Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದಿವಂಗತ ನಟ ವಿಷ್ಣವರ್ಧನ್ ಹಾಗೂ ಬಿ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಬಹು ದಿನಗಳ ಅಭಿಮಾನಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದಂತೆ ಆಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ದಿವಂಗತ ನಟ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅಂದಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸ್ಯಾಂಡಲ್ ವುಡ್ ಹಿರಿಯ ನಟಿಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವಂತ ಸಿಎಂ ಸಿದ್ಧರಾಮಯ್ಯ, ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ನಟ ವಿಷ್ಣುವರ್ಧನ್, ನಟಿ ಬಿ ಸರೋಜಾ ದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ.
ಬೆಂಗಳೂರು: ಅಕ್ರಮ ಆಸ್ತಿ ಪತ್ತೆ ಆರೋಪದಡಿ ಇಡಿ ಅಧಿಕಾರಿಗಳಿಂದ ಶಾಸಕ ಸತೀಶ್ ಸೈಲ್ ಬಂಧಿಸಲಾಗಿತ್ತು. ಇಂತಹ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಅಕ್ರಮ ಆಸ್ತಿ ಪತ್ತೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಬೆಂಗಳಊರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆಯಲ್ಲಿ ಕಲ್ಲು ತೂರಾಟ ಘಟನೆ ಖಂಡಿಸಿ ಮದ್ದೂರು ಬಂದ್ ಮಾಡಲಾಗಿತ್ತು. ಈ ವೇಳೆಯಲ್ಲಿ ಪ್ರತಿಭಟನೆ ನಡೆಸಿದಂತ ಮಹಿಳೆ ಜ್ಯೋತಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಇದೀಗ ಇಂತಹ ಮಹಿಳೆ ಜ್ಯೋತಿ ಮೇಲೂ ಎಫ್ಐಆರ್ ದಾಖಲಿಸಲಾಗಿದೆ. ಹೌದು. ಗಣೇಶನ ಗಲಾಟೆಯಲ್ಲಿ ಲಾಠಿ ಏಟು ತಿಂದ ಮಹಿಳೆ ಜ್ಯೋತಿ ಮೇಲೂ ಕೇಸ್ ಬಿದ್ದಿದೆ. ಪ್ರತಿಭಟನೆ ವೇಳೆ ಅವಹೇಳನಕಾರಿ ಹಾಗು ಪ್ರಚೋನಾದನಾಕಾರಿಯಾಗಿ ಘೋಷೆಣೆ ಕೂಗಿದ್ದಕ್ಕೆ FIR ದಾಖಲಿಸಲಾಗಿದೆ. ಮದ್ದೂರು ಪೊಲೀಸರು ಮಹಿಳೆ ಜ್ಯೋತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. BNS 196(1) ಎ ಹಾಗು,299 ರ ಕಾಯ್ದೆ ಅಡಿ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ. ಸೆ.8 ರಂದು ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ವೇಳೆ ಈ ಘಟನೆ ನಡೆದಿತ್ತು. ಮೆರವಣಿಗೆ ವೇಳೆ ಪೊಲೀಸರು ಈಕೆಯ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ಮೆರವಣಿಗೆ ವೇಳ ಪ್ರಚೋದಾನಾಕಾರಿಯಾಗಿ ಮುಸ್ಲಿಂ ಸಮುದಾಯದ ವಿರುದ್ದ ಘೋಷಣೆ ಕೂಗಿದ್ದರು. ಅದಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗ ಸಿ.ಎಂ.ವಿರುದ್ದ ಅಪೇಕ್ಷಾರ್ಹ ಪದ ಬಳಕೆ ಮಾಡಿದ್ದರು. ಈ ಸಂಬಂಧ ಮದ್ದೂರು…
ಆಂಜನೇಯನನ್ನು ಚಿರಂಜೀವಿ ಎಂದೂ ಪರಿಗಣಿಸಲಾಗುತ್ತದೆ. ಆಂಜನೇಯನನ್ನು ನಿಜವಾದ ಭಕ್ತ ಎಂದೂ ಪರಿಗಣಿಸಲಾಗುತ್ತದೆ. ಅಂತಹ ಆಂಜನೇಯನನ್ನು ನಾವು ಪೂರ್ಣ ಹೃದಯದಿಂದ ಮತ್ತು ಪ್ರಾಮಾಣಿಕವಾಗಿ ಪೂಜಿಸಿದರೆ, ಅವನು ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ನಾವು ಶ್ರೀ ರಾಮಜಯಂ ಎಂದು ಹೇಳಿದರೆ, ನಮಗೆ ಆಂಜನೇಯನ ಅನುಗ್ರಹವು ಪೂರ್ಣವಾಗಿ ಸಿಗುತ್ತದೆ. ಅಂತಹ ಆಂಜನೇಯನನ್ನು ಪೂಜಿಸಲು ಹಲವು ಮಾರ್ಗಗಳಿದ್ದರೂ, ನಾವು ಹನ್ನೊಂದು ದಿನಗಳ ಕಾಲ ಮಾಡಬಹುದಾದ ಪೂಜೆ, ಅವನನ್ನು ಸ್ಮರಿಸುವುದು, ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಪೂಜೆಯನ್ನು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ…
ಬೆಂಗಳೂರು: ನಗರದಲ್ಲಿ ಯುವತಿಯನ್ನು ಪ್ರೀತಿಸುವ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಲ್ಲಿ ಯುವತಿ ಪ್ರೀತಿಸುವ ವಿಚಾರಕ್ಕೆ ಚಾಕುವಿನಿಂದ ಇರಿದು ಕಿರಣ್(19) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಜೀವನ್ ಎಂಬಾತ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಒಂದೇ ಕಡೆ ಮೃತ ಕಿರಣ್ ಹಾಗೂ ಆರೋಪಿ ಜೀವನ್ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದಂತ ಯುವತಿಯನ್ನು ಇಬ್ಬರೂ ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಕಿರಣ್ ಹಾಗೂ ಜೀವನ್ ನಡುವೆ ಗಲಾಟೆಯಾಗಿತ್ತು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಗಲಾಟೆ ತೀವ್ರಗೊಂಡ ಸಂದರ್ಭದಲ್ಲಿ ಆರೋಪಿ ಜೀವನ್, ಕಿರಣ್ ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೊಲೆ ಆರೋಪಿ ಜೀವನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/shivamogga-a-7-month-old-leopard-cub-died-after-being-hit-by-an-unknown-vehicle-near-avalagodu-sorabada/ https://kannadanewsnow.com/kannada/the-bmtc-electric-bus-driver-who-assaulted-a-woman-has-been-dismissed-from-duty/
ಶಿವಮೊಗ್ಗ: ಸೊರಬ ಮತ್ತು ಸಾಗರ ಮುಖ್ಯರಸ್ತೆಯ ಅವಲಗೋಡು ಬಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಸೊರಬ-ಸಾಗರ ಮುಖ್ಯ ರಸ್ತೆಯ ಅವಲಗೋಡು ಬಳಿಯಲ್ಲಿ ಸೆ.10ರ ಬುಧವಾರ ರಾತ್ರಿ ಸುಮಾರು 7.30ರ ಹಾಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ 7 ತಿಂಗಳ ಹೆಣ್ಣು ಚಿರತೆ ಮರಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅವಲಗೋಡು ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್ ಅವರು ಭೇಟಿ ನೀಡಿ, ಪರಿಶೀಲಿಸಿದರು. ಎಸಿಎಫ್ ಸುರೇಶ್ ಕುಳ್ಳಳ್ಳಿ ಹಾಗೂ ಆರ್ ಎಫ್ ಓ ಶ್ರೀಪಾದ್ ಈರಾನಾಯ್ಕ್ ಅವರ ಗಮನಕ್ಕೆ ತಂದಿದ್ದಾರೆ. ಹುಲಿ ಮರಿಯ ಮರಣೋತ್ತರ ಪರೀಕ್ಷೆಯನ್ನು ಉಳವಿ ಪಶುವೈದ್ಯಾಧಿಕಾರಿ ಡಾ.ಶೈಲೇಶ್ ನಡೆಸಿದರು. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಪರಶುರಾಮ್, ಶ್ರೀಶೈಲ್ ಕೇಂದಿ, ಯೋಗರಾಜ್, ಮುತ್ತಣ್ಣ, ಗಾರ್ಡ್ ಆನಂದ್, ಶಿಲ್ಪ, ಮೌನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇನ್ನೂ ಹಿರಿಯ ಅಧಿಕಾರಿಗಳ ಮುನ್ಸೂಚನೆಯಂತೆ ಕೋರ್ಟ್ ನಿಂದ ಅನುಮತಿ ಪಡೆದು, ಸುಮಾರು 7 ತಿಂಗಳ ಹೆಣ್ಣು…
ಬೆಂಗಳೂರು: ಬಿಜೆಪಿಯ ಮುಖಂಡ ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಅದರ ಹೊರತಾಗಿ ಬೇರೇನೂ ಇಲ್ಲ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಸಿ.ಟಿ ರವಿ ಅವರ ಮಾತು ಕೇಳಿದ್ದೇನೆ. ತೊಡೆ ಮುರಿಯೋ, ತಲೆ ತೆಗೆಯೋದು ಅಂತೆಲ್ಲ ಮಾತನಾಡಿದ್ದಾರೆ. ಸಿ.ಟಿ ರವಿ ಅವರು ಸಚಿವರಾಗಿದ್ದವರು, ಶಾಸಕರು. ಅಂತವರ ಬಾಯಿಯಲ್ಲಿ ಇಂತಹ ಪದ ಬಳಕೆ ಸರಿನಾ ಎಂದು ಪ್ರಶ್ನಿಸಿದರು. ಸಿ.ಟಿ ರವಿ ಅವರ ಮಾತುಗಳ ಬಗ್ಗೆ ಜನರೇ ತೀರ್ಮಾನ ಮಾಡಲಿ. ಹಾಗೆ ದ್ವೇಷ ಭಾಷಣ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅದರಲ್ಲಿ ತಪ್ಪೇನು ಎಂಬುದಾಗಿ ಎಫ್ಐಆರ್ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು. https://kannadanewsnow.com/kannada/the-bmtc-electric-bus-driver-who-assaulted-a-woman-has-been-dismissed-from-duty/ https://kannadanewsnow.com/kannada/tumakuru-the-conflict-that-started-over-water-ends-in-a-grave-incident-horrific-murder-of-a-person-after-a-goods-vehicle-was-overturned/
ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡ್ರೈವರ್ ಕೈ ಮಾಡಿದ್ದರು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆಯ ಮೇಲೆ ಕೈ ಮಾಡಿದ್ದಂತ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡ್ರೈವರ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಬೆಂಗಳೂರಲ್ಲಿ ಕೆಎ 51, ಎಕೆ 4276 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನೊಬ್ಬ ಮಹಿಳೆಯ ಮೇಲೆ ಕೈ ಮಾಡಿದ್ದರು. ಸೆಪ್ಟೆಂಬರ್.8ರಂದು ಪೀಣ್ಯದಿಂದ ಬಾಣಾವರಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಗಲಾಟೆ ನಡೆದಾಗ ಈ ಘಟನೆ ಸಂಭವಿಸಿತ್ತು. ಈ ಗಲಾಟೆಯ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು ಡ್ರೈವರ್ ಮೇಲೆ ಹಲ್ಲೆ ಮಾಡಿದ್ದರು. ಆ ಬಳಿಕ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ಕೂಡ ಕೈ ಮಾಡಿದ್ದನು. ಹೀಗೆ ಹಲ್ಲೆ ಮಾಡಿದ್ದಂತ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನನ್ನು ಕೆಲಸದಿಂದ ತಾತ್ಕಾಲಿಕವಾಗಿ ವಜಾ ಮಾಡಿ ಬಿಎಂಟಿಸಿ ಆದೇಶಿಸಿದೆ.
ಬೆಂಗಳೂರು: ಚಿಂಚನಸೂರು ಗ್ರಾಮದ ಸುತ್ತಮುತ್ತ ಲಘು ಭೂಕಂಪನ ಉಂಟಾಗಿದೆ. ಹೀಗಾಗಿ ಗ್ರಾಮದ ಜನರು ಆತಂಕಕ್ಕೀಡಾಗದಿರಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಬೆಳಗ್ಗೆ 8. 17 ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆ ದಾಖಲಾಗಿರುತ್ತದೆ. ಈ ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದೊಂದಿಗೆ ತಾವು ಸಂಪರ್ಕದಲ್ಲಿದ್ದು ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಭೂಕಂಪನವು ಸಣ್ಣ ಪ್ರಮಾಣದ್ದಾಗಿದ್ದು ಸಾರ್ವಜನಿಕರು ಹಾಗೂ ಚಿಂಚನಸೂರು ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯ ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿನಂತಿ ಮಾಡಿದ್ದಾರೆ. https://kannadanewsnow.com/kannada/earthquake-of-magnitude-2-3-in-kalaburagi-people-were-shaken/
ಕಲಬುರ್ಗಿ: ಜಿಲ್ಲೆಯ ಚಿಂಚನಸೂರಿನಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಭೂಮಿ ಕಂಪಿಸಿದ್ದರಿಂದ ಮನೆಯಿಂದ ಓಡಿ ಬಂದಂತ ಜನರು ಕೆಲ ಕಾಲ ಬಯಲಲ್ಲೇ ಆತಂಕದಲ್ಲಿ ಕಳೆದಿದ್ದಾರೆ. ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಭೂಕಂಪನದ ಅನುಭವ ಉಂಟಾಗಿದೆ. ಈ ಬಗ್ಗೆ ಕೆ ಎಸ್ ಡಿ ಎಂ ಸಿ ಮಾಹಿತಿ ನೀಡಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ ಉಂಟಾಗಿರುವುದಾಗಿ ತಿಳಿಸಿದೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. https://kannadanewsnow.com/kannada/human-50-lakh-compensation-for-the-victims-during-the-conflict-between-humans-and-animals-minister-eshwar-khandre-announced/














