Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಕಾಳಜಿವಹಿಸಿ, ಕರ್ತವ್ಯ ನಿಷ್ಠೆ ತೋರಿ, ರೋಗಿಗಳ ಆರೈಕೆ, ಸೇವೆ ಮಾಡಬೇಕಾಗಿದ್ದಂತ ಸರ್ಕಾರಿ ವೈದ್ಯ ಮಾಡಿದ್ದು ಮಾತ್ರ ಮಹಾ ಎಡವಟ್ಟು. ಇದರ ಪರಿಣಾಮ ಮಹಿಳೆ ಅನುಭವಿಸಿದ್ದಂತೂ ಯಮಯಾತನೆ. ವೈದ್ಯರ ಸಣ್ಣ ತಪ್ಪಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಬಡ ಮಹಿಳೆಯ ಗೋಳಿ ಕಥೆ ಮುಂದೆ ನೀವೇ ಓದಿ. ಮೇ.15ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದ ಮಹಿಳೆಯೊಬ್ಬರು ಹೆರಿಗಾಗಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆರಿಗೆ ಮಾಡಿಸಿದ್ದು ವೈದ್ಯ ಡಾ.ನಾಗೇಂದ್ರಪ್ಪ. ಆದರೆ ಹೆರಿಗೆ ವೇಳೆಯಲ್ಲಿ ಮಾಡಿರೋ ಎಡವಟ್ಟಿಗೆ ಆ ಮಹಿಳೆ ಅನುಭವಿಸಿದ್ದು ನರಕಯಾತನೆ. ಹೌದು ಹೆರಿಗೆ ಮಾಡಿಸಿ ರಕ್ತ ಸ್ರಾವ ಆಗುತಿದ್ದರೂ ಲೆಕ್ಕಿಸದೆ ಹೊಲಿಗೆ ಹಾಕಿ ಇದೇ ಡಾ.ನಾಗೇಂದ್ರಪ್ಪ ಕಳಿಸಿದ್ದಾರೆ. ಹೀಗೆ ಹೆರಿಗೆ ನಂತರ ಮನೆಗೆ ತೆರಳಿದಂತ ಹಸುಗೂಸಿನ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಅದೇ ಡಾ.ನಾಗೇಂದ್ರಪ್ಪ ಅವರ ಬಳಿಗೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ಪರೀಕ್ಷೆ ಮಾಡದ ವೈದ್ಯ ಡಾ.ನಾಗೇಂದ್ರಪ್ಪ, ಇದಕ್ಕೂ…
ಮಡಿಕೇರಿ : ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 15 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸ್‍ನ್ನು ನಡೆಸುವ ಈ ಸಂಸ್ಥೆಯು ಪ್ರಸ್ತುತ 2024-25ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2024-25ನೇ ಸಾಲಿನ ಈ ರಂಗತರಬೇತಿ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ.5,000 ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಭಾರತೀಯ ರಂಗಶಿಕ್ಷಣ…
ಬಳ್ಳಾರಿ : ಪ್ರಸ್ತಕ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಮೆರಿಟ್ ಕಮ್ ರಿಸರ್ವೇಶನ್ ಆಧಾರದ ಮೇಲೆ ಜಿಲ್ಲೆಯಲ್ಲಿ ಬರುವ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಜೂನ್ 09 ರ ಒಳಗಾಗಿ www.cite.karnataka.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಟಾಟಾ ಉದ್ಯೋಗ ಯೋಜನೆಯಡಿ ಆರಂಭಗೊಂಡಿರುವ ಮೂರು ಮತ್ತು ಹತ್ತು ತಿಂಗಳ ಧೀರ್ಘಾವಧಿಯ ವೃತ್ತಿಪರ ಕೋರ್ಸ್‍ಗಳಿಗೆ ಆನ್‍ಲೈನ್‍ನಲ್ಲಿ ಮೊದಲ ಆದ್ಯತೆ ಮೇರೆಗೆ ಪ್ರವೇಶಾತಿ ಪಡೆದುಕೊಳ್ಳಲಾಗುವುದು. ಬೇಕಾದ ದಾಖಲೆಗಳು ಆಧಾರ್ ಕಾರ್ಡ್, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹೈ.ಕ (371ಜೆ) ಪ್ರಮಾಣ ಪತ್ರ, ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ ಸೇರಿ ಇನ್ನಿತರೆ ಪೂರಕ ದಾಖಲಾತಿಗಳೊಂದಿಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹಾಗೂ ಅನುತ್ತೀರ್ಣಗೊಂಡ ಆಸಕ್ತ ಅಭ್ಯರ್ಥಿಗಳು ನಗರದ ಕಂಟೋನ್‍ಮೆಂಟ್ ಬಳಿಯ ರೆಡಿಯೋ ಪಾರ್ಕ್ ಹತ್ತಿರದ…
ನವದೆಹಲಿ: ಜೂನ್.7ರಂದು ಎನ್ ಡಿ ಎ ನಾಯಕರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ 3ನೇ ಬಾರಿಗೆ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಇಂದು ಎನ್ ಡಿಎ ಸಂಸದ ಸಭೆ ನಡೆಯಿತು. ಈ ಸಭೆಯಲ್ಲಿ ಎನ್ ಡಿಎಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಬೆಂಬಲ ಘೋಷಿಸಿ, ಪತ್ರವನ್ನು ನೀಡಿದ್ದಾರೆ. ಅಲ್ಲದೇ ಜೂನ್.7ರಂದು ರಾಷ್ಟ್ರಪತಿ ಭೇಟಿಯಾಗಿ, ಸರ್ಕಾರ ರಚಿಸಲು ಹಕ್ಕು ಮಂಡಿಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. https://twitter.com/ANI/status/1798340118438346858 ಜೂನ್.7ರಂದು ಸಂಜೆ 5 ಗಂಟೆಗೆ ಎನ್ ಡಿಎ ಮೈತ್ರಿ ಕೂಟದ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡನೆ ಮಾಡಲಿದ್ದಾರೆ. ಜೂನ್.8ರಂದು ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಅವರೊಟ್ಟಿಗೆ ಕೆಲ ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/devendra-fadnavis-offers-to-resign-as-deputy-cm-of-maharashtra/ https://kannadanewsnow.com/kannada/narendra-modi-resigns-as-pm-who-is-the-caretaker-prime-minister-of-the-country-now/
ಸಂಸಾರದಲ್ಲಿನ ಕಣ್ಣಿನ ಆಯಾಸ ದೂರವಾಗಬೇಕಾದರೆ ಪ್ರತಿ ತಿಂಗಳು ಬರುವ ಅಮಾವಾಸ್ಯೆಯಂದು ನಮ್ಮ ಮನೆಯಲ್ಲಿದ್ದವರಿಗೆ ದೃಷ್ಠಿ ನಿವಾಳಿಸುವ ತಂತ್ರ ಮಾಡಬೇಕು. ಅಮಾವಾಸಿ ತಿಥಿಯಂದು ದೃಷ್ಟಿ ಸುತ್ತಿದರೆ ನಮ್ಮ ಕುಟುಂಬದಲ್ಲಿ ಜನರ ಕಣ್ಣಿನ ದೃಷ್ಟಿ ದೂರವಾಗುತ್ತದೆ ಮತ್ತು ಕುಟುಂಬದ ಸದಸ್ಯರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ…
ನವದೆಹಲಿ: ಇಂದು ಎನ್ ಡಿಎ ಸಂಸದ ಸಭೆ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆಯಿತು. ಈ ಸಭೆಯಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿಂಧೆ ಬಣದಿಂದಲೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚಿಸೋದಕ್ಕೆ ಬೆಂಬಲ ನೀಡಿ, ಅಧಿಕೃತ ಪತ್ರ ನೀಡಿದ್ದಾವೆ. ಹೀಗಾಗಿ ಇಂದು ಸಂಜೆ 7.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಲಿರುವಂತ ಮೋದಿ, ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡನೆ ಮಾಡಲಿದ್ದಾರೆ. ನವದೆಹಲಿಯ ಮೋದಿ ನಿವಾಸದಲ್ಲಿ ಇಂದು ಎನ್ ಡಿಎ ಮೈತ್ರಿಕೂಟಗಳ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಶಿಂಧೆ ಸೇರಿದಂತೆ ವಿವಿಧ ನಾಯಕರು ಭಾಗಿಯಾಗಿದ್ದರು. ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ಸಂಸದರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಎನ್ ಡಿಎ ಪಕ್ಷದಿಂದ ಕೇಂದ್ರದಲ್ಲಿ ಸರ್ಕಾರ ರಚಿಸೋದಕ್ಕೆ ಬೆಂಬಲಿಸಿ ಪತ್ರವನ್ನು ಮಿತ್ರ ಪಕ್ಷಗಳಿಂದ ನೀಡಲಾಗಿದೆ. https://twitter.com/ANI/status/1798329336673804707 ಮಿತ್ರ ಪಕ್ಷಗಳು ಬಿಜೆಪಿಗೆ ಬೆಂಬಲಿಸಿದಂತ ಪತ್ರ ಮೋದಿಯವರ ಕೈ ಸೇರಿದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅಲ್ಲದೇ ಶಿಂಧೆ ಬಣದಿಂದಲೂ ಎನ್…
ನವದೆಹಲಿ: ಇಂದು ಮಧ್ಯಾಹ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಂತ ಮೋದಿಯವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ್ದದರು. ಅಲ್ಲದೇ ಕೇಂದ್ರ ಸಚಿವ ಸಂಪುಟ ವಿಸರ್ಜನೆಗೂ ಪತ್ರ ಸಲ್ಲಿಸಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 17ನೇ ಲೋಕಸಭೆ ವಿಸರ್ಜನೆ ಶಿಫಾರಸ್ಸಿಗೆ ಅಂಕಿತವನ್ನು ಹಾಕಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಸಂಪುಟ ವಿಸರ್ಜನೆ ಆದಂತೆ ಆಗಿದೆ. ಕ್ಯಾಬಿನೆಟ್ ತನ್ನ ಇಂದಿನ ಸಭೆಯಲ್ಲಿ, 17 ನೇ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಿದೆ. ರಾಷ್ಟ್ರಪತಿಗಳು ಸಂಪುಟದ ಸಲಹೆಯನ್ನು ಸ್ವೀಕರಿಸಿದ್ದಾರೆ. 17 ನೇ ಲೋಕಸಭೆಯನ್ನು ವಿಸರ್ಜಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 17ನೇ ಲೋಕಸಭೆ ವಿಸರ್ಜನೆಯೊಂದಿಗೆ ಕೇಂದ್ರ ಸಚಿವ ಸಂಪುಟ ವಿಸರ್ಜನೆಯಾದಂತೆ ಆಗಿದೆ. https://twitter.com/ANI/status/1798325192663654518 ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಮೋದಿ: 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ…
ನವದೆಹಲಿ: 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳು ವೀಕ್ಷಕರನ್ನು ದಿಗ್ಭ್ರಮೆಗೊಳಿಸಿವೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎಗೆ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದರೂ, ಇಂಡಿಯಾ ಒಕ್ಕೂಟ ನಿರೀಕ್ಷೆಗಳನ್ನು ಮೀರಿ 232 ಸ್ಥಾನಗಳನ್ನು ಗಳಿಸಿದೆ. ಆದ್ರೆ ಎನ್ ಡಿಎಗೆ ಸ್ಪಷ್ಟ ಬಹುಮತ ಸಿಗದೇ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ. ಹಾಗಾದ್ರೇ ಲೋಕಸಭಾ ಚುನಾವಣೆಯಲ್ಲಿ ಯಾರು ಎಲ್ಲಿಂದ ಗೆಲುವು ಎನ್ನುವ ಸಂಪೂರ್ಣ ಪಟ್ಟಿ ಮುಂದಿದೆ ಓದಿ. ಎನ್ಡಿಎ ಲೋಕಸಭಾ ಚುನಾವಣೆಯಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ 294 ಸ್ಥಾನಗಳನ್ನು ಗಳಿಸುವ ಮೂಲಕ ನಿರೀಕ್ಷೆಗಳ ಕೊರತೆಯನ್ನು ಅನುಭವಿಸಿತು. ಗಮನಾರ್ಹವಾಗಿ, 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಕ್ರಮವಾಗಿ 283 ಮತ್ತು 303 ಸ್ಥಾನಗಳನ್ನು ಗಳಿಸಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಮನಾರ್ಹ ಕುಸಿತವನ್ನು ಅನುಭವಿಸಿತು. ಇತ್ತೀಚಿನ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳೊಂದಿಗೆ ಕೊನೆಗೊಂಡಿತು. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ 272 ಸ್ಥಾನಗಳ…
ನವದೆಹಲಿ: ಕ್ಯಾಬಿನೆಟ್ ತನ್ನ ಇಂದಿನ ಸಭೆಯಲ್ಲಿ, 17 ನೇ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಿದೆ. ರಾಷ್ಟ್ರಪತಿಗಳು ಸಂಪುಟದ ಸಲಹೆಯನ್ನು ಸ್ವೀಕರಿಸಿದ್ದಾರೆ. 17 ನೇ ಲೋಕಸಭೆಯನ್ನು ವಿಸರ್ಜಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 17ನೇ ಲೋಕಸಭೆ ವಿಸರ್ಜನೆಯೊಂದಿಗೆ ಕೇಂದ್ರ ಸಚಿವ ಸಂಪುಟ ವಿಸರ್ಜನೆಯಾದಂತೆ ಆಗಿದೆ. https://twitter.com/ANI/status/1798325192663654518 ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಮೋದಿ: 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿದೆ. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ, 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿದರು. ಜೊತೆಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆಯನ್ನು ಮೋದಿ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. ಮೂಲಗಳ ಪ್ರಕಾರ, ಸಂಭಾವ್ಯ “ಕಿಂಗ್ ಮೇಕರ್ಸ್”…
ನವದೆಹಲಿ: ಎನ್ಡಿಎ ಸರ್ಕಾರ ರಚನೆಯ ಬಗ್ಗೆ ಊಹಾಪೋಹಗಳ ಮಧ್ಯೆ, ಆಡಳಿತಾರೂಢ ಮೈತ್ರಿ ಪಾಲುದಾರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬಿಜೆಪಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯದ ಕಾರಣ ಎನ್ ಡಿಎ ಪಕ್ಷಕ್ಕೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರನ್ನು ಬಿಜೆಪಿ ನಾಯಕರು ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿ, ಬೆಂಬಲ ನೀಡುವುದಾಗಿಯೂ ತಿಳಿಸಿದ್ದರು. ಅದರಂತೆ ಇಂದು ದೆಹಲಿಗೆ ಒಂದೇ ವಿಮಾನದಲ್ಲಿ ಆಗಮಿಸಿದ್ದಂತ ಇಬ್ಬರು ನಾಯಕರು, ಬಿಜೆಪಿ ಸಂಸದರ ಸಭೆಯಲ್ಲಿ ಪಾಲ್ಗೊಂಡಿದ್ದರು. ಇಂದಿನ ಎನ್ ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು, ಬಿಜೆಪಿಗೆ ಬೆಂಬಲ ಸೂಚಿಸುವಂತ ಪತ್ರವನ್ನು ನೀಡಿದ್ದಾರೆ. ಈ ಮೂಲಕ ಎನ್ ಡಿಎ ಕೇಂದ್ರದಲ್ಲಿ ಸರ್ಕಾರ ರಚಿಸೋದಕ್ಕಾಗಿ, ಮೋದಿ 3ನೇ ಅವಧಿಗೆ ಪ್ರಧಾನಿಯಾಗೋದಕ್ಕೆ ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ. ಹೀಗಾಗಿ ಜೂನ್.8ರಂದು ಮೋದಿ 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸೋದು ಫಿಕ್ಸ್ ಆದಂತೆ ಆಗಿದೆ. https://kannadanewsnow.com/kannada/devendra-fadnavis-offers-to-resign-as-deputy-cm-of-maharashtra/ https://kannadanewsnow.com/kannada/narendra-modi-resigns-as-pm-who-is-the-caretaker-prime-minister-of-the-country-now/














