Author: kannadanewsnow09

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಕೋಟ್ಯಂತರ ಹಣ ವಂಚನೆ ಮಾಡಿರುವಂತ ಘಟನೆ ನಗರದಲ್ಲಿ ನಡೆದಿದೆ. ಮ್ಯಾಟ್ರಿಮೋನಿಯಲ್ಲಿ ವಿವಾಹಕ್ಕಾಗಿ ಹುಡುಗರನ್ನು ಹುಡುಕೋ ಮುನ್ನಾ ಯುವತಿಯರೇ ಮುಂದೆ ಸುದ್ದಿ ಓದಿ.. ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಕೋಟ್ಯಂತರ ವಂಚನೆ ಮಾಡಿರೋದಾಗಿ ಹೇಳಲಾಗುತ್ತಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವಂತ ಯುವತಿಯೇ ವಂಚನೆಗೆ ಒಳಗಾಗಿರುವಂತವಳು. ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಆರೋಪಿ ವಿಜಯ್ ರಾಜುಗೌಡನೇ ಈ ರೀತಿಯಾಗಿ ವಂಚನೆ ಮಾಡಿರೋದಾಗಿ ಯುವತಿ ಆರೋಪಿಸಿದ್ದಾರೆ. 2024ರ ಮಾರ್ಚ್ ನಲ್ಲಿ ವಿಜಯ್ ಮ್ಯಾಟ್ರಿಮೋನಿ ಮೂಲಕ ಯುವತಿಗೆ ಪರಿಚಯವಾಗಿದ್ದರು. ಆ ಸಂದರ್ಭದಲ್ಲಿ ತಾನು ಉದ್ಯಮಿ, 715 ಕೋಟಿ ಮೌಲ್ಯದ ಆಸ್ತಿ ಒಡೆಯನೆಂಬುದಾಗಿ ಯುವತಿಗೆ ಪರಿಚಯಿಸಿಕೊಂಡಿದ್ದನು. ಯುವತಿಯನ್ನು ನಿನ್ನನ್ನೇ ಮದುವೆಯಾಗುವುದಾಗಿ ವಿಜಯ್ ಕುಟುಂಬಸ್ಥರಿಗೂ ಪರಿಚಯಿಸಿದ್ದನು. ಕೆಂಗೇರಿ ಬಳಿ ಯುವತಿಗೆ ಕುಟುಂಬದ ಸದಸ್ಯರನ್ನು ಪರಿಚಯಿಸಿದ್ದನು. ತಂದೆ ನಿವೃತ್ತ ತಹಶೀಲ್ದಾರ್ ಎಂಬುದಾಗಿಯೂ ವಿಜಯ್ ಯುವತಿಗೆ ಪರಿಚಯಿಸಿದ್ದನು. ಶಾಕಿಂಗ್ ಎನ್ನುವಂತೆ ವಿಜಯ್ ತನ್ನ ಪತ್ನಿಯನ್ನೂ ಮನೆಯಲ್ಲಿ ಅಕ್ಕ ಎಂಬುದಾಗಿ ಯುವತಿಗೆ ಪರಿಚಯಿಸಿದ್ದನಂತೆ. ನಂತರ…

Read More

ಹಾವೇರಿ: ಬಿಗ್ ಬಾಸ್ ಸೀಸನ್-12ರಲ್ಲಿ ಗಿಲ್ಲಿ ನಟ ಗೆಲ್ಲೋದು ಖಾಯಂ. ಗಿಲ್ಲಿ ಅಣ್ಣ ನನ್ನ ಫೇವರಿಟ್. ಅವರೇ ವಿನ್ನರ್ ಆಗೋದಾಗಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭವಿಷ್ಯ ನುಡಿದಿದ್ದಾರೆ. ಹಾವೇರಿಯ ಸವಣೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರನ್ನು ವಿನ್ನರ್ ಎಂಬುದಾಗಿ ಘೋಷಣೆ ಮಾಡುತ್ತಾರೆ ಅಂತ ಎದೆಯಲ್ಲಿ ಢವಢವ ಶುರುವಾಗಿದೆ. ಈ ಬಾರಿ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗಿದೆ ಎಂದರು. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಇರೋದಿಲ್ಲ. ಈ ಬಾರಿ ಅತೀ ಹೆಚ್ಚು ವೋಟಿಂಗ್ ಆಗಿದೆ. ಅತೀ ಹೆಚ್ಚು ವೋಟ್ ಗಿಲ್ಲಿ ನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟಿಂಗ್ ಮಾಡಿರೋದಾಗಿ ತಿಳಿಸಿದರು. ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಅಣ್ಣ ಗೆಲ್ಲುತ್ತಾನೆ. ನಾನು ಮತ್ತು ಗಿಲ್ಲಿ ಭರ್ಜರಿ ಬ್ಯಾಚುಲರ್, ಕಾಮಿಡಿ ಕಿಲಾಡಿ ಶೋ ಮಾಡಿದ್ದೀವಿ. ಗಿಲ್ಲಿ ಅಣ್ಣನಿಗೆ ಹೆಚ್ಚು ವೋಟ್ ಬಂದಿರೋದು. ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ…

Read More

ಬೆಂಗಳೂರು: ರಾಜ್ಯದ ಖ್ಯಾತ ಸುದ್ದಿವಾಹಿನಿ R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ಶೋಭಾ ಮಳವಳ್ಳಿ ಅವರು ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಸಂಪಾದಕರಾಗಿ ಹುದ್ದೆಗೇರಿದಂತ ಕೆಲವೇ ತಿಂಗಳಿನಲ್ಲಿ ಆ ಹುದ್ದೆಯಿಂದ ಹೊರ ನಡೆದಿದ್ದಾರೆ. ಈ ಕುರಿತಂತೆ ಪತ್ರಕರ್ತೆ ಶೋಭಾ ಮಳವಳ್ಳಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದು, R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. 26 ವರ್ಷಗಳ ಕಾಲ ವರದಿಗಾರಿಕೆಯಿಂದ ಸಂಪಾದಕಿಯಾಗುವವರೆಗೆ ನಡೆದ ದಾರಿ ಧೀರ್ಘವಿದೆ ಮತ್ತು ಪ್ರಾಮಾಣಿಕವಾಗಿದೆ ಎಂದಿದ್ದಾರೆ. ಇಷ್ಟುವರ್ಷಗಳ ಕಾಲ ಸುದ್ದಿಮನೆಯಲ್ಲಿ ಪಳಗಿದ, ದುಡಿದ, ಅನುಭವ, ಆತ್ಮ ವಿಶ್ವಾಸ ಎಲ್ಲವೂ ಇದ್ದ ಯಾರಿಗಾದರೂ EDITOR ಆಗುವ ಅವಕಾಶ ಸಂತೋಷವನ್ನೆ ಕೊಡುತ್ತದೆ. ಅದು ನಮ್ಮ ಸಾಮರ್ಥ್ಯಕ್ಕೆ ಸಿಗುವ ಸ್ವಾತಂತ್ರ್ಯ ‌ಮತ್ತು ಸವಾಲು. ಅಂತಹ ಅವಕಾಶವನ್ನು ರಾಷ್ಟ್ರೀಯ ಮಟ್ಟದ ದಿಗ್ಗಜ ಪತ್ರಿಕೋದ್ಯಮಿ ಅರ್ನಬ್ ಗೋಸ್ವಾಮಿ ನೀಡಿದಾಗ, ಕನ್ನಡದ ಸುದ್ದಿವಾಹಿನಿ ಜಗತ್ತಿನ ಮೊದಲ ಮಹಿಳಾ ಎಡಿಟರ್ ಆಗುವ ಸಾಧ್ಯತೆ ‌ಮತ್ತು ಸಂಭ್ರಮದ ಜೊತೆಗೇ ನಾನದನ್ನು ಸ್ವೀಕರಿಸಿದ್ದೆ. ಹೊಸ‌ಮನೆ ಕಟ್ಟುವುದು…

Read More

ಬೀದರ್: ರಾಜ್ಯದಲ್ಲೊಂದು ಘೋರ ದುರಂತ ಎನ್ನುವಂತೆ ಗಾಳಿಪಟ ಹಿಡಿಯೋದಕ್ಕೆ ಹೋದಂತ ಯುವಕನೊಬ್ಬ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿರುವಂತ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಹಾರಿಸಿದ್ದಂತ ಗಾಳಿಪಟ ಹಿಡಿಯೋದಕ್ಕೆ ತೆರಳಿದಂತ ಶಶಿಕುಮಾರ್ ಶಿವಾನಂದ (19) ಎಂಬ ಬಾಲಕ, ಕಟ್ಟಡದ ಮೇಲಿನಿಂದ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಗಾಳಿಪಟ ಹಾರಿಸುವಾಗ ದಾರ ತುಂಡಾಗಿದ್ದರಿಂದ, ಅದನ್ನು ಹಿಡಿಯೋದಕ್ಕೆ ಶಶಿಕುಮಾರ್ ಓಡಿ ಹೋಗಿದ್ದನು. ಈ ವೇಳೆ ಕಟ್ಟಡದ ಮೇಲಿನಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಇಂದು ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಬಿಡದಿ ಬಳಿಯಲ್ಲಿರುವಂತ ಬಿಗ್ ಬಾಸ್ ಮನೆಗೆ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಸ್ ಬಳಿಯಲ್ಲಿ ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ಇನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಬಿಗ್ ಬಾಸ್ ಮನೆಯ ಬಳಿಯಲ್ಲಿ ಈ ಕ್ರಮ ವಹಿಸಲಾಗಿದೆ. ಬಿಗ್ ಬಾಸ್ ಮನೆಯ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಬಿಡದಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸ್ಟುಡಿಯೋ ಬಳಿಯಲ್ಲಿ ಸ್ಪರ್ಧಿಗಳ ಕಟೌಟ್ ಗಳು ರಾರಾಜಿಸುತ್ತಿವೆ. https://kannadanewsnow.com/kannada/two-youths-die-after-car-hits-electric-pole-in-bhatkal/

Read More

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವಂತ ಘಟನೆ ಭಟ್ಕಳದಲ್ಲಿ ನಡೆದಿದೆ. ಕಾರವಾರದ ಭಟ್ಕಳದ ವೆಂಕಟಾಪುರದ ಬಳಿಯಲ್ಲಿ ವಿದ್ಯುತ್ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಭಟ್ಕಳದ ಆಜಾದ್ ನಗರದ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನದ್ದೀನ್ ಶಿಪಾಯಿ ಅವರ ಪುತ್ರ ಬಿಲಾಲ್(15) ಹಾಗೂ ಆಯಾನ್ (20) ಎಂಬುವರು ಮೃತಪಟ್ಟಿದ್ದಾರೆ. ಬಿಲಾಲ್ ಸ್ಥಳದಲ್ಲೇ ಸಾವನ್ನಪ್ಪಿದರೇ, ತೀವ್ರವಾಗಿ ಗಾಯಗೊಂಡಿದ್ದಂತ ಆಯಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಮೃತರು ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bjp-has-no-morals-to-question-us-cm-siddaramaiah/

Read More

ಮೈಸೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು. ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ವಿರೋಧಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಸೇರಿದ ವಿಚಾರ. ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದರು. ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಶ್ರೀರಾಮುಲು, ಜನಾರ್ಧನ ರೆಡ್ಡಿ ಯವರು ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಬಗ್ಗೆ ಮಾತನಾಡಿ ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಬಾರದೆಂದು ಏಕೆ ಹೇಳಿದ್ದರು? ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು? ಲೋಕಾಯುಕ್ತರಾಗಿದ್ದಾಗ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಡಾಕ್ಟರ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟು. ಆಯುರ್ವೇದದ ಈ ದಿನಚರಿ ಪಾಲನೆ ಮಾಡಿದವರು ನೂರಾರು ವರ್ಷ ಕಾಯಿಲೆ ಇಲ್ಲದೇ ಬದುಕಿದರು. ನೂರರ ಸಮೀಪದಲ್ಲೂ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರು. ಆಯುರ್ವೇದದ ಪ್ರಕಾರ ದಿನಚರಿ (Daily Routine) ಎಂದರೆ ಕೇವಲ ಕೆಲಸ ಮಾಡುವುದಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ವಿಧಾನವಾಗಿದೆ. ಆಯುರ್ವೇದದ ಪ್ರಕಾರ ನಿಮ್ಮ ದಿನವನ್ನು ಹೇಗೆ ಕಳೆಯಬೇಕು ಎಂಬ ಮಾಹಿತಿ ಇಲ್ಲಿದೆ: ​1. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು (Early Morning) ​ಸೂರ್ಯೋದಯಕ್ಕೆ ಸುಮಾರು 1.5 ಗಂಟೆಗಳ ಮೊದಲು (ಅಂದರೆ ಬೆಳಿಗ್ಗೆ 4:30 ರಿಂದ 5:30 ರ ನಡುವೆ) ಏಳುವುದು ಅತ್ಯುತ್ತಮ. ಈ ಸಮಯದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ. ​2. ಮುಖ ಪ್ರಕ್ಷಾಲನ ಮತ್ತು ಹಲ್ಲುಜ್ಜುವುದು ​ಕಣ್ಣುಗಳು: ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ​ಹಲ್ಲುಜ್ಜುವುದು: ಕಹಿ ಅಥವಾ ಒಗರು ರುಚಿಯ ಗಿಡಮೂಲಿಕೆಗಳ ಪುಡಿ ಅಥವಾ ಪೇಸ್ಟ್ ಬಳಸಿ. ​ನಾಲಿಗೆ ಸ್ವಚ್ಛತೆ: ನಾಲಿಗೆಯ ಮೇಲಿರುವ ಬಿಳಿ…

Read More

ಬೆಂಗಳೂರು: ರಾಜ್ಯದ ಜನತೆಗೆ ಉಪಯುಕ್ತ ಮಾಹಿತಿ ಎನ್ನುವಂತೆ ಯಾವುದೇ ಗ್ರಾಮ ಪಂಚಾಯ್ತಿಗಳಲ್ಲಿ ನೀವು ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಮಾಡಿದರೇ, ಆ ಅರ್ಜಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಸಂಬಂಧಿಸಿದಂತ ಅಧಿಕಾರಿಗಳು ಈ ಕರ್ತವ್ಯ ನಿರ್ವಹಿಸಬೇಕಾಗಿದೆ. ಅದು ಏನು ಅಂತ ಮುಂದಿದೆ ಮಾಹಿತಿ ಓದಿ… 1. ಗ್ರಾಮ ಪಂಚಾಯತ್ ಯಾವುದೇ ಅರ್ಜಿಯನ್ನು ಸ್ವೀಕರಿಸುವುದು ಕಡ್ಡಾಯ ಕರ್ತವ್ಯವಾಗಿದ್ದು “ನಮಗೆ ಸಂಬಂಧ ಇಲ್ಲ” ಎಂದು ತಿರಸ್ಕರಿಸುವುದು ಕಾನೂನುಬಾಹಿರ — (ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993, ಸೆಕ್ಷನ್ 58; ವ್ಯಾಖ್ಯಾನ “ಗ್ರಾಮ ಪಂಚಾಯತ್” ಸೆಕ್ಷನ್ 2(15)). 2. ಅರ್ಜಿ ಸ್ವೀಕರಿಸಿದ ದಿನಾಂಕದೊಂದಿಗೆ ಅರ್ಜಿದಾರನಿಗೆ ಸ್ವೀಕೃತಿ/ನಕಲು ಸಹಿ ನೀಡಿ ಹಿಂತಿರುಗಿಸಬೇಕು — (ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ಗಳ ತೆರಿಗೆಗಳು, ದರಗಳು ಮತ್ತು ಶುಲ್ಕಗಳು) ನಿಯಮಗಳು, 2021, ನಿಯಮ 5). 3. ಅರ್ಜಿ ಸ್ವೀಕರಣೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಯೇ ಕಾನೂನುಬದ್ಧವಾಗಿ ಜವಾಬ್ದಾರರು — (ಕರ್ನಾಟಕ ಗ್ರಾಮ…

Read More

ಬೆಂಗಳೂರು: ರಾಜ್ಯದಲ್ಲಿ ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಕುರಿತಂತೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.  ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಶಾಲಾ ದಾಖಲಾತಿಯಲ್ಲಿ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ ಪಂಗಡದ ಜಾತಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯು ಆಡಳಿತ ಇಲಾಖೆಯಾಗಿದ್ದು ಮತ್ತು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಹಿಂದುಳಿದ ವರ್ಗಗಳ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ ಕಾಯ್ದೆಯಂತೆ ಜಾತಿ ಪಮಾಣ ಪತ್ರಗಳನ್ನು ನೀಡಲಾಗುತ್ತಿರುವುದರಿಂದ ಈ ಬಗ್ಗೆ ಸ್ಪಷ್ಟಿಕರಣ. ನೀಡಲು ಸಮಾಜ ಕಲ್ಯಾಣ ಇಲಾಖೆ ಸೂಕ್ತ ಪ್ರಾಧಿಕಾರವಾಗಿರುತ್ತದೆ ಎಂದು ತಿಳಿಸಿ ಮಾರ್ಗದರ್ಶನ ಹಾಗೂ ಸ್ಪಷ್ಟಿಕರಣ ನೀಡುವಂತೆ ಕೋರಲಾಗಿರುತ್ತದೆ ಎಂದು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ರವರು ತಿಳಿಸಿರುತ್ತಾರೆ ಎಂದಿದ್ದಾರೆ. ಮುಂದುವರೆದಂತೆ, ಈ ಕೆಳಕಂಡ ಆದೇಶ ಮತ್ತು ಸುತ್ತೋಲೆಗಳಲ್ಲಿ ಜಾತಿ ತಿದ್ದುಪಡಿ ಕುರಿತು ಮಾರ್ಗದರ್ಶನ ನೀಡಿರುವ ಕುರಿತು ತಿಳಿಸಿರುತ್ತಾರೆ. ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ:- ಇಡಿ…

Read More