Subscribe to Updates
Get the latest creative news from FooBar about art, design and business.
Author: kannadanewsnow09
ಬಳ್ಳಾರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ.25 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ. ನಗರದ ಜೊಯಾಲೂಕಸ್ ಜ್ಯೂವೆಲರಿ ಕಂಪನಿಯವರು ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳುವರು. 25 ವರ್ಷ ಕೆಳಗಿನ ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ, ಪದವಿ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು. ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು. ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ-ವಿವರ (ಬಯೋಡೇಟಾ) ಗಳೊಂದಿಗೆ ಅಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ…
ಬೆಂಗಳೂರು: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಮತ್ತು ಸಾಲ-ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ: ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಸಾಮಾನ್ಯ ವರ್ಗದ ಆರ್ಯವೈಶ್ಯ ಸಮುದಾಯಕ್ಕೆ ಸೇರಿರಬೇಕು ಮತ್ತು ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವಿರಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು. ಅರ್ಹ ಅರ್ಜಿದಾರರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ. 2019-20 ಹಾಗೂ 2021-22ನೇ ಸಾಲಿನಲ್ಲಿ ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ ಸಾಲ ಪಡೆದು ಸಕಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಮರುಪಾವತಿಸಿದ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಗಳ ವಿವರ: ಸ್ವಯಂ ಉದ್ಯೋಗ ಸಾಲ ಯೋಜನೆ, ಆರ್ಯವೈಶ್ಯ ಆಹಾರ ವಾಹಿನಿ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ), ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ…
ದಾವಣಗೆರೆ : ದಾವಣಗೆರೆ ಜಿಲ್ಲೆಯು ರಾಜ್ಯದ ಮಧ್ಯಭಾಗದಲ್ಲಿದ್ದು, ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಾಕೃತಿಕ ಸುಂದರವಾದ ಪ್ರವಾಸಿ ತಾಣವನ್ನು ಒಳಗೊಂಡ ಏಷ್ಯಾದ 2ನೇ ಅತೀ ದೊಡ್ಡ ಮಾನವ ನಿರ್ಮಿತ ಶಾಂತಿಸಾಗರ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ, ಪ್ರವಾಸೋದ್ಯಮ ಇಲಾಖೆಯಿಂದ ಉದ್ಯಾನವನ, ಪಾರ್ಕಿಂಗ್, ಬೋಟಿಂಗ್ ಸೌಲಭ್ಯ ಹಾಗೂ ವಾಣಿಜ್ಯ ಕೊಠಡಿ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಂದೆಡೆ ಪ್ರವಾಸಿಗರನ್ನು ಸೆಳೆಯುತ್ತಿರುವುದರಿಂದ ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬೇಟಿ ನೀಡುತ್ತಾರೆ. ಇನ್ನೊಂದೆಡೆ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನೈಸರ್ಗಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಪ್ರವಾಸಿಗರು ನೀರಿನ ಬಾಟಲಿ, ಪಾನೀಯ ಬಾಟಲಿ, ಪ್ಲಾಸ್ಟಿಕ್ ಕವರ್, ಚಾಕಲೇಟ್ ಕವರ್, ಚಿಪ್ಸ್ ಪ್ಯಾಕೇಟ್ ಇತ್ಯಾದಿ ಏಕ ಬಳಕೆಯ ಪ್ಲಾಸ್ಟಿಕ್‍ಗಳನ್ನು ಕೆರೆಯಲ್ಲಿ ಮತ್ತು ಎಲ್ಲಂದರಲ್ಲಿ ಹಾಕುತ್ತಿರುವುದರಿಂದ ಕೆರೆ ಮತ್ತು ಪ್ರವಾಸಿ ಸ್ಥಳದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ನೀರಿನಲ್ಲಿ ಹಾಕುವುದರಿಂದ ಜಲಚರಗಳಿಗೂ ಸಹ ಹಾನಿಯಾಗುತ್ತಿದೆ. ಅಲ್ಲದೇ ಪ್ರಸ್ತುತ ಈ ಕೆರೆಯ ನೀರನ್ನು ಬಹುಗ್ರಾಮ ಕುಡಿಯುವ ನೀರಿಗಾಗಿ ಸರಬರಾಜು ಮಾಡಲಾಗುತ್ತಿದೆ.…
ಚಿತ್ರದುರ್ಗ: ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದು ಸಮಾಜ ಸೇವಕ ಜಿ. ಜಯರಾಮಯ್ಯ ಅಭಿಪ್ರಾಯಪಟ್ಟರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆನೆಸಿದ್ರಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಯಧು ಕ್ರಿಕೆಟರ್ಸ್ ಏರ್ಪಡಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗೆ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಮಾತನಾಡಿದರು. ಯುವ ಜನತೆ ಕ್ರೀಡ್ರೆಗಳ ಮಹತ್ವ ಅರಿತು, ಅಭಿವೃದ್ಧಿ ಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಹ ಮತ್ತು ಮನಸ್ಸು ಸದೃಢರಾಗಿರುತ್ತದೆ. ಕ್ರೀಡೆಯಿಂದ ಯುವಜನರಲ್ಲಿ ನಾಯಕತ್ವ ಗುಣ ಮತ್ತು ಕ್ರೀಡಾ ಮನೋಭಾವ ಬೆಳೆಸಲು ಉಪಯುಕ್ತವಾಗಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಕ್ರೀಡೆಯಲ್ಲಿ ಪಾಲ್ಗೋಳ್ಳುವುದು ಮುಖ್ಯವಾಗಿದೆ. ಕ್ರೀಡೆಗಳಲ್ಲಿ ಗೆಲುವು ಸ್ವೀಕರಿಸಿದಂತೆ ಸೋಲನ್ನು ಹಾಗೆಯೇ ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಡಾಬಾ ಚಿಕ್ಕಣ್ಣ, ಗ್ರಾಪಂ ಸದಸ್ಯ ಮಹಾಲಿಂಗಪ್ಪ, ತಿಪ್ಪಣ್ಣ, ರಾಮಣ್ಣ, ಚಿತ್ತಯ್ಯ, ಶಿವಣ್ಣ, ನಾಗಪ್ಪ, ಕಿಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಆಂಧ್ರಪ್ರದೇಶ: ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ನಟ ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸೈಬರಾಬಾದ್‌ನ ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅವರು ದೂರು ದಾಖಲಿಸಿದ್ದಾರೆ ಎಂದು ANI ವರದಿ ಮಾಡಿದೆ. ಸೂರ್ಯ ಅವರ ‘ರೆಟ್ರೊ’ ಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ವಿಜಯ್ ಮಾಡಿದ ಹೇಳಿಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ, ದೇವರಕೊಂಡ ಅವರು ಕಾಶ್ಮೀರದಲ್ಲಿ ಪಹಲ್ಗಾಂವ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಪರಿಹಾರವೆಂದರೆ ಅವರಿಗೆ (ಭಯೋತ್ಪಾದಕರಿಗೆ) ಶಿಕ್ಷಣ ನೀಡುವುದು ಮತ್ತು ಅವರು ಮೆದುಳು ತೊಳೆಯದಂತೆ ನೋಡಿಕೊಳ್ಳುವುದು. ಅವರು ಏನು ಸಾಧಿಸುತ್ತಾರೆ? ಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರಿಗಳು ನಮ್ಮವರು ಎಂದಿದ್ದರು. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸ್ವತಃ…
ಹಾಸನ: ಕರ್ನಾಟಕದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣಗಳು ಗೋಚರಿಸಲಿದ್ದಾವೆ. ಆದರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದಾಗಿ ಕೋಡಿಮಠ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಭಾರತಕ್ಕೆ ನಿರೀಕ್ಷೆಗೂ ಮೀರಿದಂತ ದುಃಖ ಬರಲಿದೆ ಎಂದರು. ಇನ್ನೂ ಮೇಘ ಸ್ಪೋಟ, ಯುದ್ಧದ ಜೊತೆಗೆ ಅರಸನಾಲಯಕ್ಕೆ ಕಾರ್ಮೋಡವು ಕಾದಿದೆ. ಇದು ರಾಜ್ಯ, ದೇಶಕ್ಕೂ ಕಾಲಿಡುವುದಾಗಿ ಆಘಾತಕಾರಿ ಭವಿಷ್ಯ ನುಡಿದರು. ಈ ಹಿಂದೆ ಎರಡು ಮೂರು ಪ್ರಧಾನ ಮಂತ್ರಿಗಳ ಕೊಲೆ ಆಗ್ತಾರೆ ಎಂಬುದಾಗಿ ಭವಿಷ್ಯ ನುಡಿದಿದ್ದೆನು. ಅದು ಈಗ ಆಗಿದೆ. ಸಾಗರದಲ್ಲಿ ಒಂದು ಜಲಸ್ಪೋಟ ಎದ್ದಿದೆ. ಅದು ಕೂಡ ಆಗಲಿದೆ ಎಂದು ತಿಳಿಸಿದರು. ವಿಶ್ವದಲ್ಲಿ ನಡೆಯುತ್ತಿರುವಂತ ಯುದ್ಧ ನಿಲ್ಲೋದು ಸಂವತ್ಸರ ಪರ್ವದಲ್ಲಿ ಕಷ್ಟವಾಗಿದೆ. ಈ ದ್ವೇಷ, ಅಸೂಯೆಗಳ ಮಧ್ಯದಲ್ಲಿ ಒಂದಿಬ್ಬರು ಬಲಿಯಾಗುತ್ತಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು. ಕೊರೋನಾ ವಿಶ್ವದಲ್ಲಿ ಮತ್ತೊಂದು ರೂಪ ತಾಳಲಿದೆ. ಅಕಾಲದಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ-2025 ಅಂತಿಮವಾಗಿ ದಿನಾಂಕವನ್ನು ವಿಸ್ತರಿಸಿ ಆದೇಶಿಸಿದೆ. ಆದೇಶದಂತೆ ಜೂನ್ 30ರವರೆಗೆ ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಈ ಕುರಿತಂತೆ ನ್ಯಾಯಮೂರ್ತಿ ಡಾ.ಹೆಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು (Emperical Data) ಸಂಗ್ರಹಿಸಲು, ದಿನಾಂಕ: 05-05-2025 ರಿಂದ ಮನ-ಮನ ಭೇಟಿ ಮೂಲಕ ರಾಜ್ಯಾದ್ಯಂತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿರುತ್ತದೆ ಎಂದಿದ್ದಾರೆ. ಸಮೀಕ್ಷಾ ಕಾರ್ಯದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಸಮೀಕ್ಷೆಯಲ್ಲಿ ಇದುವರೆಗೂ ಭಾಗವಹಿಸದೇ ಇರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರಿಗೆ, ದಿನಾಂಕ: 09.06.2025 ರಿಂದ ದಿನಾಂಕ: 22.06.2025 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿಧಾನದ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. 1. ನಾಗರೀಕ ಸೇವಾ ಕೇಂದ್ರಗಳಾದ, “ಕರ್ನಾಟಕ ಒನ್’ (Karnataka one) ‘ಬೆಂಗಳೂರು…
ಸಿರಿಯಾ: ಇಲ್ಲಿನ ಚರ್ಚ್‌ವೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ಬಾಂಬರ್ ದಾಳಿ: ಕನಿಷ್ಠ 15 ಸಾವುನ್ನಪ್ಪಿದ್ದು, ಹಲವರಿಗೆ ಗಾಯಗೊಂಡಿದ್ದಾರೆ. ಸಿರಿಯಾದ ಡಮಾಸ್ಕಸ್‌ನ ದ್ವೇಲಾ ಪ್ರದೇಶದಲ್ಲಿ ಭಾನುವಾರ ಜನರಿಂದ ತುಂಬಿದ್ದ ಚರ್ಚ್‌ನೊಳಗೆ ಇಸ್ಲಾಮಿಕ್ ಸ್ಟೇಟ್ ಆತ್ಮಹತ್ಯಾ ಬಾಂಬರ್ ಸ್ವತಃ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಮಾರ್ ಎಲಿಯಾಸ್ ಚರ್ಚ್ ಒಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. “ಡಮಾಸ್ಕಸ್‌ನ ದ್ವೇಲಾ ಪ್ರದೇಶದಲ್ಲಿರುವ ಸೇಂಟ್ ಎಲಿಯಾಸ್ ಚರ್ಚ್ ಒಳಗೆ ಆತ್ಮಹತ್ಯಾ ದಾಳಿಕೋರನೊಬ್ಬ ಸ್ಫೋಟಕ ಪಟ್ಟಿಯನ್ನು ಸ್ಫೋಟಿಸಿದ್ದಾನೆ” ಎಂದು ರಾಜ್ಯ ಟಿವಿ ವರದಿ ಮಾಡಿದೆ. ದಾಳಿಯಲ್ಲಿ “ಪ್ರಾಥಮಿಕ ಸಂಖ್ಯೆಯ ಪ್ರಕಾರ 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ” ಎಂದು ಸಿರಿಯನ್ ನಾಗರಿಕ ರಕ್ಷಣಾ ಹೇಳಿಕೆಯಲ್ಲಿ ತಿಳಿಸಿದೆ. ಡಮಾಸ್ಕಸ್ ಚರ್ಚ್‌ನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬರ್ ಇಸ್ಲಾಮಿಕ್ ಸ್ಟೇಟ್ ಸದಸ್ಯ ಎಂದು ಸಿರಿಯಾದ ಆಂತರಿಕ ಸಚಿವಾಲಯ ತಿಳಿಸಿದೆ. “ಡಾಯೇಶ್ (IS) ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಆತ್ಮಹತ್ಯಾ…
ಶಿವಮೊಗ್ಗ: ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ, ಆತ್ಮವಿಶ್ವಾಸ ಹಾಗೂ ನಿರ್ಭಯದಂತ ಪಂಚಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬುದಾಗಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಎಂ ಎಲ್ ಹಳ್ಳಿಯಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ಶ್ರೀ ರಾಮಕೃಷ್ಣ ಸಮೂಹ ಸಂಸ್ಥೆಗಳು ಹಾಗೂ ಚಿಕ್ಕಮಗಳೂರು ಯುವ ಸ್ಪೂರ್ತಿ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದಂತ ವ್ಯಕ್ತಿತ್ವ ವಿಕಸನ ಮತ್ತು ವಿದ್ಯಾರ್ಥಿ ಜಾಗೃತ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ವಿದ್ಯಾರ್ಥಗಳು ಇತಿಹಾಸ ಮತ್ತು ಸಂಸ್ಕೃತಿ ತಿಳಿದುಕೊಳ್ಳಬೇಕು. ರಾಮಕೃಷ್ಣ ಪರಮಹಂಸರ ಸಮನ್ವಯತೆಯನ್ನು ಅರಿಯಬೇಕು. ಮಹಾತ್ಮಾ ಗಾಂಧೀಜಿಯವರ ಕಲ್ಯಾಣ ರಾಜ್ಯ, ಸರ್ವೋದಯ ಉದಯದ ಬಗ್ಗೆ ಅರಿವಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದರು. ನನಗೆ ಕುವೆಂಪು ಅವರ ಸಮನ್ವಯತೆ, ಸರ್ವೋದಯ, ಪೂರ್ಣದೃಷ್ಠಿ ಪ್ರೇರಣೆ. ಆ ಮೂಲಕ ಮಾನವೀಯ ಗುಣಲಕ್ಷಣ ಬೆಳೆಸಿಕೊಳ್ಳುವಂತಾಗಬೇಕು. ಕಲಿಕೆಗೆ ವಿರಾಮವಿಲ್ಲ. ಅದೊಂದು ನಿರಂತರ ಪ್ರಕ್ರಿಯೆಯಾಗಿದೆ. ತಾಯಿಯ ಗರ್ಭಾಶಯದಿಂದ ಹೊರಬಂದಾಗಿನಿಂದ ಆರಂಭಗೊಂಡು,…
ಶಿವಮೊಗ್ಗ: 2ನೇ ಬಾರಿಗೆ ಸಾಗರ ತಾಲ್ಲೂಕು ಮೊಗವೀರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಕೆ ಮೊಗವೀರ ಅವರು ಎರಡೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೊಗವೀರ ಸಮಾಜದ ಮುಖಂಡ ನಾಡೋಜ. ಜಿ. ಶಂಕರ್ ನೇತೃತ್ವದಲ್ಲಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾ ಉಪಸ್ಥಿತಿಯಲ್ಲಿ ಸಾಗರ ತಾಲ್ಲೂಕು ಮೊಗವೀರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ಸತೀಶ್ ಕೆ ಮೊಗವೀರ ಅವರ ಆಯ್ಕೆಯನ್ನು ಸಭೆಯ ಎಲ್ಲಾ ಮುಖಂಡರು ಸರ್ವಾನುಮತದಿಂದ ಅನುಮೋದಿಸಿದರು. ಈ ಮೂಲಕ ಸತೀಶ್ ಕೆ ಮೊಗವೀರ ಅವರು ಸಾಗರ ತಾಲ್ಲೂಕು ಮೊಗವೀರ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಾಗರ ತಾಲ್ಲೂಕು ಮೊಗವೀರ ಸಮುದಾಯದ ಏಳಿಗೆಗಾಗಿ ಶ್ರಮೀಸುತ್ತೇನೆ. ನನಗೆ ಸಮುದಾಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಂತ ನಾಡೋಜ ಜಿ.ಶಂಕರ್, ಜಯ ಸಿ ಕೋಟ್ಯಾ, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್, ಹಾಲಿ ಅಧ್ಯಕ್ಷರಾಗಿದ್ದಂತ ನಾಗರಾಜ್ ಬಿಲಗುಂಜಿ ಸೇರಿದಂತೆ ಸಮುದಾಯದ ಎಲ್ಲಾ ಮುಖಂಡರಿಗೆ ಸತೀಶ್ ಕೆ…