Author: kannadanewsnow09

ದಾವಣಗೆರೆ: ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಯ ಭಯದಿಂದಾಗಿ ಆರೋಪಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ಇಂದು ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ವಿಚಾರಣೆಗೆ ಆರೋಪಿಯಾಗಿದ್ದಂತ ಫಜಲ್ ಆಲಿ ಎಂಬಾತ ದಾವಣಗೆರೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜೈಲು ಶಿಕ್ಷೆಯ ಭಯದಲ್ಲಿದ್ದಂತ ಆರೋಪಿ, ನ್ಯಾಯಾಧೀಶರ ಮುಂದೆಯೇ ವಿಷ ಸೇವಿಸಿ ಆಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/russian-helicopter-with-19-passengers-three-crew-members-goes-missing-in-kamchatka-peninsula/ https://kannadanewsnow.com/kannada/breaking-hc-adjourns-hearing-on-cm-siddaramaiahs-bail-plea-till-2-30-pm/

Read More

ಮಾಸ್ಕೋ: ಮೂವರು ಸಿಬ್ಬಂದಿ ಮತ್ತು 19 ಪ್ರಯಾಣಿಕರನ್ನು ಹೊತ್ತ ರಷ್ಯಾದ ಹೆಲಿಕಾಪ್ಟರ್ ದೂರದ ಪೂರ್ವ ಪರ್ಯಾಯ ದ್ವೀಪವಾದ ಕಮ್ಚಾಟ್ಕಾದಲ್ಲಿ ಶನಿವಾರ ಕಾಣೆಯಾಗಿದೆ ಎಂದು ಫೆಡರಲ್ ವಾಯು ಸಾರಿಗೆ ಏಜೆನ್ಸಿಯ ಪ್ರಾಥಮಿಕ ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಎಂಐ -8 ಟಿ ಹೆಲಿಕಾಪ್ಟರ್ ವಾಚ್ಕಾಜೆಟ್ಸ್ ಜ್ವಾಲಾಮುಖಿಯ ಬಳಿಯ ನೆಲೆಯಿಂದ ಹೊರಟಿತು ಮತ್ತು ಸಿಬ್ಬಂದಿ 04:00 ಜಿಎಂಟಿ (ಭಾರತೀಯ ಸಮಯ ಬೆಳಿಗ್ಗೆ 9:30) ನಿಗದಿತ ಸಮಯಕ್ಕೆ ವರದಿ ಮಾಡಲು ವಿಫಲರಾದರು. ಎಂಐ-8 1960ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಎರಡು ಎಂಜಿನ್ ಹೆಲಿಕಾಪ್ಟರ್ ಆಗಿದೆ. ಇದನ್ನು ರಷ್ಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಅಲ್ಲಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ. https://kannadanewsnow.com/kannada/breaking-hc-adjourns-hearing-on-cm-siddaramaiahs-bail-plea-till-2-30-pm/ https://kannadanewsnow.com/kannada/visa-partners-with-skill-india-to-skill-20000-youth-for-tourism-industry/

Read More

ಬೆಂಗಳೂರು : ಸೆಪ್ಟೆಂಬರ್‌ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು. “ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್‌ 2 ರಿಂದ ಅಭಿಯಾನ ಮಾದರಿಯಲ್ಲಿ…

Read More

ಬೆಂಗಳೂರು: ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಸೆಪ್ಟೆಂಬರ್.14ರವರೆಗೆ ಶೇ.5ರ ರಿಯಾಯಿತಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರದ ಆದೇಶಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿದ್ದು, ರಾಜ್ಯದ ಸ್ಥಳೀಯ ಸಂಸ್ಥೆಗಳ  ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರಿಗೆದಾರರು ತಮ್ಮ ಆಸ್ತಿಯ ತೆರಿಗೆ ಪಾವತಿ ಮಾಡಲು ಶೇ.5 ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು ಸೆ.14 ರವರೆಗೆ ವಿಸ್ತರಿಸಲಾಗಿದೆ ಎಂದಿದೆ. ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸಲು ಆರ್ಥಿಕ ವರ್ಷದ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಆಸ್ತಿ ತೆರಿಗೆದಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.

Read More

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಿಂದ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್.7 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. 15 ವರ್ಷಗಳಿಗೂ ಹೆಚ್ಚು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದಂತ ಅನುಭವ, UGC ನಿಗದಿತ ವಿದ್ಯಾರ್ಹತೆ ಹೊಂದಿರುವವರಿಗೆ 40,000 ವರೆಗೆ ವೇತನ ಸಿಗಲಿದೆ. ಈ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಈ ಕೆಳಕಂಡಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 31-08-2024ರಿಂದ ಆರಂಭಗೊಳ್ಳಲಿದೆ.…

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಜಾರಿಗೊಳಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ರಾಜ್ಯದ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬ್ಬಂದಿಗಳಿಗೂ 7ನೇ ರಾಜ್ಯ ಪರಿಷ್ಕೃತ ವೇತನ ಆಯೋಗದಂತೆ ವೇತನ ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತಂತೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕರಾದಂತ ಟಿಎನ್ ಶಿವಶಂಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ 7ನೇ ವೇತನ ಪರಿಷ್ಕೃತ ವೇತನ ಜಾರಿಯಾಗಿದ್ದು, ಅದರನ್ವಯ ನಿಮ್ಮ ವಲಯ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಲಿಪಿಕ ನೌಕರರುಗಳ ಮೂಲ ಸೇವಾ ಪುಸ್ತಕಗಳನ್ನು ಪರಿಶೀಲಿಸಿ 7ನೇ ಪರಿಷ್ಕೃತ ವೇತನ ಶ್ರೇಣಿಗಳ ನಿಯಮಗಳನ್ವಯ ಅನ್ವಯಿಸುವ ವೇತನ ಶ್ರೇಣಿ ಮತ್ತು ವೇತನ ನಿಗದಿಪಡಿಸತಕ್ಕದ್ದು ಎಂದಿದ್ದಾರೆ. ಮುಂದುವರೆದು ಯಾವುದೇ ಅಧಿಕಾರಿ / ಸಿಬ್ಬಂದಿಯವರು ಮತ್ತು ಲಿಪಿಕ ನೌಕರರ ವೇತನ ನಿಗದಿಯಲ್ಲಿ ಸಮಸ್ಯೆಗಳು…

Read More

ಇಸ್ರೇಲಿ ಗಡಿಯ ಸಮೀಪವಿರುವ ಈಜಿಪ್ಟ್ನ ತಾಬಾ ಎಂಬ ಪಟ್ಟಣದಲ್ಲಿ ಅನೇಕ ಪ್ರವಾಸಿಗರಿಗೆ ಚೂರಿ ಇರಿತವಾಗಿದೆ ಎಂದು ಈಜಿಪ್ಟ್ನ ಸರ್ಕಾರಿ ಸಂಬಂಧಿತ ಅಲ್-ಖೈದಾ ನ್ಯೂಸ್ ಟಿವಿ ಶುಕ್ರವಾರ ವರದಿ ಮಾಡಿದೆ. ಈಜಿಪ್ಟ್ ನ ತಾಬಾ ಎಂಬಲ್ಲಿ ಅನೇಕ ಪ್ರವಾಸಿಗರ ಮೇಲೆ ವ್ಯಕ್ತಿಯೊಬ್ಬ ಹಲವು ಪ್ರವಾಸಿಗರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/chalavadi-narayanasamy-in-which-quota-did-you-get-an-industrial-site/ https://kannadanewsnow.com/kannada/good-news-for-property-tax-payers-5-discount-extended-till-september-14/

Read More

ಬೆಂಗಳೂರು: ನಾರಾಯಣಸ್ವಾಮಿಯವರೇ, ನೀವೂ ಕೈಗಾರಿಕಾ ನಿವೇಶನವನ್ನು ಪಡೆದಿದ್ದೀರಿ ಅಲ್ಲವೇ? ಯಾವ ಕೋಟಾದಲ್ಲಿ ಪಡೆದಿದ್ದೀರಿ? ಪ್ರಭಾವ ಬಳಸಿ ಪಡೆದಿದ್ದಾ? ಬಕೆಟ್ ಹಿಡಿದು ಪಡೆದಿದ್ದಾ? ಚಡ್ಡಿ ಹೊತ್ತು ಪಡೆದಿದ್ದಾ? ನಾಡಿನ ಜನರಿಗೆ ಉತ್ತರಿಸುವಿರಾ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಚಲವಾದಿ ನಾರಾಯಣಸ್ವಾಮಿಯವರು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡವರು, ಅದೇ ಚಲವಾದಿ ನಾರಾಯಣಸ್ವಾಮಿಯವರನ್ನು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮುಂದೆ ಬಿಟ್ಟ ಬಿಜೆಪಿ ಆಟ ನೋಡುತ್ತಿದೆ ಎಂದಿದೆ. ಅಸ್ತಿತ್ವ ಕಟ್ಟಿಕೊಟ್ಟವರನ್ನೇ ಜರಿಯಲು ಮುಂದಾಗಿರುವ ನಾರಾಯಣಸ್ವಾಮಿಯವರ ಅವಕಾಶವಾದಿತನವೇ ಅವರ ರಾಜಕೀಯ ಅಂತ್ಯಕ್ಕೆ ಮುನ್ನುಡಿ ಬರೆಯಲಿದೆ. ನಾರಾಯಣಸ್ವಾಮಿಯವರೇ, ನೀವೂ ಕೈಗಾರಿಕಾ ನಿವೇಶನವನ್ನು ಪಡೆದಿದ್ದೀರಿ ಅಲ್ಲವೇ? ಯಾವ ಕೋಟಾದಲ್ಲಿ ಪಡೆದಿದ್ದೀರಿ? ಪ್ರಭಾವ ಬಳಸಿ ಪಡೆದಿದ್ದಾ? ಬಕೆಟ್ ಹಿಡಿದು ಪಡೆದಿದ್ದಾ? ಚಡ್ಡಿ ಹೊತ್ತು ಪಡೆದಿದ್ದಾ? ನಾಡಿನ ಜನರಿಗೆ ಉತ್ತರಿಸುವಿರಾ? ಎಂದು ಕೇಳಿದೆ. https://twitter.com/INCKarnataka/status/1829521446428901816 https://kannadanewsnow.com/kannada/state-chief-secretary-issues-show-cause-notice-to-dgp-prisons-for-royalty-against-actor-darshan/ https://kannadanewsnow.com/kannada/good-news-for-property-tax-payers-5-discount-extended-till-september-14/ https://kannadanewsnow.com/kannada/bank-holidays-here-is-the-complete-list-of-bank-holidays-for-the-month-of-september/

Read More

ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿದಂತ ಪೋಟೋ ವೈರಲ್ ಆಗುತ್ತಿದ್ದಂತೆ ಹಲವು ಅಧಿಕಾರಿ, ಸಿಬ್ಬಂದಿಗಳನ್ನು ಅಮಾತನಗೊಳಿಸಲಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಕಾರಾಗೃಹ ಡಿಜಿಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಈ ಕೇಸಲ್ಲಿ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ತಲೆದಂಡವಾಗುವ ಸಾಧ್ಯತೆ ಇದೆ. ಕಾರಣ, ಘಟನೆ ಸಂಬಂಧ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಜಾರಿಗೊಳಿಸಿರುವಂತ ಶೋಕಾಸ್ ನೋಟಿಸ್ ನಲ್ಲಿ ಕಾರಾಗೃಹದಲ್ಲಿ ನಡೆಯುತ್ತಿರುವಂತ ಈ ಅಕ್ರಮ ಚಟುವಟಿಕೆಗಳು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ. ನೀವು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದೀರಿ ಎಂದು ಏಕೆ ಭಾವಿಸಬಾರದು. ವಿವರವಾದ ಉತ್ತರ ನೀಡುವಂತೆ ಡಿಜಿಪಿಗೆ ಶೋಕಾಸ್ ನೋಟಿಸ್ ನಲ್ಲಿ ತಿಳಿಸಲಾಗಿದೆ. ಜೈಲಿನಲ್ಲಿ ಅಕ್ರಮ ತಡೆಗಾಗಿ ಕೈಗೊಂಡ ಕ್ರಮಗಳೇನು.? ಜೈಲಿನಲ್ಲಿ ನಡೆಯುತ್ತಿರುವಂತ ಅಕ್ರಮಗಳು ನಿಮ್ಮ…

Read More

ನವದೆಹಲಿ; ಕಾಂಗ್ರೆಸ್ ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಎಐಸಿಸಿಯಿಂದ ವಿವಿಧ ರಾಜ್ಯಗಳಿಗೆ ನೂತನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶಿಸಲಾಗಿದೆ. ಕರ್ನಾಟಕದ ಹಲವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬರ್ ಎಐಸಿಸಿ ಕಾರ್ಯದರ್ಶಿಯಾಗಿ ಗಣೇಶ್ ಕುಮಾರ್ ಯಾದವ್, ಜಂಟಿ ಕಾರ್ಯದರ್ಶಿಯಾಗಿ ಡಾ.ಪಾಲಕ್ ವರ್ಮಾ ನೇಮಕ ಮಾಡಲಾಗಿದೆ. ಕರ್ನಾಟಕಕ್ಕೆ ಎಐಸಿಸಿ ಕಾರ್ಯದರ್ಶಿಯಾಗಿ ರೋಜಿ ಎಂ ಜಾನ್, ಮಯೂರ ಎಸ್ ಜಯಕುಮಾರ್, ಅಭಿಷೇಕ್ ದತ್ ಹಾಗೂ ಪಿ ಗೋಪಿ ಅವರನ್ನು ನೇಮಕ ಮಾಡಲಾಗಿದೆ. ಕೇರಳ ಮತ್ತು ಲಕ್ಷದ್ವೀಪಕ್ಕೆ ಪಿವಿ ಮೋಹನ್, ವಿಕೆ ಅರಿವಜಗನ್ ಹಾಗೂ ಮನಸೂರ್ ಆಲಿ ಖಾನ್ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಗೋವಾ, ದಾದರ್ ಮತ್ತು ನಾಗರ್ ಹಾವೇಲಿ, ದಾಮನ್ ಮತ್ತು ಡಿಯೂಗೆ ಕಾರ್ಯದರ್ಶಿಯನ್ನಾಗಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಿದೆ. ತಮಿಳುನಾಡು ಹಾಗೂ ಪಾಂಡಿಚೇರಿ ಕಾರ್ಯದರ್ಶಿಯನ್ನಾಗಿ ಸೂರಜ್ ಹೆಗಡೆ ಅವರನ್ನು ನೇಮಿಸಿ ಆದೇಶಿಸಲಾಗಿದೆ. https://kannadanewsnow.com/kannada/renaming-bengaluru-south-district-will-increase-job-creation-deputy-cm-dk-shivakumar-shivakumar/ https://kannadanewsnow.com/kannada/good-news-for-property-tax-payers-5-discount-extended-till-september-14/…

Read More