Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಸರ್ಕಾರದ ಯಾವುದೇ ನೆರವಿಲ್ಲದೆ, ಸರ್ಕಾರಗಳು ಮಾಡದಿರುವ ಸಮಾಜಮುಖಿ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿರುವುದು ಮಾದರಿ ಕಾರ್ಯಗಳಲ್ಲೊಂದಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಅವರು ಹೇಳಿದರು. ಅವರು ಇಂದು ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ಧ ಸಹಕಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ದ್ವಾರಕಾ ಕನ್ವೆನ್ಶನ್‌ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವುದೇ ಸಹಕಾರ ಸಂಘಗಳು ಜಾತಿ, ಪಕ್ಷ ಮತ್ತು ಲಿಂಗಭೇದ ಮರೆತು ಕಾರ್ಯನಿರ್ವಹಿಸುವಂತಾಗಬೇಕು. ಯಾವುದೇ ಸಹಕಾರಿ ಸಂಸ್ಥೆ ನಾಯಕನ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತವೆ ಎಂದವರು ನುಡಿದರು. ನಗರದ ಬೆಳವಣಿಗೆಯಲ್ಲಿ ಇಂತಹ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಸಂಘಗಳಲ್ಲಿ ಎಲ್ಲರಿಗೂ ಸರಳವಾಗಿ, ಸುಲಭವಾಗಿ ಸಾಲಸೌಲಭ್ಯಗಳು ದೊರೆಯುವಂತಾಗಬೇಕು. ಆಗ ನಿಜವಾದ ಸಹಕಾರದ ಪದಕ್ಕೆ ಅರ್ಥ ಬರಲಿದೆ. ಇದರಿಂದಾಗಿ ಅರ್ಹರಿಗೆ ಸಾಲಸೌಲಭ್ಯ ದೊರೆಯುವುದು ಮಾತ್ರವಲ್ಲ, ಪರೋಕ್ಷವಾಗಿ ಉದ್ಯೋಗಸೃಷ್ಠಿಯಾಗಲಿದೆ. ಸಾಲ…
ಬೆಂಗಳೂರು: ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭಗೊಳ್ಳಲಿದೆ. ಈ ಕೆಳಕಂಡ 60 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗುತ್ತಿದೆ. ಆ ಪ್ರಶ್ನೆಗಳು ಈ ಕೆಳಕಂಡಂತೆ ಇವೆ. ಮನೆಯ ಮುಖ್ಯಸ್ಥರ ಹೆಸರು ತಂದೆಯ ಹೆಸರು ತಾಯಿಯ ಹೆಸರು ಕುಟುಂಬದ ಕುಲಹೆಸರು ಮನೆ ವಿಳಾಸ ಮೊಬೈಲ್ ಸಂಖ್ಯೆ ರೇಷನ್ ಕಾರ್ಡ್ ಸಂಖ್ಯೆ ಆದಾರ್ ಸಂಖ್ಯೆ ಮತದಾರರ ಗುರುತಿನ ಚೀಟಿ ಸಂಖ್ಯೆ ಕುಟುಂಬದ ಒಟ್ಟು ಸದಸ್ಯರು. ಧರ್ಮ ಜಾತಿ / ಉಪಜಾತಿ ಜಾತಿ ವರ್ಗ (SC/ST/OBC/General/Other) ಜಾತಿ ಪ್ರಮಾಣ ಪತ್ರ ಇದೆಯೇ? ಪ್ರಮಾಣ ಪತ್ರ ಸಂಖ್ಯೆ ಜನ್ಮ ದಿನಾಂಕ ವಯಸ್ಸು ಲಿಂಗ (ಪುರುಷ/ಸ್ತ್ರೀ/ಇತರೆ) ವೈವಾಹಿಕ ಸ್ಥಿತಿ ಜನ್ಮ ಸ್ಥಳ ವಿದ್ಯಾಭ್ಯಾಸದ ಮಟ್ಟ ಮನೆಯಲ್ಲಿ ಓದಲು ಬಲ್ಲವರು ಎಷ್ಟು? ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ? ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ) ಮನೆಯಲ್ಲಿ ಶಾಲೆ ಬಿಟ್ಟವರು ಇದೆಯೇ? ಮನೆಯ ಮುಖ್ಯ ಉದ್ಯೋಗ ಎಷ್ಟು ಜನರು ಉದ್ಯೋಗದಲ್ಲಿದ್ದಾರೆ? ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ) ನಿರುದ್ಯೋಗಿಗಳು ಇದೆಯೇ? ದಿನಸಿ ಆದಾಯ ತಿಂಗಳ ಆದಾಯ…
ಬೆಂಗಳೂರು: ನಕಲಿ ಧರ್ಮರಕ್ಷಕ’ ಬಿಜೆಪಿ ಸರ್ಕಾರದವರು 2019-2023 ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಸೇವಾ ಶುಲ್ಕವನ್ನು ಏರಿಕೆ ಮಾಡಿರುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ನಾಯಕರ ಬೌದ್ಧಿಕ ಅಧಃಪತನದ ಪರಾಮಾವಧಿ – ಧರ್ಮದ ಹೆಸರಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಹತಾಶ ಪ್ರಯತ್ನ ಎಂದಿದ್ದಾರೆ. ಧರ್ಮ ರಕ್ಷಣೆಗಾಗಿಯೇ ಅಧಿಕಾರಕ್ಕೆ ಬಂದವರು ನಾವು ಎನ್ನುವ ‘ನಕಲಿ ಧರ್ಮರಕ್ಷಕ’ ಬಿಜೆಪಿ ಸರ್ಕಾರದವರು 2019-2023 ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಸೇವಾ ಶುಲ್ಕವನ್ನು ಏರಿಕೆ ಮಾಡಿದ್ದರು. ಇದು ಧರ್ಮ ವಿರೋಧಿ ನಡೆಯೇ ? ಇದರ ಪಟ್ಟಿ ಇಲ್ಲಿದೆ ಎಂದು ಪಟ್ಟಿ ನೀಡಿದ್ದಾರೆ. 1. ಶ್ರೀ ವೀರಭದ್ರ ಸ್ವಾಮಿ ದೇವಾಲಯ, ನೆಲಮಂಗಲ ತಾಲ್ಲೂಕು 2. ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಾಲಯ, ಕವೂರು 3. ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯ, ದರೂರು ಗ್ರಾಮ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ 4. ಶ್ರೀ ಮೈಲಾರಲಿಂಗಸ್ವಾಮಿ ದೇವಾಲಯ, ಹೂವಿನಹಡಗಲಿ ತಾಲ್ಲೂಕು,…
ಚಿಕ್ಕಬಳ್ಳಾಪುರ : ಮಾಹಿತಿ ಹಕ್ಕು ಕಾಯ್ದೆಯಡಿಯ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೆವಾರಿ ಮಾಡಿ ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ನಡೆಸುವ ಚಿಂತನೆಯನ್ನು ಆಯೋಗ ಹೊಂದಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ತಿಳಿಸಿದರು. ಶನಿವಾರದಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೆವಾರಿಗೆ ಬಾಕಿ ಇದ್ದವು. ಈ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಲವು ಯುಕ್ತ ಕ್ರಮಗಳನ್ನು ಆಯೋಗ ತೆಗೆದುಕೊಂಡು 12,896 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಪ್ರಸ್ತುತ 41,104ಕ್ಕೆ ಮಾಹಿತಿ ಹಕ್ಕು ಅರ್ಜಿಗಳನ್ನು ಇಳಿಸಲಾಗಿದೆ. ಈ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಮಾಹಿತಿ ಆಯುಕ್ತರೇ ಜಿಲ್ಲಾ ಮಟ್ಟಕ್ಕೆ ಆಗಮಿಸಿ ಅದಾಲತ್ ತೆಗೆದುಕೊಂಡು ಸ್ಥಳದಲ್ಲೆ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯ ಮುಂದಿನ ಕನ್ನಡ…
ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಭಾರತ ಸರ್ಕಾರ ರೈಲ್ ಮಂತ್ರಾಲಯ ರೈಲ್ವೆ ಸಚಿವಾಲಯ (ರೈಲ್ವೆ ಬೋರ್ಡ್ ರೈಲ್ವೇ ಬೋರ್ಡ್) ತನ್ನ ರೈಲು ನೀರಿನ ಬಾಟಲಿಯ ದರವನ್ನು ಕಡಿತ ಮಾಡಲಾಗಿದೆ. ಈ ಕುರಿತಂತೆ ರೈಲ್ವೆ ಸಚಿವಾಲಯು ಆದೇಶ ಹೊರಡಿಸಿದ್ದು, ಜಿಎಸ್ಟಿ ಮಂಡಳಿಯ ಸುತ್ತೋಲೆಯ ಮುಂದುವರಿಕೆಯಾಗಿ, F(C) ನಿರ್ದೇಶನಾಲಯದ ಒಪ್ಪಿಗೆಯೊಂದಿಗೆ ರೈಲ್ವೆ ಸಚಿವಾಲಯ (ರೈಲ್ವೇ ಮಂಡಳಿ) ಈಗ ಈ ಕೆಳಗಿನಂತೆ ನಿರ್ಧರಿಸಿದೆ ಎಂದಿದೆ. ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿ ‘ರೈಲ್ ನೀರ್’ ನ ಗರಿಷ್ಠ ಚಿಲ್ಲರೆ ಬೆಲೆಯನ್ನು ಒಂದು ಲೀಟರ್ ಬಾಟಲಿಗೆ 15/- ರಿಂದ 14/- ಕ್ಕೆ ಮತ್ತು 500 ಮಿಲಿ ಸಾಮರ್ಥ್ಯದ ಬಾಟಲಿಗೆ 10/- ರಿಂದ 9/- ಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಿದೆ. ಗರಿಷ್ಠ ರೈಲ್ವೆ ಆವರಣ/ರೈಲುಗಳಲ್ಲಿ ಮಾರಾಟವಾಗುವ ಇತರ ಬ್ರಾಂಡ್‌ಗಳ ಐಆರ್‌ಸಿಟಿಸಿ/ರೈಲ್ವೆ ಶಾರ್ಟ್‌ಲಿಸ್ಟ್ ಮಾಡಿದ ಪ್ಯಾಕ್ ಮಾಡಿದ ಕುಡಿಯುವ ನೀರಿನ ಬಾಟಲಿಗಳ ಚಿಲ್ಲರೆ ಬೆಲೆಯನ್ನು ಒಂದು ಲೀಟರ್ ಬಾಟಲಿಗೆ 15/- ರಿಂದ 14/- ಕ್ಕೆ ಮತ್ತು 500 ಮಿಲಿ ಸಾಮರ್ಥ್ಯದ…
ಶಿವಮೊಗ್ಗ : ಮಾಜಿ ಸಚಿವ ಹರತಾಳು ಹಾಲಪ್ಪ ಅವರ ತಾಯಿ ಮಂಜಮ್ಮ ಹಿರೇನಾಯ್ಕ್ (91) ನಿಧನರಾಗಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಶನಿವಾರ ನಿಧನ ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮಾಜಿ ಸಚಿವ ಹರತಾಳು ಹಾಲಪ್ಪ ಅವರ ತಾಯಿ ಮಂಜಮ ಹಿರೇನಾಯ್ಕ್(19) ವಯೋ ಸಹಜತೆಯಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಇಂದು ಮದ್ಯಾಹ್ನ 2 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ತಾಯಿ ಮಂಜಮ ಹಿರೇನಾಯ್ಕ್ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಬೆಂಗಳೂರು: 2026ರ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ಕ್ಕೆ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ. ಈ ಕುರಿತಂತೆ ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾಹಿತಿ ನೀಡಲಾಗಿದ್ದು, ಪ್ರಕಟಿತ ತಾತ್ಕಾಲಿಕ ವೇಳಾಪಟ್ಟಿಯಂತೆ ದಿನಾಂಕ 28-02-2026ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು ಆರಂಭಗೊಂಡು, ದಿನಾಂಕ 17-03-2026ರವರೆಗೆ ಮುಕ್ತಾಯಗೊಳ್ಳಲಿದೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರೀಕ್ಷೆಗಳು ದಿನಾಂಕ 25-04-2026ರಿಂದ ಆರಂಭಗೊಂಡು, ದಿನಾಂಕ 09-05-2026ರವರೆಗೆ ನಡೆಯಲಿದೆ ಎಂಬುದಾಗಿ ತಿಳಿಸಿದೆ. ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಪರೀಕ್ಷೆಗಳು ತಾತ್ಕಾಲಿಕ ವೇಳಾಪಟ್ಟಿಯಂತೆ ದಿನಾಂಕ 18-03-2026ರಿಂದ ಆರಂಭಗೊಂಡು, ದಿನಾಂಕ 01-04-2026ರವರೆಗೆ ನಡೆಯಲಿವೆ. ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಪರೀಕ್ಷೆಗಳು ದಿನಾಂಕ 18-05-2026ರಿಂದ ಆರಂಭಗೊಂಡು, ದಿನಾಂಕ 25-05-2026ರವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1, 2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ www.kseab.karnataka.gov.in…
ಇಂದು ಭಾನುವಾರ, ಸೆಪ್ಟೆಂಬರ್ 21, 2025, ಮಹಾಲಯ ಅಮಾವಾಸ್ಯೆ ದಿನ. ಈ ದಿನದಂದು, ಪೂರ್ವಜರನ್ನು ಪೂಜಿಸುವುದು, ಅವರಿಗೆ ತಿಥಿ ತರ್ಪಣ ಅರ್ಪಿಸುವುದು ಮತ್ತು ಅಗಲಿದ ಪೂರ್ವಜರಿಗೆ ನೈವೇದ್ಯ ಅರ್ಪಿಸುವುದರಿಂದ ನಮ್ಮ ಕುಟುಂಬಕ್ಕೆ ಕೋಟ್ಯಂತರ ಪುಣ್ಯ ಬರುತ್ತದೆ. ಆದ್ದರಿಂದ, ನಾಳೆಯನ್ನು ತಪ್ಪಿಸಿಕೊಳ್ಳಬೇಡಿ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ…
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಎರಡನೇ ಸುತ್ತು ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ರಾತ್ರಿ ಪ್ರಕಟಿಸಿದೆ. ಫಲಿತಾಂಶ ಕುರಿತು ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಸೆ.21ರಂದು ಸಂಜೆ 5 ಗಂಟೆ ಒಳಗೆ ಇ-ಮೇಲ್ (keauthority-ka@nic.in) ಮೂಲಕ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಹಾಗೆಯೇ ಅಖಿಲ ಭಾರತ ಮಟ್ಟದಲ್ಲಿ ಸೀಟು ಹಂಚಿಕೆಯಾಗಿದ್ದರೆ ಅಂತಹವರಿಗೂ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. https://kannadanewsnow.com/kannada/attention-residents-of-sagar-taluk-increase-in-the-rates-for-sound-amplification-installation/ https://kannadanewsnow.com/kannada/case-filed-against-a-19-year-old-woman-who-married-a-19-year-old-man/
ತುಮಕೂರು: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ಇಬ್ಬರು ಮಕ್ಕಳನ್ನು ಕೊಲೆಗೈದಂತ ತಾಯಿಯೊಬ್ಬಳು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ತುಮಕೂರಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಡಪಲಕೆರೆಯಲ್ಲಿ ಇಬ್ಬರು ಮಕ್ಕಳನ್ನು ಕೊಲೈಗೈದು ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಾದಂತ ಕೌಶಿಕ್(4), ಯುಕ್ತಿ(1)ಯನ್ನು ಕೊಲೆಗೈದು ತಾಯಿ ಸರಿತಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಯುಕ್ತಿಯನ್ನು ಕತ್ತು ಕೊಯ್ದು ಬರ್ಬರವಾಗಿ ಕೊಂದಿದ್ದರೇ, ಪುತ್ರ ಕೌಶಿಕ್ ನನ್ನು ಉಸಿರುಗಟ್ಟಿಸಿ ಕೊಲೆಯನ್ನು ತಾಯಿ ಸರಿತಾ ಮಾಡಿ, ಆ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಂತ ಸಂದರ್ಭದಲ್ಲ ಈ ಘಟನೆ ನಡೆದಿದೆ. ಆರು ವರ್ಷಗಳ ಹಿಂದೆ ಆಟೋ ಚಾಲಕ ಸಂತೋಷ್ ಜೊತೆಗೆ ಸರಿತಾ ವಿವಾಹವಾಗಿದ್ದರು.







