Subscribe to Updates
Get the latest creative news from FooBar about art, design and business.
Author: kannadanewsnow09
ದೆಹಲಿ: ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಹೊಂದಿದ್ದು, ಅವರ ಕಾರ್ಯಚಟುವಟಿಕೆಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಜನರ ಹಿತಕ್ಕಾಗಿ ಹೋರಾಡಲು ತೀರ್ಮಾನಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ದೆಹಲಿಯಲ್ಲಿ ಭಾನುವಾರ ಭೇಟಿ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭಾನುವಾರ ಭೇಟಿ ಮಾಡಿದ್ದರು. https://kannadanewsnow.com/kannada/chitradurga-power-outages-in-these-areas-of-hiriyur-taluk-on-june-11/ https://kannadanewsnow.com/kannada/kumaraswamy-thanks-modi-ahead-of-taking-oath-as-union-cabinet-minister/
ಚಿತ್ರದುರ್ಗ: ವಿವಿವಧ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನಲೆಯಲ್ಲಿ ಹಿರಿಯೂರು ತಾಲೂಕಿನ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ( Power Cut ) ಆಗಲಿದೆ. ಈ ಕುರಿತಂತೆ ಬೆಸ್ಕಾಂ ( BESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:- 11.06.2024 ರಂದು ಹಿರಿಯೂರು 66/11 ಕೆ ವಿ ವಿದ್ಯುತ್ ಉಪ ಕೇಂದ್ರ ದಲ್ಲಿ ಒಂದನೇ ತ್ರೈಮಾಸಿಕ ನಿರ್ವಾಹಣಾ ಕಾಮಗಾರಿ ಇರುವ ಪ್ರಯುಕ್ತ ವಿ ವಿ ಕೇಂದ್ರ ಎಲ್ಲಾ 11 ಕೆವಿ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಿಗ್ಗೆ: 10.00 ರಿಂದ 4.00 ಗಂಟೆ ರವರೆಗೆ ಉಂಟಾಗಲಿದೆ ಅಂತ ತಿಳಿಸಿದೆ. ಜೂ.11ರಂದು ಹಿರಿಯೂರು ತಾಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಹಿರಿಯೂರುನಗರ, ಹಿರಿಯೂರು ಗ್ರಾಮೀಣ, ಕೈಗಾರಿಕಾ ಪ್ರದೇಶಗಳಾದ, ಆಕ್ಷಯಫುಡ್ ಪಾರ್ಕ, ಪಿ.ಜಿ.ಸಿ.ಎಲ್, ವಿ.ವಿ.ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡ ಘಟ್ಟ, ಸಿಗೇಹಟ್ಟಿ, ಕೂನಿಕೆರೆ, ಬಳ್ಳೂರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಪಾರಂ, ಪಹಳ್ಳಿ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪಡೆದುಕೊಂಡ ಸಹಕರಿಸಬೇಕಾಗಿ ಹಿರಿಯೂರು ಉಪವಿಭಾಗದ…
ಬೆಂಗಳೂರು: ರಾಜ್ಯದ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಅಂತರ ಜಿಲ್ಲಾ ವರ್ಗಾವಣೆ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಅಂತರ್ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆ ಕಾರಣದಿಂದ ವಿಧಿಸಲಾಗಿದ್ದಂತ ನೀತಿ ಸಂಹಿತೆ ತೆರವುಗೊಂಡಿದೆ. ನೀತಿ ಸಂಹಿದೆ ಕಾರಣದಿಂದಾಗಿ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ತೆರವುಗೊಂಡಿದ್ದು, ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದರು. ಕಾಂಗ್ರೆಸ್ ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಅನ್ನೋ ಆರೋಪದ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ಆ ರೀತಿ ನಮ್ಮಲ್ಲಿ ಏನೂ ಆಗಿಲ್ಲ. ನಮ್ಮಲ್ಲಿ ಒಳ ಜಗಳ ಕೂಡ ಇಲ್ಲ. ಯಾವುದಾದರೂ ವಿಚಾರಗಳಿಗೆ ಒಬ್ಬೊಬ್ಬರು ಅಭಿಪ್ರಾಯ ಹಂಚಿಕೊಳ್ಳೋದು ಸಹಜ. ಅದು ಬಿಟ್ಟರೇ ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ ಅಂತ ತಿಳಿಸಿದರು. ಇದೇ ಸಂದರ್ಭದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವಂತ ಮೋದಿಯವರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಭಿನಂದನೆ…
ಬೆಂಗಳೂರು: ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಸಹ ಮಾಡಿಕೊಂಡಿದ್ದು ಕೇಂದ್ರ ಸರ್ಕಾರ ಇನ್ನಷ್ಟು ಅನಾಹುತಗಳಿಗೆ ಅವಕಾಶವಾಗದಂತೆ ಸರಿಯಾದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಬೋಸರಾಜು ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ 67 ಜನ ವಿದ್ಯಾರ್ಥಿಗಳು 720/720 ಅಂಕ ಪಡೆದಿದ್ದು ಪ್ರತಿಷ್ಠಿತ ಏಮ್ಸ್ ನಲ್ಲಿ ಲಭ್ಯ ಇರುವ ಪ್ರವೇಶಾತಿ ಸಂಖ್ಯೆಯೇ 56 ಆಗಿದ್ದು ಉಳಿದ 11 ವಿದ್ಯಾರ್ಥಿಗಳ ಆಸೆ ಭಗ್ನವಾಗುತ್ತದೆ. ಈ ಹಿನ್ನಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದು ತಕ್ಷಣ ಉನ್ನತಮಟ್ಟದ ತನಿಖೆ ನಡೆಸಬೇಕಾದ ಸಚಿವರು ಆಗ್ರಹಿಸಿದ್ದಾರೆ. ಜೂನ್ 14 ಕ್ಕೆ ಘೋಷಣೆಯಾಗಬೇಕಾದ ಫಲಿತಾಂಶ ತರಾತುರಿಯಲ್ಲಿ ಜೂನ್ 4 ಘೋಷಣೆ ಮಾಡಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ನೀಡುವ ಕ್ರಮ ಇದ್ದರೂ ಇಷ್ಟೊಂದು ವಿದ್ಯಾರ್ಥಿಗಳು…
ಹೈದರಾಬಾದ್: ಈನಾಡು ಮತ್ತು ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ಭಾನುವಾರ ಹೈದರಾಬಾದ್ ನಲ್ಲಿ ನಡೆಯಿತು. ರಾಮೋಜಿ ರಾವ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಗಲು ಕೊಟ್ಟಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದಾವೆ. ಹೈದರಾಬಾದ್ನ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮೋಜಿ ರಾವ್ (87) ಶನಿವಾರ ಮುಂಜಾನೆ ನಿಧನರಾದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಇತರ ನಾಯಕರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಸರ್ಕಾರದಿಂದ ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಆಂಧ್ರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತೆಲಂಗಾಣ ಸರ್ಕಾರದ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಇದಲ್ಲದೆ, ಆಂಧ್ರಪ್ರದೇಶವು ಭಾನುವಾರ ಮತ್ತು ಸೋಮವಾರ (ಜೂನ್ 9…
ನವದೆಹಲಿ: ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿ.ಕೆ.ಪಾಂಡಿಯನ್ ಭಾನುವಾರ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ ಸಹಾಯಕ ವಿ.ಕೆ.ಪಾಂಡಿಯನ್ ಸಕ್ರಿಯ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಡಿ ಸೋಲಿನ ನಂತರ ಪಾಂಡಿಯನ್ ಸಾರ್ವಜನಿಕ ಗಮನದಿಂದ ದೂರ ಉಳಿದಿದ್ದಾರೆ. ಜೂನ್ 5 ರಂದು ರಾಜೀನಾಮೆ ಸಲ್ಲಿಸಲು ಅವರು ಸಿಎಂ ಅವರೊಂದಿಗೆ ರಾಜಭವನಕ್ಕೆ ಹೋಗಲಿಲ್ಲ ಅಥವಾ ನವೀನ್ ನಿವಾಸದಲ್ಲಿ ಪಟ್ನಾಯಕ್ ಅವರೊಂದಿಗೆ ಬಿಜೆಡಿ ನಾಯಕರ ಸಭೆಯಲ್ಲಿ ಭಾಗವಹಿಸಲಿಲ್ಲ. ಒಡಿಶಾದಲ್ಲಿ 147 ಸದಸ್ಯರ ವಿಧಾನಸಭೆಯಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಡಿಯ 24 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಮತ್ತೊಂದೆಡೆ, ಪಟ್ನಾಯಕ್ ನೇತೃತ್ವದ ಪಕ್ಷವು 51 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದರೆ, ಸಿಪಿಐ (ಎಂ) ಒಂದು ಸ್ಥಾನವನ್ನು ಗೆದ್ದಿದೆ. ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಡಿ ರಾಜ್ಯದ ಯಾವುದೇ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ, ಬಿಜೆಪಿ 20…
ನವದೆಹಲಿ: ಸರ್ಕಾರ ಪ್ರಮಾಣವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು, ಸರ್ಕಾರ ಬಿಡುಗಡೆ ಮಾಡಿದ ವೀಡಿಯೊವು ಹೊಸ ಮಂತ್ರಿಮಂಡಲದಲ್ಲಿ ಯಾರು ಇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ. ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಪಕ್ಷದ ಹಿರಿಯರಾದ ಶಿವರಾಜ್ ಚೌಹಾಣ್ ಮತ್ತು ಎಂಎಲ್ ಖಟ್ಟರ್ ಅವರೊಂದಿಗೆ ಕೇಂದ್ರ ಸರ್ಕಾರದಲ್ಲಿ ಹೊಸದಾಗಿ ಸೇರ್ಪಡೆಗೊಂಡವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಎಚ್ಎಎಂನ ಜಿತನ್ ರಾಮ್ ಮಾಂಝಿ, ಜೆಡಿಯುನ ರಾಜೀವ್ ರಂಜನ್, ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಆರ್ಜೆಡಿಯ ಜಯಂತ್ ಚೌಧರಿಮ್, ಟಿಡಿಪಿಯ ರಾಮ್ಮೋಹನ್ ನಾಯ್ಡು ಸೇರಿದಂತೆ ಎನ್ಡಿಎ ಮಿತ್ರಪಕ್ಷಗಳ ನಾಯಕರು ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. https://twitter.com/visually_kei/status/1799714224090075216 ವೀಡಿಯೊದಲ್ಲಿ, ಪಿಎಂ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಸರ್ಕಾರದ ಮೊದಲ 100 ದಿನಗಳ ಬಗ್ಗೆ ಗಮನ ಹರಿಸುವಂತೆ ನಿಯೋಜಿತ ಪ್ರಧಾನಿ ಹಾಜರಿದ್ದವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 100 ದಿನಗಳ ಮಾರ್ಗಸೂಚಿಯನ್ನು ರೂಪಿಸಲು…
ಚೆನ್ನೈ: ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರನ್ನು ವಿಮಾನ ನಿಲ್ದಾಣದಲ್ಲಿ ಥಳಿಸಿದ ಸಿಐಎಸ್ಎಫ್ ಕಾನ್ಸ್ಟೇಬಲ್ಗೆ ಚಿನ್ನದ ಉಂಗುರವನ್ನು ನೀಡುವುದಾಗಿ ತಮಿಳುನಾಡಿನ ಸಂಸ್ಥೆಯೊಂದು ಘೋಷಿಸಿದೆ. ಕೊಯಮತ್ತೂರಿನ ದ್ರಾವಿಡ ಸಂಘಟನೆಯಾದ ತಂಥೈ ಪೆರಿಯಾರ್ ದ್ರಾವಿಡರ್ ಕಳಗಂ (ಟಿಡಿಪಿಕೆ) ಈ ಘೋಷಣೆ ಮಾಡಿದೆ. ಪೆರಿಯಾರ್ ಅವರ ಚಿತ್ರವಿರುವ ಚಿನ್ನದ ಉಂಗುರವನ್ನು ನೀಡುವುದಾಗಿ ಸಂಸ್ಥೆ ಭರವಸೆ ನೀಡಿದೆ. “ನಾವು ಉಂಗುರವನ್ನು ಕುಲ್ವಿಂದರ್ ಕೌರ್ ಅವರ ಮನೆಯ ವಿಳಾಸಕ್ಕೆ ಕಳುಹಿಸುತ್ತೇವೆ. ಕೊರಿಯರ್ ಸೇವೆಗಳು ಚಿನ್ನದ ಉಂಗುರವನ್ನು ಸ್ವೀಕರಿಸದಿದ್ದರೆ, ಪೆರಿಯಾರ್ ಬಗ್ಗೆ ಕೆಲವು ಪುಸ್ತಕಗಳೊಂದಿಗೆ ಉಂಗುರವನ್ನು ಹಸ್ತಾಂತರಿಸಲು ನಾವು ನಮ್ಮ ಸದಸ್ಯರೊಬ್ಬರನ್ನು ರೈಲು ಅಥವಾ ವಿಮಾನದ ಮೂಲಕ ಅವರ ಮನೆಗೆ ಕಳುಹಿಸುತ್ತೇವೆ ” ಎಂದು ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೆಯು ರಾಮಕೃಷ್ಣನ್ ಹೇಳಿದ್ದಾರೆ. ಏತನ್ಮಧ್ಯೆ, ಪಂಜಾಬ್ ಕಿಸಾನ್ ಕಾಂಗ್ರೆಸ್ ಕುಲ್ವಿಂದರ್ ಕೌರ್ ಬೆಂಬಲದೊಂದಿಗೆ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ಗೆ ಬೆಂಬಲ ವ್ಯಕ್ತಪಡಿಸಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಪಂಜಾಬ್ ಕಿಸಾನ್ ಕಾಂಗ್ರೆಸ್ ಮುಖ್ಯಸ್ಥ ಕಿರಣ್ಜಿತ್ ಸಿಂಗ್…
ಬೆಂಗಳೂರು: ಇಂದು 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಅನಾರೋಗ್ಯದ ಕಾರಣ ನಾನು ಭಾಗಿಯಾಗುತ್ತಿಲ್ಲ ಎಂಬುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಮೋದಿಗೆ ಪತ್ರ ಬರೆದಿರುವಂತ ಅವರು, ಮೊದಲನೆಯದಾಗಿ, ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿ. ಇದು ನಿಜವಾಗಿಯೂ ಐತಿಹಾಸಿಕ ಸಂದರ್ಭ. ನಾನು ಈ ಹಿಂದೆ ಅನೇಕ ಬಾರಿ ಹೇಳಿದಂತೆ, ಇದು ನಿಮ್ಮ ಮೇಲೆ ಸರ್ವಶಕ್ತನ ಅಸಾಧಾರಣ ಆಶೀರ್ವಾದದ ಫಲಿತಾಂಶವಾಗಿದೆ. ನೀವು ಭಗವಂತನ ಆಶೀರ್ವಾದವನ್ನು ಪಡೆಯುವುದನ್ನು ಮುಂದುವರಿಸುತ್ತೀರಿ ಮತ್ತು ಒಂದು ದಶಕದಿಂದ ನಮಗೆಲ್ಲರಿಗೂ ಪರಿಚಿತವಾಗಿರುವ ಸಂಪೂರ್ಣ ಸಮರ್ಪಣೆಯೊಂದಿಗೆ ನಮ್ಮ ಮಹಾನ್ ರಾಷ್ಟ್ರದ ಸೇವೆಯನ್ನು ಮುಂದುವರಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ. ಚುನಾವಣೆಗಳು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿವೆ. ಇದು ಭಾರತೀಯ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಸಾಬೀತುಪಡಿಸುತ್ತದೆ. ನೀವು ನಿಜವಾದ ಪ್ರಜಾಪ್ರಭುತ್ವವಾದಿ ಎಂದು ಇದು ಸಾಬೀತುಪಡಿಸಿದೆ. ನಮ್ಮ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು…
ಬೆಂಗಳೂರು: ಇಂದು ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ. ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ ನೀಡುವ ಸುಳಿವು ದೊರೆತಿದೆ. ಹೌದು. ಈ ಬಾರಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಾಗುವ ಸಾಧ್ಯೆತಗಳಿವೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನುಳಿದಂತೆ ಇಬ್ಬರಿಗೆ ರಾಜ್ಯ ದರ್ಜೆ ಖಾತೆ ಸಿಗುವ ಸಾಧ್ಯತೆಗಳಿವೆ. ನಿರ್ಮಲಾ ಸೀತಾರಾಮನ್(ಕರ್ನಾಟ ರಾಜ್ಯಸಭಾ ಸದಸ್ಯೆ), ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯೆತೆಗಳಿವೆ, ಇನ್ನು ರಾಜ್ಯ ದರ್ಜೆ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಸೋಮಣ್ಣಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ. ಆ ಬಗ್ಗೆ ಸಂಜೆ ಅಧಿಕೃತ ಮಾಹಿತಿ ಹೊರ ಬೀಳಲಿದೆ. https://kannadanewsnow.com/kannada/bsf-recruitment-2024-application-begins-for-1526-vacancies-of-head-constable-asi-posts/ https://kannadanewsnow.com/kannada/breaking-kumaraswamy-gets-ministerial-berth-in-modi-cabinet-hdk-keeps-an-eye-on-agriculture-department/











