Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರ ಒಡವೆಗಳನ್ನು ಜಪ್ತಿ ಮಾಡಲಾಗಿತ್ತು. ಈ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸುವುದಕ್ಕೂ ಹೈಕೋರ್ಟ್ ಆದೇಶಿಸಿತ್ತು. ಆದ್ರೇ ಇದೀಗ ಇದಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ವಿಧಿಸಿದೆ. ದಿ.ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಪ್ತಿ ಮಾಡಲಾಗಿದ್ದಂತ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಮಾರ್ಚ್.5, 6ರೊಳೆಗೆ ಹಿಂದಿರುಗಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದಂತ ಜಯಲಲಿತಾ ವಾರಸುದಾರೆ ಜೆ.ದೀಪಾ ಅವರ ಪರ ವಕೀಲರು, ವಿಶೇಷ ಕೋರ್ಟ್ ಆದೇಶದಿಂದ ತಮ್ಮ ಹಕ್ಕಿಗೆ ಧಕ್ಕೆಯಾಗಿದೆ ಎಂಬುದಾಗಿ ಕೋರಿದ್ದರು. ಈ ವಾದವನ್ನು ಪರಿಗಣಿಸಿದಂತ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಜಯಲಲಿತಾ ಅವರ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದುರಿಗಿಸುವ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. https://kannadanewsnow.com/kannada/sandeshhali-violence-nwc-chief-meet-prez-recommends-presidents-rule-in-wb/ https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/
ಬೆಂಗಳೂರು: ರಾಜ್ಯದ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಉಪ ನೋಂದಣಾಧಿಕಾರಿ ಕಚೇರಿಯ ( Sub-registrar’s office ) ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ರಾಜ್ಯಾಧ್ಯಂತ ಇರುವ ಉಪ ನೋಂದಣಾಧಿಕಾರಿ ಕಚೇರಿಯ ಅವಧಿಯನ್ನು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಉಪ ನೋಂದಣಾಧಿಕಾರಿಗಳ ಕಚೇರಿಯ ಅವಧಿಯನ್ನು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ರಾಜ್ಯದ ಜನರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. https://kannadanewsnow.com/kannada/sandeshhali-violence-nwc-chief-meet-prez-recommends-presidents-rule-in-wb/ https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/
ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಂದೇಶ್ಖಾಲಿ ಘಟನೆಯ ಬಗ್ಗೆ ವರದಿಯನ್ನು ಸಲ್ಲಿಸಿದರು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಜನವರಿ 5 ರಂದು ಸಂದೇಶ್ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿಯ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ದಾಳಿಗೆ ಸಂಬಂಧಿಸಿದಂತೆ ಫೆಬ್ರವರಿ 29 ರಂದು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ ಟಿಎಂಸಿ ಮುಖಂಡ ಶಹಜಹಾನ್ ಶೇಖ್ ಅವರ ಕಸ್ಟಡಿಯನ್ನು ಕೇಂದ್ರ ಸಂಸ್ಥೆಗೆ ಹಸ್ತಾಂತರಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. https://kannadanewsnow.com/kannada/ed-raids-8-locations-in-bengaluru-seizes-crucial-documents/ https://kannadanewsnow.com/kannada/breaking-sandeshkhali-case-bengal-govt-moves-sc-against-hc-order-to-hand-over-cbi-probe/
ಬೆಂಗಳೂರು: ನಗರದ 8 ಕಡೆಗಳಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ಪತ್ರ, ಹಣವನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಫೆಬ್ರವರಿ.9ರ ನಂತ್ರ ಮತ್ತೆ ಇಂದು ವಿಜಯ್ ತಾತಾ ಹಾಗೂ ಸಹಚರರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ 8 ಕಡೆಗಳಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಖಾತೆಯಲ್ಲಿದ್ದಂತ 11.25 ಕೋಟಿಯನ್ನು ಸೀಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಈ ದಾಳಿಯನ್ನು ನಡೆಸಲಾಗಿದೆ. ಬೆಂಗಳೂರಿನ 8 ಕಡೆಗಳಲ್ಲಿ ವಿಜಯ್ ತಾತಾ ಹಾಗೂ ಸಹಚರರಿಗೆ ಸೇರಿದಂತೆ ಕಚೇರಿ, ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 120 ಕೋಟಿ ಆಸ್ತಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದಡಿ ನಗದು, ಆಸ್ತಿ ಪತ್ರಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಜಯ್ ತಾತಾ ಅಸೋಸಿಯೇಟ್ಸ್ ಆಗಿರುವ ಆರ್ ಎಸ್ ಚಂದ್ರಶೇಖರ್, ಮುನಿರಾಜು.ಕೆ, ಡಿ ನಾಗೇಂದ್ರ ಬಾಬು ಸೇರಿದಂತೆ ಹಲವು ಸಹಚರರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ…
ಬೆಂಗಳೂರು: ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಮುಂದಿನ ಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತದೆ ಎಂದು ಗುಡುಗಿದರು. ಪಕ್ಷದ ರಾಜ್ಯ ಕಾವೇರಿ ಜೆ ಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಮಂಡ್ಯ ಕಾರ್ಯಕ್ರಮದಲ್ಲಿ ಮಾತಾಡಿದ್ದರು ಸಿದ್ದರಾಮಯ್ಯ ಅವರು. ಮುಂದಿನ ಜನ್ಮವಿದ್ದರೆ ಮುಸ್ಲಿಂಮರಲ್ಲಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕುಮಾರಸ್ವಾಮಿ ಅವರ ಸರಕಾರವನ್ನು ತೆಗೆದಿದ್ದು ಯಾರು? ಯಾವ ಕಾರಣಕ್ಕೆ ತೆಗೆದಿರಿಸಿ? ಎಂದು ಅಬ್ಬರಿಸಿದರು. ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತ ಸಿದ್ದರಾಮಯ್ಯನವರೇ ತೀರ್ಮಾನ ಮಾಡಿಬಿಟ್ಟರು. ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ ಎಂದಿದ್ದ ಮಂಡ್ಯದ ನಾಯಕರೊಬ್ಬರು ಹೇಳಿದ್ದರು. ಜಾತ್ಯತೀತ ಎಂಬ ಪದ ಬಳಕೆ ಮಾಡುವ ನೈತಿಕತೆ ಜೆಡಿಎಸ್ ಗೆ ಇಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಹಾಗಾದರೆ, ಮುಸ್ಲಿಮರಿಗೆ ನಾನು ಕೊಟ್ಟಿದ್ದ…
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ವೆಬ್ ಸೈಟ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತಾಗಿದೆ ಎಂಬುದಾಗಿ ತಿಳಿದು ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸರ್ವರ್ ಡೌನ್ ಆಗಿದ್ದು, ಹಲವಾರು ಬಳಕೆದಾರರು ಮಂಗಳವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಕಳೆದ 5-6 ಗಂಟೆಗಳಿಂದ ಯುಪಿಎಸ್ಸಿ ಸರ್ವರ್ ಡೌನ್ ಆಗಿದೆ. ದಯವಿಟ್ಟು 1 ಅಥವಾ 2 ದಿನಗಳನ್ನು ಕೆಲ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಸ್ತರಿಸಿ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ. https://twitter.com/broChandan/status/1764976295564206209 ಇನ್ನೊಬ್ಬ ಬಳಕೆದಾರರು “ಯುಪಿಎಸ್ಸಿ ಸರ್ವರ್ ಬೆಳಿಗ್ಗೆಯಿಂದ ಡೌನ್ ಆಗಿದೆ” ಎಂದು ಬರೆದಿದ್ದಾರೆ. https://twitter.com/civil_notesense/status/1764965530589630856 ಬಳಕೆದಾರರೊಬ್ಬರು, “ಪ್ರಿಯ ಯುಪಿಎಸ್ಸಿ, ಕಳೆದ ರಾತ್ರಿಯಿಂದ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ನಾನು ಯಾವುದೇ ಒಟಿಪಿಯನ್ನು ಸ್ವೀಕರಿಸng ಆಗುತ್ತಿಲ್ಲ. ಅನೇಕ ಬಾರಿ ಪ್ರಯತ್ನಿಸಿದೆ. ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ ಅಥವಾ ಗಡುವನ್ನು ವಿಸ್ತರಿಸಿ ಸರ್ ಎಂದು ಕೋರಿದ್ದಾರೆ. https://twitter.com/Arshknp/status/1764967257111945298 ಇನ್ನೊಬ್ಬ ಬಳಕೆದಾರರು, “ಕಳೆದ 1 ಗಂಟೆಯಿಂದ ಸರ್ವರ್ ಡೌನ್ ಆಗಿರುವುದರಿಂದ ನಮಗೆ ಅರ್ಜಿ ಪೂರ್ಣಗೊಳಿಸಲು…
ನವದೆಹಲಿ: ಚಿನ್ನದ ಬೆಲೆ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂಗೆ 800 ರೂ.ಗಳಷ್ಟು ಏರಿಕೆಯಾಗಿ 65,000 ರೂ.ಗೆ ತಲುಪಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ. ಹಿಂದಿನ ಮುಕ್ತಾಯದಲ್ಲಿ, ಅಮೂಲ್ಯ ಲೋಹವು 10 ಗ್ರಾಂಗೆ 64,200 ರೂ ಆಗಿತ್ತು. ಬೆಳ್ಳಿ ಬೆಲೆಯು ಕೆಜಿಗೆ 900 ರೂಪಾಯಿ ಏರಿಕೆಯಾಗಿ 74,900 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ, ಇದು ಪ್ರತಿ ಕಿಲೋಗ್ರಾಂಗೆ 74,000 ರೂ ಆಗಿತ್ತು. ದೆಹಲಿ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ (24 ಕ್ಯಾರೆಟ್) 10 ಗ್ರಾಂಗೆ 65,000 ರೂ.ಗೆ ವಹಿವಾಟು ನಡೆಸುತ್ತಿದೆ. ದೇಶೀಯ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಮಂಗಳವಾರ ಸಾರ್ವಕಾಲಿಕ ಗರಿಷ್ಠ 65,000 ರೂ.ಗೆ ತಲುಪಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಕಾಮೆಕ್ಸ್ನಲ್ಲಿ ಸ್ಪಾಟ್ ಚಿನ್ನವು ಔನ್ಸ್ಗೆ 2,110 ಡಾಲರ್ಗೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಮುಕ್ತಾಯಕ್ಕಿಂತ ಶೇಕಡಾ 1 ಕ್ಕಿಂತ ಹೆಚ್ಚಾಗಿದೆ. ಬೆಳ್ಳಿ ಕೂಡ ಪ್ರತಿ ಔನ್ಸ್ಗೆ 23.88 ಡಾಲರ್ಗೆ ಏರಿಕೆಯಾಗಿದೆ.…
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ತಮ್ಮ ಪಕ್ಷದ ಮೈತ್ರಿಯನ್ನು ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆಸಿಆರ್ ಮಂಗಳವಾರ (ಮಾರ್ಚ್ 5) ಘೋಷಿಸಿದ್ದಾರೆ. ಎರಡೂ ಪಕ್ಷಗಳು ಹಲವಾರು ಅಂಶಗಳಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನಿರ್ಧರಿಸುತ್ತವೆ ಎಂದು ಅವರು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಆರ್ಎಸ್ ಮತ್ತು ಬಿಎಸ್ಪಿ ಒಟ್ಟಾಗಿ ಹೋರಾಡಲು ನಾವು ನಿರ್ಧರಿಸಿದ್ದೇವೆ. ನಾವು ಅನೇಕ ಅಂಶಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಾವು ನಾಳೆ ನಿರ್ಧರಿಸುತ್ತೇವೆ. ನಾನು ಇನ್ನೂ ಮಾಯಾವತಿ ಅವರೊಂದಿಗೆ ಮಾತನಾಡಿಲ್ಲ. ನಾನು ಆರ್.ಎಸ್.ಪ್ರವೀಣ್ ಕುಮಾರ್ ಅವರೊಂದಿಗೆ ಮಾತ್ರ ಮಾತನಾಡಿದ್ದೇನೆ ಎಂದು ಕೆಸಿಆರ್ ಹೇಳಿದರು. ಬಿಎಸ್ಪಿ ನಾಯಕ ಆರ್.ಎಸ್.ಪ್ರವೀಣ್ ಮಾತನಾಡಿ, ಕೆಸಿಆರ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಸಂವಿಧಾನವನ್ನು ನಾಶಪಡಿಸುವ ಪಿತೂರಿ ನಡೆಯುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಟ್ಟಿಗೆ ಎದುರಿಸುವ ಅವಶ್ಯಕತೆಯಿದೆ. ನಮ್ಮ (ಬಿಆರ್ಎಸ್ ಮತ್ತು ಬಿಎಸ್ಪಿ)…
ಚಾಮರಾಜನಗರ: ರಾಜ್ಯದಲ್ಲಿ ಭಯವನ್ನೇ ಹುಟ್ಟಿಸಿದ್ದಂತ ವೀರಪ್ಪನ್ ಈಗ ಇಲ್ಲವಾಗಿದ್ದಾರೆ. ಆದರೇ ಈ ಗ್ಯಾಂಗಿನ ಸದಸ್ಯರಾಗಿದ್ದಂತ ಸ್ಟೆಲ್ಲಾ ಮೇರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. 2002ರಲ್ಲಿ ವೀರಪ್ಪನ್ ಗ್ಯಾಂಗಿನ ಸದಸ್ಯೆಯಾಗಿದ್ದಂತ ಸ್ಟೆಲ್ಲಾ ಮೇರಿಯ ವಿರುದ್ಧ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಟೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಲ್ಲಿ ಬಂಧಿಸಲಾಗಿತ್ತು. ಅಲ್ಲದೇ ಅವರು ಪಾಲಾರ್ ಬಾಂಬ್ ಸ್ಪೋಟದ ಆರೋಪಿ ಕೂಡ ಆಗಿದ್ದರು. ಅವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆ ದಾಳಿಯ ಆರೋಪ ಕೂಡ ಇತ್ತು. ಇಂದು ಚಾಮರಾಜನಗರದ ಬಾಲ ನ್ಯಾಯಮಂಡಳಿಯು ವೀರಪ್ಪನ್ ಗ್ಯಾಂಗ್ ಸದಸ್ಯೆ ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದಂತ ಪಾಲಾರ್ ಬಾಂಬ್ ಸ್ಪೋಟ ಸೇರಿದಂತೆ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದೆ. ಈ ಮೂಲಕ ಚಾಮರಾಜನಗರದ ಬಾಲ ನ್ಯಾಯ ಮಂಡಳಿಯು ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೆಲ್ಲಾ ಮೇರಿಗೆಕ್ಲೀನ್ ಚಿಟ್ ನೀಡಿ ಆದೇಶಿದೆ. https://kannadanewsnow.com/kannada/notorious-rowdy-sheeter-shot-in-leg-by-police-in-ramanagara/ https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/
ರಾಮನಗರ: ಜಿಲ್ಲೆಯಲ್ಲಿ ನಟೋರಿಯಸ್ ರೌಡಿ ಶೀಟರ್ ಒಬ್ಬರಿಗೆ ಪೊಲೀಸರು ಕಾಲಿಗೆ ಗುಂಡೇಟು ನೀಡಿರೋ ಘಟನೆ ನಡೆದಿದೆ. ಈ ಮೂಲಕ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು ನೀಡಿದ್ದಾರೆ. ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸೈಕಲ್ ಗಿರಿ ಎಂಬಾತ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಇಂದು ಸ್ಥಳ ಮಹಜರಿಗೆ ಪೊಲೀಸರು ಆತನನ್ನು ಕರೆದೊಯ್ಯಲಾಗಿತ್ತು. ರೌಡಿ ಶೀಟರ್ ಸೈಕಲ್ ಗಿರಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿದ್ದಂತ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗೋದಕ್ಕೆ ಯತ್ನಿಸಲಾಗಿತ್ತು. ಈ ವೇಳೆಯಲ್ಲಿ ಆತ್ಮರಕ್ಷಣೆಗಾಗಿ ಕಗ್ಗಲಿಪುರ ಠಾಣೆಯ ಪಿಎಸ್ಐ ಲೋಕೇಶ್ ಅವರು ಎಡಗಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಕಾಲಿಗೆ ಪೊಲೀಸರಿಂದ ಗುಂಡೇಟು ಬಿದ್ದು ಗಾಯಗೊಂಡಿರುವಂತ ಸೈಕಲ್ ಗಿರಿಯನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಂದಹಾಗೇ ರೌಡಿ ಶೀಟರ್ ಸೈಕಲ್ ಗಿರಿ ವಿರುದ್ಧ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಒಂದು ದಿನಗಳ ಹಿಂದೆ ಆತನನ್ನು ಕಗ್ಗಲೀಪುರ ಠಾಣೆಯ ಪೊಲೀಸರು ಬಂಧಿಸಿದ್ದರು.…