Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಾನು ಅಸಮಾಧಾನ ಹೊರಹಾಕಿ, ರಾಜೀನಾಮೆಯ ಮಾತನಾಡಿದ್ದೇನೆ ಎಂಬುದು ಸುಳ್ಳು. ಇದು ಮಾಧ್ಯಮಗಳ ಸೃಷ್ಠಿಯಾಗಿದೆ. ನಾನು ಎಲ್ಲಿಯೂ ರಾಜೀನಾಮೆ ಮಾತನ್ನೇ ಆಡಿಲ್ಲ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ. ಇಂದು ವಿಧಾನಸಭೆಯಲ್ಲೇ ಸದನಕ್ಕೆ ಉತ್ತರಿಸಿದಂತ ಅವರು, ನನ್ನ ಸಹಕಾರ, ಸಹಮತ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಯಾವತ್ತೂ ಇದ್ದೇ ಇರುತ್ತದೆ. ಅದರಲ್ಲಿ ಎರಡು ಮಾತೇ ಇಲ್ಲ. ಇಂದು, ಮುಂದು, ಎಂದೆಂದಿಗೂ ಇರಲಿದೆ ಎಂಬುದಾಗಿ ತಿಳಿಸಿದರು. ಈ ಮೊದಲು ಬೆಳಗ್ಗೆ ಒಂದು, ಮಧ್ಯಾಹ್ನ, ರಾತ್ರಿಯೊಂದು ನ್ಯೂಸ್ ಬರ್ತಾ ಇತ್ತು. ಈಗ ಕ್ಷಣ ಕ್ಷಣದ ನ್ಯೂಸ್ ಕೊಡೋದೇ ಆಗಿದೆ. ಅವರಿಗೆ ಬ್ರೇಕಿಂಗ್ ಬೇಕು. ಹಾಗಂತ ನಾನು ಅವರನ್ನು ದೂರುತ್ತಿಲ್ಲ. ಯಾವುದೇ ಮಾಧ್ಯಮಗಳಿಗೆ ನಾನು ರಾಜೀನಾಮೆ ಬಗ್ಗೆ ಹೇಳಿಕೆ ನೀಡಿಲ್ಲ. ಎಲ್ಲಿಯೂ ಪ್ರಸ್ತಾಪಿಸಿಯೂ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಠಿಯಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು. https://kannadanewsnow.com/kannada/state-government-employees-to-wear-khadi-on-first-saturday-of-every-month-state-government/
ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆಯನ್ನು ಧರಿಸೋದು ಕಡ್ಡಾಯಗೊಳಿಸಿ ಸಿಎಸ್ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಭಾಗಿಯಾಗಿದ್ದಂತ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರದಂದು ರಾಜ್ಯ ಸರ್ಕಾರಿ ನೌಕರರು ತಪ್ಪದೇ ಖಾದಿ ಬಟ್ಟೆಯನ್ನು ಧರಿಸುವುದು ಕಡ್ಡಾಯಗೊಳಿಸುವಂತ ನಿರ್ಧಾರವನ್ನು ಇಂದಿನ ಸಿಎಸ್ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪುರುಷರು ಖಾದಿ ಪ್ಯಾಂಟ್, ಶರ್ಟ್ ಧರಿಸಬೇಕು. ಓವರ್ ಕೋಟ್ ಹಾಕಬೇಕು. ಮಹಿಳೆಯರು ಖಾದಿ ಸಿಲ್ಕ್ ಸೀರೆ, ಚೂಡಿದಾರ ಧರಿಸಬೇಕು ಎಂಬುದಾಗಿ ಸೂಚಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಈ ಸಂಬಂಧ ಆದೇಶ ಹೊರ ಬೀಳಲಿದೆ.
ಶಿವಮೊಗ್ಗ: ಫೆಬ್ರವರಿ 3 ರಿಂದ 11ರವರೆಗೆ ಒಂಬತ್ತು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಸಾಗರ ಶ್ರ್ರೀ ಮಾರಿಕಾಂಬ ಜಾತ್ರೆಯು ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಕುಸ್ತಿ ಪಂದ್ಯಾವಳಿಗೆ ಅಂಕಣ ಸಿದ್ಧತೆಗೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ್ ರಾವ್, ಕುಸ್ತಿ ಸಮಿತಿಯ ಸಂಚಾಲಕ ಅಶೋಕ, ಸಹ ಸಂಚಾಲಕ ಶಶಿಕಾಂತ್ ಎಂ.ಎಸ್ ಚಾಲನೆ ನೀಡಿದರು. ಇಂದು ಸಾಗರದ ನೆಹರು ಮೈದಾನದಲ್ಲಿ ಫೆಬ್ರವರಿ 6ರಿಂದ 8ರವರೆಗೆ ನಡೆಯಲಿರುವ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತದ ಹಿನ್ನಲೆಯಲ್ಲಿ ಕುಸ್ತಿ ಪಂದ್ಯಾವಳಿಯ ಪೂರ್ವ ಭಾವಿ ಅಂಕಣ ಸಿದ್ಧತೆಗೆ ಚಾಲನೆ ನೀಡಲಾಯಿತು. ಈ ಬಳಿಕ ಮಾತನಾಡಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್ ನಾಗೇಂದ್ರ ಅವರು, ಫೆಬ್ರವರಿ 6ರಿಂದ ಮೂರು ದಿನಗಳ ಕಾಲ ಮಾರಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯ ಏರ್ಪಡಿಸಲಾಗಿದೆ. ತಾಯಿಯ ಆಶೀರ್ವಾದದಿಂದ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂಬುದಾಗಿ ಆಶಿಸಿದರು. ಪ್ರಧಾನ ಕಾರ್ಯದರ್ಶಿ ಗಿರಿಧರ್ ರಾವ್ ಮಾತನಾಡಿ…
ಬೆಂಗಳೂರು: ಫೆಬ್ರವರಿ 2, 3 ರಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ಇದರ ಅಂಗವಾಗಿ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದಂತ ಶಾಸಕ ಗೋಪಾಲಕೃಷ್ಣ ಬೇಳೂರು ಜಾತ್ರೆಗೆ ಆಹ್ವಾನಿಸಿದರು. ಇಂದು ಬೆಂಗಳೂರಿನ ನಟ ಶಿವರಾಜ್ ಕುಮಾರ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಫೆಬ್ರವರಿ 2, 3ರಿಂದ ಆರಂಭಗೊಳ್ಳಲಿರುವಂತ ಮಾರಿಕಾಂಬ ಜಾತ್ರೆಗೆ ಆಹ್ವಾನಿಸಿದರು. ಅಲ್ಲದೇ ತಪ್ಪದೇ ಜಾತ್ರೆಗೆ ಬರುವಂತೆಯೂ ಕೋರಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಹ್ಬಾನಕ್ಕೆ ನಟ ಶಿವರಾಜ್ ಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಸಾಗರದ ಮಾರಿಕಾಂಬ ಜಾತ್ರೆಗೆ ಆಗಮಿಸುವ ಭರವಸೆ ನೀಡಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೇ ಅವರು ಸಾಗರದ ಮಾರಿಕಾಂಬ ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ. ಇದೇ…
ಬೆಂಗಳೂರು: ಸಾಗರ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಕೆಲ ತಿಂಗಳಿನಿಂದ ಹೋರಾಟ ನಡೆಸಲಾಗುತ್ತಿದೆ. ಶಾಸಕ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ಮಾಡಿ, ಜಿಲ್ಲೆ ರಚನೆಗೆ ಮನವಿ ಮಾಡಿದರು. ಬೆಂಗಳೂರಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ಶಾಸಕ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಭೇಟಿಯಾದರು. ಸಾಗರ ಜಿಲ್ಲೆಯನ್ನು ಮಾಡುವಂತೆ ಶಿಫಾರಸ್ಸು ಕಳುಹಿಸುವಂತೆ ಹೋರಾಟ ಸಮಿತಿಯ ಸಂಚಾಲಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಸಾಗರ ಜಿಲ್ಲಾ ಹೋರಾಟ ಸಮಿತಿಯವರ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದ ಸಾಗರವನ್ನು ಜಿಲ್ಲೆ ಮಾಡೋದಕ್ಕೆ ಉತ್ಸುಕತೆಯನ್ನು ತೋರಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಹೋರಾಟ ಸಮಿತಿಗೆ ಸಾಗರ ಜಿಲ್ಲೆ ರಚನೆಗೆ ಸೂಕ್ತ ಕ್ರಮ ವಹಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದಂತ ತೀ.ನಾ.ಶ್ರೀನಿವಾಸ್, ಮಾಜಿ ಎಂಎಲ್ಸಿ ಪ್ರಪುಲ್ಲಾ ಮಧುಕರ್,…
ಬೆಂಗಳೂರು : ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟ ಶಾಲಾ ಶಿಕ್ಷಕರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು, ಅನುದಾನಿತ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಟ್ಟ ದಿನದಿಂದಲೇ ಪೂರ್ವಾನ್ವಯವಾಗುವಂತೆ ಶಿಕ್ಷಕರಿಗೆ ವೇತನ ಸೌಲಭ್ಯ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಆದೇಶದ ಅನ್ವಯ ಅರ್ಜಿದಾರ ಶಿಕ್ಷಕರು ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರಿದ್ದಾರೆ ಎಂದು ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗಜಾನನ ಎಜುಕೇಶನಲ್ ಸೊಸೈಟಿ ನ್ಯೂ ಹೈಸ್ಕೂಲ್‌ನ ಕನ್ನಡ ಶಿಕ್ಷಕರಾಗಿ ರಾಜೇಶ್ ಎಂ. ಕೋಷ್ಟಿ ಎಂಬುವರು 2007ರಲ್ಲಿ ನೇಮಕಗೊಂಡಿದ್ದರು. ಆ ಶಾಲೆಯು 2009ರಲ್ಲಿ ಸರ್ಕಾರದ ಅನುದಾನ ವ್ಯಾಪ್ತಿಗೆ ಸೇರಿತು. ಆದರೆ, ಅರ್ಜಿದಾರ ಶಿಕ್ಷಕರಿಗೆ ಪೂರ್ವಾನ್ವಯವಾಗುವಂತೆ ವೇತನ ಸೌಲಭ್ಯ ನೀಡಲು ಸರ್ಕಾರ ನಿರಾಕರಿಸಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಾಜೇಶ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶ…
ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ನೌಕರರಿಗೂ ಡ್ರೆಸ್ ಕೋಡ್ ತರೋದಕ್ಕೆ ಸರ್ಕಾರ ಮುಂದಾಗಿದೆ. ಇನ್ಮುಂದೆ ಕರ್ನಾಟಕದ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವುದು ಕಡ್ಡಾಯಗೊಳಿಸಲಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಹಿರಿಯ ಆಪ್ತ ಕಾರ್ಯದರ್ಶಿ ಸರ್ಕಾರಿ ನೌಕರರ ಸಂಘಟನೆಯೊಂದಿಗೆ ಇಂದು ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಅವರು ಪತ್ರ ಬರೆದಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿ ಉಡುಪನ್ನು ಧರಿಸುವುದು ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸೇರಿದಂತೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರಿಗಳು/ಸಿಬ್ಬಂದಿಗಳೆಲ್ಲರೂ ಖಾದಿ ಉಡುಪನ್ನು ಧರಿಸುವ ಕುರಿತಂತೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 29.01.2026 ರ ಇಂದು ಮಧ್ಯಾಹ್ನ 12.00 ಘಂಟೆಗೆ ಕೊಠಡಿ ಸಂಖ್ಯೆ:320 ವಿಧಾನಸೌಧ ಇಲ್ಲಿ ಸಭೆಯನ್ನು ನಿಗಧಿಪಡಿಸಲಾಗಿದೆ. ಈ ಸಭೆಗೆ ತಾವು ಹಾಜರಾಗಬೇಕೆಂದು ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.
ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಜನವರಿ.31, 2026ರವರೆಗೆ ಅವಕಾಶ ನೀಡಿದೆ. ಈ ಕುರಿತಂತೆ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-02 ಹುದ್ದೆಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಹಾಗೂ ಶಾಲಾ ಶಿಕ್ಷಣ ಇಲಾಖಾ ವೆಬ್‌ಸೈಟ್ ನಲ್ಲಿ ಪುಕಟಿತ ಜೇಷ್ಠತಾ ಪಟ್ಟಿಯಲ್ಲಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-02 ವೃಂದದವರಿಗೆ ಮುಂಬಡ್ತಿ ನೀಡುವ ಉದ್ದೇಶದಿಂದ ಅರ್ಹತಾ ಪರೀಕ್ಷೆಯನ್ನು ನಡೆಸಲು ಅಧಿಸೂಚನೆಯನ್ನು ಹೊರಡಿಸಿ, ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ:29/12/2025 ರಿಂದ 28/01/2026 ರವರೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಿದ್ದಾರೆ. ಇಲಾಖಾ ವೆಬ್‌ಸೈಟ್‌ನಲ್ಲಿ ಮುಂಬಡ್ತಿ ಸಂಬಂಧ ಪ್ರಕಟಿತ ಜೇಷ್ಠತಾ ಪಟ್ಟಿಯಲ್ಲಿಲ್ಲದ ಹಾಗೂ ನಿಯಮಾನುಸಾರ ಅರ್ಹರಿರುವ ಕೆಲವು ಅರ್ಹ ಸಹಶಿಕ್ಷಕರು ಪರೀಕ್ಷೆಗೆ…
ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಶಾಸಕ ಗೋಪಾಲಕೃಷ್ಣ ಬೇಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮತ್ತೊಂದು ಬಂಫರ್ ಗಿಫ್ಟ್ ನೀಡಿದೆ. ಅದೇ ಹೊಸನಗರದ 8, ಸಾಗರದ 8 ಶಾಲೆಗಳ ಕಟ್ಟಡದ ದುರಸ್ತಿಗಾಗಿ ಲಕ್ಷ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಾಲಿನ ಮುಂದುವರೆದ ಯೋಜನೆಯ ಅಡಿಯಲ್ಲಿ 2819 ಸರ್ಕಾರಿ ಶಾಲೆಗಳ 4163 ತರಗತಿ ಕೊಠಡಿಗಳ ಸಣ್ಣ ಪ್ರಮಾಣದ ದುರಸ್ತಿ ಕಾಮಗಾರಿಗಳಿಗೆ ರೂ.4,430.48 ಲಕ್ಷಗಳು ಮತ್ತು 3130 ತರಗತಿ ಕೊಠಡಿಗಳ ದೊಡ್ಡ ಪ್ರಮಾಣದ ದುರಸ್ತಿ ಕಾಮಗಾರಿಗಳಿಗೆ ರೂ.5,258.41 ಲಕ್ಷಗಳು ಸೇರಿದಂತೆ 7,293 ತರಗತಿ ಕೊಠಡಿಗಳ ದುರಸ್ತಿ ಕಾಮಗಾರಿಗಳ ಕ್ರಿಯಾಯೋಜನೆ ಅನುಷ್ಠಾನಕ್ಕೆ ರೂ.9,688.89 ಲಕ್ಷ ಅನುದಾನವನ್ನು ನಿಬಂಧನೆಗಳು, ಷರತ್ತುಗಳಿಗೆ ಒಳಪಟ್ಟಂತೆ ಯೋಜನೆಯನ್ನು ಸಮರ್ಪಕವಾಗಿ, ಗುಣಮಟ್ಟ ಕಾಪಾಡಿಕೊಂಡು ನಿಗದಿತ ಕಾಲಾವಧಿಯಲ್ಲಿ ಆಯಾ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮೂಲಕ ಅನುಷ್ಠಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ…
ಬೆಂಗಳೂರು: ಸಾರಿಗೆ ನೌಕರರ ಮುಖಂಡ ಹೆಚ್.ವಿ ಅನಂತ್ ಸುಬ್ಬರಾವ್ ಅವರು ಸಾರ್ಥಕತೆಯನ್ನು ಮೆರೆದಿದ್ದಾರೆ. ತಮ್ಮ ದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನವನ್ನು ಮಾಡುವಂತೆ ಸೂಚಿಸಿದ್ದಂತೆ, ನಾಳೆ ಅಂತಿಮ ದರ್ಶನದ ಬಳಿಕ ಮಾಡಲಾಗುತ್ತಿದೆ. ಇಂದು ಸಂಜೆ 5.30ರ ಸುಮಾರಿಗೆ ಹೃದಯಾಘಾತಕ್ಕೆ ಸಾರಿಗೆ ನೌಕರರ ಸಂಘಟನೆಯ ಮುಖಂಡ ಹೆಚ್.ವಿ ಅನಂತ್ ಸುಬ್ಬರಾವ್ ಒಳಗಾಗಿದ್ದರು. ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅನಂತ್ ಸುಬ್ಬರಾವ್ ನಿಧನದ ಹಿನ್ನಲೆಯಲ್ಲಿ ನಾಳೆ ನಿಗದಿಯಾಗಿದ್ದಂತ ಸಾರಿಗೆ ನೌಕರರ ಬೆಂಗಳೂರು ಚಲೋ ಹೋರಾಟವನ್ನು ಮುಂದೂಡಲಾಗಿದೆ. ಮತ್ತೊಂದೆಡೆ ಅವರ ಕುಟುಂಬಸ್ಥರು ಅವರ ಆಸೆಯಂತೆ ನಾಳೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ, ನಿಮ್ಹಾನ್ಸ್ ಆಸ್ಪತ್ರೆಗೆ ಅನಂತ್ ಸುಬ್ಬರಾವ್ ಅವರ ದೇಹವನ್ನು ದಾನ ಮಾಡಲು ನಿರ್ಧರಿಸಿದೆ. https://kannadanewsnow.com/kannada/do-this-once-a-year-and-all-your-unresolved-sorrows-will-be-solved-guaranteed/ https://kannadanewsnow.com/kannada/horrible-accident-between-bore-lorry-and-bolero-in-chikkamagaluru-one-dead-7-critical/













