ ನರ್ಸ್ – 9041 ಎಬಿಬಿಎಸ್ ವೈದ್ಯರು – 1398 ತಜ್ಞ ವೈದ್ಯರು- 899 NHM ಯೋಜನೆಯಡಿ ಎಂಬಿಬಿಎಸ್ ಹಾಗೂ ತಜ್ಞ ವೈದ್ಯರ ವೇತನ ಕಡಿಮೆಯಿರುವ ಕಾರಣ ಅನೇಕ ವೈದ್ಯರ ಹುದ್ದೆಗಳು ಖಾಲಿ ಉಳಿದಿದ್ದು ನೇಮಕಾತಿ ಪ್ರಕ್ರಿಯೆಗೆ ಕ್ರಮ ವಹಿಸಲಾಗಿದ್ದರೂ ಸಹ ವೇತನ…
ಅಮೇರಿಕ: ಅಮೇರಿಕಾವು ಸಿರಿಯಾ ಮೇಲೆ ನಿರ್ಬಂಧ ವಿಧಿಸಿತ್ತು. ಇಂದು ಸಿರಿಯಾದಲ್ಲಿ ಮಾಜಿ ಭಯೋತ್ಪಾದಕರನ್ನು ಅಮೇರಿಕಾ ಅಧ್ಯಕ್ಷ ಟ್ರಂಪ್ ಭೇಟಿಯಾದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸಿರಿಯಾದಲ್ಲಿ ಮಾಜಿ ಭಯೋತ್ಪಾದಕರನ್ನು ಭೇಟಿಯಾಗಿದ್ದರು. ಮಾಜಿ ಉಗ್ರ ಹಾಗೂ ಸಿರಿಯನ್ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಮಾಜಿ ಉಗ್ರನಾಗಿದ್ದನು. ಸಿರಿಯನ್ ಮಾಜಿ ಅಧ್ಯಕ್ಷ ಉಗ್ರ ಅಹ್ಮದ್ ಅಲ್-ಶರಾ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಸಿರಿಯಾ ಮೇಲೆ ವಿಧಿಸಿದ್ದಂತ ಎಲ್ಲಾ ನಿರ್ಬಂಧ ತೆರವುಗೊಳಿಸಿದ್ದಾರೆ.
ನವದೆಹಲಿ: ಮೇ 13, ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಾರತೀಯ ಸೇನೆಯು ‘ಆಪರೇಷನ್ ಕೆಲ್ಲರ್’ ಮೂಲಕ ಮೂವರು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರನ್ನು ಹೊಡೆದುರುಳಿಸಿದ ನಂತರ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾದ ಭಯೋತ್ಪಾದಕರಿಗೆ ಸೇರಿದ ಬೆನ್ನುಹೊರೆಯ ಚೀಲಗಳು ಮತ್ತು ಕೈಚೀಲಗಳ ಜೊತೆಗೆ ಹಲವಾರು ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವುದನ್ನು ವೀಡಿಯೊ ತೋರಿಸುತ್ತದೆ. https://twitter.com/PTI_News/status/1922541202336817428 ದೇಶದ ಯಶಸ್ವಿ ಮತ್ತು ನಡೆಯುತ್ತಿರುವ ಆಪರೇಷನ್ ಸಿಂದೂರ್ ಮಧ್ಯೆ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆಯು ಮತ್ತೊಂದು ಮಿಲಿಟರಿ ಕಾರ್ಯಾಚರಣೆಯನ್ನು ಆಪರೇಷನ್ ಕೆಲ್ಲರ್ ಎಂದು ಕರೆಯಲಾಗುತ್ತದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ಗುರಿಯಾಗಿಸಲು ಭಾರತೀಯ ಪಡೆಗಳು ಮೇ 7 ರಂದು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದರೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಭಾರತೀಯ ಸೇನೆಯು ಮೇ 13 ರಂದು ಆಪರೇಷನ್ ಕೆಲ್ಲರ್ ಅನ್ನು ಪ್ರಾರಂಭಿಸಿತು. ಆಪರೇಷನ್ ಕೆಲ್ಲರ್ ಅಡಿಯಲ್ಲಿ, ಶೋಪಿಯಾನ್‌ನ ಶೋಕಲ್ ಕೆಲ್ಲರ್…
ಬೆಂಗಳೂರು: ನೀವು ಬಾಡಿಗೆ ಮನೆಯಲ್ಲಿದ್ದರೂ, ಮನೆ ಬದಲಿಸಿದ ನಂತ್ರ, ಹೊಸದಾಗಿ ತೆರಳಿದಂತ ಬಾಡಿಗೆ ಮನೆಗೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಹಾಗಾದ್ರೆ ಅದು ಹೇಗೆ ಅಂತ ಮುಂದೆ ಓದಿ. ಈ ಬಗ್ಗೆ ಬೆಸ್ಕಾಂ ಮಾಹಿತಿ ಹಂಚಿಕೊಂಡಿದ್ದು, ನೀವು ಮನೆ ಬದಲಾಯಿಸಿದಲ್ಲಿ, ಹಳೆಯ ಮನೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಮನೆಯ ಆರ್ ಆರ್ ಸಂಖ್ಯೆಗೂ ಗೃಹ ಜ್ಯೋತಿ ಸೌಲಭ್ಯ ಪಡೆದುಕೊಳ್ಳಿ ಅಂತ ತಿಳಿಸಿದೆ. ಡಿ-ಲಿಂಕ್ ಮಾಡುವುದು ಹೇಗೆ.? ಮನೆ ಬದಲಿಸಿ ಹೊಸ ಮನೆಗೆ ತೆರಳಿದಾಗ ವಿದ್ಯುತ್ ಗ್ರಾಹಕರು https://sevasindhugs.karnataka.gov.in/ ಜಾಲ ತಾಣಕ್ಕೆ ಭೇಟಿ ನೀಡಬೇಕು. ಹಳೆಯ ಮನೆಯ ಆರ್ ಆರ್ ಸಂಖ್ಯೆಯನ್ನು ಇಲ್ಲಿ ಕೇಳುವ ಮಾಹಿತಿ ನೀಡಿ ಡಿ-ಲಿಂಕ್ ಮಾಡಿ. ಆ ಬಳಿಕ ಹೊಸ ಮನೆಯ ಆರ್ ಆರ್ ಲಿಂಕ್ ನಮೂದಿಸಿ ಗೃಹ ಜ್ಯೋತಿಗೆ ಲಿಂಕ್ ಮಾಡಬಹುದಾಗಿದೆ. ಅಂದಹಾಗೇ ರಾಜ್ಯಾಧ್ಯಂತ ಈ ಮಾದರಿಯ 2,83,291 ಡಿ-ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲೇ 2,14,456 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು…
ಚಿತ್ರದುರ್ಗ : ಚಳ್ಳಕೆರೆ ನಗರದ ಪಾವಗಡ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರವೇಶಾತಿಗೆ ಇಎಂ, ಫಿಟ್ಟರ್, ವೆಲ್ಡರ್, ಎಂ ಇ ವಿ, ಸಿಎನ್‍ಸಿ ಹಾಗೂ ಇತರೆ ವೃತ್ತಿಗಳಿಗೆ ಎಸ್ ಎಸ್ ಎಲ್ ಸಿ ಪಾಸಾದಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಯುಕ್ತ ಅರ್ಹ ಅಭ್ಯರ್ಥಿಗಳು ಇದರ ಪಡೆದುಕೊಳ್ಳಲು ಕೋರಿದೆ. ಅರ್ಜಿ ಸಲ್ಲಿಕೆ ಈಗಾಗಲೇ ಮೇ 09 ರಿಂದ ಪ್ರಾರಂಭವಾಗಿದ್ದು, ಮೇ. 28 ರವರೆಗೆ ಆನ್‍ಲೈನ್ www.cite.karnataka.gov.in ಇಲ್ಲಿಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಬಿ.ಎಂ.ಬಸವಣ್ಣ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900398732, 8748884498, 9902372315 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು. ಯುದ್ಧಕ್ಕೆ ಮುನ್ನ ಶಾಂತಿಯ ಮಾತು ಆಡುತ್ತಾರೆ, ಕದನ ವಿರಾಮವಾದಾಗ ಯುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಅಧಿವೇಶನ ನಡೆಸಬೇಕೆಂದು ಕೇಳುತ್ತಾರೆ. ಆದರೆ ಇದು ಅಧಿವೇಶನ ನಡೆಸುವ ಸಮಯವಲ್ಲ. ನಮ್ಮ ಯೋಧರು ಸಾಕ್ಷಿಗಳನ್ನು ನೀಡಿದ್ದಾರೆ. ಇನ್ನು ಮುಂದೆ ಯಾರೂ ಸಾಕ್ಷಿ ಕೇಳಬಾರದು. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ, ಸಿಂದೂ ನದಿ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿ ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನವರು ರಾಜಕಾರಣ ಮಾಡುವುದು ಬಿಟ್ಟು ಯೋಧರಿಗೆ ಬೆಂಬಲ ನೀಡಬೇಕು. ಈ ಹಿಂದೆ ಪಿಒಕೆ ಬಿಟ್ಟುಕೊಟ್ಟಿದ್ದು, ಮುಂಬೈ ದಾಳಿ ಮೊದಲಾದವುಗಳ ಬಗ್ಗೆ ನಾವೇನೂ ಪ್ರಶ್ನೆ ಮಾಡುತ್ತಿಲ್ಲ. ಈ ಘಟನೆಗೆ ಇಂದಿರಾಗಾಂಧಿಯವರ…
ಬೆಂಗಳೂರು: ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದನ್ನು ಈಗಾಗಲೇ ಸಾಬೀತುಪಡಿಸಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯÀ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತವು ಬಹುಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಇನ್ನೊಂದೆಡೆ ಪಾಕಿಸ್ತಾನವು, ತಮಗೂ ಭಯೋತ್ಪಾದಕರಿಗೂ ಸಂಬಂಧ ಇಲ್ಲ; ಅವರು ನಮ್ಮ ನೆಲದಲ್ಲಿ ಇಲ್ಲವೆಂದು ಅನೇಕ ಬಾರಿ ಹೇಳಿತ್ತು. ಆದರೆ, ಈಗ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದೆ. ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದಾಗ ಯಾವ ಉಗ್ರರು ಸತ್ತು ಬಿದ್ದರೋ ಅವರನ್ನು ಅಲ್ಲಿನ ಸರಕಾರ ಮತ್ತು ಮಿಲಿಟರಿ ಎರಡೂ ಸೇರಿ ಗೌರವ ಕೊಡುವ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡಿದ್ದು ಇಡೀ ಪ್ರಪಂಚ ನೋಡಿದೆ ಎಂದು ವಿವರಿಸಿದರು. ಇದಾದ ಬಳಿಕ ಪಾಕಿಸ್ತಾನ ನಮ್ಮ ಮೇಲೆ ಯುದ್ಧ ಮಾಡಲು ಪ್ರಾರಂಭಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೈನಿಕರು ಕೂಡ ಅವರ ಮೇಲೆ ಯುದ್ಧ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರು ಬಿಟ್ಟಿದ್ದ ಕ್ಷಿಪಣಿಗಳನ್ನು ನಮ್ಮ…
ನವದೆಹಲಿ: ಪಾಕ್ ಹೈಕಮಿಷನ್ ಅಧಿಕಾರಿಗೆ ‘ಪರ್ಸನಾ ನಾನ್ ಗ್ರಾಟಾ’ ಘೋಷಣೆ ಮಾಡಿದೆ. ಅಲ್ಲದೇ 24 ಗಂಟೆಗಳಲ್ಲಿ ಭಾರತ ತೊರೆಯಲು ಸೂಚನೆ ನೀಡಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರು ಭಾರತದಲ್ಲಿನ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಅವರನ್ನು ಗ್ರಾನಾ ನಾನ್ ಗ್ರಾಟಾ ಎಂದು ಘೋಷಿಸಿದೆ. ಆ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಕೇಳಲಾಗಿದೆ. ಈ ಕುರಿತು ಇಂದು ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ ಅಫೇರ್ಸ್‌ಗೆ ವಿದೇಶಾಂಗ ಸಚಿವಾಲಯವು ಆದೇಶ ಹೊರಡಿಸಲಾಗಿದೆ. https://twitter.com/ANI/status/1922305432632328302 https://kannadanewsnow.com/kannada/india-has-launched-the-e-passport-service-with-a-chip/
ನವದೆಹಲಿ: ಭಾರತವು ತನ್ನ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಇ-ಪಾಸ್‌ಪೋರ್ಟ್ ಎಂಬ ಹೈಟೆಕ್ ಆವೃತ್ತಿಯೊಂದಿಗೆ ನವೀಕರಿಸಲು ಪ್ರಾರಂಭಿಸಿದೆ. ಗುರುತನ್ನು ಸುಧಾರಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಸರ್ಕಾರ ಈ ಅಪ್‌ಗ್ರೇಡ್ ಅನ್ನು ಪ್ರಾರಂಭಿಸಿದೆ. ಹೊಸ ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಕಾಗದದ ಪಾಸ್‌ಪೋರ್ಟ್‌ಗಳನ್ನು ಆಧುನಿಕ ಎಲೆಕ್ಟ್ರಾನಿಕ್ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತವೆ. ವಿದೇಶಾಂಗ ಸಚಿವಾಲಯವು ಏಪ್ರಿಲ್ 1, 2024 ರಂದು ಪ್ರಾರಂಭವಾದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ 2.0 ಅಡಿಯಲ್ಲಿ ಈ ಪಾಸ್‌ಪೋರ್ಟ್‌ಗಳನ್ನು ನೀಡಲು ಪ್ರಾರಂಭಿಸಿತು. ಪ್ರಸ್ತುತ, ಕೆಲವೇ ನಗರಗಳು ಇ-ಪಾಸ್‌ಪೋರ್ಟ್‌ಗಳನ್ನು ನೀಡುತ್ತವೆ. ಆದರೆ ಸರ್ಕಾರವು ಮುಂಬರುವ ದಿನಗಳಲ್ಲಿ ಭಾರತದಾದ್ಯಂತ ಅವುಗಳನ್ನು ಲಭ್ಯವಾಗುವಂತೆ ಮಾಡಲು ಯೋಜಿಸಿದೆ. ಇ-ಪಾಸ್‌ಪೋರ್ಟ್‌ಗಳು ಎಂದರೇನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಭಾರತದ ಇ-ಪಾಸ್‌ಪೋರ್ಟ್‌ಗಳು ವಿಶೇಷ ಪದರದೊಳಗೆ RFID ಚಿಪ್ ಹೊಂದಿವೆ. ಈ ಚಿಪ್ ಪಾಸ್‌ಪೋರ್ಟ್ ಹೊಂದಿರುವವರ ಹೆಸರು, ಜನ್ಮ ದಿನಾಂಕ, ಛಾಯಾಚಿತ್ರ, ಬೆರಳಚ್ಚುಗಳು ಮತ್ತು ಪಾಸ್‌ಪೋರ್ಟ್ ಸಂಖ್ಯೆಯಂತಹ ಪ್ರಮುಖ ಬಯೋಮೆಟ್ರಿಕ್ ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತದೆ. ಈ ಡೇಟಾವನ್ನು ರಕ್ಷಿಸಲು, ಪಾಸ್‌ಪೋರ್ಟ್‌ಗಳು ಬಲವಾದ ಎನ್‌ಕ್ರಿಪ್ಶನ್ ಮತ್ತು ಮೂಲಭೂತ ಪ್ರವೇಶ…
ನವದೆಹಲಿ: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಮಂಗಳವಾರ ತಮ್ಮ ಉಸ್ತುವಾರಿಯ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಪರಿಶೀಲನಾ ಸಭೆಗಳನ್ನು ನಡೆಸಿದರು. ಎರಡೂ ಸಚಿವಾಲಯಗಳಲ್ಲಿ ನಡೆಯುತ್ತಿರುವ ಅಭಿವೃಧ್ಧಿ ಕಾರ್ಯಕ್ರಮಗಳು ಹಾಗೂ ಈಗಾಗಲೇ ಅನುಷ್ಠಾನಕ್ಕೆ ತರಲಾಗಿರುವ ಮಹತ್ವದ ಕಾರ್ಯಕ್ರಮಗಳ ಬಗ್ಗೆ ಸಚಿವರು ಕೂಲಂಕಶವಾಗಿ ಚರ್ಚೆ ನಡೆಸಿದರು. ಬೃಹತ್ ಕೈಗಾರಿಕೆ ಸಚಿವಾಲಯ: ಬೃಹತ್ ಕೈಗಾರಿಕೆ ಸಚಿವಾಲಯದ ಸಭೆಯಲ್ಲಿ ಕೇಂದ್ರ ಸಚಿವರು ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತಾದ ಪಿಎಂ ಇ ಡ್ರೈವ್ ಹಾಗೂ ಉತ್ಪಾದನಾ ಸಂಪರ್ಕ ಸೌಲಭ್ಯ (PLI) ಕಾರ್ಯಕ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೆಲ ನಿರ್ದಿಷ್ಟ ಸೂಚನೆಗಳನ್ನು ನೀಡಿದರು. ರಸ್ತೆ ಸಾರಿಗೆ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಬೇಕಾಗಿದ್ದು, ಆ ದಿಸೆಯಲ್ಲಿ ಪ್ರಧಾನಿಗಳು ನಿಗದಿ ಮಾಡಿರುವ ಗುರಿಗಳನ್ನು ಮುಟ್ಟುವ ಬಗ್ಗೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು. ಹೆಚ್ಚೆಚ್ಚು ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹಗಳ ಬಳಕೆಯನ್ನು ಉತ್ತೇಜಿಸುವುದು, ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಇನ್ನಿತರೆ…