Author: kannadanewsnow09

ನವದೆಹಲಿ: ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದ ಇತರ ದೇಶಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದೆ. ಕೆಲವೊಮ್ಮೆ ಕಡಲ್ಗಳ್ಳರಿಂದ, ಕೆಲವೊಮ್ಮೆ ವೈದ್ಯಕೀಯ ತುರ್ತುಸ್ಥಿತಿಯಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಮಾಹಿತಿ ಬಂದ ಕೂಡಲೇ ತಂಡವು ಅಗತ್ಯ ಸಹಾಯವನ್ನು ಒದಗಿಸುತ್ತಿದೆ. ಈ ಮೂಲಕ ಭಾರತೀಯ ನೌಕಾಪಡೆಯು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಹೌದು. ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುರ್ತು ಕರೆಗೆ ಸ್ಪಂದಿಸಿದ ಭಾರತೀಯ ನೌಕಾಪಡೆಯು ತಕ್ಷಣ 20 ಪಾಕಿಸ್ತಾನಿ ಸಿಬ್ಬಂದಿಯನ್ನು ಹೊತ್ತ ಇರಾನಿನ ಮೀನುಗಾರಿಕಾ ಹಡಗಿಗೆ ವೈದ್ಯಕೀಯ ನೆರವು ನೀಡಿತು. ಅರೇಬಿಯನ್ ಸಮುದ್ರದಲ್ಲಿ ಕಡಲ್ಗಳ್ಳತನವನ್ನು ತಡೆಗಟ್ಟಲು ನಿಯೋಜಿಸಲಾದ ಐಎನ್ಎಸ್ ಸುಮೇಧಾ ಮಿಷನ್ ತುರ್ತು ಕರೆಗೆ ತಕ್ಷಣದ ಪ್ರತಿಕ್ರಿಯೆಯಾಗಿ, ಇರಾನಿನ ಹಡಗಿಗೆ ನಿರ್ಣಾಯಕ ವೈದ್ಯಕೀಯ ಸಹಾಯವನ್ನು ಒದಗಿಸಿದೆ ಎಂದು ನೌಕಾಪಡೆ ಶನಿವಾರ (4 ಮೇ 2024) ಹೇಳಿಕೆ ನೀಡಿದೆ. ವಿಮಾನದಲ್ಲಿ 20 ಪಾಕಿಸ್ತಾನಿ ಸಿಬ್ಬಂದಿ ಇದ್ದರು. ಏಪ್ರಿಲ್ 30 ರಂದು ಸಹಾಯವನ್ನು ತಲುಪಿಸಲಾಯಿತು ಏಪ್ರಿಲ್ 30 ರಂದು ಗಸ್ತು ಹಡಗು ಐಎನ್ಎಸ್ ಸುಮೇಧಾ ಈ ಸಹಾಯವನ್ನು ತಲುಪಿಸಿದೆ ಎಂದು ನೌಕಾಪಡೆ…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳ ಬೆನ್ನಲ್ಲೇ, ಸಿಬಿಐ ಕೂಡ ತನಿಖೆಗೆ ಇಳಿಯೋ ಸಾಧ್ಯತೆ ಇದೆ. ಅಲ್ಲದೇ ಸಿಬಿಐನಿಂದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸಿಎಂ ಸಿದ್ಧರಾಮ್ಯಯ ಎಸ್ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. ಇಂದಿನ ಸಿಎಂ ನೇತೃತ್ವದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ಇದೆ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಸಿದ್ದರಾಮಯ್ಯ ಅವರಿಗೆ ತಿಳಿಸಿದೆ. ಪ್ರಜ್ವಲ್ ರೇವಣ್ಣ ಅವರ ತಂದೆ ಎಚ್.ಡಿ.ರೇವಣ್ಣ ವಿರುದ್ಧ ಎಸ್ಐಟಿ ಎರಡನೇ ಲುಕ್ಔಟ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್ ಮತ್ತು ಅವರ ತಂದೆಯ ವಿರುದ್ಧ ಇನ್ನೂ ಎರಡು ಎಫ್ಐಆರ್ಗಳು ದಾಖಲಾದ ನಂತರ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾದಂತೆ ಆಗಿದೆ. ಏತನ್ಮಧ್ಯೆ, ಕಾಂಗ್ರೆಸ್ ಹಿರಿಯ ಮುಖಂಡ…

Read More

ನವದೆಹಲಿ: ಈಗಾಗಲೇ ಸನಾತನ ಧರ್ಮ, ಆಚರಣೆಯನ್ನು ಪ್ರಶ್ನಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತೆ ಅದೇ ವಿಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸನಾತನ ಆಚರಣೆಗಳನ್ನು ಮತ್ತೆ ಪ್ರಶ್ನಿಸಿದ ರಾಹುಲ್ ಗಾಂಧಿ, ‘ಪ್ರಧಾನಿಯ ದ್ವಾರಕಾ ಪೂಜೆ ನಾಟಕ’ ಎಂದಿದ್ದಾರೆ. ಪುಣೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಕೆಲವೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಕೆಲವೊಮ್ಮೆ ಅವರು ‘ನಾಟಕ’ವನ್ನು ರಚಿಸಲು ನೀರಿನೊಳಗೆ ಹೋಗುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸನಾತನ ಧರ್ಮವನ್ನು ಗುರಿಯಾಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದ್ವಾರಕಾ ಪೂಜೆಯನ್ನು ಅವರು ನಾಟಕ ಎಂದು ಬಣ್ಣಿಸಿದ್ದಾರೆ. ಪುಣೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಕೆಲವೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಸಮುದ್ರದ ಕೆಳಗೆ ಹೋಗಿ ನಾಟಕ ಮಾಡುತ್ತಾರೆ. ಅವನು ನೀರಿನ ಕೆಳಗೆ ಹೋಗಿ ನಟಿಸಲು ಪ್ರಾರಂಭಿಸುತ್ತಾನೆ ಎಂದಿದ್ದಾರೆ. ಈಗ ರಾಹುಲ್ ಗಾಂಧಿ ಅವರು ಮಾತನಾಡಿರುವಂತ ವೀಡಿಯೋ…

Read More

ಹುಬ್ಬಳ್ಳಿ: ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಲವ್ ಜಿಹಾದ್ ಶುರವಾಗಿ. ರಾಜ್ಯದಲ್ಲಿ ನಿರಾತಂಕವಾಗಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳ ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿ ಸದ್ದಾಂ ಹುಸೇನ್ ಕಬ್ಬಿಣದ ರಾಡ್ ತೆಗೆದುಕೊಂಡು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತ ಕೆಲಸವಾಗಿದೆ ಎಂದು ಹೇಳಿದರು. ಇದೇ ವೇಳೆ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನಾವು ಯಾರೂ ಪ್ರಜ್ವಲ್ ರೇವಣ್ಣ ಪ್ರಕರಣ ಬೆಂಬಲಿಸುತ್ತಿಲ್ಲ. ತಪ್ಪು ಮಾಡಿರೋರಿಗೆ ಶಿಕ್ಷೆ ಆಗಬೇಕು. ನನಗೆ ಪೆನ್ ಡ್ರೈವ್ ಬಗ್ಗೆ ಮೊದಲೇ ಪತ್ರ ಬರೆದಿದ್ದರು ಅಂತಿದ್ದಾರೆ. ಆದ್ರೇ ನನಗಂತೂ ಯಾವುದೇ ಪತ್ರ ಬಂದಿಲ್ಲ. ರಾಜ್ಯ ಸರ್ಕಾರ ಮಾತ್ರ ಈಗ ಪೆನ್ ಡ್ರೈವ್ ಹಿಂದೆ ಬಿದ್ದಿದೆ ಎಂದರು. https://kannadanewsnow.com/kannada/prajwal-revanna-pornography-video-case-cm-siddaramaiah-holds-crucial-meeting-with-sit-officials-2/ https://kannadanewsnow.com/kannada/rise-in-communicable-diseases-due-to-heat-wave-in-the-state-instructions-to-take-necessary-action/

Read More

ಗದಗ : ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಹೋರಾಟ ಮಾಡಲಾಗುವುದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌ ಮುಂಡಗರಿಯಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.ಮುಂಡರಗಿ ತಾಲೂಕಿನ ಮಣ್ಣು ಫಲವತ್ತಾದ ಮಣ್ಣು, ಮುಂಡರಗಿ ತಾಲೂಕಿನ ಮಣ್ಣಿಗೆ ತುಂಗಭದ್ರಾ ನೀರು ಹರಿಸಿದರೆ ಭೂಮಿತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಿದ್ದು ನಾನು. ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ, ನಾಲ್ಕು ಹಳ್ಳಿಗಳನ್ನು ಸ್ಥಳಾಂತರ ಮಾಡಿ ಕೆನಾಲ್ ಗಳನ್ನು ಮಾಡಿದ್ದೇವೆ. ಹನಿ ನೀರಾವರಿ ಮಾಡುವ ಗುರಿ‌ ಇದೆ. ಆದರೆ, ಈ ಸರ್ಕಾರ ಯೋಜನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ಈ ಭಾಗಕ್ಕೆ ನೀರು ಕೊಡದಿದ್ದರೆ ದೊಡ್ಡ ಹೋರಾಟ ಮಾಡಲಾಗುವುದು. ಕೇವಲ ಮುಂಡರಗಿ ಅಷ್ಟೇ ಅಲ್ಲ, ಗದಗ, ರೋಣ, ಕೊಪ್ಪಳ ಭಾಗದವರೆಗೂ ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸಬೇಕು ಎಂದು ಹೇಳಿದರು. ಜಾಲವಾಡಗಿ ಏತ ನೀರಾವರಿ ಈ…

Read More

ವಿಜಯಪುರ: ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮರ್ಯಾಧಾ ಹತ್ಯೆ ಮಾಡಿದಂತ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ರೇ, 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಕೋರ್ಟ್ ಆದೇಶಿಸಿದೆ. ಇಂದು ಈ ಕುರಿತಂತೆ ವಿಜಯಪುರ ಜಿಲ್ಲೆಯ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ಮರ್ಯಾಧಾ ಹತ್ಯೆ ಮಾಡಿದಂತ ಇಬ್ರಾಹಿಂಸಾಬ್ ಅತ್ತಾರ್ ಹಾಗೂ ಅಕ್ಬರ್ ಸಾಭ್ ಅತ್ತಾರ್ ಎಂಬುವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಇನ್ನೂ ಇದೇ ಪ್ರಕರಣದಲ್ಲಿ ರಂಜಾನ್ ಬಾಬಿ, ದಾವಲಭಿ ಜಮಾದಾ, ಅಜಮಾ ಸೇರಿದಂತೆ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ 4.19 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ಅಂದಹಾಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಯಬಣ್ಣ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತ್ರ ಬೇರೆ ಊರಿಗೆ ಹೋಗಿ ಬಾನು ಬೇಗಂ ಹಾಗೂ ಸಾಯಬಣ್ಣ ವಾಸಿಸುತ್ತಿದ್ದರು. ಹೆರಿಗೆಗಾಗಿ 2017ರಲ್ಲಿ ಮನೆಗೆ ಬಂದಿದ್ದಂತ ಸಂದರ್ಭದಲ್ಲಿ ದಂಪತಿಗಳ ಮೇಲೆ ಬಾನು ಬೇಗಂ…

Read More

ಉತ್ತರ ಕನ್ನಡ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಮೇ.7ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತ ನೌಕರರಿಗೆ ತರಬೇತಿಯನ್ನು ಇಂದು ನೀಡಲಾಗಿತ್ತು. ಆದ್ರೇ ಚುನಾವಣಾ ಕರ್ತವ್ಯದ ತರಬೇತಿಗೆ ಹಾಜರಾಗದ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಚುನಾವಣಾ ಕರ್ತವ್ಯಕ್ಕೆ ತೆಗೆದುಕೊಂಡಿದ್ದಂತ ನೌಕರರಿಗೆ ಇಂದು ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿಗೆ ಹಾಜರಾಗದೇ ಗೈರಾಗಿದ್ದಂತ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಂದಹಾಗೇ ಅಮಾನತುಗೊಂಡವರೆಂದರೇ ಮಾವನಕುರ್ವಿ ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ಲಕ್ಷ್ಮಣ್, ಮಂಡಳ್ಳಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಆನಂದ್ ಹಾಗೂ ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಶ್ರೀಧರ್ ಎಂಬುವರಾಗಿದ್ದಾರೆ. ಈ ಮೂವರನ್ನು ಮೇ.7ರಂದು ನಡೆಯಲಿರುವಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಇವರು ಇಂದಿನ ತರಬೇತಿಗೆ ಗೈರು ಹಿನ್ನಲೆಯಲ್ಲಿ ಮೂವರನ್ನು ಡಿಸಿ…

Read More

ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ, ಲೈಂಗಿಕ ದೌರ್ಜನ್ಯವೆಸಗಿ, ಗರ್ಭಿಣಿಯಾದ ನಂತ್ರ ಪರಾರಿಯಾಗಿದ್ದಂತ ಮುಸ್ಲಿಂ ಯುವಕನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಂತ ಹುಬ್ಬಳ್ಳಿ-ಧಾರವಾಡ ನಗರ ಆಯುಕ್ತೆ ರೇಣುಕಾ ಸುಕುಮಾರ್ ಅವರು, ಹುಬ್ಬಳ್ಳಿಯ ನವನಗರದಲ್ಲಿ ನಡೆದಿದ್ದಂತ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದಂತ ಮುಸ್ಲೀಂ ಯುವಕನ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು ಎಂದಿದ್ದಾರೆ. ಮುಸ್ಲೀಂ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಇದೀಗ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದಂತ ಮುಸ್ಲೀಂ ಯುವಕನನ್ನು ಬಂಧಿಸಿರೋದಾಗಿ ತಿಳಿಸಿದ್ದಾರೆ. https://kannadanewsnow.com/kannada/video-rahul-gandhi-will-contest-elections-in-pakistan-and-win-assam-cm-himanta-biswas-statement-goes-viral/ https://kannadanewsnow.com/kannada/breaking-after-son-prajwal-sit-issues-lookout-notice-to-father-revanna/

Read More

ಬಾಗಲಕೋಟೆ: ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಲಾಗುತ್ತದೆ. ರಕ್ಷಣೆ ನೀಡುವಂತೆಯೂ ಪೊಲೀಸರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಮಹಿಳೆಯರಿಗೆ ರಕ್ಷಣೆ ಕೊಡುತ್ತದೆ ಎಂದು ಹೇಳುವ ಮೋದಿಯವರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏನು ಮಾಡಿದ್ದಾರೆ ಎಂದು ಜಗಜ್ಜಾಹೀರಾಗಿದೆ. ಇದು ತಿಳಿದಿದ್ದರೂ ಕೂಡ ಹೊಂದಾಣಿಕೆ ಮಾಡಿಕೊಂಡು ಅತ್ಯಾಚಾರ ಮಾಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟಿದ್ದೀರಲ್ಲಾ? ಇದೇನಾ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ರೀತಿ ? ಅತ್ಯಾಚಾರಿಗಳಿಗೆ ರಕ್ಷಣೆ ಕೊಟ್ಟು, ಹೆಣ್ಣು ಮಕ್ಕಳಿಗೆ ಏನು ಸಂದೇಶ ನೀಡಿದ್ದೀರಿ ಎಂದು ಇಡೀ ರಾಜ್ಯದ ಜನ ಕೇಳುತ್ತಿದ್ದಾರೆ ಎಂದರು. ಮೋದಿ ಬರೀ ಸುಳ್ಳು ಹೇಳುತ್ತಾರೆ. ಯಾವ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದ ಮೇಲೆ ಅವರು ಪ್ರಧಾನಿ ಕುರ್ಚಿಯಲ್ಲಿ ಉಳಿಯಲು ಯೋಗ್ಯತೆ ಇಲ್ಲ ಎನ್ನಬೇಕಾಗುತ್ತದೆ ಎಂದರು. https://kannadanewsnow.com/kannada/cm-siddaramaiah-vows-to-catch-prajwal-revanna-no-matter-which-country-he-goes-to/ https://kannadanewsnow.com/kannada/breaking-after-son-prajwal-sit-issues-lookout-notice-to-father-revanna/

Read More

ಬಾಗಲಕೋಟೆ: ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಶಪಥ ಮಾಡಿದ್ದಾರೆ. ಇಂದು ಬಾಗಲಕೋಟೆ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಾದರೂ ಅಂತರರಾಷ್ಟ್ರೀಯ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದರು. ರೇವಣ್ಣ ದುಬೈಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು ಯಾವ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ನ್ನು ರದ್ದು ಮಾಡಲು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಪ್ರಜ್ವಲ್‌ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ ಎಂದರು. ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿದೆ ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆ ಮಾಡಿರುವ ಆರೋಪವಿದೆ. ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತಿಳಿದೂ ಬಿಜೆಪಿ ಜೆಡಿಎಸ್…

Read More