Author: kannadanewsnow09

ನವದೆಹಲಿ: ಜಿಎಸ್ಟಿ 2.0 ಮತ್ತು ಆದಾಯ ತೆರಿಗೆ ಕಡಿತದ ಮೂಲಕ ಜನರಿಗೆ 2.5 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ದೇಶದ ಜನತೆ ಉದ್ದೇಶಿಸಿ ಮಾತನಾಡುತ್ತಿರುವಂತ ಅವರು, ಜಿಎಸ್‌ಟಿ 2.0 ಜಾರಿಗೆ ಬರುವ ಒಂದು ದಿನ ಮೊದಲು, ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ ಲಕ್ಷಾಂತರ ಕಂಪನಿಗಳು ಮತ್ತು ಜನರು ತೆರಿಗೆ ಮತ್ತು ಸುಂಕಗಳ ಜಾಲದಿಂದಾಗಿ ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಹೇಳಿದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ತೆರಿಗೆ ಸುಧಾರಣೆಗಳು ವ್ಯವಹಾರ ಮಾಡುವುದನ್ನು ಸುಲಭಗೊಳಿಸುತ್ತವೆ ಮತ್ತು ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. “ಕಳೆದ ಹನ್ನೊಂದು ವರ್ಷಗಳಲ್ಲಿ, ದೇಶದಲ್ಲಿ 25 ಕೋಟಿ ಜನರು ಬಡತನವನ್ನು ಸೋಲಿಸಿದ್ದಾರೆ. ಬಡತನದಿಂದ ಹೊರಬಂದು, ನವ-ಮಧ್ಯಮ ವರ್ಗ ಎಂದು ಕರೆಯಲ್ಪಡುವ 25 ಕೋಟಿ ಜನರ ದೊಡ್ಡ ಗುಂಪು ಇಂದು ದೇಶದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ನವ-ಮಧ್ಯಮ ವರ್ಗವು ತನ್ನದೇ ಆದ ಆಕಾಂಕ್ಷೆಗಳು ಮತ್ತು…

Read More

ನವದೆಹಲಿ: ನಾಳೆಯಿಂದ ನವರಾತ್ರಿ ಹಬ್ಬ ಪ್ರಾರಂಭವಾಗುತ್ತಿದೆ. ನಾನು ನಿಮಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನವರಾತ್ರಿಯ ಮೊದಲ ದಿನದಿಂದ ದೇಶವು ಆತ್ಮನಿರ್ಭರ ಭಾರತದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ನಾಳೆ, ನವರಾತ್ರಿಯ ಮೊದಲ ದಿನ, ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಸೂರ್ಯೋದಯದೊಂದಿಗೆ ಜಾರಿಗೆ ಬರಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ದೇಶದ ಜನತೆ ಉದ್ದೇಶಿಸಿ ಮಾತನಾಡಿದಂತ ಅವರು, ತ್ಯೋಹಾರೋ ಕೆ ಇಸ್ ಮೌಸಮ್ ಮೇ ಸಬ್ಕಾ ಮುಹ್ ಮೀಠಾ ಹೋಗಾ. ದೇಶ್ ಕೆ ಹರ್ ಪರಿವಾರ್ ಕಿ ಖುಷಿಯಾ ಬಧೇಗಿ… ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ‘ಬಚತ್ ಉತ್ಸವ’ಕ್ಕಾಗಿ ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು. https://twitter.com/ANI/status/1969727335072182502 ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಕಥೆಯನ್ನು ವೇಗಗೊಳಿಸುತ್ತವೆ, ವ್ಯವಹಾರವನ್ನು ಸರಳಗೊಳಿಸುತ್ತವೆ. ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. https://twitter.com/ANI/status/1969727963165073653 ಭಾರತವು 2017…

Read More

ನವದೆಹಲಿ: ನಾಳೆ ಮಹತ್ವದ ಹೆಜ್ಜೆ ಇಡಲಿದ್ದೇವೆ. ನಾಳೆ ನವರಾತ್ರಿಯ ಮೊದಲ ದಿನವೇ ಆತ್ಮನಿರ್ಭಾರ ಭಾರತದತ್ತ ದೇಶ ದಾಪುಗಾಲಿಡಲಿದೆ. ನಾಳೆಯ ನವರಾತ್ರಿ ಮೊದಲ ದಿನದಿಂದ ಜಿಎಸ್ ಟಿ ಉತ್ಸವ ಆರಂಭವಾಗಲಿದೆ ಎಂಬುದಾಗಿ ಪ್ರಧಾ ನರೇಂದ್ರ ಮೋದಿ ತಿಳಿಸಿದ್ದಾರೆ. ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಂತ ಅವರು, ಜಿಎಸ್ಟಿಯಿಂದ ನಿಮ್ಮಲೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲಾ ವರ್ಗದ ಜನರಿಗೂ ಉಳಿತಾಯದ ಉತ್ಸವ ಆರಂಭವಾಗಲಿದೆ. ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಜಿಎಸ್‌ಟಿ ಬಚತ್ ಉತ್ಸವ ನಾಳೆಯಿಂದ ಜಾರಿಗೆ ಬರಲಿದ್ದು, ಇದು ಜನರ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ನವರಾತ್ರಿಯ ಮೊದಲ ದಿನದಿಂದ ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು. ‘ಜಿಎಸ್‌ಟಿ ಬಚತ್ ಉತ್ಸವ’ ಕೂಡ ಪ್ರಾರಂಭವಾಗಲಿದೆ. ಇದು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

Read More

ಮಡಿಕೇರಿ: ಜೀವ ಉಳಿಸಲು ರೋಗಿಯನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯುತ್ತಿದ್ದಂತ ವೇಳೆಯಲ್ಲಿ ಬ್ರೇಕ್ ಫೇಲ್ ಆಗಿತ್ತು. ಆದರೇ ಆ ಚಾಲಕ ಮಾತ್ರ ಅದನ್ನು ಲೆಕ್ಕಿಸದೇ ತನ್ನ ಜೀವನನ್ನೇ ಪಣವಾಗಿಟ್ಟು ಗರ್ಭಿಣಿ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿ, ನೆರವಾಗಿದ್ದಾರೆ. ಆಂಬುಲೆನ್ಸ್ ವಾಹನ ಬ್ರೇಕ್ ಫೇಲ್ ಆದರೂ ತನ್ನ ಜೀವವನ್ನು ಲೆಕ್ಕಿಸದ ಚಾಲಕನೊಬ್ಬ ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ದು ಸೇಫ್ ಆಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಷ್ಟೇ ಅಲ್ಲದೇ ದಾರಿ ಮಧ್ಯದಲ್ಲಿ ತಲೆಗೆ ಬೆಟ್ಟು ಬಿದ್ದು ಗಾಯಗೊಂಡಿದ್ದಂತ ವ್ಯಕ್ತಿಯೊಬ್ಬನನ್ನು ಬಿಳಿಕೆರೆಯಿಂದ ಹುಣಸೂರು ಆಸ್ಪತ್ರೆಗೆ ಸಾಗಿಸಿ ಸಾಹಸ ಮೆರೆದಿದ್ದಾನೆ. ಚಾಲಕ ಬಿಎಸ್ ವೆಂಕಟೇಶ್ (ಕಿಶೋರ್ ಪೂಜಾರಿ) ಅವರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಪಡಿಸಿದ್ದಾರೆ. ಕಿಶೋರ್ ಪೂಜಾರಿ ಮಡಿಕೇರಿ ತಾಲ್ಲೂಕು ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದಂತ ಇವರು, ಕೋವಿಡ್ ವೇಳೆ ಮೃತದೇಹಗಳನ್ನು ಅಂತ್ಯ ಸಂಸ್ಕಾರ ನೆರವೇರಿಸಲು ನೆರವಾಗಿದ್ದರು. ಇದೀಗ ಬ್ರೇಕ್ ಫೇಲ್ ಆದರೂ ಗರ್ಭಿಣಿ ಮಹಿಳೆಯನ್ನು ಸರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿ ಮೆಚ್ಚುಗೆ ಗಳಿಸಿದ್ದಾರೆ. https://kannadanewsnow.com/kannada/the-work-of-closing-the-potholes-on-the-road-that-flowed-through-bangalore/ https://kannadanewsnow.com/kannada/social-and-educational-survey-caste-survey-to-begin-tomorrow-answering-these-questions-is-mandatory/

Read More

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 20-09-2025 ರಂದು 4 ವಿಭಾಗಗಳಲ್ಲಿ 9.45 ಕಿ.ಮೀ ಉದ್ದದ ರಸ್ತೆ ವ್ಯಾಪ್ತಿಯಲ್ಲಿ 178 ಗುಂಡಿಗಳು, 2,332 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್, ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿಯ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ. ಸಿಎಂ ಸಿದ್ಮುಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ದಿನಾಂಕ: 20-09-2025 ರಂದು ನಡೆದ ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಗುಂಡಿ ಮುಕ್ತ ರಸ್ತೆಗಳನ್ನಾಗಿಸಲು ಆದೇಶಿಸಿದಿದಂತೆ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ದಿನಾಂಕ: 20-09-2025 ರಂದು ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯ 4 ವಿಭಾಗಗಳಲ್ಲಿ 9.45 ಕಿ.ಮೀ ಉದ್ದದ ರಸ್ತೆ ವ್ಯಾಪ್ತಿಯಲ್ಲಿ 178 ಗುಂಡಿಗಳು, 2,332 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದರು. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಉಳಿದ ಸ್ಥಳಗಳಲ್ಲಿ ತ್ವರಿತ ಗತಿಯಲ್ಲಿ ಗುಂಡಿಗಳನ್ನು…

Read More

ಬೆಂಗಳೂರು: ನಗರದಲ್ಲಿ ಶಾಂಕಿಂಗ್ ಕೃತ್ಯ ಎನ್ನುವಂತೆ ತಂದೆಯ ಆಸ್ತಿಗಾಗಿ ಪುತ್ರನೊಬ್ಬ ಸ್ನೇಹಿತನೊಂದಿಗೆ ಸೇರಿಕೊಂಡು ಅಪ್ಪನನ್ನೇ ಕೊಲೆಗೈದ ಘಟನೆ ನಡೆದಿದೆ. ಬೆಂಗಳೂರಿನ ಬಾಗಲಗುಂಟೆಯಲ್ಲಿ ಆಸ್ತಿಯ ಆಸೆಗಾಗಿ ಸ್ನೇಹಿತನೊಂದಿಗೆ ಸೇರಿದಂತ ಪುತ್ರನೊಬ್ಬ ತಂದೆಯನ್ನು ಕೊಲೆ ಮಾಡಿರುವಂತ ಕೃತ್ಯವು ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಬಯಲಾಗಿದೆ. ಬೆಂಗಳೂರಿನ ದಾಸರಹಳ್ಳಿಯ ಕೆಂಪೇಗೌಡ ನಗರದ ಉದ್ಯಮಿ ಮಂಜಣ್ಣ ಎಂಬುವರೇ ಪುತ್ರನಿಂದ ಕೊಲೆಯಾದಂತ ದುರ್ದೈವಿಯಾಗಿದ್ದಾರೆ. ಪುತ್ರ ಮನೋಜ್ ಹಾಗೂ ಸ್ನೇಹಿತ ಸೇರಿಕೊಂಡು ಆಸ್ತಿಯ ಆಸೆಗಾಗಿ ತಂದೆಯನ್ನು ಕೊಲೆಗೈದಿರೋದು ತಿಳಿದು ಬಂದಿದೆ. ಕಳೆದ ಸೆಪ್ಟೆಂಬರ್ 2ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜಣ್ಣ ಅವರು ಮನೆಯಲ್ಲಿ ಮಲಗಿದ್ದಂತ ಜಾಗದಲ್ಲೇ ಸಾವನ್ನಪ್ಪಿದ್ದರು. ಮಂಜಣ್ಣ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮನೆಯವರು ಅಂತ್ಯಕ್ರಿಯೆ ನೆರವೇರಿಸಿದ್ದರು. ಮಂಜಣ್ಣ ಅವರ ಮರಣೋತ್ತರ ವರದಿ ಬಂದಿದ್ದು, ಅದರಲ್ಲಿ ಮಂಜಣ್ಣನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಮೃತ ಮಂಜಣ್ಣ ಬಾಗಲಗುಂಟೆಯಲ್ಲಿ ಐದಾರು ಬಿಲ್ಡಿಂಗ್, ನಾಲ್ಕೈದು ಸೈಟ್, ಒಂದು ವುಡ್ ವರ್ಕ್ ಫ್ಯಾಕ್ಟರಿ ಹೊಂದಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ದೊಡ್ಡ…

Read More

ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂಬುದಾಗಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಎರಡೂ ದೇವಸ್ಥಾನಗಳಲ್ಲಿ ದಿನಾಂಕ 22-09-2025ನೇ ಸೋಮವಾರದಿಂದ 02-10-2025ನೇ ಗುರುವಾರದವರೆಗೆ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದಿದೆ. ಪ್ರತಿ ದಿನ ಬೆಳಗ್ಗೆ 8-00ರಿಂದ ರಾತ್ರಿ 9-00ಗಂಟೆಯವರಗೆ ನಡೆಯಅದ್ದು ಎರಡೂ ದೇವಾಲಯಗಳಲ್ಲ ಶುದ್ಧ ಪುಣ್ಯಾಹವಾಚನ, ಶ್ರೀ ದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ರಾತ್ರಿ 8-30ಕ್ಕೆ ಅಷ್ಠಾವದನ ಸೇವೆ, ರಾತ್ರಿ 9 ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ಹೇಳಿದೆ. ದಿನಾಂಕ 30-09-2025ನೇ ಮಂಗಳವಾರ ದುರ್ಗಾಷ್ಟಮಿ ದಿನದಂದು ದುರ್ಗಾ ಹವನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದೆ. ಈ ಎಲ್ಲಾ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಈ…

Read More

ಬೆಂಗಳೂರು: ರಾಜ್ಯ ಸರ್ಕಾರವು ಕೆ ಇ ಆರ್ ಸಿ ಮಾದರಿಯಲ್ಲೇ ಸಾರ್ವಜನಿಕ ಸಾರಿಗೆ ದರ ನಿಯಂತ್ರಣಕ್ಕೆ ಸಮಿತಿಯನ್ನು ರಚಿಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ‌ವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸುವ ಸಲುವಾಗಿ ಈ ಹಿಂದೆ ಯಾವುದೇ ಸಮಿತಿಗಳು ರಚನೆಯಾಗಿರುವುದಿಲ್ಲ. ರಾಜಕೀಯ ಇಚ್ಛಾಶಕ್ತಿಗಳಿಂದ ಪ್ರಯಾಣ ದರವನ್ನು ಏರಿಕೆ ಮಾಡುವುದಿಲ್ಲ.ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಇಂತಿಷ್ಟು ದರ ಪರಿಷ್ಕರಣೆ ಅವಶ್ಯಕ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ, ಸದೃಢತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಉದಾಹರಣಗೆ ಬಿ.ಎಂ.ಟಿ‌.ಸಿ 2014 ರಲ್ಲಿ , ಇತರೆ ಸಾರಿಗೆ ನಿಗಮಗಳಲ್ಲಿ 2020 ರಲ್ಲಿ ಪ್ರಯಾದ ದರ ಹೆಚ್ಚಳವಾಗಿತ್ತು. 2014 ರಲ್ಲಿನ ಪ್ರತಿ‌ದಿನ ಡೀಸೆಲ್ ವೆಚ್ಚ ರೂ.7 ಕೋಟಿ ಇದು 2025 ಕ್ಕೆ ರೂ.13 ಕೋಟಿಗೆ ಏರಿಕೆಯಾಗಿದೆ. 2014 ರಲ್ಲಿದ್ದ‌ ಪ್ರತಿದಿನದ ಸಿಬ್ದಂದಿ ವೆಚ್ಚವು ರೂ. 6 ಕೋಟಿಯಿಂದ ರೂ.12 ಕೋಟಿಗೆ ಏರಿಕೆಯಾಗಿದೆ. ವೆಚ್ಚಗಳಲ್ಲಿ ಸುಮಾರು 100% ಏರಿಕೆಯಾಗಿರುವುದನ್ನು‌ ಗಮನಿಸಬೇಕು.…

Read More

ಬೆಂಗಳೂರು: ರಾಜ್ಯ ಸರ್ಕಾರವು ಸಮುದಾಯಗಳ ತೀವ್ರ ಒತ್ತಡಕ್ಕೆ ಮಣಿದು, ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತಕ್ಕೆ ಕೋಕ್ ನೀಡಲಾಗಿದೆ. ಈ ಮೂಲಕ ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕಕ್ಕೆ ಬ್ರೇಕ್ ಹಾಕಲಾಗಿದೆ. ಇಂದು ಹಿಂದೂಳಿದ ಆಯೋಗದ ಅಧ್ಯಕ್ಷ ಮಧು ಸೂದನ್ ನಾಯಕ್ ಮತ್ತು ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿಯ ಪಟ್ಟಿಯಿಂದ 33 ಜಾತಿಗಳನ್ನು ತೆಗೆದಿರುವುದಾಗಿ ತಿಳಿಸಿದ್ದಾರೆ. ಜಾತಿಗಣತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಎನ್ನುವುದು ನಮೂದಿ ಎಂಬುದಾಗಿ ಹೇಳಲಾಗಿತ್ತು. ಜೊತೆಗೆ ಜಾತಿ ಪಟ್ಟಿಯಲ್ಲೂ ಸೇರಿಸಲಾಗಿತ್ತು. ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿ, ಸಮುದಾಯಗಳ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಾಗಿ 33 ಜಾತಿಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದು ಮಧುಸೂದನ ನಾಯಕ್ ತಿಳಿಸಿದ್ದಾರೆ. ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. 1561 ಜಾತಿ ಬಿಟ್ಟು ಬೇರೆ ಯಾವುದೇ ಇದ್ದರೂ ಅದರ ಮಾಹಿತಿ ಕೊಡಬಹುದು. ನಾನು ಜಾತಿ ಹೇಳುವುದಿಲ್ಲ ಎಂದರೂ ಅದಕ್ಕೂ ಅವಕಾಶವಿದೆ. ಇತರೇ ಅಂತಲೂ ಕಾಲಂ…

Read More

ಶಿವಮೊಗ್ಗ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯವು ಸೆ. 22 ರಿಂದ ಅ. 7 ರವರೆಗೆ ನಡೆಯಲಿದ್ದು, ಜಿಲ್ಲೆಯ ನಾಗರೀಕರು ಸಮೀಕ್ಷೆಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ ಮಾಡಿದ್ದಾರೆ. ಮೆಸ್ಕಾಂ ಇಲಾಖೆಯ ಮಾಹಿತಿ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಆರ್ ಆರ್ ಸಂಖ್ಯೆ ಹೊಂದಿರುವ ಅಂದಾಜು 543925 ಮನೆಗಳಿದ್ದು, ಈಗಾಗಲೇ ಮೀಟರ್ ರೀಡರ್‌ಗಳಿಂದ ಮನೆ ಮನೆಗೆ ಭೇಟಿ ನೀಡಿ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯವು ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದೆ. ಸಮೀಕ್ಷಾ ಕಾರ್ಯಕ್ಕಾಗಿ ಅಂದಾಜು 4215 ಸಂಖ್ಯೆಯ ಗಣತಿದಾರರನ್ನು ನೇಮಕ ಮಾಡಿದ್ದು, ಸದರಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಆಯೋಗದ ಪ್ರಶ್ನಾವಳಿಗೆ ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿರುವ ಗ್ರಾಮಗಳಲ್ಲಿರುವ ಕುಟುಂಬಗಳ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ನೆಟ್ವರ್ಕ್…

Read More