Author: kannadanewsnow09

ಬೆಂಗಳೂರು: ಇಂದು ರಾತ್ರಿ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯನ್ನು ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ. ಇಂದು ರಾತ್ರಿ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿತ್ತು. ಇಂತಹ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/trump-may-withdraw-the-25-tariff-on-india-after-november-chief-economic-advisor/ https://kannadanewsnow.com/kannada/rahul-gandhi-is-a-person-without-general-knowledge-opposition-leader-r-ashok/

Read More

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‍ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2023ರಲ್ಲಿ ಆಳಂದ ವಿಧಾನಸಭಾ ಚುನಾವಣೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು. ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ತಿಳಿಸಿದರು. ಮೊನ್ನೆ ಬಂದು ಬಾಂಬ್ ಹಾಕುವೆ, ಮಹದೇವನನ್ನು ಸೃಷ್ಟಿಸುವೆ ಎಂದು ಹೋಗಿದ್ದರು; ಮಹದೇವಪುರದ ಕುರಿತು ಆರೋಪ ಬೋಗಸ್ ಎಂದು ಗೊತ್ತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತ ಎಂದಿದ್ದರು. ಅಲ್ಲಿದ್ದುದು 4 ಮತ; ಅಷ್ಟೇ ಮತ ಚಲಾವಣೆ ಆದುದು ಸಾಬೀತಾಗಿತ್ತು. ಈಗ ಮತ್ತೆ ಆಳಂದವನ್ನು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.…

Read More

ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಗುರುವಾರ ಅಮೆರಿಕ ಸರ್ಕಾರವು ಭಾರತೀಯ ಆಮದುಗಳ ಮೇಲೆ ವಿಧಿಸಿರುವ ದಂಡ ಸುಂಕವನ್ನು ನವೆಂಬರ್ 30 ರ ನಂತರ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಗಮನಾರ್ಹ ಸುಧಾರಣೆಯ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ ಎಂದು ಹೇಳಿದರು. ಭಾರತ ಮತ್ತು ಅಮೆರಿಕ ನಡುವಿನ ಸುಂಕದ ವಿವಾದದ ಕುರಿತು ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ, ಪರಿಸ್ಥಿತಿಯನ್ನು ಸರಾಗಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗಮನಿಸಿದರು. ನಾವೆಲ್ಲರೂ ಈಗಾಗಲೇ ಕೆಲಸದಲ್ಲಿದ್ದೇವೆ ಮತ್ತು ಇಲ್ಲಿ ಸುಂಕದ ಬಗ್ಗೆ ಮಾತನಾಡಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಹೌದು, ಶೇಕಡಾ 25 ರ ಮೂಲ ಪರಸ್ಪರ ಸುಂಕ ಮತ್ತು ಶೇಕಡಾ 25 ರ ದಂಡ ಸುಂಕ ಎರಡನ್ನೂ ನಿರೀಕ್ಷಿಸಿರಲಿಲ್ಲ. ಭೌಗೋಳಿಕ ರಾಜಕೀಯ ಸಂದರ್ಭಗಳು ಎರಡನೇ ಶೇಕಡಾ 25 ರ ಸುಂಕಕ್ಕೆ ಕಾರಣವಾಗಿರಬಹುದು ಎಂದು ನಾನು ಇನ್ನೂ ನಂಬುತ್ತೇನೆ, ಆದರೆ ಕಳೆದ ಎರಡು ವಾರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಮುಂತಾದವುಗಳನ್ನು…

Read More

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ಸುಧಾರಣೆಗಳು ಆರ್ಥಿಕತೆಗೆ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಮರಳಿ ಸೇರಿಸಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಘೋಷಿಸಿದರು. ಇದು ಮಧ್ಯಮ ವರ್ಗಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಹಬ್ಬದ ಋತುವಿನ ಬಳಕೆಯನ್ನು ಹೆಚ್ಚಿಸುತ್ತದೆ. ವಿಶಾಖಪಟ್ಟಣಂನಲ್ಲಿ ನಡೆದ ಜಿಎಸ್‌ಟಿ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಹೊಸ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆಯ ನಂತರ ಹೀಗೆ ಹೇಳಿದರು: 12% ಸ್ಲ್ಯಾಬ್‌ನಲ್ಲಿರುವ 99% ಸರಕುಗಳು 5% ಕ್ಕೆ ಬದಲಾಗುತ್ತವೆ. 28% ಸ್ಲ್ಯಾಬ್‌ನಲ್ಲಿರುವ 90% ವಸ್ತುಗಳು ಈಗ 18% ವರ್ಗಕ್ಕೆ ಸೇರುತ್ತವೆ. ಎರಡು-ಸ್ಲ್ಯಾಬ್ ಜಿಎಸ್‌ಟಿ ವ್ಯವಸ್ಥೆ (5% ಮತ್ತು 18%) ಈಗ ಅನ್ವಯವಾಗಲಿದ್ದು, ಇದು ಸರಳ ಮತ್ತು ಹೆಚ್ಚು ಗ್ರಾಹಕ ಸ್ನೇಹಿಯಾಗಿರುತ್ತದೆ. ಮಧ್ಯಮ ವರ್ಗದವರಿಗೆ ಹೆಚ್ಚಿನ ನಗದು “ಈ ಹೊಸ ಪೀಳಿಗೆಯ ತೆರಿಗೆ ಪದ್ಧತಿಯೊಂದಿಗೆ, ಜನರಿಗೆ ಹೆಚ್ಚಿನ ಬಿಸಾಡಬಹುದಾದ ಆದಾಯ ದೊರೆಯಲಿದೆ, ಇದು ಬಳಕೆ ಮತ್ತು ಆರ್ಥಿಕ ಬೆಳವಣಿಗೆಗೆ ನೇರ ಚಾಲನೆ ನೀಡುತ್ತದೆ” ಎಂದು ಹಣಕಾಸು ಸಚಿವೆ ಹೇಳಿದರು. ಸೆಪ್ಟೆಂಬರ್…

Read More

ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಿಗೆಗೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವಂತ ರಾಜ್ಯಪಾಲರ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದಂತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿಎಂ ಸಿದ್ಧರಾಮಯ್ಯ ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಿಗೆ ನೀಡಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂಬುದಾಗಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬೆಂಗಳೂರಿನ ಉದ್ಯಮಿ ಎಂ.ಪಿ ವೇಣುಗೋಪಾಲ ಎಂಬುವರು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್ ನೀಡಿದೆ. https://kannadanewsnow.com/kannada/good-news-good-news-for-pensioners-nps-rules-changed-from-1st-january-many-benefits/ https://kannadanewsnow.com/kannada/dharmasthala-head-skull-case-two-more-skeletons-found-in-the-banglegudda-forest/

Read More

ಧರ್ಮಸ್ಥಳ: ಇಲ್ಲಿ ತಲೆಬುರುಡೆ ಕೇಸ್ ಸಂಬಂಧಿಸಿದಂತೆ ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತೆರಡು ಕಳೇಬರಹ ಪತ್ತೆಯಾಗಿದ್ದಾವೆ. ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆರಡು ಅಸ್ಥಿಪಂಜರಗಳು ಪತ್ತೆಯಾಗಿದ್ದಾವೆ. ಮನುಷ್ಯನ ಬುರುಡೆ, ಅಸ್ಥಿಪಂಜರದ ಅವಶೇಷ ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ದೊರೆತಿರುವಂತ ಮೂಳೆಗಳನ್ನು ಪರಿಶೀಲನೆಯನ್ನು ಎಫ್ ಎಸ್ ಎಲ್ ತಂಡ ನಡೆಸಲಾಗುತ್ತಿದೆ. ಸ್ಥಳದಲ್ಲಿ ಎಸ್ ಐ ಟಿಯಿಂದ ಮಹಜರು ಮಾಡಲಾಗುತ್ತಿದೆ. https://kannadanewsnow.com/kannada/good-news-good-news-for-pensioners-nps-rules-changed-from-1st-january-many-benefits/

Read More

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆ( UPS) ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್.30 ಕೊನೆಯ ದಿನವಾಗಿದೆ. ಅದರ ಒಳಗಾಗಿ ಪೂರ್ಣಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಸೂಚಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್.1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ಆಯ್ಕೆಗಾಗಿ ಅವಕಾಶ ನೀಡಲಾಗಿದೆ. ಜುಲೈ.20ರವರೆಗೆ ಸುಮಾರು 31,555 ನೌಕರರು ಯುಪಿಎಸ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದಿದೆ. ಕೇಂದ್ರ ಸರ್ಕಾರದ ಅರ್ಹ ನೌಕರರು ಕೊನೆಗಳಿಗೆಯಲ್ಲಿ ತರಾತುರಿಯಿಂದ ತಪ್ಪಿಸಿಕೊಳ್ಳದೇ ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS) ಅನ್ನು ಆಯ್ಕೆ ಮಾಡಿದವರು ಸೆಪ್ಟೆಂಬರ್.30ರ ನಂತ್ರ ಮತ್ತೆ ಏಕೀಕೃತ ಪಿಂಚಣಿ ವ್ಯವಸ್ಥೆಗೆ ಬರಲಾಗದು ಎಂಬುದಾಗಿ ಖಡಕ್ ಆಗಿಯೇ ತಿಳಿಸಿದೆ.

Read More

ನವದೆಹಲಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ದನಿ ಎತ್ತಿರುವ ಉದ್ಯಮಿಗಳ ಪರ ನಿಂತಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯವನ್ನು ಬಿಟ್ಟು ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು; “ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ.We will Make Bengaluru Great Again ಎಂದು ಕಂಪನಿಗಳಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಮತ್ತು ಕರ್ನಾಟಕ ಭ್ರಷ್ಟರ ಕೈಯ್ಯಲ್ಲಿ ಸಿಲುಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಎಂದು ಕೇಂದ್ರ ಸಚಿವರಾದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿಗಳು…

Read More

ಮಂಡ್ಯ : ಕರಾವಳಿಯ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡಾಮಂಡಲರಾದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿರುವ ಗಲಭೆ ಹಾಗೂ ಶಾಂತಿ ಭಂಗ ಮಾಡಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಜನತೆಗೆ ಅಭಯ ನೀಡಿದರು. ಮಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಾನು ವಿದೇಶಕ್ಕೆ ಹೋಗಿದ್ದೆ. ಯಾವುದೇ ಮೋಜು ಮಸ್ತಿ ಮಾಡಲು ನಾನು ಹೋಗಿರಲಿಲ್ಲ. ಆ ಸಂಧರ್ಭದಲ್ಲಿ ಮದ್ದೂರು ಪಟ್ಟಣದಲ್ಲಿ ಹಿಂದೆಂದೂ ಸಹ ನಡೆಯಬಾರದಂತ ಒಂದು ಘಟನೆ ನಡೆದಿದೆ. ಈ ಘಟನೆ ನಡೆದ ಕ್ಷಣದಿಂದಲೂ ಪೊಲೀಸರ ಸಂಪರ್ಕದಲ್ಲಿದ್ದೆ. ಕ್ಷಣ ಕ್ಷಣಕ್ಕೂ ಮಾಹಿತಿ ಪಡೆದು ಸೂಚನೆ ನೀಡಿದ್ದೆ. ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ತೀವ್ರ ಕಾರ್ಯಾಚರಣೆ ನಡೆಸಿದ ಪರಿಣಾಮ ಪರಿಸ್ಥಿತಿಯನ್ನು ಹತೋಟಿ ತಂದು ಶೀಘ್ರವಾಗಿ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ ಎಂದರು. ಕಲ್ಲು ಹೊಡೆದು ಶಾಂತಿ…

Read More

ಮಂಡ್ಯ : ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ನಡೆದ ವಿಶ್ವಕರ್ಮರ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಇಂದಿನ ಪೀಳಿಗೆಗೆ ಪ್ರಸಿದ್ಧಿ ಪಡೆದಿವೆ. ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತು ಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು. ವಿಶ್ವಕರ್ಮರ ಕೆತ್ತನೆ ಕಾರ್ಯಗಳ ಕಲೆಯು ಇಂದಿನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಕಲೆ ಮತ್ತು ವಾಸ್ತುಶಿಲ್ಪ…

Read More