Subscribe to Updates
Get the latest creative news from FooBar about art, design and business.
Author: kannadanewsnow09
ಕಲಬುರ್ಗಿ: ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರನ ಮೇಲೆ ಪೆಟ್ರೋಲ್ ಬಿದ್ದು ಸ್ಥಳದಲ್ಲೇ ಸಜೀವ ದಹನವಾಗಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ನಡೆದಂತ ಅವಘಡದಲ್ಲಿ ಬೈಕ್ ಸವಾರ ಸಜೀವದಹನವಾಗಿರುವಂತ ಶಾಕಿಂಗ್ ಘಟನೆ ನಡೆದಿದೆ. ಪರಸ್ಪರ ಡಿಕ್ಕಿಯಾಗಿ ಬೈಕ್ ಹೊತ್ತಿ ಉರಿದಿದೆ. ಮೈಮೇಲೆ ಪೆಟ್ರೋಲ್ ಬಿದ್ದು ಬೈಕ್ ನಲ್ಲಿ ತೆರಳುತ್ತಿದ್ದಂತ ವ್ಯಕ್ತಿ ಸಜೀವ ದಹನವಾಗಿದ್ದಾರೆ. ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ನಡೆದಂತ ಈ ಘಟನೆಯಲ್ಲಿ ಸವಾರ ದಶರಥ್ ಮಡಿವಾಳ(28) ಎಂಬುವರು ಸಜೀವದಹನವಾಗಿದ್ದಾರೆ. https://kannadanewsnow.com/kannada/distribution-of-2000-electric-buses-to-hyderabad-city-transport-corporation-under-pme-drive-scheme-hdk/ https://kannadanewsnow.com/kannada/a-heart-wrenching-incident-in-the-state-three-commit-suicide-over-daughter-leaving-home/
ನವದೆಹಲಿ: ಪಿಎಂ ಇ ಡ್ರೈವ್ ಯೋಜನೆ ಅಡಿಯಲ್ಲಿ ಹೈದರಾಬಾದ್ ನಗರ ಸಾರಿಗೆ ಸಂಸ್ಥೆಗೆ 2000 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ಸಂಜೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದ ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರು ತಿಳಿಸಿದರು. ಇಂದು ಹೆಚ್ಡಿಕೆ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ತೆಲಂಗಾಣ ಸಿಎಂ ಭೇಟಿಯಾದರು. ಉನ್ನತ ಅಧಿಕಾರಿಗಳು ಹಾಗೂ ಸಂಸದರ ಜತೆ ಭೇಟಿಯಾದರು. ಇನ್ನಷ್ಟು ಎಲೆಕ್ಟ್ರಿಕ್ ಬಸ್ ಗಳನ್ನು ನೀಡುವಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು. ತೆಲಂಗಾಣ ಸಿಎಂ ಮನವಿ ಆಲಿಸಿದಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮುಂದಿನ ಹಂತದಲ್ಲಿ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ತೆಲಂಗಾಣಕ್ಕೆ ಭೇಟಿ ನೀಡುವಂತೆ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆಹ್ವಾನಿಸಿದರು. ಆದಷ್ಟು ಬೇಗ ಭೇಟಿ ನೀಡುವುದಾಗಿ ಹೆಚ್ ಡಿ…
ಬೆಂಗಳೂರು: ಜೂನ್.1ರಿಂದ ವಿಧಾನಸೌಧದ ಒಳಗೆ ಪ್ರವೇಶಿಸುವಂತ ಸಾರ್ವಜನಿಕರಿಗೆ ಶುಲ್ಕ ಫಿಕ್ಸ್ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಧಾನಸೌಧ ಗೈಡೆಡ್ ವಾಕಿಂಗ್ ಟೂರ್ ಶುಲ್ಕವನ್ನು ಪ್ರಕಟಿಸಲಾಗಿದೆ. ಹೌದು. ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎನ್ನುವಂತೆ ವಿಧಾನಸೌಧ ಹಾಗೂ ವಿಧಾನಸಭೆಯ ಸಭಾಂಗಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಸಂಬಂಧ ನಾಳೆ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್ ಗೆ ಚಾಲನೆ ನೀಡಲಾಗುತ್ತಿದೆ. ಜೂನ್.1ರಿಂದ ಸಾರ್ವಜನಿಕರಿಗೆ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ಆದರೇ ಇದಕ್ಕಾಗಿ ಸಾರ್ವಜನಿಕರು ಶುಲ್ಕವನ್ನು ನೀಡಿ ಹೋಗಬೇಕಾಗಿದೆ. ವಿಧಾನಸೌಧ ನೋಡೋದಕ್ಕೆ ಎಷ್ಟು ಶುಲ್ಕ ನಿಗದಿ? ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕೆ ಎಸ್ ಟಿ ಡಿ ಸಿ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ವಿಧಾನಸೌಧ ಟೂರ್ ಗೈಡ್ ಗೆ ವಯಸ್ಕರಿಗೆ ರೂ.50, 16 ವರ್ಷ ಮೇಲ್ಪಟ್ಟವರಿಗೆ ರೂ.50, 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಾಗಿದೆ. ಇನ್ನೂ ಪ್ರತಿ ಭಾನುವಾರ,…
ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಮೇ 22, ಗುರುವಾರ ಸಂಭವಿಸಿದ ಸಾಮೂಹಿಕ ಸ್ಥಗಿತದ ಪರಿಣಾಮಗಳನ್ನು ಎದುರಿಸುತ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಎಕ್ಸ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತೆ ಮಾಡಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಯ ಸುಮಾರಿಗೆ, ಅನೇಕ ಬಳಕೆದಾರರು ಸೈಟ್ ಅನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಟ್ರ್ಯಾಕಿಂಗ್ ಸೇವೆ ಡೌನ್‌ಡೆಕ್ಟರ್ ಸ್ಥಗಿತದ ಉತ್ತುಂಗದಲ್ಲಿ 2,100 ಕ್ಕೂ ಹೆಚ್ಚು ಸಮಸ್ಯೆಗಳ ವರದಿಗಳನ್ನು ದಾಖಲಿಸಿದೆ. ಬಳಕೆದಾರರು ಸೈನ್ ಇನ್ ಮಾಡುವಲ್ಲಿ ತೊಂದರೆ ಮತ್ತು ನೇರ ಸಂದೇಶಗಳನ್ನು ಸ್ವೀಕರಿಸದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸಿದರು. ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸಾಧನಗಳಲ್ಲಿ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಪ್ರಯತ್ನಿಸುತ್ತಿರುವ ಅನೇಕ ಜನರಿಗೆ ಈ ಸ್ಥಗಿತವು ಅನಾನುಕೂಲತೆಯನ್ನು ಉಂಟುಮಾಡಿತು. ಘಟನೆಯ ಬಗ್ಗೆ ಕಂಪನಿಯು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. https://kannadanewsnow.com/kannada/good-news-for-school-students-of-shivamogga-district-from-minister-madhu-bangarappa/ https://kannadanewsnow.com/kannada/a-heart-wrenching-incident-in-the-state-three-commit-suicide-over-daughter-leaving-home/
ಶಿವಮೊಗ್ಗ : ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಹೊರವಲಯ ಬೊಮ್ಮನಕಟ್ಟೆಯಲ್ಲಿನ ಇಂದಿರಾಗಾಂಧಿ ನರ್ಸಿಂಗ್ ಮಹಿಳಾ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿವಮೊಗ್ಗ, ಸೊರಬ, ಸಾಗರ, ಶಿರಾಳಕೊಪ್ಪ, ತೀರ್ಥಹಳ್ಳಿಯಲ್ಲಿ ಈ ವಸತಿ ನಿಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡು ಮೆಟ್ರಿಕ್ ವಿದ್ಯಾಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇಲ್ಲಿ ₹24 ಕೋಟಿ ಮೊತ್ತದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಅಂದಾಜು ₹5 ಕೋಟಿ ಮೊತ್ತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಇವರ ನಿರ್ವಹಣೆಯಲ್ಲಿ ಈ ವಿದ್ಯಾರ್ಥಿ ನಿಲಯ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡಿದೆ. ಪ್ರಸ್ತುತ 100 ಹಾಸಿಗೆಯ ವಸತಿ ನಿಲಯ ಇದಾಗಿದ್ದು,…
ಶಿವಮೊಗ್ಗ : ಮೇ.26ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಲೆನಾಡು ಮುಸ್ಲೀಂ ಒಕ್ಕೂಟದಿಂದ ವಕ್ಫ್ ಕಾಯ್ದೆ ತಿದ್ದುಪಡಿ 2025 ವಿರೋಧಿಸಿ ಮೇ 26ರಂದು ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ಮುಸ್ಲೀಂ ಒಕ್ಕೂಟ ಸದ್ದಾಂ ದೊಡ್ಮನೆ ಹೇಳಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮೇ.26ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಮೂಲ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿರುವುದು, ವಕ್ಫ್ ಆಸ್ತಿಯ ಸಂರಕ್ಷಣೆ ನಮ್ಮ ಜವಾಬ್ದಾರಿ ಮತ್ತು ಸಂವಿಧಾನ ಉಳಿಸಿ ವಕ್ಫ್ ಉಳಿಸಿ ಘೋಷವಾಕ್ಯದಡಿ ಪ್ರತಿಭಟನಾ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಸಖಾಫಿ, ಸುಧೀರ್ ಕುಮಾರ್ ಮುರೊಳ್ಳಿ, ಮೌಲಾನಾ ಮಹ್ಮದ್ ಅಬು ತಾಲೀಬ್ ರಹ್ಮಾನಿ ಸಾಹಬ್, ಅಬ್ದುಲ ಮಜೀದ್ ಸಾಹೇಬ್, ಮೌಲಾನ್ ಸೈಯದ್ ತನ್ವೀರ್ ಹಾಶ್ಮಿ ಸಾಬ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ವಕ್ಫ್ ಮೂಲಕ ಸಾಮಾಜಿಕ,…
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಎರಡು ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರಲ್ಲಿ ಸುರಂಗ ರಸ್ತೆ ನಿರ್ಮಾಣ ಹಾಗೂ ಮಂಡ್ಯದ ಕೆ ಆರ್ ಎಸ್ ನಲ್ಲಿ ಕಾವೇರಿ ಆರತಿ ನಡೆಸುವ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. “ಬೆಂಗಳೂರಿನ ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿಪಿ, ಐಜಿಪಿ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ” ಎಂದು ಮಾಹಿತಿ ನೀಡಿದರು. “ವಿಧಾನಸೌಧದ ಒಂದು ಕಿ.ಮೀ ಸುತ್ತಮುತ್ತ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಟ್ರಾಫಿಕ್ ಜಾಮ್ ಆದರೆ ಎಲ್ಲಾಕಡೆ ಆಗುತ್ತದೆ. ಹೀಗಾಗಿ…
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರಲ್ಲಿ 114 ಕಿಲೋಮೀಟರ್ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಿದೆ. ಅಲ್ಲದೇ ಎರಡು ಹಂತದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೂ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ 114 ಕಿಲೋಮೀಟರ್ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಯೋಜನೆ ಸಂಬಂಧ ಅಭಿಪ್ರಾಯ ಪಡೆಯಲಾಗಿದೆ. ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಪಡೆದಿದ್ದೇವೆ ಎಂದರು. ಬೆಂಗಳೂರಿನಲ್ಲಿ 2 ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮೊದಲ ಹಂತಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಬೆಂಗಳೂರಿನ ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು. ಈ ಉದ್ದೇಶದಿಂದ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಡಿಜಿ ಮತ್ತು ಐಜಿಪಿ, ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತದೆ ಎಂದರು.…
ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ, ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ಇದಲ್ಲದೇ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಬಗ್ಗೆ ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದು, ಮೇ.24ರಿಂದ ಮೇ.27ರವರೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ನೀಡಲಾಗಿದೆ ಎಂದಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ನಾಳೆಯಿಂದ ಮೇ.27ರವರೆಗೆ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯದ ಇತರೆಡೆ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಜನರು ಮುಂಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ತಜ್ಞ ಮನವಿ ಮಾಡಿದ್ದಾರೆ. https://kannadanewsnow.com/kannada/rapid-action-by-mysore-railway-rescue-team-bag-left-by-a-woman-on-the-train-returned/ https://kannadanewsnow.com/kannada/a-heart-wrenching-incident-in-the-state-three-commit-suicide-over-daughter-leaving-home/
ಮೈಸೂರು: ನೈಋತ್ಯ ರೈಲ್ವೆ, ಮೈಸೂರು ವಿಭಾಗದ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ತ್ವರಿತ ಹಾಗೂ ಪ್ರಾಮಾಣಿಕ ಕಾರ್ಯಾಚರಣೆಯಿಂದ ಒಬ್ಬ ಮಹಿಳಾ ಪ್ರಯಾಣಿಕರಿಗೆ ₹1,49,465/- ಮೌಲ್ಯದ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ವ್ಯಾನಿಟಿ ಬ್ಯಾಗ್ ಅನ್ನು ಯಶಸ್ವಿಯಾಗಿ ಮರಳಿಸಿದ್ದಾರೆ. ದಿನಾಂಕ 21 ಮೇ 2025 ರಂದು, ಕಡೂರು ನಿವಾಸಿ ತೇಜಾ ಅವರು ರೈಲು ಸಂಖ್ಯೆ 16589 ರಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಬ್ಯಾಗ್ ಅನ್ನು ಆಕಸ್ಮಿಕವಾಗಿ ಬಿಟ್ಟುಹೋಗಿದ್ದರು. ರೈಲ್‌ಮದದ್ ದೂರನ್ನು ಸ್ವೀಕರಿಸಿದ ತಕ್ಷಣ, ಆರ್‌ಪಿಎಫ್ ಎಸ್ಕಾರ್ಟ್ ತಂಡವು ತಕ್ಷಣವೇ ರೈಲಿನಲ್ಲಿ ಹುಡುಕಾಟ ನಡೆಸಿ ಬ್ಯಾಗ್ ಅನ್ನು ಪತ್ತೆಹಚ್ಚಿದ್ದು. ಆ ಬ್ಯಾಗ್ ಅನ್ನು ದಾವಣಗೆರೆಯ ಆರ್‌ಪಿಎಫ್ ಪೋಸ್ಟ್‌ಗೆ ಹಸ್ತಾಂತರಿಸಲಾಯಿತು. ಸೂಕ್ತ ಪರಿಶೀಲನೆಯ ನಂತರ, 15 ಗ್ರಾಂ ಚಿನ್ನಾಭರಣ ಮತ್ತು ಎರಡು ಐಫೋನ್ ಚಾರ್ಜರ್‌ಗಳನ್ನು ಒಳಗೊಂಡ ವಸ್ತುಗಳನ್ನು ದಿನಾಂಕ 22 ಮೇ 2025 ರಂದು ಮಾಲೀಕರಿಗೆ ಹಿಂದಿರುಗಿಸಲಾಯಿತು. ಮೈಸೂರು ವಿಭಾಗದ ಹಿರಿಯ ವಿಭಾಗೀಯ ಆಯುಕ್ತ, ಆರ್‌ಪಿಎಫ್, ಸ್ಯಾಮ್ ಪ್ರಸಾಂತ್ ಜೆ.ಆರ್, ಆಪರೇಷನ್…