Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ವಾಣಿಜ್ಯ ತೆರಿಗೆ ನೋಟಿಸ್ ವಿರೋಧಿಸಿ ಜುಲೈ.25ರಂದು ವರ್ತಕರು ಕರೆ ನೀಡಿದ್ದಂತ ಬಂದ್ ವಾಪಾಸ್ ಪಡೆಯಲಾಗಿದೆ ಎನ್ನಲಾಗುತ್ತಿತ್ತು. ಆದರೇ ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಅವರು ಜುಲೈ.25ರಂದು ಕರೆ ನೀಡಿದ್ದಂತ ಬಂದ್ ವಾಪಾಸ್ಸು ಪಡೆದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬಂದ್ ಗೆ ಕರೆ ಕೊಟ್ಟಿರುವವರನ್ನು ಬಿಟ್ಟು ಬೇರೆಯವರ ಜೊತೆಗೆ ಸಭೆ ನಡೆಸಿದ್ದಾರೆ. ಬೇರೆಯವರ ಜೊತೆ ಸಭೆ ನಡೆಸಿ ಬಂದ್ ಹಿಂಪಡೆದಿರುವುದಾಗಿ ಸಿಎಂ ಹೇಳಿದ್ದಾರೆ ಎಂದರು. ಇದು ಸರಿಯಲ್ಲ. ನಾವು ಮುಷ್ಕರ ವಾಪಾಸ್ ಪಡೆದಿಲ್ಲ ಎಂಬುದಾಗಿ ಸಂಘದ ಅಧ್ಯಕ್ಷ ರವಿಶೆಟ್ಟಿ ಬೈಂದೂರು ತಿಳಿಸಿದರು. ಜುಲೈ.25ರಂದು ಎಲ್ಲಾ ಕಾಂಡಿಮೆಂಟ್ಸ್, ಬೇಕರಿ, ಅಂಗಡಿಗಳು ಬಂದ್ ಆಗುತ್ತೆ. ಸಿಎಂ ಸಿದ್ಧರಾಮಯ್ಯ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದರು. ಮತ್ತೊಂದೆಡೆ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ. ಇಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟರೂ ತೆರಿಗೆ ವಸೂಲಿ ಮಾಡಲ್ಲ. ಆದರೇ ಯಾರು ಕಾಯ್ದೆಯಂತೆ…
ಬೆಂಗಳೂರು: ರಾಜ್ಯದ ವರ್ತಕರಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಸಣ್ಣ ವ್ಯಾಪಾರಿಗಳ ಹಳೆಯ ಬಾಕಿ ತೆರಿಗೆಯನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ. ಇಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟರೂ ತೆರಿಗೆ ವಸೂಲಿ ಮಾಡಲ್ಲ. ಆದರೇ ಯಾರು ಕಾಯ್ದೆಯಂತೆ ತೆರಿಗೆ ಕಟ್ಟಬೇಕೋ ಅವರು ಪಾವತಿಸಬೇಕು ಎಂದರು. ನೋಟಿಸ್ ನೀಡಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡುತ್ತೇವೆ. ವ್ಯಾಪಾರಿಗಳಿಂದ ಹಳೆಯ ತೆರಿಗೆ ಬಾಕಿಯನ್ನು ವಸೂಲಿ ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂಬುದಾಗಿ ಗೃಹಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು. ಜಿಎಸ್ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಯುಪಿಐ ಅಡಿ ರೂ.…
ಬೆಂಗಳೂರು: ರಾಜ್ಯದ ವರ್ತಕರಿಗೆ ಸಿಎಂ ಸಿದ್ಧರಾಮಯ್ಯ ಅವರು ಗುಡ್ ನ್ಯೂಸ್ ಎನ್ನುವಂತೆ ಮೂರು ವರ್ಷ ಬಾಕಿ ತೆರಿಗೆ ವಸೂಲಿ ಮಾಡುವುದಿಲ್ಲ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಹಾಗೂ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ನೀಡಿದ ವಿವರಗಳ ಮುಖ್ಯಾಂಶಗಳು ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಹಾಗೂ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ನೀಡಿದ ವಿವರಗಳ ಮುಖ್ಯಾಂಶಗಳು: • ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. • ʻಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆʼ. • ʻಜಿಎಸ್ಟಿ…
ಬೆಂಗಳೂರು: ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಹಾಗೂ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ನೀಡಿದ ವಿವರಗಳ ಮುಖ್ಯಾಂಶಗಳು ಈ ಕೆಳಗಿನಂತಿದೆ. • ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. • ʻಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆʼ. • ʻಜಿಎಸ್ಟಿ ನೊಟೀಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ. • ʻಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕುʼ. • ಜಿಎಸ್ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ.…
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ್ದಂತ ನೋಟಿಸ್ ಹಿನ್ನಲೆಯಲ್ಲಿ ಜುಲೈ.25ರಂದು ವರ್ತಕರು ಬಂದ್ ಗೆ ಕರೆ ನೀಡಿದ್ದರು. ಈ ಬಂದ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾತುಕತೆಯ ಮೇರೆಗೆ ವಾಪಾಸ್ ಪಡೆಯಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ಸಣ್ಣ ವ್ಯಾಪಾರಿಗಳಿಗೆ ಜುಲೈ.25ರಂದು ಕರೆ ನೀಡಿದ್ದ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದರು. ಈ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದಂತ ವರ್ತಕರು ಜುಲೈ.25ರಂದು ಕರೆ ನೀಡಿದ್ದಂತ ಬಂದ್ ವಾಪಾಸ್ ಪಡೆದಿದ್ದಾರೆ. ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಜುಲೈ.25ರಂದು ವರ್ತಕರು ಕರೆ ನೀಡಿದ್ದ ಬಂದ್ ವಾಪಾಸ್ ಪಡೆಯಲಾಗಿದೆ ಎಂದು ತಿಳಿಸಿದರು. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದ್ದೇನೆ. ಕೂಡಲೇ ಸಹಾಯವಾಣಿ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಈಗಿರುವ ಹೆಲ್ಪ್ ಲೈನ್ ಸಮರ್ಪಕವಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜುಲೈ.25ರಂದು ಕರೆ ನೀಡಿದ್ದ ಬಂದ್ ಹಿಂಪಡೆಯಲು ಮನವಿ ಮಾಡಲಾಗಿತ್ತು. ವಾಣಿಜ್ಯೋದ್ಯಮಿಗಳು ಕರೆ ನೀಡಿದ್ದ ಬಂದ್ ಹಿಂಪಡೆಯಲು ಮನವಿ ಮಾಡಲಾಗಿತ್ತು. ಈ ಮನವಿ ಹಿನ್ನಲೆಯಲ್ಲಿ ವರ್ತಕರು…
ಬೆಂಗಳೂರು: ಆತ್ಮೀಯ ವರ್ತಕರೇ ವಾಣಿಜ್ಯ ತೆರಿಗೆಗಳ ಇಲಾಖೆ, ಸರಕು ಮತ್ತು ಸೇವೆ ತೆರಿಗೆಗಳ ವಿಭಾಗ-05 ರಿಂದ, ಸರಕು ಮತ್ತು ಸೇವೆ ತೆರಿಗೆ ನೋಂದಣೆ ಹಾಗೂ ತೆರಿಗೆ ಬಾಧ್ಯತೆಯ ಬಗ್ಗೆ ಈ ಕೆಳಕಂಡ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ ಎಂಬುದಾಗಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. 1. GST ನೋಂದಣಿಯ ಬಾಧ್ಯತೆ- ಕನಿಷ್ಠ ವಾರ್ಷಿಕ ವಹಿವಾಟು ಕೇವಲ ಸರಕುಗಳ ವಹಿವಾಟಿಗೆ- ರೂ. 40 ಲಕ್ಷ ಮೀರಿದ್ದಲ್ಲಿ ಮಾತ್ರ ಸೇವೆಗಳ ವಹಿವಾಟಿಗೆ – ರೂ 20 ಲಕ್ಷ ಮೀರಿದ್ದಲ್ಲಿ ಮಾತ್ರ ಒಂದು ವೇಳೆ ನಿಮ್ಮ ವಾರ್ಷಿಕ ವಹಿವಾಟು ಕೇವಲ ತೆರಿಗೆ ವಿನಾಯಿತಿಯನ್ನೊಳಗೊಂಡ ಸರಕುಗಳಾಗಿದ್ದಲ್ಲಿ ( ಉದಾಹರಣೆಗಾಗಿ ಹಾಲು, ಹಣ್ಣು, ತರಕಾರಿ ಇತ್ಯಾದಿ) ನೋಂದಣಿಯ ಅವಶ್ಯಕತೆ ಇರುವುದಿಲ್ಲ. 2. GST ತೆರಿಗೆ ಬಾಧ್ಯತೆ ತೆರಿಗೆಗೆ ಒಳಪಡುವ ಸರಕುಗಳು/ಸೇವೆಗಳು (ಉದಾ – ತುಪ್ಪ, ಐಮ್, ಎಣ್ಣೆ ಇತ್ಯಾದಿ ತೆರಿಗೆ ವಿನಾಯಿತಿ ಒಳಪಡುವ ಸರಕುಗಳು/ಸೇವೆಗಳು (ಉದಾ: ಹಾಲು, ಹಣ್ಣು, ಮಾಂಸ, ತರಕಾರಿ, ಸಾಲದ ಹಣ ಹಾಗೂ ಶಾಲೆಗಳು ಇತ್ಯಾದಿ) ಒಂದು…
ನಾಳೆ ಗುರುವಾರ 2025 ಜುಲೈ 24 ರಂದು ಭೀಮನ ಅಮಾವಾಸ್ಯೆ ಇದೆ. ಈ ದಿನ ಪಿತೃಗಳಿಗೆ ತರ್ಪಣ ಅರ್ಪಿಸಲು ಸೂಕ್ತವಾಗಿದೆ. ಭೀಮನ ಅಮಾವಾಸ್ಯೆಯಂದು ಪಿತೃಗಳು ಭೂಮಿಗೆ ಬರುತ್ತಾರೆಂದು ನಂಬಲಾಗುವುದು. ಈ ಸಮಯದಲ್ಲಿ ತಿಥಿ, ತರ್ಪಣ ಮಾಡಿದರೆ ಆತ್ಮಗಳು ಶಾಂತಿಯುತವಾಗಿ ಸ್ವರ್ಗಕ್ಕೆ ಹೋಗುತ್ತವೆ. ಜೊತೆಗೆ ಪೂರ್ವಜರ ಆಶೀರ್ವಾದದಿಂದ ಜೀವನದಲ್ಲಿ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಸಲಿದೆ. ಅಲ್ಲದೇ ಪಿತೃ ದೋಷವಿರುವ ಜನರು ಕೆಲವು ವಸ್ತುಗಳನ್ನು ಈ ದಿನ ದಾನ ಮಾಡಿದರೆ ಪಿತೃ ದೋಷದಿಂದ ಮುಕ್ತರಾಗಬಹುದು. ಜುಲೈ 24 ಗುರುವಾರ ಅಮಾವಾಸ್ಯೆ ತಿಥಿ ಮಧ್ಯ ರಾತ್ರಿ 2.29ಕ್ಕೆ ಪ್ರಾರಂಭವಾಗಿ ಮರುದಿನ ಮಧ್ಯರಾತ್ರಿ 12.40ಕ್ಕೆ ಕೊನೆಗೊಳ್ಳುತ್ತದೆ . ಇದು ಪಿತೃ ದೋಷ ನಿವಾರಣೆಗೆ ಸೂಕ್ತವಾದ ಸಮಯ. ಪಿತೃ ದೋಷ ಮರಣದ ನಂತರ ಪೂರ್ವಜರಿಗೆ ಅಗತ್ಯವಿರುವ ಆಚರಣೆಗಳನ್ನು ಸರಿಯಾಗಿ ಮಾಡದಿದ್ದಾಗ ಅಥವಾ ಅವರ ಆತ್ಮಗಳು ಶಾಂತಿಯಿಂದ ಇಲ್ಲದಿದ್ದಾಗ ಕುಟುಂಬದಲ್ಲಿ ಸಂಭವಿಸುವ ಸಮಸ್ಯೆಯಾಗಿದೆ. ಈ ದೋಷದಿಂದ ಮುಕ್ತರಾಗಲು ಭೀಮನ ಅಮವಾಸ್ಯೆಯಂದು ತಿಥಿ, ತರ್ಪಣ, ಆಚರಣೆಯಲ್ಲದೆ ದಾನದ ಮೂಲಕವೂ ಮುಕ್ತರಾಗಬಹುದು. ಹಾಗಾದರೆ…
ಬೆಂಗಳೂರು: 2024 – 25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಸ್ತುತ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಕೈಗೊಳ್ಳುವ ಪ್ರಕ್ರಿಯೆಯನ್ನು ಜುಲೈ 22ರಂದು ಆರಂಭಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕೌನ್ಸೆಲಿಂಗ್ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ನೌಕರರುಗಳಿಗೆ ಆನ್ ಲೈನ್ ಮೂಲಕ ತಮ್ಮ ಆದ್ಯತೆಯ ಸ್ಥಳಗಳನ್ನು ಆಯ್ಕೆ ಮಾಡುವ ಅವಕಾಶ ಇರಲಿದೆ, ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ನೌಕರರು ವರ್ಗಾವಣೆಗೆ ಅರ್ಹರಾಗಿದ್ದು, ವಿಶೇಷಚೇತನರು ಹಾಗೂ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಿಯಮಗಳಲ್ಲಿ ವಿನಾಯತಿ ನೀಡಲಾಗಿದೆ, 31 ಜಿಲ್ಲೆಗಳಿಂದ ಒಟ್ಟು 2697 ನೌಕರರು ವರ್ಗಾವಣೆಗಾಗಿ ಅರ್ಜಿಗಳು ಸಲ್ಲಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ನೌಕರರು ಸಲ್ಲಿಸಿದ…
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಸರ್ಕಾರಿ ಜಮೀನಿಗೆ ನಿಯಮ ಬಾಹಿರ ಆದೇಶ ಮಾಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. ಇಂದು ಐಎಎಸ್ ಅಧಿಕಾರಿ ವಾಸಂತಿ ಅಮರ್ ಅವರ ಕಚೇರಿ, ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮತ್ತೊಂದು ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಐಎಎಸ್ ಅಧಿಕಾರಿ ವಾಸಂತಿ ಅಮರ್ ಹಾಗೂ ಟೌನ್ ಪ್ಲಾನಿಂಗ್ ಇಲಾಖೆಯ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಹಾಗೂ ಬಿಬಿಎಂಪಿಯ ಕಾರ್ಯ ನಿರ್ವಾಹಕ ಅಭಿಯಂತರ ಎರ್ರಪ್ಪ ರೆಡ್ಡಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದ ತಂಡವು ಇಂದು ಮುಂಜಾನೆಯೇ ಮೂರು ಅಧಿಕಾರಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂವರು ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಕೇಳಿ ಬಂದಿತ್ತು. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿ…
ಗುಜರಾತ್: ಅಹಮದಾಬಾದ್‌ನಿಂದ 60 ಜನರನ್ನು ಹೊತ್ತುಕೊಂಡು ದಿಯುಗೆ ಹೊರಟಿದ್ದ ಇಂಡಿಗೋ ವಿಮಾನವು ಎರಡು ಎಂಜಿನ್‌ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಟೇಕ್‌ಆಫ್ ಅನ್ನು ಸ್ಥಗಿತಗೊಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಟೇಕ್‌ಆಫ್‌ಗೆ ಕೆಲವೇ ಕ್ಷಣಗಳ ಮೊದಲು ಈ ಘಟನೆ ಬೆಳಕಿಗೆ ಬಂದಿದ್ದು, ಪೈಲಟ್‌ಗಳು ಪ್ರಯಾಣವನ್ನು ಸ್ಥಗಿತಗೊಳಿಸಿ ಪ್ರಯಾಣಿಕರನ್ನು ತಕ್ಷಣವೇ ಇಳಿಸುವಂತೆ ಸೂಚಿಸಿದರು. ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ “ಮೇಡೇ” ಕರೆ ಕಳುಹಿಸಿದಾಗ ವಿಮಾನವು ಟೇಕ್‌ಆಫ್‌ಗಾಗಿ ರನ್‌ವೇಯಿಂದ ಚಲಿಸಲು ಪ್ರಾರಂಭಿಸಿತ್ತು. ಬೆಳಿಗ್ಗೆ 11 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಹೊರಡುವ ಮೊದಲೇ ATR76 ವಿಮಾನದ ಎಂಜಿನ್ ಬೆಂಕಿಗೆ ಆಹುತಿಯಾಯಿತು. https://kannadanewsnow.com/kannada/transfer-of-municipal-commissioners-for-a-single-day-state-government-order/ https://kannadanewsnow.com/kannada/explosive-found-at-the-private-bus-station-in-kalasipalyam-bangalore/