Author: kannadanewsnow09

ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ದೂರದ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಂದಿನಿ ಹಾಲಿನ ಕೋ-ಪ್ಯಾಕಿಂಗ್ ಮತ್ತು ಮಾರಾಟವನ್ನು ಪ್ರಾರಂಭಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ. ಕೆಎಂಎಫ್ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ರಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಳೆದ 05 ದಶಕಗಳಿಂದ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ. ಕೆಎಂಎಫ್ ಸಂಸ್ಥೆಯು “ನಂದಿನಿ” ಬ್ರಾಂಡ್‌ ಉತ್ಪನ್ನಗಳ ಮಾರಾಟವನ್ನು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಿಮೀತಗೊಳಿಸದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಸಹ ಮಾರಾಟ ಜಾಲ ವಿಸ್ತರಣೆಯನ್ನು ಸತತವಾಗಿ…

Read More

ಬೆಂಗಳೂರು: ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಆದೇಶ ಕೂಡ ಮಾಡಿದೆ. ಅದರ ಜೊತೆ ಜೊತೆಗೆ ರಾಜ್ಯದ ಜನತೆಗೆ ಬಿಗ್ ಶಾಕ್ ಎನ್ನುವಂತೆ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ದರವನ್ನು ರೂ.950ರಿಂದ ಬರೋಬ್ಬರಿ 4,998ಕ್ಕೆ ಏರಿಕೆ ಮಾಡಿದೆ. ಅಂದರೆ ಸ್ಮಾರ್ಟ್ ಮೀಟರ್ ದರ ಶೇ.400 ರಿಂದ 800ರಷ್ಟು ಏರಿಕೆ ಮಾಡಲಾಗಿದೆ. ಹೌದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಹೊಸ ವಿದ್ಯುತ್ ಸಂಪರ್ಕ ಪಡೆಯುವವರು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶದ ಬೆನ್ನಲ್ಲೇ ಹೀಗೊಂದು ಶಾಕ್ ನೀಡಲಾಗಿದೆ. ಇದೀಗ ಮೀಟರ್ ದರ ಶೇ.400ರಿಂದ ಶೇ.800ರಷ್ಟು ಏರಿಕೆ ಮಾಡಿ ಹೊಸ ಶಾಕ್ ನೀಡಿದೆ. ಜನವರಿ 15, 2025ರಿದಂ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇದಲ್ಲದೇ ಹೊಸ ಕಾಯಂ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್…

Read More

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬುದಾಗಿ ಹೈಕೋರ್ಟ್ ಗೆ ವಕೀಲ ಶಿವಾರೆಡ್ಡಿ ಎಂಬುವರು ರಿಟ್ ಪಿಟಿಷನ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಲಾಗಿದೆ. ಈ ಬಗ್ಗೆ ಮಾತನಾಡಿದಂತ ಅವರು, ನಾನು ಚೌಡೇಶ್ವರಿ ತಾಯಿ ಆಣೆಗೂ ನಾನು ಅರಣ್ಯ ಇಲಾಖೆಯ ಒಂದು ಗುಂಟೆ ಜಮೀನು ಕೂಡ ಒತ್ತುವರಿ ಮಾಡಿಲ್ಲ. ನೀವು ಇಷ್ಟು ದಿನ ನೋಡಿದ್ದು ಬರೀ ಟ್ರಯಲ್. ಇನ್ಮೇಲೆ ಅಸಲಿ ಫಿಕ್ಚರ್ ಬರುತ್ತೆ ಎಂದರು. ನಾನು ಶ್ರೀನಿವಾಸಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ನನ್ನ ಮೇಲಿನ ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಅದೆಲ್ಲ ಬರೀ ಟ್ರಯಲ್. ಸೋಮವಾರದ ನಂತ್ರ ಅಸಲಿ ಸಿನಿಮಾ ಬರುತ್ತದೆ ಎಂದರು. ನಾನು ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಗ್ರಾಮದ ಸರ್ವೇ ನಂ.1 ಮತ್ತು 2ರಲ್ಲಿ ಅರಣ್ಯ ಭೂಮಿ ಒತ್ತುವರಿ…

Read More

ನವದೆಹಲಿ: ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 4,081 ಕೋಟಿ ರೂ.ಗಳ ಬಜೆಟ್ ನಲ್ಲಿ ಸುಮಾರು 13 ಕಿಲೋಮೀಟರ್ ಉದ್ದದ ರೋಪ್ ವೇ ಗುರಿ ಹೊಂದಿದೆ. ಮತ್ತೊಂದೆಡೆ, ಹೇಮಕುಂಡ್ ಸಾಹಿಬ್ಗೆ ಅಂದಾಜು 2,730 ರೂ. ಪ್ರಸ್ತುತ ಪ್ರಯಾಣದ ಸಮಯವನ್ನು ಸುಮಾರು ಎಂಟು ಗಂಟೆಗಳಷ್ಟು ಕಡಿಮೆ ಮಾಡುವ ಈ ರೋಪ್ ವೇ ಯೋಜನೆಯು ಭಕ್ತರು, ಸಂದರ್ಶಕರು ಮತ್ತು ಪ್ರಯಾಣಿಕರಿಗೆ ಸುಮಾರು 40 ನಿಮಿಷಗಳಲ್ಲಿ ಕೇದಾರನಾಥವನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕ್ಯಾಬಿನೆಟ್ ಬ್ರೀಫಿಂಗ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಮತ್ತು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಟ್ರೈ-ಕೇಬಲ್ ಡಿಟಾಚಬಲ್ ಗೊಂಡೋಲಾ (3 ಎಸ್) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತದೆ. ಒಂದು ದಿಕ್ಕಿನಲ್ಲಿ ಗಂಟೆಗೆ 1,500 ಕ್ಕೂ ಹೆಚ್ಚು ಪ್ರಯಾಣಿಕರ ಸಾಮರ್ಥ್ಯದೊಂದಿಗೆ, ಕೇದಾರನಾಥ ರೋಪ್ ವೇ…

Read More

ಬೆಂಗಳೂರು: ನಂದಿನಿ ಹಾಲಿನ ದರವನ್ನು ಏರಿಕೆ ಮಾಡೇ ಮಾಡ್ತೀವಿ. ಆದರೇ ಎಷ್ಟು ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಅಂತ ಪಶು ಸಂಗೋಪನೆ ಸಚಿವ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿ ಎಂ.ಜಿ ಮೂಳೆ, ಕಾಂಗ್ರೆಸ್ ಪಕ್ಷದ ಉಮಾಶ್ರೀ ಕೇಳಿದಂತೆ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲು ಉತ್ಪಾದಕರಿಗೆ 654.07 ಕೋಟಿ ರೂಪಾಯಿ ಪ್ರೋತ್ಸಾಹ ಧನ ಬಾಕಿ ಇದೆ. 9,04,547 ಫಲಾನುಭವಿಗಳಿಗೆ ಬಾಕಿ ಹಣ ಕೊಡಬೇಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗದವರಿಗೆ 613.58 ಕೋಟಿ, ಎಸ್ಸಿಯವರಿಗೆ 18.29 ಕೋಟಿ, ಎಸ್ಟಿಯವರಿಗೆ 24.20 ಕೋಟಿ ರೂ ಬಾಕಿ ಇದೆ ಎಂಬುದಾಗಿ ತಿಳಿಸಿದರು. ಬಾಕಿ ಹಣ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ. ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಹಾಲಿನ ಉತ್ಪಾದನೆ ಜಾಸ್ತಿ ಆಗಿದೆ. ಬಜೆಟ್ ಅಲೋಕೇಷನ್ ಅದರಂತೆ ಕೊಡ್ತಿಲ್ಲ. ಹೀಗಾಗಿ ಬಾಕಿ ಉಳಿದಿದೆ. ಸಿಎಂ ಸಿದ್ಧರಾಮಯ್ಯ…

Read More

ಲಕ್ನೋ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಲಕ್ನೋ ನ್ಯಾಯಾಲಯ 200 ರೂಪಾಯಿ ದಂಡ ವಿಧಿಸಿದೆ. ವಿನಾಯಕ್ ದಾಮೋದರ್ ಸಾವರ್ಕರ್ ಕುರಿತ ಹೇಳಿಕೆಯಿಂದಾಗಿ ಉದ್ಭವಿಸಿದ ಪ್ರಕರಣದ ವಿಚಾರಣೆಯ ಸಮಯದಲ್ಲಿ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಏಪ್ರಿಲ್ 14 ರಂದು ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಏಪ್ರಿಲ್ 14 ರಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅಕೋಲಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ವೀರ್ ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಸಾವರ್ಕರ್ ಅವರನ್ನು ಬ್ರಿಟಿಷ್ ಸೇವಕ ಮತ್ತು ಪಿಂಚಣಿದಾರ ಎಂದು ಕರೆದಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ಧ ಅರ್ಜಿದಾರರಾದ ನೃಪೇಂದ್ರ ಪಾಂಡೆ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಂಗ್ರೆಸ್ ನಾಯಕ ರಾಹುಲ್…

Read More

ಮಂಗಳೂರು: ಜಿಲ್ಲೆಯಲ್ಲಿನ ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಖೈದಿಗಳಿಗೆ ಪುಡ್ ಪಾಯಿಸನ್ ಆಗಿದ್ದು, ಹೊಟ್ಟೆ ನೋವಿನಿಂದ ನರಳಾಡುತ್ತಿರುವುದಾಗಿ ತಿಳಇದು ಬಂದಿದೆ. ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಖೈದಿಗಳಿಗೆ ಪುಡ್ ಪಾಯಿಸನ್ ಕಾರಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿ, ಬೇಧಿ ಕೂಡ ಆಗಿದ್ದು, ಕೆಲ ಖೈದಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಕೆಲ ಖೈದಿಗಳು ಪ್ರಜ್ಞಾ ಹೀನ ಸ್ಥಿತಿಯನ್ನು ತಲುಪಿದ್ದಾರೆ ಎನ್ನಲಾಗುತ್ತಿದೆ. ಪುಡ್ ಪಾಯಿಸನ್ ಕಾರಣದಿಂದಾಗಿ ಅಸ್ವಸ್ಥಗೊಂಡಂತ ಖೈದಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಮಧ್ಯಾಹ್ನ ಊಟದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/kerala-state-road-transport-corporation-chairman-md-team-of-officials-visit-ksrtc-office/ https://kannadanewsnow.com/kannada/two-arrested-for-manufacturing-spurious-liquor-next-to-speaker-basavaraj-horattis-garden/

Read More

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ಠಆಣೆಯ ಎದುರಿನ ಒಂಟಿ ಮನೆಯಲ್ಲೇ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ತೋಟದ ಪಕ್ಕದಲ್ಲೇ ಅಕ್ರಮವಾಗಿ ನಕಲಿ ಮದ್ಯವನ್ನು ತಯಾರಿಸುತ್ತಿದ್ದದ್ದು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳ್ನು ಬಂಧಿಸಲಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಎದುರಿನ ಒಂಟಿ ಮನೆಯಲ್ಲೇ ನಕಲಿ ಮದ್ಯ ತಯಾರಿಸುತ್ತಿದ್ದ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಅಬಕಾರಿ ಎಸ್ ಪಿ ವಿಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ಮದ್ಯವನ್ನು, ಅದಕ್ಕೆ ಬಳಕೆ ಮಾಡಲಾಗುತ್ತಿದ್ದಂತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಮದ್ಯ ತಯಾರಿಕೆ ಪ್ರಕರಣದಲ್ಲಿ ಅಮೃತ್ ಹಾಗೂ ಸಂದೀಪ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಬಳಿಯಲ್ಲಿ ಸ್ಥಳದಲ್ಲಿದ್ದಂತ ಡಿಎಸ್ ಪಿ ಬ್ಲಾಕ್, ಇಂಪೀರಿಯರ್ ಬ್ಲೂ ಸೇರಿದಂತೆ ಇತರೆ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. https://kannadanewsnow.com/kannada/7110-km-to-be-developed-under-pragati-patha-scheme-priyank-kharge/ https://kannadanewsnow.com/kannada/kerala-state-road-transport-corporation-chairman-md-team-of-officials-visit-ksrtc-office/

Read More

ಬೆಂಗಳೂರು : ಪಿಎಂಜಿಎಸ್ವೈ ಮಾನದಂಡಗಳು ಸರಳೀಕರಣವಾಗದ ಹಿನ್ನೆಲೆಯಲ್ಲಿ ಪ್ರಗತಿಪಥ ಮತ್ತು ಕಲ್ಯಾಣ ಪಥ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ವಿಧಾನಸಭೆಯಲ್ಲಿ ಸದಸ್ಯ ಎನ್.ಎಚ್.ಕೋನರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ವಿಷಯ ತಿಳಿಸಿದರು. ಪ್ರಗತಿಪಥ ಯೋಜನೆಯ ಅಡಿ 7110 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ರೂ.5190 ಕೋಟಿಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದ್ದು, ಪ್ರಗತಿಪಥ ಯೋಜನೆಗೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ಇತೀಚೆಗೆ ಅನುಮೋದನೆ ನೀಡಿದೆ. ಪ್ರಗತಿಪಥ ಯೋಜನೆಯ ಶೀಘ್ರ ಅನುಷ್ಠಾನದ ದೃಷ್ಟಿಯಿಂದ ಗ್ರಾಮಪಥ ತಂತ್ರಾಂಶದಲ್ಲಿ ಅರ್ಹ ರಸ್ತೆಗಳ ಆಯ್ಕೆ ಪ್ರಕ್ರಿಯೆ ಹಂತದಲ್ಲಿರುತ್ತದೆ ಎಂದು ಸಚಿವರು ವಿವರಿಸಿದರು. ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಯಲ್ಲಿರುವುದಿಲ್ಲ. ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಗ್ರಾಪಂ ಒಟ್ಟು ವೆಚ್ಚದ ಶೇ.10ರ ಮಿತಿಯೊಳಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದರು. https://kannadanewsnow.com/kannada/kerala-state-road-transport-corporation-chairman-md-team-of-officials-visit-ksrtc-office/ https://kannadanewsnow.com/kannada/big-news-good-news-for-the-farmers-of-the-state-government-launches-new-scheme-for-land-acquisition-watch-video/

Read More

ಬೆಂಗಳೂರು: ಇಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ಕೆ ಎಸ್ ಆರ್ ಟಿ ಸಿ ಗೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ವಿ.ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ರ.ಸಾ. ನಿಗಮ ಅವರಿಂದ ಪಿ.ಎಸ್.ಪ್ರಮೋಜ್‌ ಸಂಕರ್, ಐ.ಒ.ಎಫ್.ಎಸ್. ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ವಿವರವಾಗಿ ಮಾಹಿತಿ ಪಡೆದುಕೊಂಡರು. ನಿಗಮದ, ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಸ್ಸುಗಳ ಕಾರ್ಯ ನಿರ್ವಹಣೆ, ಪುನಶ್ಚೇತನ ಕಾರ್ಯ, ರೂ.1 ಕೋಟಿ On duty / Off duty accident insurance, KSRTC AROGYA ಯೋಜನೆ, ವಿದ್ಯಾ ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನಗಳ‌ಉಪಕ್ರಮಗಳಾದ HRMS, ಆನ್…

Read More