Subscribe to Updates
Get the latest creative news from FooBar about art, design and business.
Author: kannadanewsnow09
ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಒಂದು ವಸ್ತುವನ್ನು ತೆಗೆದುಕೊಂಡು ಹೋದರೆ, ನೀವು ಹಿಂದಿರುಗುವಾಗ ಕುಲದೇವರು ನಿಮ್ಮೊಂದಿಗೆ ಮನೆಗೆ ಬರುತ್ತಾರೆ. ನಮಗೆಲ್ಲರಿಗೂ ಖಂಡಿತವಾಗಿಯೂ ಕುಲದೇವತೆ ಇರುತ್ತದೆ. ಬಹುಶಃ ಕೆಲವರಿಗೆ ಗೊತ್ತಿಲ್ಲ ಆದರೆ ಕುಲದೇವತೆ ಇಲ್ಲ. ಆ ಕುಲದೈವವನ್ನು ಪೂಜಿಸಿದರೆ ಆ ದೇವತೆ ನಮ್ಮೊಂದಿಗಿರಲು ಕೆಲವು ಮಾರ್ಗಗಳಿವೆ. ಈಗ ನಾವು ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ಏನೆಂದು ತಿಳಿಯಲಿದ್ದೇವೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಕುಲದೇವತೆ ಇದೆ ಎನ್ನುವುದನ್ನು ಮರೆತು ಅನ್ಯದೇವತೆಗಳನ್ನು ಪೂಜಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಯಾರು ಯಾವುದೇ ದೇವರನ್ನು ಪೂಜಿಸಬೇಕೆಂದು ಕೇಳಿಕೊಂಡರೂ ಅದೆಲ್ಲವನ್ನೂ ಪ್ರಾಮುಖ್ಯತೆಯಿಂದ ಪೂಜಿಸತೊಡಗಿದರು. ಹೀಗೆ ಮಾಡುವುದು ತಪ್ಪೇ ಎಂದು ಕೇಳಿದರೆ ಅದು ತಪ್ಪಾಗುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ…
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026-27ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ MBA, MCA, M.E, M.Tech ಮತ್ತು M.Arch ಕೋರ್ಸ್‌ಗಳ ಮೊದಲ ವರ್ಷದ ಪ್ರವೇಶಕ್ಕಾಗಿ ನಡೆಸಲಾಗುವ ‘PGCET-2026’ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಬಿಡುಗಡೆ ಮಾಡಿದೆ. ಪರೀಕ್ಷಾ ವೇಳಾಪಟ್ಟಿ: ಪರೀಕ್ಷೆಗಳು ಮೇ 23 ಮತ್ತು ಮೇ 24 ರಂದು ನಡೆಯಲಿದ್ದು, ವಿವರಗಳು ಹೀಗಿವೆ: ಮೇ 23, 2026 (ಶನಿವಾರ): ಮಧ್ಯಾಹ್ನ 2.30 ರಿಂದ 4.30 ರವರೆಗೆ M.E / M.Tech ಪರೀಕ್ಷೆ ನಡೆಯಲಿದೆ. ಮೇ 24, 2026 (ಭಾನುವಾರ): ಬೆಳಗ್ಗೆ 10.30 ರಿಂದ 12.30 ರವರೆಗೆ MCA ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ MBA ಪರೀಕ್ಷೆ ನಡೆಯಲಿದೆ. (ಗಮನಿಸಿ: M.E/M.Tech ಪರೀಕ್ಷೆಗೆ ಮಾತ್ರ ನಾನ್-ಪ್ರೋಗ್ರಾಮೆಬಲ್ ಕ್ಯಾಲ್ಕುಲೇಟರ್ ಬಳಸಲು ಅವಕಾಶವಿದೆ). ಪ್ರಮುಖ ದಿನಾಂಕಗಳು: ಆನ್‌ಲೈನ್ ನೋಂದಣಿ ಆರಂಭ: ಮಾರ್ಚ್ 23, 2026 (ಬೆಳಗ್ಗೆ 11.00 ರಿಂದ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 08, 2026…
ಚಿತ್ರದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಪತ್ನಿ, ಮಗಳು ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಪನಟ್ಟಿಯಲ್ಲಿ ಗುರುವಾರ ನಡೆದಿದೆ. ಘಟನೆಯ ವಿವರ: ಆರೋಪಿ ಮೊಹಮ್ಮದ್ ಸುಹೇಲ್ (44) ಎಂಬಾತ ತನ್ನಿಂದ ದೂರವಿದ್ದ ಪತ್ನಿ ತಶೀನ್ ಬಾನು ಮೇಲೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ. ಸುಹೇಲ್ ಮತ್ತು ತಶೀನ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಸುಹೇಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಪತ್ನಿ ಕಳೆದ ಎಂಟು ತಿಂಗಳಿನಿಂದ ಆತನಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗೆ ಹಬ್ಬದ ಪ್ರಯುಕ್ತ ತಶೀನ್ ಅವರು ಚಿತ್ರದುರ್ಗದ ಮಾಳಪನಟ್ಟಿಯಲ್ಲಿರುವ ತಮ್ಮ ಸಹೋದರಿಯ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಸುಹೇಲ್, ಏಕಾಏಕಿ ಮನೆಗೆ ನುಗ್ಗಿ ಪತ್ನಿ ಮತ್ತು ಮಗಳ ಮೇಲೆ ಆಸಿಡ್ ಎರಚಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಮಚ್ಚಿನಿಂದಲೂ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ. ಪೊಲೀಸ್ ಭೇಟಿ ಮತ್ತು…
ಮೈಸೂರು: ಪ್ರಯಾಣಿಕರ ಸೌಲಭ್ಯಕ್ಕಾಗಿ ಹಾಗೂ ಡೊಡ್ಡಜಾತ್ರೆ / ಪಂಚ ಮಹಾರಥೋತ್ಸವದ ಸಲುವಾಗಿ ಹೆಚ್ಚುವರಿ ಜನ ದಟ್ಟಣೆಯನ್ನು ನಿವಾರಿಸಲು, ನೈರುತ್ಯ ರೈಲ್ವೆ ಮೈಸೂರು ಮತ್ತು ನಂಜನಗೂಡು ಟೌನ್ ನಡುವೆ 30 ಮಾರ್ಚ್ 2026 ರಿಂದ 03 ಏಪ್ರಿಲ್ 2026ರವರೆಗೆ, ಪ್ರತಿ ದಿಕ್ಕಿನಲ್ಲಿ 05 ಟ್ರಿಪ್ ಗಳ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲುಗಳ ವಿವರಗಳು ಕೆಳಗಿನಂತಿವೆ: ರೈಲು ಸಂಖ್ಯೆ 06225 ಮೈಸೂರು – ನಂಜನಗೂಡು ಟೌನ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಮೈಸೂರಿನಿಂದ 13:00 ಗಂಟೆಗೆ ಹೊರಟು, ನಂಜನಗೂಡು ಟೌನ್ ಗೆ 14:00 ಗಂಟೆಗೆ ತಲುಪಲಿದೆ, ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು ಚಾಮರಾಜಪುರಂ 13:07/13:08 ಗಂಟೆ, ಅಶೋಕಪುರಂ 13:15/13:16 ಗಂಟೆ, ಕಡಕೊಳ 13:29/13:30 ಗಂಟೆ, ತಾಂಡವಪುರ 13:35/13:36 ಗಂಟೆ, ಸುಜಾತಪುರಂ 13:41/13:42 ಗಂಟೆಗೆ ಬರಲಿದೆ. ರೈಲು ಸಂಖ್ಯೆ 06226 ನಂಜನಗೂಡು ಟೌನ್ – ಮೈಸೂರು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ನಂಜನಗೂಡು ಟೌನ್ ನಿಂದ 15:10 ಗಂಟೆಗೆ ಹೊರಟು, ಮೈಸೂರಿಗೆ 16:10 ಗಂಟೆಗೆ…
ಬೆಂಗಳೂರು: ಸಿಲಿಕಾನ್ ಸಿಟಿಯ ಜೀವನಾಡಿ ‘ನಮ್ಮ ಮೆಟ್ರೋ’ (Namma Metro) ತನ್ನ 15 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದೆ. ಯುಗಾದಿ ಹಬ್ಬದ ಮುನ್ನಾದಿನವಾದ ಮಾರ್ಚ್ 18 ರಂದು ಬರೋಬ್ಬರಿ 10.73 ಲಕ್ಷ ಜನರು ಮೆಟ್ರೋದಲ್ಲಿ ಸಂಚರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ದಾಖಲೆಯ ಮುಖ್ಯಾಂಶಗಳು: ಹಬ್ಬದ ರಜೆ ಪ್ರಭಾವ: ಯುಗಾದಿ ಹಬ್ಬ ಹಾಗೂ ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಮೆಟ್ರೋದಲ್ಲಿ ಈ ಭಾರಿ ಜನದಟ್ಟಣೆ ಕಂಡುಬಂದಿದೆ. ಇತಿಹಾಸದಲ್ಲಿ ಮೊದಲು: ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಬೆಳೆಸಿದ್ದಾರೆ. ಡಿಜಿಟಲ್ ಪಾವತಿ: ಒಟ್ಟು ಪ್ರಯಾಣಿಕರ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರು ಸ್ಮಾರ್ಟ್‌ಕಾರ್ಡ್ (Smart Card) ಬಳಸುವ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿಯಿಂದ ಮುಕ್ತಿ ಪಡೆದಿದ್ದಾರೆ. ಹಬ್ಬದ ಸಂದರ್ಭದಲ್ಲಿ ರಸ್ತೆ ಸಂಚಾರ ದಟ್ಟಣೆಯನ್ನು ತಪ್ಪಿಸಲು ಜನರು…
ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ನಾಗರಿಕರಿಗೆ ಪಂಚಾಯತ್ ರಾಜ್ ಇಲಾಖೆಯು ಅತ್ಯಂತ ಮಹತ್ವದ ಸೂಚನೆಯೊಂದನ್ನು ನೀಡಿದೆ. 2025-26ನೇ ಸಾಲಿನ ಮನೆ, ಕಟ್ಟಡ, ನಿವೇಶನ ಹಾಗೂ ನೀರಿನ ತೆರಿಗೆಯನ್ನು ಪಾವತಿಸಲು 2026ರ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ಸಾರ್ವಜನಿಕರು ದಂಡವನ್ನು ತೆರಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ. ಸಕಾಲದಲ್ಲಿ ತೆರಿಗೆ ಪಾವತಿ ಕಡ್ಡಾಯ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2025ರ ಅನ್ವಯ, ಪ್ರತಿ ಹಣಕಾಸು ವರ್ಷದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾರ್ಚ್ 31ರ ಗಡುವು ಮೀರಿದಲ್ಲಿ, ಬಾಕಿ ಇರುವ ಒಟ್ಟು ಮೊತ್ತದ ಮೇಲೆ ಶೇಕಡಾ 5% ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಅನಗತ್ಯ ಆರ್ಥಿಕ ನಷ್ಟವನ್ನು ತಪ್ಪಿಸಲು ನಾಗರಿಕರು ತಕ್ಷಣವೇ ತೆರಿಗೆ ಪಾವತಿಸುವಂತೆ ಕೋರಲಾಗಿದೆ. ನಿಮ್ಮ ತೆರಿಗೆ ಹಣ ಹಳ್ಳಿಯ ಅಭಿವೃದ್ಧಿಗೆ ಪೂರಕ ಗ್ರಾಮ ಪಂಚಾಯತಿಗಳಿಗೆ ಆಸ್ತಿ ತೆರಿಗೆ ಪಾವತಿಸುವುದು ಕೇವಲ ಒಂದು ಶಾಸನಬದ್ಧ ಕರ್ತವ್ಯ ಮಾತ್ರವಲ್ಲ, ಇದು ಹಳ್ಳಿಯ…
ಬೆಂಗಳೂರು: ಸಿಲಿಕಾನ್ ಸಿಟಿಯ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ವಾಹನ ಟೋಯಿಂಗ್ ಮಾಡುವುದಾಗಿ ತಿಳಿಸಿದ್ದಾರೆ. ಬೆಂಗಳೂರು ನಗರದ ಶಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುದ್ದಿಯ ಮುಖ್ಯಾಂಶಗಳು: ಹೊಸ ಫುಟ್‌ಪಾತ್ ಪಾಲಿಸಿ: ನಗರದ ಫುಟ್‌ಪಾತ್‌ಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಶೀಘ್ರದಲ್ಲೇ ಹೊಸ ಪಾಲಿಸಿಯನ್ನು ಜಾರಿಗೆ ತರಲಾಗುವುದು. ಫುಟ್‌ಪಾತ್‌ಗಳ ಮೇಲೆ ವ್ಯಾಪಾರ ಮಾಡುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಲು ನಿರ್ದಿಷ್ಟ ‘ವೆಂಡಿಂಗ್ ಝೋನ್’ಗಳನ್ನು ಗುರುತಿಸಲಾಗುವುದು. ಗುರುತಿನ ಚೀಟಿ ಇರುವ ಅಧಿಕೃತ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಅನಧಿಕೃತ ಫ್ಲೆಕ್ಸ್ ಹಾವಳಿಗೆ ದಂಡ: ನಗರದ ಸೌಂದರ್ಯವನ್ನು ಹಾಳು ಮಾಡುವ…
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಗಲಾಟೆ ನಡೆಸಿ ಸಹ-ಪ್ರಯಾಣಿಕರಿಗೆ ತೊಂದರೆ ನೀಡಿದ ಯುವಕರ ಗುಂಪನ್ನು ಬಿ.ಎಂ.ಆರ್.ಸಿ.ಎಲ್ (BMRCL) ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಘಟನೆಯ ವಿವರ: ಮಾರ್ಚ್ 15, 2026ರ ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯುವಕರ ಗುಂಪು, ರಾತ್ರಿ ಸುಮಾರು 10.57 ಗಂಟೆಗೆ ಮಾದಾವರ ನಿಲ್ದಾಣದಲ್ಲಿ ಮೆಟ್ರೋ ರೈಲು ಹತ್ತಿದ್ದರು. ರೈಲಿನಲ್ಲಿ ಈ ಯುವಕರು ಜೋರಾಗಿ ಗಲಾಟೆ ಮಾಡುತ್ತಾ ಅಶಿಸ್ತಿನಿಂದ ವರ್ತಿಸಿದ್ದಾರೆ. ಇದರಿಂದಾಗಿ ಸಹ-ಪ್ರಯಾಣಿಕರಿಗೆ ಭಾರೀ ಅನಾನುಕೂಲ ಉಂಟಾಗಿದ್ದಲ್ಲದೆ, ರೈಲು ಸಂಚಾರದಲ್ಲೂ ಸ್ವಲ್ಪ ಸಮಯ ವಿಳಂಬವಾಯಿತು. ತಕ್ಷಣದ ಕ್ರಮ: ಗಲಾಟೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬಿ.ಎಂ.ಆರ್.ಸಿ.ಎಲ್ ಭದ್ರತಾ ಸಿಬ್ಬಂದಿ, ತಕ್ಷಣವೇ ಸಂಬಂಧಪಟ್ಟ ವ್ಯಕ್ತಿಗಳನ್ನು ರೈಲಿನಿಂದ ಕೆಳಗಿಳಿಸಿದ್ದಾರೆ. ನಂತರ ಅವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾನೂನು ಜಾರಿಕಾ ಸಂಸ್ಥೆಗೆ (ಪೊಲೀಸರಿಗೆ) ಹಸ್ತಾಂತರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಎಂ.ಆರ್.ಸಿ.ಎಲ್, ತನ್ನ ಗೌರವಾನ್ವಿತ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರಯಾಣದ…
ಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುವ ಗೋವಿಂದ ಬಳ್ಳಾರಿ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಕುತೂಹಲ ಮೂಡಿಸಿದ ನಾಮಪತ್ರ ಸಲ್ಲಿಕೆ ಸಾಮಾನ್ಯವಾಗಿ ಪಕ್ಷಗಳು ಬಿ-ಫಾರಂ ನೀಡಿ ಅಭ್ಯರ್ಥಿಯನ್ನು ಘೋಷಿಸಿದ ನಂತರ ನಾಮಪತ್ರ ಸಲ್ಲಿಕೆ ಮಾಡುವುದು ವಾಡಿಕೆ. ಆದರೆ, ಗೋವಿಂದ ಬಳ್ಳಾರಿ ಅವರು ಪಕ್ಷದ ಹೈಕಮಾಂಡ್‌ನಿಂದ ಅಧಿಕೃತ ಟಿಕೆಟ್ ಘೋಷಣೆಯಾಗುವ ಮೊದಲೇ ನಾಮಪತ್ರ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರಳವಾಗಿ ಸಲ್ಲಿಕೆಯಾದ ನಾಮಪತ್ರ ಬಾಗಲಕೋಟೆಯ ಎಸಿ (ಉಪವಿಭಾಗಾಧಿಕಾರಿ) ಕಚೇರಿಗೆ ಭೇಟಿ ನೀಡಿದ ಅವರು, ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಯಾವುದೇ ಅಬ್ಬರದ ಮೆರವಣಿಗೆಯಿಲ್ಲದೆ, ಕೇವಲ ತಮ್ಮ ಆಪ್ತ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಪಕ್ಷವು ತನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಲಿದೆ ಎಂಬ ದೃಢ ನಂಬಿಕೆಯಿಂದ ಅವರು ಈ ಹೆಜ್ಜೆ ಇಟ್ಟಿದ್ದಾರೆ…
ಬೆಂಗಳೂರು: ಸಿಲಿಕಾನ್ ಸಿಟಿಯ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರು ನಗರದ ಶಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುದ್ದಿಯ ಮುಖ್ಯಾಂಶಗಳು: ಹೊಸ ಫುಟ್‌ಪಾತ್ ಪಾಲಿಸಿ: ನಗರದ ಫುಟ್‌ಪಾತ್‌ಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಶೀಘ್ರದಲ್ಲೇ ಹೊಸ ಪಾಲಿಸಿಯನ್ನು ಜಾರಿಗೆ ತರಲಾಗುವುದು. ಫುಟ್‌ಪಾತ್‌ಗಳ ಮೇಲೆ ವ್ಯಾಪಾರ ಮಾಡುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಲು ನಿರ್ದಿಷ್ಟ ‘ವೆಂಡಿಂಗ್ ಝೋನ್’ಗಳನ್ನು ಗುರುತಿಸಲಾಗುವುದು. ಗುರುತಿನ ಚೀಟಿ ಇರುವ ಅಧಿಕೃತ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಅನಧಿಕೃತ ಫ್ಲೆಕ್ಸ್ ಹಾವಳಿಗೆ ದಂಡ: ನಗರದ ಸೌಂದರ್ಯವನ್ನು ಹಾಳು ಮಾಡುವ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಲಿದ್ದಾರೆ. ಇಂತಹ ಪ್ರತಿ ಫ್ಲೆಕ್ಸ್‌ಗೆ ₹50,000 ದಿಂದ…














