Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಮಾರ್ಚ್ 18 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಆ ಮೂಲಕ ಬಿಗ್ ರಿಲೀಫ್ ಅನ್ನು ನಟ ರಾಜ್ ಪಾಲ್ ಯಾದವ್ ಅವರಿಗೆ ನೀಡಿದೆ. ಶಹಜಹಾನ್‌ಪುರದಲ್ಲಿ ನಡೆಯುವ ತಮ್ಮ ಸೊಸೆಯ ಮದುವೆಯಲ್ಲಿ ಭಾಗವಹಿಸಲು ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಸ್ವೀಕರಿಸುವವರ ಹೆಸರಿನಲ್ಲಿ 1.5 ಕೋಟಿ ರೂ.ಗಳ ಡಿಮಾಂಡ್ ಡ್ರಾಫ್ಟ್ ಸಲ್ಲಿಸಲು ನ್ಯಾಯಾಲಯವು ನಟನಿಗೆ ಮಧ್ಯಾಹ್ನ 3 ಗಂಟೆಯವರೆಗೆ ಸಮಯಾವಕಾಶ ನೀಡಿದ ನಂತರ ಇದು ಬಂದಿದೆ. ರಾಜ್‌ಪಾಲ್ ಯಾದವ್ ಅವರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿ ಅವರು 1.5 ಕೋಟಿ ರೂ.ಗಳ ಡಿಡಿಯನ್ನು ಠೇವಣಿ ಇಟ್ಟಿದ್ದಾರೆ. ನ್ಯಾಯಾಲಯವು ಅವರ ಪಾಸ್‌ಪೋರ್ಟ್ ಅನ್ನು ಸಹ ಒಪ್ಪಿಸುವಂತೆ ಆದೇಶಿಸಿದೆ. ಮುಂದಿನ ವಿಚಾರಣೆ ಮಾರ್ಚ್ 18 ರಂದು ನಡೆಯಲಿದೆ. https://kannadanewsnow.com/kannada/high-court-orders-invalidation-of-election-of-bagepalli-mla-sn-subbareddy/
ಬೆಂಗಳೂರು: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ಇಂದು ಈ ಕುರಿತಂತೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ ಎಸ್ ಕಮಲ್ ಅವರಿದ್ದಂತ ನ್ಯಾಯಪೀಠವು ವಿಚಾರಣೆ ನಡೆಸಿ ಈ ಆದೇಶ ಮಾಡಿದೆ. ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಅವರು ಅರ್ಜಿ ಸಲ್ಲಿಸಿದ್ದರು. ಆಯ್ಕೆ ಅಸಿಂಧು ಕೋರಿ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶಿಸಿದೆ. ಚುನಾವಣಾ ಅಕ್ರಮ ಹಿನ್ನಲೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. https://kannadanewsnow.com/kannada/a-young-man-died-due-to-an-unscientific-hump-in-the-state/
ಶಿವಮೊಗ್ಗ: ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಬಲಿ ಎನ್ನುವಂತೆ ಶಿವಮೊಗ್ಗದಲ್ಲಿ ಪಾಲಿಕೆ ನಿರ್ಮಿಸಿದ್ದಂತ ಅವೈಜ್ಞಾನಿಕ ಹಂಪ್ ಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಶಿವಮೊಗ್ಗದ ಎಲ್ ಬಿ ಎಸ್ ನಗರದ ಫ್ಲೈಓವರ್ ಬಳಿಯಲ್ಲಿ ಪಾಲಿಕೆಯಿಂದ ಅವೈಜ್ಞಾನಿಕವಾಗಿ ಹಂಪ್ ಒಂದನ್ನು ನಿರ್ಮಿಸಲಾಗಿತ್ತು. ಈ ಹಂಬ್ ಕಾಣದೇ ಉಲ್ಲಾ(35) ಎಂಬಾತ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕ ಹಂಪ್ ಕಾಣದೇ ಉಲ್ಲಾ ಬೈಕ್ ನಿಂದ ಕೆಳಗೆ ಬಿದ್ದಿರುವಂತ ದೃಶ್ಯ ಸಮೀಪದಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಲ್ಲಾ ಸಾವಿಗೆ ಶಿವಮೊಗ್ಗ ಪಾಲಿಕೆಯೇ ಕಾರಣ ಎಂಬುದಾಗಿ ಆರೋಪಿಸಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. https://kannadanewsnow.com/kannada/another-victim-of-elephant-attack-in-the-state-laborer-dies-in-chikkamagaluru/
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಹಾವೇರಿಯ ಕೂಲಿ ಕಾರ್ಮಿಕನೊಬ್ಬ ಚಿಕ್ಕಮಗಳೂರಿನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾನೆ. ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಾಗೇಶ್ ಗೌಡ ಎಂಬುವರ ತೋಟದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ತಿರುವಳ್ಳಿ ಮೂಲದ ಯಲ್ಲಪ್ಪ(45) ಎಂಬಾತ ಕೆಲಸ ಮಾಡುತ್ತಿದ್ದನು. ನಾಗೇಶ್ ಗೌಡರ ತೋಟದ ಮೂಲಕ ಶ್ರೀಧರ್ ಗೌಡ ಅವರ ತೋಟದ ಲೈನ್ ಮನೆಗೆ ಹೋಗುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿ ಮಾಡಿ, ಸಾಯಿಸಿದೆ. ಕೂಲಿ ಕೆಲಸ, ಗಾರೆ ಕೆಲಸವನ್ನು ಮೃತ ಯಲ್ಲಪ್ಪ ಮಾಡುತ್ತಿದ್ದರು. ಇಂದು ಅವರು ತೋಟದ ಮನೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ಆನೆ ದಾಳಿ ಮಾಡಿ ಸಾಯಿಸಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕೂಲಿ ಕಾರ್ಮಿಕ ಯಲ್ಲಪ್ಪ ಪಾರ್ಥೀವ ಶರೀರವನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. https://kannadanewsnow.com/kannada/india-us-trade-deal-is-like-a-death-warrant-for-farmers-aap-chief-minister-chandru/
ಬೆಂಗಳೂರು: ಭಾರತ- ಅಮೆರಿಕ ವಾಣಿಜ್ಯ ಒಪ್ಪಂದ ರೈತರಿಗೆ ನೀಡಿರುವ ಮರಣ ಶಾಸನವೇ ಸರಿ ಎಂಬುದಾಗಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಆಮ್ ಆದ್ಮಿ ಪಕ್ಷದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ ಭಾರತ ದೇಶವು ಪರಂಪರಾನುಗತವಾಗಿ ಕೃಷಿ ಕ್ಷೇತ್ರವನ್ನು ತನ್ನ ಆರ್ಥಿಕತೆಯ ಬೆನ್ನೆಲುಬಾಗಿ ಕಾಪಾಡಿಕೊಂಡು ಬಂದಿದೆ. ಕೋಟ್ಯಾಂತರ ಸಂಖ್ಯೆಯ ಸಣ್ಣ ಸಣ್ಣ ರೈತರುಗಳು ಇಂದಿಗೂ ಸಹ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕ ದೇಶದ ಒತ್ತಡ ಹಾಗೂ ಹಿತಾಸಕ್ತಿಗೆ ಬಲಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದೇಶಗಳ ನಡುವಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕವೆಂದು ಹೇಳುತ್ತಲೇ ಭಾರತೀಯ ರೈತರುಗಳಿಗೆ ಮರಣ ಶಾಸನವನ್ನೇ ಬರೆದುಬಿಟ್ಟಿದ್ದಾರೆ ಎಂದು ತೀವ್ರ ಕಳವಳವನ್ನು ವ್ಯಕ್ತ ಪಡಿಸಿದ್ದಾರೆ. ಮುಂದುವರೆದು ಮಾತನಾಡುತ್ತಾ ” ಭಾರತದ 145 ಕೋಟಿ ಜನಸಂಖ್ಯೆಯಲ್ಲಿ 85ರಿಂದ 90 ಕೋಟಿ ಜನತೆ ಕೃಷಿ…
ಬೆಂಗಳೂರು: ಶಾಕಿಂಗ್ ಎನ್ನುವಂತೆ ರಾಜ್ಯ ಸರ್ಕಾರದ ವಿವಿಧ ಪೌಷ್ಟಿಕಾಂಶ ಯೋಜನೆಗಳ ಹೊರತಾಗಿಯೂ, 0 ರಿಂದ 6 ವರ್ಷದೊಳಗಿನ 4.79 ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಕುಂಠಿತಗೊಂಡಿದ್ದಾರೆ. ಸರ್ಕಾರಿ ದತ್ತಾಂಶದ ಪ್ರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕುಂಠಿತ ಮಕ್ಕಳು ಗುರುತಿಸಲ್ಪಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಿಂದಿನ ಸಚಿವೆ ಶಶಿಕಲಾ ಜೊಲ್ಲೆ ಕೂಡ ಬೆಳಗಾವಿಯವರು. ಇತ್ತೀಚೆಗೆ ನಡೆದ ಶಾಸಕಾಂಗ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್ ಅವರು ನೀಡಿದ ಮಾಹಿತಿಯ ಪ್ರಕಾರ, ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಲಾದ 32,29,644 ಸಕ್ರಿಯ ಮಕ್ಕಳಲ್ಲಿ 32,17,112 ಜನರ ಎತ್ತರ ಮತ್ತು ತೂಕದ ತಪಾಸಣೆ ನಡೆಸಲಾಯಿತು ಮತ್ತು 4,79,931 ಮಕ್ಕಳ ಬೆಳವಣಿಗೆ ಕುಂಠಿತಗೊಂಡಿರುವುದು ಕಂಡುಬಂದಿದೆ. ದತ್ತಾಂಶದ ಪ್ರಕಾರ, ಬೆಳಗಾವಿಯಲ್ಲಿ 50,522 ತೀವ್ರ ಕುಂಠಿತ ಮಕ್ಕಳಿದ್ದಾರೆ. ನಂತರ ವಿಜಯಪುರದಲ್ಲಿ 46,434, ಕಲಬುರಗಿಯಲ್ಲಿ 43,919, ರಾಯಚೂರಿನಲ್ಲಿ 36,836, ಕೊಪ್ಪಳದಲ್ಲಿ 28,070 ಮತ್ತು ಯಾದಗಿರಿಯಲ್ಲಿ 27,066…
ಶಿವಮೊಗ್ಗ: ಫೆಬ್ರವರಿ.3ರಿಂದ 11ರವರೆಗೆ 9 ದಿನಗಳ ಕಾಲ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. 9 ದಿನಗಳಲ್ಲೇ ಹುಂಡಿಗೆ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಇಂದಿನ ಹುಂಡಿ ಏಣಿಕೆ ವೇಳೆಯಲ್ಲಿ 77 ಲಕ್ಷದ 40 ಸಾವಿರ ಕಾಣಿಕೆ ಹಣ ಸಂಗ್ರಹವಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಿಂದ ಮಾಹಿತಿ ತಿಳಿದು ಬಂದಿದ್ದು, ಇಂದು ಮಾರಿಕಾಂಬ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಇರಿಸಲಾಗಿದ್ದಂತ ಹುಂಡಿಗಳನ್ನು ತೆರೆದು ನೋಟುಗಳನ್ನು ಏಣಿಕೆ ಮಾಡಲಾಗಿದೆ. ಈ ವೇಳೆ 77 ಲಕ್ಷದ 40 ಸಾವಿರ ಹಣ ಸಂಗ್ರಹವಾಗಿರೋದಾಗಿ ಮೂಲಗಳು ತಿಳಿಸಿವೆ. https://youtu.be/1viAXu_t5mA ಇನ್ನೂ ಕಾಯಿನ್ ಗಳ ಏಣಿಕೆ ಬಾಕಿ ಉಳಿದಿದೆ. 4 ಲಕ್ಷಕ್ಕೂ ಹೆಚ್ಚು ಕಾಯಿನ್ ಇರೋದಾಗಿ ಹೇಳಲಾಗುತ್ತಿದೆ. ಹೀಗಾಗಿ 2026ರ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ 80 ರಿಂದ 81 ಲಕ್ಷ ಹುಂಡಿ ಹಣ ಸಂಗ್ರಹವಾಗಿರೋದಾಗಿ ಸಮಿತಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಪಾಕಿಸ್ತಾನವನ್ನು ಟೀಂ ಇಂಡಿಯಾ ಬಗ್ಗು ಬಡೆದಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ಪಂದ್ಯದಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಗೆಲುವು ಸಾಧಿಸಿದೆ. ಭಾರತದ ವೇಗ, ಸ್ಪಿನ್ ಮೋಡಿಗೆ ಪಾಕಿಸ್ತಾನದ ಬ್ಯಾಟರ್ ಗಳು ತತ್ತರಿಸಿ ಹೋಗಿದ್ದಾರೆ. ಬೂಮ್ರಾ, ಹಾರ್ದಿಕ್, ಅಕ್ಷರ್, ವರುಣ್ ಗೆ ತಲಾ ಎರಡು ವಿಕೆಟ್ ಬಿದ್ದಿವೆ. ಭಾರತ 175 ರನ್ ಅನ್ನು 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ ಪೇರಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದಂತ ಪಾಕಿಸ್ತಾನ 18 ಓವರ್ ಗಳಲ್ಲಿ 114 ರನ್ ಗಳಿಸಿ ಆಲ್ ಔಟ್ ಆಗಿ ಸೋಲು ಕಂಡಿತು. ಆ ಮೂಲಕ ಭಾರತವು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದಂತೆ ಆಗಿದೆ.
ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ .ಎಸ್.ತಂಗಡಗಿ ಅವರು ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿನ ಸೇವಾಲಾಲ್ ಜಯಂತಿ ವೇಳೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಇದೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮಿಯೊಂದನ್ನು ಮಾಡಿದ್ದು, ಸಮಿತಿ ಕಾರ್ಯನ್ಮೋಕವಾಗಿದೆ ಎಂದು ತಿಳಿಸಿದರು. ನಾವು- ನೀವು ಒಂದೇ ತಕ್ಕಡಿಯಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಇದಕ್ಕೆ ಯಾರು ಹೆದರುವ ಅಗತ್ಯವಿಲ್ಲ ಎಂದರು. ಪ್ರತಿಯೊಂದು ತಾಂಡಾ ಕಂದಾಯ ಗ್ರಾಮ: ರಾಜ್ಯದಲ್ಲಿನ ಪ್ರತಿಯೊಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಆ ಕೆಲಸ ಪ್ರಾರಂಭಗೊಂಡಿದೆ.…
ಚಿಕ್ಕಮಗಳೂರು: ಟಿವಿ ನೋಡುವುದು ಕಡಿಮೆ ಮಾಡು ಎಂದಿದ್ದಕ್ಕೆ ಬಾಲಕಿಯೊಬ್ಬಳು ವೇಲ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಟಿವಿ ನೋಡುವುದನ್ನು ಕಡಿಮೆ ಮಾಡು ಎಂಬುದಾಗಿ ತಾಯಿ ಬೈದಿದ್ದರು. ಇದರಿಂದಾಗಿ ನೊಂದಂತ ಬಾಲಕಿ ಸುಪ್ರಿತಾ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರತಿ ದಿನ ಟಿವಿ ನೋಡುತ್ತ ಬಾಲಕಿ ಸುಪ್ರಿತಾ ಊಟ ಮಾಡುತ್ತಿದ್ದಳು. ಇಂದು ಕೂಡ ಹಾಗೆಯೇ ಊಟ ಮಾಡುತ್ತಿದ್ದಾಗ ಬಾಲಕಿ ಸುಪ್ರಿತಾ ಕೈಯಿಂದ ತಟ್ಟೆ ಕೆಳಗೆ ಬಿದ್ದಿತ್ತು. ಇದರಿಂದ ಕೋಪಗೊಂಡಂತ ಸುಪ್ರಿತಾ ತಾಯಿ ಟಿವಿ ನೋಡುವುದನ್ನು ಕಡಿಮೆ ಮಾಡು ಎಂಬುದಾಗಿ ಬುದ್ಧಿ ಹೇಳಿದ್ದರು. ಸುಪ್ರಿತಾ ತಾಯಿ ಕೆಲಸಕ್ಕೆ ಹೋದಂತ ಸಂದರ್ಭದಲ್ಲಿ ಮನನೊಂದು ವೇಲ್ ನಿಂದ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/removal-of-dangerous-dry-trees-branches-and-twigs-in-bengaluru/ https://kannadanewsnow.com/kannada/vijayendra-visits-mla-bhairati-basavarajs-house-bjp-state-president-reassures-family/














