Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಎನ್ನುವಂತೆ 2024ರ ದ್ವತೀಯ ಅಧಿವೇಶನ ಇಲಾಖಾ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದು, 2024ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 30-12-2024ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-01-2025 ಆಗಿರುತ್ತದೆ. ಶುಲ್ಕ ಪಾವತಿಸಲು ಕೊನೆಯ ದಿನ 31-01-2025 ಆಗಿರುತ್ತದೆ ಎಂದಿದೆ. ಇಲಾಖಾ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ ಸೈಟ್ www.kpsc.kar.nic.in ಗೆ ಭೇಟಿ ನೀಡಿ ಸಲ್ಲಿಸುವಂತೆ ಸೂಚಿಸಿದೆ. https://kannadanewsnow.com/kannada/good-news-for-contractual-employees-from-state-government-consolidated-pay-revision-as-per-7th-pay-commission/ https://kannadanewsnow.com/kannada/breaking-govt-school-headmistress-brutally-murdered-in-gadag/

Read More

ನರಸಿಂಹ ದೇವರನ್ನು ಧೈರ್ಯ, ಸಾಹಸದ ಪ್ರತೀಕವಾಗಿ ನಾವು ಪೂಜಿಸುತ್ತೇವೆ. ಶತ್ರುಭಯವಿದ್ದರೆ, ಅಧೈರ್ಯವಿದ್ದರೆ ನರಸಿಂಹನ ಮಂತ್ರ ಜಪಿಸುವುದರಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ನರಸಿಂಹ ಕವಚ ಮಂತ್ರವನ್ನೂ ಅದೇ ಕಾರಣಕ್ಕೆ ಪಠಿಸಲಾಗುತ್ತದೆ. ನರಸಿಂಹ ಕವಚನ್ನು ಓದುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಧೈರ್ಯ, ಆರೋಗ್ಯ, ಆಧ್ಯಾತ್ಮಿಕ ಭಾವ ನಿಮ್ಮದಾಗುತ್ತದೆ. ನರಸಿಂಹ ಕವಚ ಮಂತ್ರ ಇಲ್ಲಿದೆ. ತಪ್ಪದೇ ಓದಿ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ,…

Read More

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಕೂಡ ಸರ್ಕಾರಿ ನೌಕರರರೇ. ಸರ್ಕಾರಿ ನೌಕರರ ಸಂಘದ ಅಡಿಯಲ್ಲೇ ಕಾರ್ಯ ನಿರ್ವಹಿಸುವವರು. ಇಂದು ಆರ್ ಡಿ ಪಿಆರ್ ಇಲಾಖೆಯ ಕ್ರೀಡಾ ಹಬ್ಬ ನಡೆಯುತ್ತಿದೆ. ಆದರೇ ಈ ಕ್ರೀಡಾ ಹಬ್ಬಕ್ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಆಹ್ವಾನಿಸದೇ ಇರುವುದಾಗಿ ತಿಳಿದು ಬಂದಿದೆ. ಇಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ಸಾಗರ ಶಾಖೆಯ ವತಿಯಿಂದ ಆರ್ ಡಿ ಪಿ ಆರ್ ಕ್ರೀಡಾ ಹಬ್ಬ2024-25 ಆಯೋಜಿಸಲಾಗಿದೆ. ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಈ ಕ್ರೀಡಾಹಬ್ಬ ನಡೆಯಲಿದೆ. ಈ ಕ್ರೀಡಾಹಬ್ಬಕ್ಕೆ ಸಾಗರ ತಾಲ್ಲೂಕಿನ ಪ್ರಥಮ ಪ್ರಜೆ ಹಾಗೂ ಶಾಸಕರಾದಂತ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಎನ್, ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ಸೇರಿದಂತೆ ಇತರೆ ಗಣ್ಯರನ್ನು ಸಾಗರ ತಾಲ್ಲೂಕು ಪಿಡಿಓ ನೌಕರರ ಸಂಘದ ಅಧ್ಯಕ್ಷರಾದಂತ ಪ್ರವೀಣ್…

Read More

ಬೆಳಗಾವಿ ಸುವರ್ಣಸೌಧ: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವಂತ 5,977 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ. ಇಂದು ವಿಧಾನ ಪರಿಷತ್ತಿನಲ್ಲಿ ಮಾತನಾಡಿದಂತ ಅವರು, 371(ಜೆ ) ಕಾಯ್ದೆಯನ್ವಯ ರಾಜ್ಯದಾದ್ಯಂತ ಸರ್ಕಾರಿ ನೇಮಕಾತಿಯಲ್ಲಿ ರಾಜ್ಯಮಟ್ಟದ ಸ್ಥಳೀಯ ವೃಂದದ ನೇರ ನೇಮಕಾತಿಯಲ್ಲಿ 9695 ಹುದ್ದೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 5977 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು. https://twitter.com/KarnatakaVarthe/status/1869758344229220581 https://kannadanewsnow.com/kannada/10-swr-employees-conferred-with-safety-awards/ https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/ https://kannadanewsnow.com/kannada/girl-who-should-have-studied-and-done-well-falls-ill-appeals-for-your-help-cooperation/

Read More

ನವದೆಹಲಿ: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2025ರ ಋತುವಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ತನ್ನ ಅನುಮೋದನೆಯನ್ನು ನೀಡಿದೆ. ಈ  ಮೂಲಕ ಕೊಬ್ಬರಿ ಬೆಳೆಗಾರರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿತು, ಎಲ್ಲಾ ಕಡ್ಡಾಯ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಅನ್ನು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು. ಅದರಂತೆ, 2025 ರ ಋತುವಿನಲ್ಲಿ ಮಿಲ್ಲಿಂಗ್ ಕೊಬ್ಬರಿಯ ನ್ಯಾಯೋಚಿತ ಗುಣಮಟ್ಟಕ್ಕೆ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 11582/- ಮತ್ತು ಚೆಂಡು ಕೊಬ್ಬರಿಗೆ ₹ 12100/- ಕ್ಕೆ ನಿಗದಿಪಡಿಸಲಾಗಿದೆ. ಸರ್ಕಾರವು 2014ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ₹ 5250 ಮತ್ತು ಕ್ವಿಂಟಲ್‌ಗೆ ₹ 5500 ರಿಂದ 11582 ಮತ್ತು ಕ್ವಿಂಟಲ್‌ಗೆ ₹ 12100 ಮತ್ತು ಮಾರುಕಟ್ಟೆ ಋತುವಿನಲ್ಲಿ 2025 ಕ್ಕೆ ಶೇ. 1221 ರಷ್ಟು ಬೆಳವಣಿಗೆಯನ್ನು ಕ್ರಮವಾಗಿ ದಾಖಲಿಸಿದೆ.…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಿಎಎಸ್ ಯೋಜನೆಯಡಿಯಲ್ಲಿ 2018ರ ಯುಡಿಸಿ ಮಾರ್ಗಸೂಚಿಯನ್ವಯ ಶೈಕ್ಷಣಿಕ ಹಂತ 12ರ ವೇತನ ಶ್ರೇಣಿ ರೂ.79,800 ರಿಂದ 2,11,500ರಲ್ಲಿ ಸ್ಥಾನೀಕರಣ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಸಿಹಿಸುದ್ದಿಯನ್ನು ನೀಡಿದೆ. ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅರ್ಹ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ 2016 ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಗಳನ್ನು ಉಲ್ಲೇಖ (1) ಹಾಗೂ (2) ರ ಆದೇಶಗಳಲ್ಲಿ ಜಾರಿಗೊಳಿಸಲಾಗಿರುತ್ತದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 11 ರ [ಯುಜಿಸಿ ವೇತನ ಶ್ರೇಣಿ ರೂ.68900-205500] ರಲ್ಲಿ ಪೂರೈಸಿರುವ ನಿಗದಿತ ಅರ್ಹತಾ ಅವಧಿಯನ್ನು ಪರಿಗಣಿಸಿ ಸಿಎಎಸ್ ರಡಿಯಲ್ಲಿ ಉನ್ನತ ಶೈಕ್ಷಣಿಕ ಹಂತ 12 ರ ವೇತನ ಶ್ರೇಣಿ…

Read More

ನವದೆಹಲಿ: ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ (India Cements Limited – ICL) ಅನ್ನು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸ್ಪರ್ಧಾ ಆಯೋಗ ಡಿಸೆಂಬರ್ 20 ರಂದು ಅನುಮೋದನೆ ನೀಡಿದೆ. ಈ ವರ್ಷದ ಜುಲೈನಲ್ಲಿ, ಅಲ್ಟ್ರಾಟೆಕ್ ಸಿಮೆಂಟ್ ಇಂಡಿಯಾ ಸಿಮೆಂಟ್ಸ್ನಲ್ಲಿ ಪ್ರವರ್ತಕರು ಮತ್ತು ಅವರ ಸಹವರ್ತಿಗಳಿಂದ 3,954 ಕೋಟಿ ರೂ.ಗಳ ಒಪ್ಪಂದದಲ್ಲಿ ಶೇಕಡಾ 32.72 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಇದಲ್ಲದೆ, ಐಸಿಎಲ್ನ ಶೇಕಡಾ 26 ರಷ್ಟು ಪಾಲನ್ನು ತನ್ನ ಷೇರುದಾರರಿಂದ ಸ್ವಾಧೀನಪಡಿಸಿಕೊಳ್ಳಲು 3,142.35 ಕೋಟಿ ರೂ.ಗಳ ಮುಕ್ತ ಕೊಡುಗೆಯನ್ನು ಘೋಷಿಸಿತ್ತು. ಈ ತಿಂಗಳ ಆರಂಭದಲ್ಲಿ, ದಕ್ಷಿಣ ಮೂಲದ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದ ಬಗ್ಗೆ ಅಲ್ಟ್ರಾಟೆಕ್ ಸಿಮೆಂಟ್ ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಸಿಸಿಐನಿಂದ ನೋಟಿಸ್ ಪಡೆದಿದೆ. ಅಲ್ಟ್ರಾಟೆಕ್ ಸಿಮೆಂಟ್, ನಿಯಂತ್ರಕ ಫೈಲಿಂಗ್ನಲ್ಲಿ, ಭಾರತೀಯ ಸ್ಪರ್ಧಾ ಆಯೋಗದಿಂದ (Competition Commission of India -CCI) ನೋಟಿಸ್ ಸ್ವೀಕರಿಸಿದೆ ಮತ್ತು ಆದಿತ್ಯ ಬಿರ್ಲಾ ಗ್ರೂಪ್ನ ಪ್ರಮುಖ ಸಂಸ್ಥೆ ತನ್ನ ಪ್ರಕರಣದ…

Read More

ನವದೆಹಲಿ: ಡಿಸೆಂಬರ್ 9 ರಂದು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಎಂಜಿನಿಯರ್ ಅತುಲ್ ಸುಭಾಷ್ ಅವರ ತಾಯಿ ತಮ್ಮ ನಾಲ್ಕು ವರ್ಷದ ಮೊಮ್ಮಗನನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂಜು ದೇವಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರ ನ್ಯಾಯಪೀಠವು ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ಹರಿಯಾಣ ಮತ್ತು ಕರ್ನಾಟಕ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಜನವರಿ.7ಕ್ಕೆ ನಿಗದಿಪಡಿಸಿತು. ಸಾಯುವ ಮುನ್ನ ಸುಭಾಷ್ ತನ್ನ ಪತ್ನಿ ಮತ್ತು ಅತ್ತೆ ಮಾವಂದಿರಿಂದ ಕಿರುಕುಳ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ವೀಡಿಯೊ ಮತ್ತು ಟಿಪ್ಪಣಿಗಳನ್ನು ಬರೆದಿದ್ದು, ವರದಕ್ಷಿಣೆ ನಿಷೇಧ ಕಾನೂನುಗಳ ದುರುಪಯೋಗದ ಬಗ್ಗೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಸೊಸೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಿದ ನಂತರ ತನ್ನ ಮೊಮ್ಮಗನ ಇರುವಿಕೆ ತಿಳಿದಿಲ್ಲ ಎಂದು ಅವರ ತಾಯಿ ಅಂಜು ದೇವಿ ತಮ್ಮ ಮೊಮ್ಮಗನನ್ನು ಕಸ್ಟಡಿಗೆ ಕೋರಿದರು. ದೇವಿ ಅವರು…

Read More

ಹುಬ್ಬಳ್ಳಿ: ಸುವರ್ಣ ಸೌಧದಲ್ಲಿ ಅಧಿವೇಶನದ ಕೊನೆಯ ದಿನದಂದು ನಡೆದಂತ ಘಟನೆಯಿಂದಾಗಿ ಪರಿಷತ್ ಸದಸ್ಯರ ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಸದಸ್ಯರು ದೂರು ನೀಡಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿರುವ ನಿವಾಸದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದಂತ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿಎಸ್ ಅರುಣ್ ಹಾಗೂ ಪರಿಷತ್ತಿನ ಶಾಸಕ ಎನ್ ರವಿ ಕುಮಾರ್ ಅವರು ದೂರು ನೀಡಿದರು. ಬಿಜೆಪಿ ಸದಸ್ಯರು ಸಲ್ಲಿಸಿರುವಂತ ದೂರಿನಲ್ಲಿ ದಿನಾಂಕ 19/12/2024 ಗುರುವಾರದಂದು ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಕಲಾಪದ ನಂತರದ ನಡೆದ ಘಟನೆಗಳು ವಿಧಾನಪರಿಷತ್ತು ಶಾಸಕ ಸಿ.ಟಿ ರವಿ ಮತ್ತು ಭಾಜಪದ ವಿಧಾನ ಪರಿಷತ್ ಶಾಸಕರುಗಳ ಹಕ್ಕುಚ್ಯುತಿ ಆಗಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶಾಸಕರಿಗೆ ಆಗಿರುವ ಹಕ್ಕುಚ್ಯುತಿಗೆ ನ್ಯಾಯ ದೊರಕಿಸಬೇಕೆಂದು ಕೋರಿದ್ದಾರೆ. https://kannadanewsnow.com/kannada/one-nation-one-election-39-member-jpc-committee-set-up-under-the-chairmanship-of-pc-chaudhary/ https://kannadanewsnow.com/kannada/what-did-b-y-vijayendra-r-ashok-and-c-t-ravi-say-at-a-press-conference-in-davanagere/

Read More

ದಾವಣಗೆರೆ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಮಧ್ಯಂತರ ಆದೇಶ ನೀಡುವ ವೇಳೆ ಹೈಕೋರ್ಟ್, ಸಿ.ಟಿ.ರವಿ ಅವರಿಗೆ ನೋಟಿಸ್ ನೀಡದೆ ಬಂಧನ ಮಾಡಿದ್ದು ಕಾನೂನುಬಾಹಿರ ಎಂದು ತಿಳಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿವರಿಸಿದರು. ದಾವಣಗೆರೆಯ ಸಕ್ರ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಧೋರಣೆಗೆ ಸಚಿವರ ಒತ್ತಡವೇ ಕಾರಣ. ಸಿ.ಟಿ.ರವಿ ಅವರನ್ನು ಬಂಧಿಸಿ ಒಬ್ಬ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ. ಇದು ಅತ್ಯಂತ ಆಘಾತಕರ ವಿಚಾರ ಎಂದು ತಿಳಿಸಿದರು. ರವಿ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಆದರೆ, ಅವರನ್ನು ಒಬ್ಬ ಭಯೋತ್ಪಾದಕ ಎಂಬಂತೆ ನಡೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ರವಿಯವರನ್ನು ಒಂದು ಪಶುವಿನಂತೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇಂಥ ಘಟನೆ ಕರ್ನಾಟಕದ ರಾಜಕೀಯ ಮಾತ್ರವಲ್ಲ; ದೇಶದ ರಾಜಕಾರಣದಲ್ಲಿ ನಡೆದಿಲ್ಲ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು…

Read More