Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಮೈಶುಗರ್ ಸ್ಕೂಲ್ ಗೆ 25 ಕೋಟಿ ಕೊಟ್ಟೆ ಕೊಡ್ತಾರೆ ಎಂಬುದಾಗಿ ಶಾಸಕ ಗಾಣಿಗ ರವಿಕುಮಾರ್ ತಿಳಿಸಿದ್ದಾರೆ. ಇಂದು ಮಂಡ್ಯದಲ್ಲಿ ಮೈಶುಗರ್ ಸ್ಕೂಲ್ ಗೆ ಹೆಚ್ಡಿಕೆಯಿಂದ ಅನುದಾನ ವಿಚಾರವಾಗಿ ಮಾತನಾಡಿದಂತ ಅವರು, ಮೈಶುಗರ್ ವಿಚಾರವಾಗಿ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಕೊಡದಿರುವ ಬಗ್ಗೆ ಚರ್ಚೆ ಮಾಡಿ ಸಂಘರ್ಷ ಮಾಡುವುದು ಇಷ್ಟ ಇಲ್ಲ. ಆಟೋ ಸ್ಟ್ಯಾಂಡ್ ಗುದ್ದಿಲಿ ಪೂಜೆ 10 ಲಕ್ಷದು ಮಾತ್ರ ನೋಡಿದ್ದೇನೆ. ಕುಮಾರಸ್ವಾಮಿ ಕೊಟ್ಟರೆ ಅವರ ಮನೆ ಬಾಗಿಲಿಗೆ ಹೋಗಿ ಫಂಡ್ ಇಸ್ಕೊಂಡು ಬರ್ತಿನಿ. ನಾನೇ ನಿಂತು ಅಭಿವೃದ್ಧಿ ಮಾಡ್ತೇನೆ ಎಂದರು. 25 ಕೋಟಿ ಅಂತ ಟಿವಿ ಮುಂದೆ ಚರ್ಚೆ ಆಗಿದೆ ಸ್ಕೂಲ್ ಶಿಕ್ಷಕರಿಗೆ ಸಂಬಳ ಕೊಡಕ್ಕಾಗ್ತಿಲ್ಲ ಪಾಪಾ. ರಾಜಕೀಯ ಸಂಘರ್ಷದಿಂದ ಅಭಿವೃದ್ಧಿ ಕುಂಟಿತ. ಎಂಡಿ, ಅಧ್ಯಕ್ಷರಿಗೆ ಫಂಡ್ 25 ಕೋಟಿ ಇಸ್ಕೊಂಡು ಬರಲು ಸೂಚನೆ ಕೊಟ್ಟಿದ್ದೇನೆ. 25 ಕೋಟಿ ಕೊಟ್ಟೆ ಕೊಡ್ತಾರೆ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಇನ್ನು ಎರಡೂ ತಿಂಗಳು ಕಳೆಯಲಿ. ಕೇಂದ್ರ…
ಬೆಳಗಾವಿ: ನಿಗದಿಯಂತೆ ಸೆಪ್ಟೆಂಬರ್.22ರಂದು ಸಾಹಿತಿ ಬಾನು ಮುಷ್ತಾಕ್ ಅವರು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ ಎಂಬುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ವಿರೋಧ ಮಾಡಬಾರದಿತ್ತು. ಈ ವಿಚಾರದಲ್ಲಿ ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಠಿಸಿದರು ಎಂಬುದಾಗಿ ಹೇಳಿದರು. ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿಯವರಿಗೆ ಕೊನೆಗೂ ನ್ಯಾಯಾಲಯದಿಂದ ಸೂಕ್ತ ಉತ್ತರ ಸಿಕ್ಕಿದೆ. ದಸರಾ ಮಾಡೋದು ಉದ್ಘಾಟನೆ ಮುಖ್ಯ, ಜಾತಿ ಧರ್ಮ ಮುಖ್ಯವಲ್ಲ. ಈ ಹಿಂದೆ ಬೇರೆ ಧರ್ಮದವರು ದಸರಾವನ್ನು ಉದ್ಘಾಟನೆ ಮಾಡಿದ್ದಾರೆ. ರಾಜಕೀಯಕ್ಕಾಗಿ ಬಿಜೆಪಿಯವರು ಇನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದರು. https://kannadanewsnow.com/kannada/big-news-dasara-inauguration-is-taking-place-according-to-the-mullas-opposition-leader-r-ashoks-statement/ https://kannadanewsnow.com/kannada/judge-shows-humanity-in-front-of-the-public-he-goes-to-the-elderly-man-and-gives-a-verdict-providing-relief-on-the-spot/
ಮಂಡ್ಯ: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ವ್ಯಕ್ತಿ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಮದ್ಯೆ ಕಿರು ಸೇತುವೆ ಕಾಮಗಾರಿ ಸ್ಥಳಕ್ಕೆ ಸ್ಕೂಟರ್ ಸಮೇತ ಬಿದ್ದು ವ್ಯಕ್ತಿ ಸಾವನ್ನಪ್ಪಿದಂತ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಟ್ಟ ದಾಸನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಯಮಾನುಸಾರ ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಕಾಮಗಾರಿ ಮಾಹಿತಿ ಫಲಕ ಅಳವಡಿಸದೆ ಕಾಮಗಾರಿ ಇದಾಗಿದೆ. ಕಾಮಗಾರಿ ನಡೆಯುತ್ತಿರುವ ಮಾಹಿತಿ ಇಲ್ಲದೆ ಈ ಮಾರ್ಗದಲ್ಲಿ ಬಂದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದು ಸಾವನ್ನುಪ್ಪಿದ್ದಾರೆ. ಮೃತರನ್ನು ಕೆಸ್ತೂರು ಗ್ರಾಮದ ರಾಮು(50) ಎಂದು ಗುರುತಿಸಲಾಗಿದೆ. ರಾಮು ಅವರು ಸ್ಕೂಟರ್ ಸಮೇತ ಕೆಳಗೆ ಬಿದ್ದಂತ ವೇಳೆಯಲ್ಲಿ ಸ್ಥಳದಲ್ಲಿ ಸರಳು ಚುಚ್ಚಿ ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕ ಕಾಮಗಾರಿ ನಡೆಸುತ್ತಾ ವ್ಯಕ್ತಿ ಸಾವಿಗೆ ಕಾರಣರಾದ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/india-likely-to-witness-a-colder-winter-due-to-la-nina/ https://kannadanewsnow.com/kannada/judge-shows-humanity-in-front-of-the-public-he-goes-to-the-elderly-man-and-gives-a-verdict-providing-relief-on-the-spot/
ನವದೆಹಲಿ: ಈ ವರ್ಷದ ಕೊನೆಯಲ್ಲಿ ಲಾ ನಿನಾ ಪರಿಸ್ಥಿತಿಗಳು ಮರಳಬಹುದು ಎಂದು ಉನ್ನತ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಶೀತ ಚಳಿಗಾಲದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸೆಪ್ಟೆಂಬರ್ 11 ರಂದು ಯುಎಸ್ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನ ಮುನ್ಸೂಚನಾ ಕೇಂದ್ರವು ಅಕ್ಟೋಬರ್ ಮತ್ತು ಡಿಸೆಂಬರ್ 2025 ರ ನಡುವೆ ಲಾ ನಿನಾ ಬೆಳೆಯುವ ಸಾಧ್ಯತೆ 71% ಎಂದು ಹೇಳಿದೆ. ಡಿಸೆಂಬರ್-ಫೆಬ್ರವರಿ 2026 ಕ್ಕೆ ಸಂಭವನೀಯತೆಯು 54% ಕ್ಕೆ ಇಳಿಯುತ್ತದೆ, ಆದರೆ ಲಾ ನಿನಾ ವಾಚ್ ಜಾರಿಯಲ್ಲಿದೆ. ಎಲ್ ನಿನೋ-ದಕ್ಷಿಣ ಆಂದೋಲನ (ENSO) ಚಕ್ರದ ತಂಪಾದ ಹಂತವಾದ ಲಾ ನಿನಾ, ಸಮಭಾಜಕ ಪೆಸಿಫಿಕ್‌ನಲ್ಲಿ ಸಾಗರ ತಾಪಮಾನವನ್ನು ಬದಲಾಯಿಸುತ್ತದೆ ಮತ್ತು ವಿಶ್ವಾದ್ಯಂತ ಹವಾಮಾನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಭಾರತಕ್ಕೆ, ಇದು ಸಾಮಾನ್ಯವಾಗಿ ಸಾಮಾನ್ಯಕ್ಕಿಂತ ಕಡಿಮೆ ಚಳಿಗಾಲದ ತಾಪಮಾನಕ್ಕೆ ಸಂಬಂಧಿಸಿದೆ. ಅಕ್ಟೋಬರ್-ಡಿಸೆಂಬರ್‌ನಲ್ಲಿ ಲಾ ನಿನಾ ಅಭಿವೃದ್ಧಿಗೊಳ್ಳಲಿದೆ ಭಾರತೀಯ ಹವಾಮಾನ ಇಲಾಖೆ (IMD), ತನ್ನ ಇತ್ತೀಚಿನ ENSO ಬುಲೆಟಿನ್‌ನಲ್ಲಿ, ಪೆಸಿಫಿಕ್‌ನಲ್ಲಿ ಪ್ರಸ್ತುತ ತಟಸ್ಥ…
ಮಂಡ್ಯ: ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ಹಿಂದು ಮುಖಂಡರಿಂದ ದೂರು ನೀಡಿದ್ದಾರೆ. ಪ್ರಗತಿಪರರ ಸಭೆಯಲ್ಲಿ ಹೋರಾಟಕ್ಕೆ ತನು ಮನ ಧನ ಸಹಾಯ ಮಾಡ್ತಿನೆಂದ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ದೂರು ನೀಡಲಾಗಿದೆ. ಈತ ಮದ್ದೂರಿ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರ ಸಭೆಯಲ್ಲಿ ಹೋರಾಟಕ್ಕೆ ಆರ್ಥಿಕ ನೆರವು ಬಗ್ಗೆ ಹೇಳಿಕೆ ನೀಡಲಾಗಿದೆ. ಈತನ ಈ ಹೇಳಿಕೆ ಕೋಮು ಗಲಭೆಗೆ ಎಡೆ ಮಾಡಿಕೊಡುವ ಪ್ರಚೋದನಾ ಕೆಲಸ ಎಂದು ಆರೋಪಿಸಲಾಗಿದೆ. ಈತ ಗಲಾಟೆಗೆ ಕಾರಣವಾದ ಜಾಮೀಯ ಮಸೀದಿ ಅಧ್ಯಕ್ಷ. ಗಲಾಟೆ ಬಳಿಕ ತಮ್ಮ ಸುಮದಾಯದಿಂದ ಗಲಭೆಗೆ ಕಾರಣವೆಂದು ಕ್ಷಮೆ ಯಾಚಿಸಿದ್ದರು. ಈಗ ಪ್ರಗತಿಪರರ ಜೊತೆ ಸೇರಿ ಉಲ್ಟಾ ಹೊಡೆದು ಪ್ರತಿಭಟನೆ ಮಾಡಿ ತಮ್ಮ ಸಮುದಾಯದಿಂದ ಆರ್ಥಿಕ ಸಹಾಯ ಮಾಡ್ತಿನೆಂದು ಹೇಳಿಕೆ ನೀಡಲಾಗಿದೆ. ಈ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆ ಮುಂಡರಿಂದ ಮದ್ದೂರು ಪೊಲೀಸರಿಗೆ ದೂರು ನೀಡಲಾಗಿದೆ. ಮತೀಯ ಸಂಘರ್ಷಕ್ಕೆ ಕಾರಣವಾದ ಹೇಳಿಕೆ…
ಕಲಬುರ್ಗಿ: ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ, ಸಿಎಂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಬಗ್ಗೆಯೂ ಮಾಹಿತಿ ನೀಡಲಾಗಿದೆ, ಮುಂದಿನ ಒಂದು ವಾರದೊಳಗೆ ಪರಿಹಾರ ರೈತರಿಗೆ ಜಮಾ ಆಗಲಿದೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇಂದು ಜಿಲ್ಲಾ ಪಂಚಾಯತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡನೆಯ ಸುತ್ತಿನ ಮಳೆ ನಿಲ್ಲದ ಕಾರಣ ಸರ್ವೆ ಮಾಡುವುದು ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಎರಡನೆಯ ಸುತ್ತಿನ ಸರ್ವೆ ಕೂಡ ಮಾಡಲಾಗುವುದು. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆ ನಂತರ ಸಿಎಂ ಗಮನಕ್ಕೆ ತರಲಾಗುವುದು ಎಂದರು. ಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಳಹ ದಿನದಿಂದ ಇತ್ತು. ಕುರುಬ ಸಮಾಜದ ಸಭೆ ಕೂಡಾ ನಡೆಸಲಾಗುತ್ತಿದೆ. ಕುರುಬ ಹಾಗೂ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸುವ ವಿಚಾರದಲ್ಲಿ ಎಂಥ್ರಾಪಲಾಜಿ ವರದಿ ಸಲ್ಲಿಸಿದ ಸಮಿತಿಯ…
ಬೆಂಗಳೂರು : “ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕಿದೆ. ಮತದಾನ, ಪ್ರಜಾಪ್ರಭುತ್ವದ ಮೌಲ್ಯವನ್ನು ಅರಿತುಕೊಳ್ಳಲು ‘ನನ್ನ ಮತ, ನನ್ನ ಹಕ್ಕು’ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಮತದಾನ ಮದ್ದುಗುಂಡಿಗಿಂತ ಬಲಾಢ್ಯ ಎನ್ನುವ ಮಾತಿದೆ. ಮಹಾರಾಜರು ಮನೆಯಲ್ಲಿ ಕುಳಿತಿದ್ದಾರೆ. ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ನಾಯಕರ ಉದಯವಾಗಿದ್ದೇ ಮತದಾನದ ಹಕ್ಕಿನಿಂದ. ಜನರ ಮತಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ” ಎಂದರು. “ಅರ್ಜುನ ಕೃಷ್ಣನನ್ನು ಒಮ್ಮೆ ಕೇಳುತ್ತಾನೆ. ಎಲ್ಲರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ, ಬಾಣಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಏನೂ ತೋಚದಾಗಿದೆ ಎಂದು. ಆಗ ಕೃಷ್ಣ ಹೇಳುತ್ತಾನೆ, ನಿನ್ನ ಮೇಲೆ ಎಷ್ಟೇ ದಾಳಿಯಾಗಬಹುದು, ಆದರೆ ಕಾಪಾಡುವುದಕ್ಕೆ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ ಎಂದು. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಗೂ…
ಮೈಸೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಸಲುವಾಗಿ ನೈಋತ್ಯ ರೈಲ್ವೆಯು ಯಶವಂತಪುರ ಹಾಗೂ ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಮೂರು ಟ್ರಿಪ್ಗಳನ್ನು ಪೂರ್ಣಗೊಳಿಸಲಿದೆ. ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 19, 26 ಮತ್ತು ಅಕ್ಟೋಬರ್ 3 ರಂದು ರಾತ್ರಿ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಮುಂಜಾನೆ 4.15ಕ್ಕೆ ತಾಳಗುಪ್ಪ ತಲುಪಲಿದೆ. ಮತ್ತೊಂದೆಡೆ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 20, 27 ಮತ್ತು ಅಕ್ಟೋಬರ್ 4 ರಂದು ತಾಳಗುಪ್ಪದಿಂದ ಬೆಳಗ್ಗೆ 10 ಗಂಟೆಗೆ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ. ಈ ವಿಶೇಷ ರೈಲು, ಎರಡೂ ಮಾರ್ಗದಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ವಿಶೇಷ ರೈಲಿನಲ್ಲಿ ಒಟ್ಟು 20…
ನವದೆಹಲಿ: ಅಕ್ರಮ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಬಹುಭಾಷಾ ನಟಿ ಊರ್ವಶಿ ರೌಟೇಲಾಗೆ ಸಂಕಷ್ಟ ಎದುರಾಗಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ನೀಡಲಾಗಿದೆ. ಸೆಪ್ಟೆಂಬರ್.16ರಂದು ವಿಚಾರಣೆ ಹಾಜರಾಗುವಂತೆ ನಟಿ ಊರ್ವಶಿ ರೌಟೇಲಾಗೆ ಇಡಿ ನೀಡಿರುವಂತ ಸಮನ್ಸ್ ನಲ್ಲಿ ಸೂಚಿಸಲಾಗಿದೆ. ಮಾಡಿ ಸಂಸದೆ, ಬಂಗಾಳದ ನಟಿ ಮಿಮಿ ಚಕ್ರವರ್ತಿಗೂ ಇಡಿ ಸಮನ್ಸ್ ನೀಡಿದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಗ್ರಾಮ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಮೆಸ್ಕಾಂನಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ ಎಂದು ತಿಳಿಸಿದೆ. ಈ ಕುರಿತಂತೆ ಸೊರಬ ಮೆಸ್ಕಾ ಎಇಇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 15.09.2025ರ ಇಂದು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಉಳವಿಯಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ 11 ಕೆವಿ ಫೀಡರ್‌ಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ. ದಿನಾಂಕ: 15.09.2025ರ ಇಂದು 110/11 ಕೆವಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿರುವುದರಿಂದ, 110/11 ಕೆವಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್1 ಬರಗಿ ಎನ್‌ಜೆವೈ, ಎಫ್2 ಕಾನಳ್ಳಿ, ಎಫ್-3 ಉಳವಿ, ಎಫ್4 ಹೊಸಬಾಳೆ ಮತ್ತು ಎಫ್-5 ದೂಗೂರು ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ…










