Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆಯಲ್ಲಿ ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಂತ ವೇಳೆಯಲ್ಲೇ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಎಪಿಆರ್ಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧರ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. https://kannadanewsnow.com/kannada/lok-sabha-elections-2024-siddaramaiah-yathindra-cast-their-votes-in-siddaramanahundi/ https://kannadanewsnow.com/kannada/lok-sabha-elections-2019-heres-how-to-vote-in-bengaluru-constituency-till-1-pm/
ಮೈಸೂರು: ಇಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಸಿದ್ಧರಾಮನಹುಂಡಿಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ಧರಾಮಯ್ಯ ಮತದಾನ ಮಾಡಿದರು. ಇಂದು ಮೈಸೂರಿನ ಸಿದ್ಧರಾಮನಹುಂಡಿಗೆ ತೆರಳಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಯತೀಂದ್ರ ಸಿದ್ಧರಾಮಯ್ಯ ಅವರು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಂಡರು. ತಮ್ಮ ಸ್ವಗ್ರಾಮ ಸಿದ್ಧರಾಮನಹುಂಡಿಯ ಮತಗಟ್ಟೆಗೆ ತರಳಿದಂತ ಸಿಎಂ ಸಿದ್ಧರಾಮಯ್ಯ, ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರು ತಮ್ಮ ಮತವನ್ನು ಚಲಾಯಿಸಿದರು. ಲೋಕಸಭಾ ಚುನಾವಣೆಗೆ ಮತದಾನ: ಹೀಗಿದೆ 1 ಗಂಟೆಯವರೆಗೆ ಬೆಂಗಳೂರು ಕ್ಷೇತ್ರವಾರು ಮತದಾನದ ಪ್ರಮಾಣ ಬೆಂಗಳೂರು: ಇಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಾಗಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಬೆಂಗಳೂರಲ್ಲಿ ಕ್ಷೇತ್ರವಾರು ಪ್ರಮಾಣ ಎಷ್ಟು ಆಗಿದೆ ಅಂತ ಮುದಂ ಓದಿ. ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ: ಮಧ್ಯಾಹ್ನ 01.00 ಗಂಟೆಯವರೆಗಿನ ವರದಿ ಬೆಂಗಳೂರು ಕೇಂದ್ರ:…
ಬೆಂಗಳೂರು: ಇಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಾಗಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಬೆಂಗಳೂರಲ್ಲಿ ಕ್ಷೇತ್ರವಾರು ಪ್ರಮಾಣ ಎಷ್ಟು ಆಗಿದೆ ಅಂತ ಮುದಂ ಓದಿ. ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ: ಮಧ್ಯಾಹ್ನ 01.00 ಗಂಟೆಯವರೆಗಿನ ವರದಿ ಬೆಂಗಳೂರು ಕೇಂದ್ರ: ಶೇ. 30.10 ಬೆಂಗಳೂರು ದಕ್ಷಿಣ: ಶೇ. 31.51 ಬೆಂಗಳೂರು ಉತ್ತರ: ಶೇ. 32.25 ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತ ಶಿಕ್ಷಕಿ ಸಾವು ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ವೇಳೆ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಎಪಿಆರ್ಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧರ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. https://kannadanewsnow.com/kannada/petition-filed-in-hc-seeking-6-year-disqualification-of-pm-modi-from-poll-panel/ https://kannadanewsnow.com/kannada/x-twitter-server-down-again-in-india-user-struggle/
ಚಿತ್ರದುರ್ಗ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಎ ಆರ್ ಓ ಆಗಿ ಯಶೋಧಮ್ಮ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇಂತಹ ಅವರು ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ 202ರಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ಎಪಿಆರ್ಓ ಯಶೋಧ (58) ವರ್ಷ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂದಹಾಗೇ ಶಿಕ್ಷಕಿಯಾಗಿದ್ದಂತ ಯಶೋದಮ್ಮಾ (58) ಅವರನ್ನು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೊಟ್ಟೆಪ್ಪನಹಳ್ಳಿಯಲ್ಲಿ ಎ ಆರ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಅವರಿಗೆ ಲೋ ಬಿಪಿ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯೋ ಮಾರ್ಗಮಧ್ಯದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಇನ್ನೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ 11ಗಂಟೆಗೆ 21.74% ಶೇಕಡಾವಾರು ಮತದಾನವಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 1ಗಂಟೆಗೆ 37.74% ಶೇಕಡಾವಾರು ಮತದಾನವಾಗಿದೆ. https://kannadanewsnow.com/kannada/x-twitter-server-down-again-in-india-user-struggle/ https://kannadanewsnow.com/kannada/petition-filed-in-hc-seeking-6-year-disqualification-of-pm-modi-from-poll-panel/
ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣೆ ಮಾಡಿದಂತ ಆರೋಪ ಹಿನ್ನಲೆಯಲ್ಲಿ ಕಲಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀರಾಮಮೇಲೆ ರಾಜ್ಯಾಧ್ಯಕ್ಷ ಸಿದ್ಧಲಿಂಗಶ್ರೀ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಸಿಎಂ ಸಿದ್ಧರಾಮಯ್ಯ ವಿರುದ್ಧ ಲೋಕಸಭಾ ಚುನಾವಣಾ ನೀತಿ ಸಂಹಿತೆ ಲೆಕ್ಕಿಸದೇ ಕಲಬುರ್ಗಿಯ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಶಾಸಕ ಯತ್ನಾಳ್ ಸೇರಿದಂತೆ ಹಲವರು ಅವಹೇಳನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಲಬುರ್ಗಿ ನಗರ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಏಪ್ರಿಲ್.22ರಂದು ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣವನ್ನು ಖಂಡಿಸಿ ಕಲಬುರ್ಗಿ ನಗರದ ಸರ್ಧಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ನಡೆದಿದ್ದಂತ ಪ್ರತಿಭಟನೆಯಲ್ಲಿ ಗಲ್ಲಿ ಗಲ್ಲಿ ಮೇ ಚಾಕು ಹೈ ಸಿದ್ಧರಾಮಯ್ಯ ಡಾಕು ಹೈ. ಫೆಕದೋ ಫೆಕದೋ, ಕಾಂಗ್ರೆಸ್ ಕೋ ಫೆಕದೋ ಎಂಬುದಾಗಿ ಅವಹೇಳನಕಾರಿಯಾಗಿ ಕೂಗಲಾಗಿತ್ತು. ಈ…
ಹುಬ್ಬಳ್ಳಿ : ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ ಘಟನೆ.ತ್ವರಿತ ವಿಚಾರಣೆಗಾಗಿ ಸಿಒಡಿ ಗೆ ಪ್ರಕರಣವನ್ನು ವಹಿಸಲಾಗಿದೆ. ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ. ಪ್ರತ್ಯೇಕ ವಿಚಾರಣೆ ಮಾಡಿ ಕೊಲೆ ಆರೋಪಿಗೆ ಆದಷ್ಟು ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಕೊಲೆಯದ ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ನೊಂದ ಕುಟುಂಬ ವರ್ಗದವರಿಗೆ ಸಾಂತ್ವನ ಬಿಜೆಪಿಯವರು ಸಿಬಿಐ ಗೆ ಪ್ರಕರಣ ವಹಿಸಲು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಯಾವುದಾದರೂ ಒಂದು ಪ್ರಕರಣವನ್ನು ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಸಿಬಿಐ ಗೆ ಕೊಟ್ಟಿಲ್ಲ. ನನ್ನ ಅವಧಿಯಲ್ಲಿ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ. ಇದರಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ರಾಜಕೀಯದ ಬಗ್ಗೆ ಇಲ್ಲಿ ಮಾತನಾಡುವುದು ಸೂಕ್ತವಲ್ಲ. ನೊಂದ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. ಅವರಿಗೆ ಧೈರ್ಯ ತುಂಬುವ ಕೆಲಸ…
ಗದಗ : ಕನ್ನಡ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆ ಬಂದಾಗ ಮಾತ್ರ ಕನ್ನಡಿಗರ ನೆನಪಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠ ರ ಪರವಾಗಿ ಆಯೋಜಿಸಲಾಗಿದ್ದ ಪ್ರಜಾಧ್ವನಿ-02 ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು. ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಶೂನ್ಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರವನ್ನು ತಮ್ಮ ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಕಾಲ ಇದ್ದರೂ, ಈ ಭಾಗಕ್ಕೆ ಅವರ ಕೊಡುಗೆ ಶೂನ್ಯ. ಈ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದ ಬಸವರಾಜ ಬೊಮ್ಮಾಯಿಯವರನ್ನು ಸೋಲಿಸುವುದು ಎಲ್ಲರ ಕರ್ತವ್ಯ. ರೋಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆ 25 ಸಾವಿರಕ್ಕಿಂತಲೂ ಹೆಚ್ಚು ಮತವನ್ನು ಕೊಡುತ್ತೀರೆಂಬ ವಿಶ್ವಾಸವಿದೆ ಎಂದರು. ಮೋದಿ ಹೇಳಿದ ಅಚ್ಛೇ ದಿನ್ ಬರಲೇ ಇಲ್ಲ ಮೋದಿಯವರು 10 ವರ್ಷಗಳ ಪ್ರಧಾನಿಯಾಗಿದ್ದರೂ, ಅವರು ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ.…
ಬೆಂಗಳೂರು: 8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಅಸ್ತು ಎಂದಿದೆ. ಎಲ್ ಅಂಡ್ ಟಿ ಸಂಸ್ಥೆಯಿಂದ ಸಲ್ಲಿಸಲಾಗಿದ್ದಂತ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ, ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಅವ್ಯವಹಾರ ಆರೋಪ ಪ್ರಶ್ನಿಸಿ ಎಲ್ ಅಂಡ್ ಟಿ ಸಂಸ್ಥೆಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿ ಅರ್ಜಿಯಲ್ಲಿ ಕೆ ಪಿ ಸಿಎಲ್ ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಟೆಂಡರ್ ಕರೆಯಲಾಗಿದೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡಂತ ನ್ಯಾಯಪೀಠವು, ಎಲ್ ಅಂಡಿ ಟಿ ಸಂಸ್ಥೆಯ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ 21 ದಿನಗಳಲ್ಲಿ 8000 ಕೋಟಿ ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ಟೆಂಡರ್ ಕರೆಯೋದಕ್ಕೆ ಅಸ್ತು ಎಂದಿದೆ. https://kannadanewsnow.com/kannada/voters-polling-officials-note-mobile-phones-will-not-be-allowed-to-be-used-at-polling-stations-tomorrow/ https://kannadanewsnow.com/kannada/breaking-delhi-cm-arvind-kejriwal-kingpin-of-excise-policy-scam-ed/
ಬೆಂಗಳೂರು: ಚುನಾವಣೆ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ಹಸಿ ಸುಳ್ಳುಗಳನ್ನ ಹರಡುತ್ತಿರುವ ಮೋದಿಯವರು, ಸಮಾಜದಲ್ಲಿ ಒಡುಕು ಮೂಡಿಸುವ ಸ್ವಾರ್ಥ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ವಕ್ತಾರರಾಗಿರುವ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಂ ಮೀಸಲಾತಿ ವಿಚಾರವಾಗಿ ಮೋದಿಯವರು ಸುಳ್ಳು ಹೇಳಿದ್ದಾರೆ. ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಏಲ್ಲಿ ಮುಸ್ಲಿಂಮರಿಗೆ ನೀಡಲಾಗಿದೆ. ಮೋದಿಯವರು ದಾಖಲೆ ಕೊಡಬೇಕು. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದರು. 10 ವರ್ಷ ಏನು ಕೆಲಸ ಮಾಡದೇ ಅಧಿಕಾರ ಅನುಭವಿಸಿರುವ ಮೋದಿಯವರಿಗೆ ಈಗ ಮುಸ್ಲಿಂ ಮೀಸಲಾತಿ ಎಂಬ ಕಪೋಲ ಕಲ್ಪಿತ ವಿಷಯ ಜ್ಞಾನೋದಯವಾಗಿದೆಯೇ..? ಇಷ್ಟು ವರ್ಷ ಸುಮ್ಮನಿದ್ದು ಈಗ ಚುನಾವಣೆ ಸಮಯದಲ್ಲೇ ಸುಳ್ಳು ಹೇಳಿಕೆ ನೀಡುತ್ತಿರುವುದು ಏಕೆ..? ಬಹುಮತ ಪಡೆಯುವುದು ಕಷ್ಟ ಎಂಬುದು ಮೋದಿಯವರಿಗೆ ಸ್ಪಷ್ಟವಾದಂತಿದೆ. ಹೀಗಾಗಿ ಈ ರೀತಿಯ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನ ನೀಡುತ್ತಿದ್ದಾರೆ. ದಲಿತರ ಮೀಸಲಾತಿಯನ್ನ ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಇದಕ್ಕೆ ಸಂಸತ್ತಿನ…
ಬೆಂಗಳೂರು: ರಾಜ್ಯದಲ್ಲೇ ತಲ್ಲಣ ಸೃಷ್ಠಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಹಾಸನ ಪೆನ್ ಡ್ರೈವ್ ವಿಚಾರವಾಗಿ, ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಕಾಮುಕನ ವಿಚಾರಣೆ ನಡೆಸೋದಕ್ಕೆ ಪೊಲೀಸ್ ತಂಡ ರಚಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದೆ. ಹಾಸನದಲ್ಲಿ ನಡೆದಿರುವ ಭಯಾನಕ ಸೆಕ್ಸ್ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಹೆಣ್ಣುಮಕ್ಕಳ ಜೊತೆ ಲೈಂಗಿಕ ಚಟುವಟಿಕೆ ನಡೆಸುವುದರ ಜೊತೆಗೆ ಅದನ್ನು ಚಿತ್ರೀಕರಿಸಿಕೊಂಡ ವ್ಯಕ್ತಿ ಮತ್ತು ಈ ವಿಡಿಯೋಗಳನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ವಿಚಾರಣೆ ನಡೆಸುವ ಸಲುವಾಗಿ ವಿಶೇಷ ತಂಡವನ್ನು ರಚಿಸಬೇಕೆಂದು ಕೋರಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಇಂದು ಪತ್ರ ಬರೆದಿದ್ದು, ಹಾಸನದಲ್ಲಿ ನಡೆಯುತ್ತಿರುವ ಆತಂಕಕಾರಿ ಘಟನೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಪ್ರಭಾವಿ ರಾಜಕಾರಣಿ ಅನೇಕ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿರುವ ದೃಶ್ಯಗಳು ಇರುವ ಪೆನ್ ಡ್ರೈವ್ ಗಳು ಹಾಸನ…











