Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ : ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಸ್ವಲ್ಪ ಸಮಯದ ನಂತ್ರದ ಅವ್ರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿತ್ತು. ಈ ನಡುವೆ ಇಂದು ದೆಹಲಿ ಸಿಎಂ ನಿವಾಸದ ಮೇಲೆ ದಾಳಿ ಮಾಡಿದ್ದಂತ ಇಡಿ ಅಧಿಕಾರಿಗಳು ವಿಚಾರಣೆಯ ಬಳಿಕ ಅವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ. ಜಾರಿ ನಿರ್ದೇಶನಾಲಯ (ED) ತಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದ್ದರು. ಈ ಪ್ರಕರಣದಲ್ಲಿ ಅವರಿಗೆ ಸಮನ್ಸ್ ನೀಡಲು ತನಿಖಾ ಸಂಸ್ಥೆಯ ತಂಡವು ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದರು. ಳಿಸಿವೆ. ಶೋಧ ವಾರಂಟ್ ಇದೆ ಎಂದು ತಂಡವು ಮುಖ್ಯಮಂತ್ರಿ ನಿವಾಸದ ಸಿಬ್ಬಂದಿಗೆ ಮಾಹಿತಿ ನೀಡಿತ್ತು. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಈ ಹಿಂದೆ ಈ ಪ್ರಕರಣದಲ್ಲಿ ಏಜೆನ್ಸಿಯ ಅನೇಕ ಸಮನ್ಸ್ಗಳನ್ನು ತಪ್ಪಿಸಿಕೊಂಡಿದ್ದರು. ಇದಕ್ಕೂ ಮುನ್ನ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ಪೀಠವು ಕೇಜ್ರಿವಾಲ್ ಅವರಿಗೆ…
ಚಿತ್ರದುರ್ಗ: ಕಾಡುಗೊಲ್ಲರ ಪರವಾಗಿ ನಾನಿದ್ದೇನೆ, ಹಿಂದೆಯೂ ಸಹ ನಾನು ಸಂಸದನಾಗಿದ್ದಾಗ ಕಾಡುಗೊಲ್ಲರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ತುಮಕೂರು ಲೋಕಸಭಾ ಕಾಂಗ್ರೇಸ್ಅಭ್ಯರ್ಥಿ ಮುದ್ದ ಹನುಮೇಗೌಡ ತಿಳಿಸಿದರು. ಈ ಮೂಲಕ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಕಾಡುಗೊಲ್ಲ ಸಮುದಾಯದವರ ಮತಗಳ ಬೇಟೆಗೆ ಇಳಿಸಿದ್ದಾರೆ. ನಗರದ ಕಾಡು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರು ಹಾಗೂ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅದ್ಯಕ್ಷರಾದ ಸಿ ಶಿವುಯಾದವ್ ಅವರ ಮನೆಗೆ ಭೇಟಿ ಮಾಡಿ ಮಾತನಾಡಿದರು. 2014ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ ಟಿ ಗೆ ಸೇರಿಸುವ ಕುರಿತು ಕುಲ ಶಾಸ್ತ್ರ ಅಧ್ಯಯನವನ್ನು ಮಾಡಿಸಿ, ಅಂಗೀಕರಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಆ ಕಡತ ಕೇಂದ್ರ ಸರ್ಕಾರದಲ್ಲಿ ಹಾಗೆ ಕುಳಿತಿದೆ ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಕೇಂದ್ರ ಸರ್ಕಾರದಲ್ಲಿ ಒತ್ತಡ ತಂದು ನಿಮ್ಮನ್ನು ಎಸ್ಟಿಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮ್ಮ ಜೊತೆಗೆ ನಾನಿರುತ್ತೇನೆ ಎಂದು ತಿಳಿಸಿದರು. ಕಾಡುಗೊಲ್ಲ ಸಮುದಾಯಕ್ಕೆ ಸಂಬಂಧಪಟ್ಟಂತೆ ಸಂಸತ್ತನಲ್ಲಿ ಸುದೀರ್ಘವಾಗಿ…
ನವದೆಹಲಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಮಹಾರಾಷ್ಟ್ರದ ಸತಾರಾದ ವಾಯ್ನಲ್ಲಿ ಗುರುವಾರ ಅಪಘಾತಕ್ಕೀಡಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಕಂಟೇನರ್ ಹಠಾತ್ ಬ್ರೇಕ್ ತೆಗೆದುಕೊಂಡ ನಂತರ ಅವರ ಕಾರು ಕಂಟೇನರ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. https://twitter.com/ANI/status/1770802362979958917 https://kannadanewsnow.com/kannada/shivamogga-rs-2-lakh-cash-seized-from-illegal-lying-near-choorikatte-in-sagar/ https://kannadanewsnow.com/kannada/breaking-ed-ed-raids-delhi-cm-arvind-kejriwals-residence/
ಚಿಕ್ಕಮಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಯಿಂದ ಸೂಚನೆ ನೀಡಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದರಿಂದ ಸಹಾಯಕ ಚುನಾವಣಾಧಿಕಾರಿ ಜಯಲಕ್ಷ್ಮಮ್ಮ ಎಂಬವುರ ನಗರ ಪೊಲೀಸ್ ಠಾಣೆಗೆ ಸಿ.ಟಿ ರವಿ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಸಿ.ಟಿ.ರವಿ ಅವರ ಎಕ್ಸ್ ಪೋಸ್ಟ್ ಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಡಿಇಒ ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ ಮತ್ತು ಆರ್ ಪಿ ಕಾಯ್ದೆಯ 126 ರ ಅಡಿಯಲ್ಲಿ 20.03.24 ರಂದು ಎಫ್ ಐಆರ್ ದಾಖಲಿಸಿದ್ದಾರೆ ಎಂದಿದ್ದಾರೆ. https://kannadanewsnow.com/kannada/three-teachers-suspended-for-not-attending-election-duty/ https://kannadanewsnow.com/kannada/shivamogga-rs-2-lakh-cash-seized-from-illegal-lying-near-choorikatte-in-sagar/
ಚಿತ್ರದುರ್ಗ: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದಂತ ಮೂವರು ಶಿಕ್ಷಕಿಯರನ್ನು ಚುನಾವಣಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳನ್ನಾಗಿ ಚಿಕ್ಕಪುರ ಗೊಲ್ಲರಹಟ್ಟಿಯ ಸರ್ಕಾರಿ ಶಾಲಾ ಶಿಕ್ಷಕಿ ಕೆ.ಬಿ ಜಯ್ಯಮ್ಮ, ತೋಪು ಮಾಳಿಗೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್ ರೂಪ ಹಾಗೂ ಮಠದ ಕುರುಬರಹಟ್ಟಿ ಶಾಲೆಯ ಶಿಕ್ಷಕಿ ಕೆ.ಗಿರಿಜಮ್ಮ ನೇಮಕ ಮಾಡಲಾಗಿತ್ತು. ಆದ್ರೇ ಈ ಮೂವರು ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸೋದಕ್ಕೆ ಹಾಜರಾಗದೇ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಗೈರಾದಂತ ಮೂವರು ಶಿಕ್ಷಕಿಯರನ್ನು ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. https://kannadanewsnow.com/kannada/shivamogga-rs-2-lakh-cash-seized-from-illegal-lying-near-choorikatte-in-sagar/ https://kannadanewsnow.com/kannada/breaking-ed-ed-raids-delhi-cm-arvind-kejriwals-residence/
ಬೆಂಗಳೂರು: ತೀವ್ರ ಬರ ಎದುರಿಸುತ್ತಿರುವ ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದಕ್ಕೂ ಮುನ್ನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನೀರು ಹರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕೋರಬೇಕೆಂದು ಮನವಿ ಮಾಡಿದ್ದರು. ಭೀಮಾ ನದಿ ತಟದ ಜನರು ನೀರಿಗಾಗಿ ತೊಂದರೆ ಎದುರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು ಈಗಿರುವ ನೀರಿನ ಪ್ರಮಾಣದಿಂದ…
ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಬೇರಿನ ಕಟ್ಟಿಗೆಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಬೇರಿನ ಕಡ್ಡಿ ಇದ್ದರೆ ಸಾಕು ಈ ಕಡ್ಡಿಗೆ ವಿಶೇಷವಾದ ದೇವ ಶಕ್ತಿ ಇದೆ ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ಯಾವುದೇ ದೋಷಗಳು ಇದ್ದರೂ ಕೂಡ ಸಮಯದಲ್ಲಿ ಕಳೆಯುತ್ತದೆ ಮುಖ್ಯವಾಗಿ ವಾಸ್ತು ದೋಷ ದಾರಿದ್ರ್ಯಾ ಕಳೆಯುತ್ತದೆ ವಾಸ್ತು ದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವ ಸದಸ್ಯರಿಗೆ ಅಭಿವೃದ್ಧಿ ಆಗುತ್ತದೆ ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುವುದು ಆಗಿರಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ಈ ಮರದ ಬೇರಿನ ಈ ಕಡ್ಡಿಗೆ ಇರುವ ವಿಶೇಷ…
ನವದೆಹಲಿ: ಈಗಾಗಲೇ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಒಮ್ಮೆ ಕೇಂದ್ರ ಚುನಾವಣಾ ಆಯೋಗವು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ಇಂದು ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತ ಎಲ್ಲಾ ಮಾಹಿತಿಯನ್ನು ಎಸ್ ಬಿಐ, ಸಿಇಸಿಗೆ ಸಲ್ಲಿಸಿದ ಬೆನ್ನಲ್ಲೇ, ತನ್ನ ವೆಬ್ ಸೈಟ್ ನಲ್ಲಿ ಚುನಾವಣಾ ಆಯೋಗ ಎಲ್ಲಾ ಚುನಾವಣಾ ಬಾಂಡ್ ಮಾಹಿತಿಯನ್ನು ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಚುನಾವಣಾ ಆಯೋಗವು, ಫೆಬ್ರವರಿ 15, ಮಾರ್ಚ್ 11, 2024 ಮತ್ತು ಮಾರ್ಚ್ 18, 2024 ರ ಆದೇಶದಲ್ಲಿ (2017 ರ ಡಬ್ಲ್ಯೂಪಿಸಿ ಸಂಖ್ಯೆ 880 ರ ವಿಷಯದಲ್ಲಿ) ಒಳಗೊಂಡಿರುವ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಡೇಟಾವನ್ನು ಇಂದು ಅಂದರೆ ಮಾರ್ಚ್ 21, 2024 ರಂದು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಒದಗಿಸಿದೆ ಎಂದಿದೆ. ಭಾರತದ ಚುನಾವಣಾ ಆಯೋಗವು ಎಸ್ಬಿಐನಿಂದ ಪಡೆದ ಚುನಾವಣಾ ಬಾಂಡ್ಗಳ ಡೇಟಾವನ್ನು ತನ್ನ…
ಶಿವಮೊಗ್ಗ : ನಗರದ ಗಾಂಧಿಬಜಾರ್, ಭರಮಪ್ಪ ನಗರ, ಎಂಕೆಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಮಾ.22 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗಾಂಧಿಬಜಾರ್, ಸೊಪ್ಪಿನ ಮಾರ್ಕೆಟ್, ಕೆ.ಆರ್.ಪುರಂ, ಭರಮಪ್ಪ ನಗರ, ಎಂ.ಕೆ.ಕೆ ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪ ಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮಾ.23 ರಂದು ವಿದ್ಯುತ್ ವ್ಯತ್ಯಯ ಗಾಜನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ. 23 ರಂದು ಬೆಳಗ್ಗೆ 09.00 ರಿಂದ ಸಂಜೆ 06-00ರವರೆಗೆ ಗಾಜನೂರು, ಕ್ಯಾಂಪ್ ಮತ್ತು ಡ್ಯಾಮ್, ಸಕ್ಕರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/note-konkan-railway-issues-monsoon-train-schedule-here-are-the-details/ https://kannadanewsnow.com/kannada/shivamogga-rs-2-lakh-cash-seized-from-illegal-lying-near-choorikatte-in-sagar/
ಶಿವಮೊಗ್ಗ: ಲೋಕಸಭಾ ಚುನಾವಣೆ ಘೋಷಣೆಯ ನಂತ್ರ ಚುನಾವಣಾ ಅಧಿಕಾರಿಗಳು ಅಕ್ರಮ ತಡೆಗೆ ಮಹತ್ವದ ಕ್ರಮ ವಹಿಸಿದ್ದಾರೆ. ಇಂದು ಸಾಗರ ತಾಲೂಕಿನ ಚೂರಿಕಟ್ಟೆ ಬಳಿಯಲ್ಲಿ ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದಂತ 2 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚೂರಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಇಂದು ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 2 ಲಕ್ಷ ಹಣ ಪತ್ತೆಯಾಗಿದೆ. ಕಾರಿನಲ್ಲಿ ದೊರೆತಂತ 2 ಲಕ್ಷ ಹಣದ ಬಗ್ಗೆ ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದಾಗ, ಸರಿಯಾದ ಮಾಹಿತಿಯನ್ನು ನೀಡಿಲ್ಲ. ಈ ಹಿನ್ನಲೆಯಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 2 ಲಕ್ಷ ಹಣ ಜಪ್ತಿ ಮಾಡಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಎಂಸಿಸಿ ನೋಡಲ್ ಅಧಿಕಾರಿಗಳಾದ ನಾಗೇಶ್ ಬ್ಯಾಲಾಳ್, ಮಹಮ್ಮದ್ ಹನೀಫ್, ಮಾಲಿನಿ, ವಿನಾಯಕ್, ಸಬ್ ಇನ್ಸ್‌ಪೆಕ್ಟರ್ ಹೊಳಬಸಪ್ಪ ಹೊಳಿ ನೇತೃತ್ವದ ತಂಡ ಈ ಹಣವನ್ನು ಜಪ್ತಿ ಮಾಡಿದೆ. ವರದಿ: ರಾಘವೇಂದ್ರ ತಾಳಗುಪ್ಪ, ಸಾಗರ https://kannadanewsnow.com/kannada/kpsc-recruitment-for-364-posts-of-land-surveyors/…