Author: kannadanewsnow09

ಎಷ್ಟೇ ಜನ ಮಗುವಿನ ಲಾಲನೆ ಪಾಲನೆ ಮಾಡಿದರೂ ತಾಯಿಯನ್ನು ನೋಡಿಕೊಂಡಂತೆ ಆಗುವುದಿಲ್ಲ ಎನ್ನುತ್ತಾರೆ. ಕುಟುಂಬ ದೇವತೆಯ ಆರಾಧನೆಯ ವಿಷಯವೂ ಇದೇ ಆಗಿದೆ. ನಾವು ಎಷ್ಟೇ ಸಾವಿರ ದೇವರನ್ನು ಪೂಜಿಸಿದರೂ ನಮಗೆ ಕಷ್ಟ ಬಂದಾಗ ಮೊದಲು ಬಂದು ಸಹಾಯ ಮಾಡುವವರು ನಮ್ಮ ಕುಲದೇವರು. ಕುಲದೇವತೆಯಲ್ಲಿ ಹೃದಯ ಕರಗಿ ನಿಂತರೆ ಇತರ ದೇವತೆಗಳು ಕೇಳಿ ಪಡೆಯದ ವರಗಳೂ ತಾನಾಗಿಯೇ ಆಗುತ್ತವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಈ ಒಂದು ಕಾರ್ಯವನ್ನು ಮಾಡಿದರೆ ಅಂತಹ ಶಕ್ತಿಶಾಲಿ ಕುಲದೇವತೆಯನ್ನು ನಮ್ಮ ಮನೆಯಲ್ಲಿ ಸದಾ ಇರಿಸಬಹುದು ಎಂದು ಹೇಳಲಾಗುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ಏನು ಮತ್ತು ಹೇಗೆ ಮಾಡಬೇಕೆಂದು ನೀವು ಕಂಡುಹಿಡಿಯಬಹುದು . ಆರಾಧನಾ ದೇವತೆಯ ಆರಾಧನೆಯು ನಮ್ಮೊಂದಿಗೆ ಮಾತ್ರ ಮಾಡಬಹುದಾದ ವಿಷಯವಲ್ಲ. ಇದು ನಮ್ಮ ಪೂರ್ವಜರು ಪೂಜಿಸಿದ ಮತ್ತು ನಾವು ಪೂಜಿಸುವ ದೇವತೆ ಮತ್ತು ನಮ್ಮ ಮುಂದಿನ ಪೀಳಿಗೆಯೂ ಪೂಜಿಸಬೇಕು. ಈ ದೇವತೆ ಸದಾ ನಮ್ಮೊಂದಿಗಿದ್ದರೆ…

Read More

ಚಿಕ್ಕಮಗಳೂರು: ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಓರ್ವ ಸಾವನ್ನಪ್ಪಿ, 7 ಜನರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೋರನಾಳು ಬಳಿಯಲ್ಲಿ ಎಂ.ಜಿ ಹಳ್ಳಿಯಿಂದ ಬೊಲೆರೋ ವಾಹನದಲ್ಲಿ ಕಲ್ಲತ್ತಿಗಿರಿಗೆ ತೆರಳುತ್ತಿದ್ದಾಗ ಬೋರ್ ವೆಲ್ ಲಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೊಲೆರೋ ಮುಂಭಾಗ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಚಂದ್ರು(31) ಎಂಬುವರು ತರೀಕೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಬೊಲೆರೋ ವಾಹನದಲ್ಲಿದ್ದಂತ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಂಜಿ ಹಳ್ಳಿಯಿಂದ ಬೊಲೆರೋ ವಾಹನದಲ್ಲಿ ಕಲ್ಲತ್ತಿಗಿರಿಗೆ ತೆರಳಿದ್ದರು. ಕಲ್ಲತ್ತಿಗಿರಿ ದೇವಸ್ಥಾನದಿಂದ ಊರಿಗೆ ಹಿಂದಿರುಗುವಾಗಿ ಈ ದುರ್ಘಟನೆ ಸಂಭವಿಸಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/government-orders-continuation-of-mla-gopalakrishna-belur-as-chairman-of-karnataka-state-forest-industries-corporation/ https://kannadanewsnow.com/kannada/good-news-for-government-high-school-assistant-teachers-who-were-expecting-promotion-to-the-post-of-pu-lecturers/

Read More

ಬೆಂಗಳೂರು: ದಿನಾಂಕ 26-01-2024ರಿಂದ ಜಾರಿಗೆ ಬರುವಂತೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು. ಇದೀಗ ದಿನಾಂಕ 26-01-2026ರಿಂದ ಜಾರಿಗೆ ಬರುವಂತೆ ಮುಂದುವರೆಸಿ ರಾಜ್ಯ ಸರ್ಕಾರ ಆದೇಶಿಸಿದೆ. ಶಿವಮೊಗ್ಗದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಿಎಂ ಸಿದ್ಧರಾಮಯ್ಯ ಬಂಫರ್ ಗಿಫ್ಟ್ ಎನ್ನುವಂತೆ ಕಳೆದ ಜನವರಿ 26, 2024ರಂದು ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಎರಡು ವರ್ಷದ ಅವಧಿಗೆ ನೇಮಕ ಮಾಡಿ ಆದೇಶಿಸಿದ್ದರು. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾವಧಿ ಜನವರಿ.26, 2026ಕ್ಕೆ ಅಂತ್ಯಗೊಂಡಿತ್ತು. ಇದೀಗ ಸರ್ಕಾರ ಮತ್ತೆ ಮುಂದಿನ ಆದೇಶದವರೆಗೆ ದಿನಾಂಕ 26-01-2026ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಮುಂದುವರೆಸಿ ಆದೇಶಿಸಿದೆ. ಇದಷ್ಟೇ…

Read More

ಬೆಂಗಳೂರು: ನಾಳೆ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೇ ಇಂದು ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರು ಅಕಾಲಿಕ ನಿಧನರಾದ ಹಿನ್ನಲೆಯಲ್ಲಿ, ಈ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಕುರಿತಂತೆ ಸಾರಿಗೆ ನೌಕರರ ಸಂಘಟನೆಯ ಮುಖಂಡ ಜಗದೀಶ್ ಮಾಹಿತಿ ನೀಡಿದ್ದು, ನೌಕರರ ಹಿರಿಯ ಮುಖಂಡರಾದಂತ ಅನಂತ್ ಸುಬ್ಬರಾವ್ ಅವರು ಹೃದಯಾಘಾತದಿಂದ ಇಂದು ತೀರಿಕೊಂಡಿದ್ದಾರೆ. ಅವರ ನಿಧನಕ್ಕೆ ಸಂಘಟನೆಯು ಸಂತಾಪ ಸೂಚಿಸುತ್ತದೆ. ಈ ಹಿನ್ನಲೆಯಲ್ಲಿ ನಾಳೆ ಸಾರಿಗೆ ನೌಕರರಿಂದ ಹಮ್ಮಿಕೊಂಡಿದ್ದಂತ ಬೆಂಗಳೂರು ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ. ಅಂದಹಾಗೇ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರು ಇಂದು ಸಂಜೆ 5.30ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಈ ಹಿನ್ನಲೆಯಲ್ಲೇ ನಾಳೆಯ ಬೆಂಗಳೂರು ಚಲೋ ಪ್ರತಿಭಟನೆಯನ್ನು ಸಾರಿಗೆ ನೌಕರರ ಸಂಘಟನೆಗಳು ಮುಂಡೂಡಿವೆ. https://kannadanewsnow.com/kannada/transport-workers-leader-ananth-subbarao-passes-away/ https://kannadanewsnow.com/kannada/will-it-be-mandatory-for-karnataka-government-employees-to-wear-khadi-clothes-from-now-on/

Read More

ಬೆಂಗಳೂರು: ದಿಢೀರ್ ಹೃದಯಾಘಾತದಿಂದ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರು ನಿಧನರಾಗಿದ್ದಾರೆ. ಆ ಮೂಲಕ ಕಾರ್ಮಿಕ ನೌಕರರ ಮುಖಂಡ ಅನಂತ ಸುಬ್ಬರಾವ್ ಇನ್ನಿಲ್ಲವಾಗಿದ್ದಾರೆ. ಇಂದು ಸಂಜೆ 5.30ಕ್ಕೆ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತ ಉಂಟಾಗಿತ್ತು. ಅವರನ್ನು ವಿಜಯನಗರದ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅನಂತ ಸುಬ್ಬರಾವ್ ನಿಧನದ ಹಿನ್ನಲೆಯಲ್ಲಿ ನಾಳೆ ಕರೆದಿದ್ದಂತ ಬೆಂಗಳೂರು ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಜಗದೀಶ್ ಮಾಹಿತಿ ನೀಡಿದ್ದಾರೆ. https://kannadanewsnow.com/kannada/will-it-be-mandatory-for-karnataka-government-employees-to-wear-khadi-clothes-from-now-on/ https://kannadanewsnow.com/kannada/dgca-revealed-the-reason-behind-ajit-pawars-plane-crash-do-you-know-that/

Read More

ಬೆಂಗಳೂರು; ಸಾರಿಗೆ ಸಂಘಟನೆಗಳ ಬೇಡಿಕೆ ಈಡೇರಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದಂತ ಕಾರ್ಮಿಕ ಕಣ್ಮಣಿ ಎಂಬುದಾಗಿಯೇ ಕರೆಸಿಕೊಂಡಿದ್ದಂತ ಅನಂತ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ಅಧ್ಯಕ್ಷರಾಗಿದ್ದಂತ ಹೆಚ್.ವಿ ಅನಂತಸುಬ್ಬರಾವ್ ಅವರು, ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಸುವಲ್ಲಿ ಹೋರಾಡಿದ್ದರು. ಹೋರಾಟವನ್ನೇ ತಮ್ಮ ಜೀವನದ ವೃತ್ತಿಯನ್ನಾಗಿಸಿಕೊಂಡಿದ್ದರು. ನಾಳೆಯಿಂದ ವಿವಿಧ ಬೇಡಿಕೆ ಈಡೇರಿಕೆಗೂ ಕೆ ಎಸ್ ಆರ್ ಟಿಸಿ ನೌಕರರು ಮುಂದಾಗಿದ್ದರು. ಈ ಮುಷ್ಕರದ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೇ ಅವರು ಇದೀಗ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಆ ಮೂಲಕ ಕಾರ್ಮಿಕ ಕಣ್ಮಣಿ ಹೆಚ್.ವಿ ಅನಂತಸುಬ್ಬರಾವ್ ಇನ್ನಿಲ್ಲವಾಗಿದ್ದಾರೆ. ಈ ಬಗ್ಗೆ ಎಂ.ಸತ್ಯಾನಂದ ಎಂಬುವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಆತ್ಮೀಯ ಸಂಗಾತಿಗಳೇ, ಇದೀಗ ಎಐಟಿಯುಸಿ ಮಾಜಿ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಮಿಕ ವರ್ಗದ ಹಿರಿಯ ನಾಯಕರಾದ ಕಾಂ. ಹೆಚ್. ವಿ. ಅನಂತ ಸುಬ್ಬರಾವ್ ಅವರು ಇದೀಗ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿಸಲು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ಪಾರ್ಥಿವ ಶರೀರ ದರ್ಶನಕ್ಕೆ ಈಗ ಅವರ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ 25 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಂತ ಶಾಸಕರನ್ನು ಮುಂದುವರೆಸಿ ಅಧಿಕೃತ ಆದೇಶ ಹೊರಡಿಸಿದೆ. ಆ ಮೂಲಕ ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಂಫರ್ ಗಿಫ್ಟ್ ನೀಡಿದ್ದಾರೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಚಳ್ಳಕೆರೆ ಶಾಸಕ ಟಿ ರಘುಮೂರ್ತಿಯನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೇ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಮುಂದುವರೆಸಿದ್ದಾರೆ. ಇಲ್ಲಿದೆ ಮುಂದುರಿಕೆಯ ನಿಗಮ ಮಂಡಳಿಯ ಅಧ್ಯಕ್ಷರ ಪಟ್ಟಿ

Read More

ಶಿವಮೊಗ್ಗ : ಜನವರಿ.29, 2026ರ ನಾಳೆ ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣ ವತಿಯಿಂದ ಸಾಗರದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಜ್ಞಾರಂಗ ತಂಡದ ಎಚ್.ಬಿ.ರಾಘವೇಂದ್ರ ತಿಳಿಸಿದ್ದಾರೆ. ನಾಟಕ ಪ್ರಿಯರು ತಪ್ಪದೇ ಆಗಮಿಸಿ, ವೀಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ. ಮಂಗಳವಾರದಂದು ಶಿವಮೊಗ್ಗದ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಂಗಾಯಣ ನೇತೃತ್ವದಲ್ಲಿ ಪ್ರಜ್ಞಾರಂಗ ತಂಡ, ಮಲೆನಾಡು ಅಭಿವೃದ್ದಿ ಪ್ರತಿಷ್ಟಾನ, ರೈತ ಸಂಘದ ಸಹಯೋಗದಲ್ಲಿ ನಾಳೆ ನಮ್ಮೊಳಗೊಬ್ಬ ಗಾಂಧಿ ಉಚಿತ ನಾಟಕ ಪ್ರದರ್ಶನವಾಗುತ್ತಿದೆ. ಡಾ. ಡಿ.ಎಸ್.ಚೌಗಲೆ ರಚಿಸಿರುವ ನಾಟಕವನ್ನು ಚಿದಂಬರ ರಾವ್ ಜಂಬೆ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಓಂಕಾರ್ ಮೇಗಳಾಪುರ ಸಹ ನಿರ್ದೇಶನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಹಿಂಸೆಯನ್ನು ವಿರೋಧಿಸಿ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಡುವಲ್ಲಿ ಪ್ರಮುಖಪಾತ್ರ ವಹಿಸಿದವರು ಎಂದರು. ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿಯವರ ಬಗ್ಗೆ ಸುಳ್ಳನ್ನು ಸೃಷ್ಟಿ ಮಾಡಿ ಗಾಂಧಿ ಅವರ ಕೊಡುಗೆಯನ್ನು ನೇಪಥ್ಯಕ್ಕೆ ಸರಿಯುವ…

Read More

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸ್ಪೋಟಗೊಂಡಿದೆ. ವೈರಲ್ ಆಗಿರುವಂತ ಆಡಿಯೋದಲ್ಲಿ ಮಾಜಿ ಎಂಎಲ್ಸಿಯೊಬ್ಬರು ದಿವಂಗತ ನಟ ಅಬರೀಶ್, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರೋದಾಗಿ ಹೇಳಲಾಗುತ್ತಿದೆ. ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಅವರು ಆಡಿಯೋವೊಂದು ವೈರಲ್ ಆಗಿದೆ. ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ಜೆಡಿಎಸ್ ಕಾರ್ಯಕರ್ತರೊಂದಿಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿರುವಂತ ದೂರವಾಣಿ ಸಂಭಾಷಣೆಯ ಆಡಿಯೋ ಅದಾಗಿ ಎನ್ನಲಾಗಿದೆ. ಅದರಲ್ಲಿ ಅಶ್ಲೀಲ, ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎನ್ನಲಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ನಟ ಅಂಬರೀಶ್ ಬಗ್ಗೆಯೂ ತೀವ್ರ ವಾಗ್ಧಾಳಿ ನಡೆಸಿರುವಂತ ಎಲ್ ಆರ್ ಶಿವರಾಮೇಗೌಡ ಅವರು, ಮಾತಿನ ಬರದಲ್ಲಿ ಏಕ ವಚನದಲ್ಲೇ ಕಿಡಿಕಾರಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಲೋಕಸಭೆ ಉಪ ಚುನಾವಣೆಯ ಸಂದರ್ಭದಲ್ಲಿ ನನ್ನಿಂದ 36 ಕೋಟಿ ಖರ್ಚಿ ಮಾಡಿಸಿದರು. ಆದರೇ ಟಿಕೆಟ್ ನೀಡದೇ ನನ್ನನ್ನು…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ನಿವೇಶನ ಹಗರಣದಲ್ಲಿ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಂತ ಬಿ-ರಿಪೋರ್ಟ್ ಅನ್ನು ಕೋರ್ಟ್ ಪುರಸ್ಕರಿಸಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಇತರರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಅವರಿಗೆ ಬಿಗ್ ರಿಲೀಫ್ ನೀಡಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಂತ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯವು ಪುರಸ್ಕರಿಸಿದೆ. ಇನ್ನೂ ಉಳಿದವರ ಮೇಲಿನ ತನಿಖೆ ಮುಂದುವರೆಸಲು ಕೋರ್ಟ್ ಆದೇಶಿಸಿದೆ. ಸಿಎಂ ಸಿದ್ಧರಾಮಯ್ಯ, ಪತ್ನಿ ಪಾರ್ವತಿ, ಬಾಮೈದ, ಜಮೀನು ಮಾಲೀಕರಿಗೂ ಜನಪ್ರತಿನಿಧಿಗಳ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸಿಎಂ ಸಿದ್ಧರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂಮಾಲೀಕ ದೇವರಾಜಗೆ ನ್ಯಾಯಾಲಯದಿಂದ ರಿಲೀಫ್ ನೀಡಲಾಗಿದೆ. ಈ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರು. ಈ ಬಿ-ರಿಪೋರ್ಟ್ ಪುರಸ್ಕರಿಸಿರುವಂತ ಕೋರ್ಟ್, ಉಳಿದವರ ಮೇಲಿನ ತನಿಖೆ ಮುಂದುವರೆಸಲು ಆದೇಶಿಸಿದೆ. ಒಟ್ಟಾರೆಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ…

Read More