Author: kannadanewsnow09

ನವದೆಹಲಿ: ಮೇ 31 ರೊಳಗೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಜ್ಞಾಪನೆ ನೀಡಿದೆ. ಒಂದು ವೇಳೆ ಲಿಂಕ್ ಮಾಡದೇ ಇದ್ದರೇ ದುಪ್ಪಟ್ಟು ಟಿಡಿಎಸ್ ಕಟ್ ಆಗಲಿದೆ ಅಂತ ಎಚ್ಚರಿಸಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಐಟಿ ಇಲಾಖೆ, ಮೂಲದಲ್ಲಿ ಹೆಚ್ಚಿನ ತೆರಿಗೆ ಕಡಿತಗಳನ್ನು (Tax Deductions at Source -TDS) ತಪ್ಪಿಸಲು ಈ ಗಡುವನ್ನು ಪೂರೈಸುವುದು ಮುಖ್ಯ ಎಂದು ಹೇಳಿದೆ. “ತೆರಿಗೆದಾರರ ಬಗ್ಗೆ ದಯವಿಟ್ಟು ಗಮನ ಹರಿಸಿ, ದಯವಿಟ್ಟು ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಮೇ 31, 2024 ರೊಳಗೆ ಲಿಂಕ್ ಮಾಡಿ… ಮೇ 31 ರೊಳಗೆ ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ನೊಂದಿಗೆ ಲಿಂಕ್ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 206 ಎಎ ಮತ್ತು 206 ಸಿಸಿ ಅಡಿಯಲ್ಲಿ ಹೆಚ್ಚಿನ ತೆರಿಗೆ ಕಡಿತ / ತೆರಿಗೆ ಸಂಗ್ರಹವನ್ನು ನೀವು ಎದುರಿಸುವುದಿಲ್ಲ ಎಂದಿದೆ. ಗಡುವನ್ನು ತಪ್ಪಿಸುವ ತೆರಿಗೆದಾರರು…

Read More

ಬೆಂಗಳೂರು: ಭವಾನಿ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ನಡೆಸಿತು. ಈ ವೇಳೆಯಲ್ಲಿ ಕೋರ್ಟ್ ಗೆ ನಾಳೆಯವರೆಗೂ ಆಕ್ಷೇಪಣೆ ಸಲ್ಲಿಸೋದಕ್ಕೆ ಅವಕಾಶ ಕೋರಿತ್ತು. ಹೀಗಾಗಿ ನಾಳೆಗೆ ಪ್ರಕರಣದ ವಿಚಾರಣೆ ಮುಂದೂಡಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮೈಸೂರಿನ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣ ಸಂಬಂಧ ಭವಾನಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆಯಲ್ಲಿ ಎಸ್ಐಟಿ ಪರ ಎಸ್ ಪಿಪಿ, ಆಕ್ಷೇಪಣೆ ಸಲ್ಲಿಸಲು ನಾಳೆಯವರೆಗೆ ಕಾಲಾವಕಾಶವನ್ನು ನ್ಯಾಯಪೀಠಕ್ಕೆ ಕೋರಿದರು. ಈ ಸಂದರ್ಭದಲ್ಲಿ ಭವಾನಿ ರೇವಣ್ಣ ಪರ ವಕೀಲ ಸಂದೇಶ್ ಚೌಟ ಅವರು, ಕೆ ಎಂಎಫ್ ನಿವೃತ್ತ ಅಧಿಕಾರಿಯೊಬ್ಬರನ್ನು 7ನೇ ಆರೋಪಿಯನ್ನಾಗಿ ಮಾಡಲಾಗಿದೆ. ಎಸ್ಐಟಿ ವಿರುದ್ಧ ದೂರು ನೀಡಿದವರನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ಭವಾನಿ ರೇವಣ್ಣಗೆ ಬಂಧನದಿಂದ ರಕ್ಷಣೆ ನೀಡಲು ಮನವಿ ಮಾಡಿದರು. ಈ ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಭವಾನಿ ರೇವಣ್ಣ ವಿರುದ್ಧದ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.…

Read More

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮಾನ್ಯ ಮುಖ್ಯಮಂತ್ರಿಗಳು, ಯಾರೇ ಒಬ್ಬ ಸಚಿವರು ಒಂದೇ ಒಂದು ಗುದ್ದಲಿಪೂಜೆ ಮಾಡಿಲ್ಲ; ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ. ಹೊಸ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯವು ಭೀಕರ ಬರಗಾಲದಿಂದ ತತ್ತರಿಸಿದೆ. ಕೇಂದ್ರ ಸರಕಾರದಿಂದ ಅನುದಾನ ಬಂದರೂ ತಾಂತ್ರಿಕ ಕಾರಣಗಳನ್ನು ಒಡ್ಡಿ ರೈತರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಪರಿಹಾರ ಮೊತ್ತವನ್ನು ನೀಡಿಲ್ಲ. ಬೆಳೆ ವಿಮೆಯನ್ನೂ ಕೊಟ್ಟಿಲ್ಲ. ಇದು ರೈತರಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ ಎಂದು ವಿವರಿಸಿದರು. ಈ ರಾಜ್ಯ ಸರಕಾರಕ್ಕೆ ರೈತಪರ ಕಾಳಜಿ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿತದ ಕುರಿತು ಇಡೀ ದೇಶದಲ್ಲಿ ಚರ್ಚೆ…

Read More

ಬೆಂಗಳೂರು: ಬೆಂಗಳೂರಿ ಜನತೆಗೆ ತೊಂದರೆ ಕೊಟ್ಟರೇ ನಾವು ಸುಮ್ಮನೇ ಇರುವುದಿಲ್ಲ ಅಂತ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ಮಾಜಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನತೆಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಈ ಪ್ರತಿಭಟನೆ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ಗಂಟೆ ಎಂದು ಅವರು ತಿಳಿಸಿದರು. ಆಶಾದಾಯಕ, ಭರವಸೆದಾಯಕ ನಗರ ಬೆಂಗಳೂರನ್ನು ಕಾಂಗ್ರೆಸ್ ಸರಕಾರ ಕಡೆಗಣಿಸಿದ್ದು, ಈ ಸರಕಾರಕ್ಕೆ ಪ್ರಜ್ಞೆ ಇದೆಯೇ ಎಂದು ಟೀಕಿಸಿದರು. ಇದು ಅತ್ಯಂತ ಕೆಟ್ಟ- ಭ್ರಷ್ಟ ಸರಕಾರ. ಗುತ್ತಿಗೆದಾರರ ರಕ್ತ ಹೀರುವ ಸರಕಾರ ಎಂದು ಅವರು ದೂರಿದರು. ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ, ನಾರಾಯಣ ಗೌಡ, ಶಾಸಕರಾದ ವಿಶ್ವನಾಥ್, ಮುನಿರಾಜು, ರವಿಸುಬ್ರಹ್ಮಣ್ಯ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು…

Read More

ನವದೆಹಲಿ: ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಕರ್ಕರ್ದೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಖಾಲಿದ್ ಅವರ ಮನವಿಯನ್ನು ವಜಾಗೊಳಿಸಿದರು. ಫೆಬ್ರವರಿ 14, 2024 ರಂದು ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡ ನಂತರ ಖಾಲಿದ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದರು. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆಬ್ರವರಿ 14 ರಂದು ಈ ವಿಷಯವನ್ನು ಆಲಿಸಬೇಕಿತ್ತು. ಖಾಲಿದ್ ಅವರ ವಕೀಲ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. “ಪರಿಸ್ಥಿತಿಗಳ ಬದಲಾವಣೆಯಿಂದಾಗಿ ನಾವು ಹಿಂದೆ ಸರಿಯಲು ಬಯಸುತ್ತೇವೆ ಮತ್ತು ಸೂಕ್ತ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಬಯಸುತ್ತೇವೆ” ಎಂದು ಸಿಬಲ್ ಹೇಳಿದರು. ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ…

Read More

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರು ಅದು ಇದು ಅಂತಿದ್ದಾರೆ. ಆದ್ರೇ ಒಂದು ವರ್ಷದಿಂದ ಅನುದಾನವೇ ಅಭಿವೃದ್ಧಿಗೆ ಬಿಡುಗಡೆಯಾಗಿಲ್ಲ. ಬೆಂಗಳೂರು ಅಭಿವೃದ್ಧಿಯನ್ನೇ ಡಿಸಿಎಂ ಡಿಕೆಶಿ ಕಡೆಗಣಿಸಿದ್ದಾರೆ ಅಂತ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಮೂಲಕ ಸಿಂಗಾಪುರ, ಅಮೆರಿಕದ ನ್ಯೂಯಾರ್ಕ್ ಥರ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಒಂದು ವರ್ಷವಾದರೂ ಒಂದು ರೂಪಾಯಿ ಹಣವನ್ನು ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು. ರಾಜ್ಯದ ಶೇ 60ರಿಂದ 65 ತೆರಿಗೆ ಬೆಂಗಳೂರಿಂದ ಸಂಗ್ರಹವಾಗುತ್ತಿದೆ. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಬೆಂಗಳೂರಿನ ಜನತೆ ಬೆಂಗಳೂರಿನ ತೆರಿಗೆ ಬೆಂಗಳೂರಿಗರ ಹಕ್ಕು ಎಂದು ಹೋರಾಟ ಮಾಡಲು ಸಿದ್ಧರಾಗುವಂತಾಗಿದೆ ಎಂದು ತಿಳಿಸಿದರು. ಮಳೆಯ ಟ್ರೈಲರ್ ಇದು. ಮಳೆಗಾಲ ಆರಂಭವಾಗುವಾಗಲೇ ರಸ್ತೆಗಳು ಹೊಂಡ ಗುಂಡಿಯಿಂದ ಕೂಡಿದೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಕಸ ಎತ್ತುವವರಿಗೆ ಜನವರಿಯಿಂದ ಸಂಬಳ ಕೊಟ್ಟಿಲ್ಲ. ಮುಖ್ಯಮಂತ್ರಿಯವರು…

Read More

ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಟೀಕಿಸಿದರು. ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೊಂಡಗುಂಡಿಯಲ್ಲಿ ಬಿದ್ದು ಸಾಯುವ ಭಯದಿಂದ ಹಿರಿಯರು ನೆಮ್ಮದಿಯಿಂದ ಓಡಾಡಲು ಸಾಧ್ಯವಿಲ್ಲವಾಗಿದೆ ಎಂದು ಆತಂಕದಿಂದ ನುಡಿದರು. ನಿನ್ನೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು. ತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೇ ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.…

Read More

ಬೆಂಗಳೂರು: ರಾಜ್ಯದಲ್ಲಿ ಕಮೀಷನ್ ಸಂದಾಯವಾಗದಿದ್ದರೇ ಕುಣಿಕೆ ಗ್ಯಾರಂಟಿ ಭಾಗ್ಯ ಜಾರಿಯಲ್ಲಿದೆ. ಅಧಿಕಾರಿಗಳಿಗಾಗಿ ಆತ್ಮಹತ್ಯೆ ಭಾಗ್ಯವೂ ದೊರೆಯುತ್ತಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ..! ಭ್ರಷ್ಟಾಚಾರಕ್ಕೆ ಸಹಕರಿಸದ, ಕಮಿಷನ್ ವಿಷ ವರ್ತುಲಕ್ಕೆ ಸಿಲುಕಿಕೊಳ್ಳದ ಅಧಿಕಾರಿಗಳಿಗಾಗಿ ಕಾಂಗ್ರೆಸ್ ಸರ್ಕಾರ ಆತ್ಮಹತ್ಯೆ ಭಾಗ್ಯ ಜಾರಿಗೊಳಿಸಿದೆ ಎಂಬುದಾಗಿ ಕಿಡಿಕಾರಿದೆ. ಸಿದ್ಧರಾಮಯ್ಯ ಸರ್ಕಾರದ ಕಮಿಷನ್ ದಾಹಕ್ಕೆ ಇನ್ನೆಷ್ಟು ಅಧಿಕಾರಿಗಳು ಬಲಿಯಾಗಬೇಕು? ಎದ್ದೇಳಿ ಕನ್ನಡಿಗರೇ, ಕೊಲೆಗಡುಕ ಸರ್ಕಾರವನ್ನು ಕೊನೆಗಾಣಿಸೋಣ ಅಂತ ಹೇಳಿದೆ. https://twitter.com/BJP4Karnataka/status/1795367208044138787 https://kannadanewsnow.com/kannada/fire-breaks-out-at-delhi-childrens-hospital-owner-of-three-hospitals-run-without-licence/ https://kannadanewsnow.com/kannada/womans-body-found-in-decomposed-state-in-bagalkot-head-and-torso-severed/

Read More

ನವದೆಹಲಿ: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್ 6-3, 7-6(5), 6-3 ಸೆಟ್ ಗಳಿಂದ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈ ಅನಿರೀಕ್ಷಿತ ಸೋಲು 14 ಬಾರಿಯ ಚಾಂಪಿಯನ್ ಅವರು ಎರಡು ದಶಕಗಳಿಂದ ಪ್ರಾಬಲ್ಯ ಹೊಂದಿರುವ ಗ್ರ್ಯಾಂಡ್ ಸ್ಲಾಮ್ ಗೆ ಮರಳುತ್ತಾರೆಯೇ ಎಂದು ಅಭಿಮಾನಿಗಳು ಪ್ರಶ್ನಿಸುವಂತೆ ಮಾಡಿದೆ. 2005 ರಲ್ಲಿ ಮೊದಲ ಬಾರಿಗೆ ಮಸ್ಕೆಟೀರ್ಸ್ ಕಪ್ ಗೆದ್ದ ಮತ್ತು ಗಂಭೀರ ಸೊಂಟದ ಗಾಯವು ತನ್ನ ವೃತ್ತಿಜೀವನವನ್ನು ಅಡ್ಡಿಪಡಿಸುವ ಮೊದಲು 2022 ರಲ್ಲಿ ಕೊನೆಯ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದ 22 ಬಾರಿಯ ಪ್ರಮುಖ ಚಾಂಪಿಯನ್, ಈ ವರ್ಷ ಪ್ರವಾಸದಲ್ಲಿ ತನ್ನ ಕೊನೆಯ ವರ್ಷವಾಗಬಹುದು ಎಂದು ಸುಳಿವು ನೀಡಿದ್ದರು. https://twitter.com/rolandgarros/status/1795132717689983467 https://kannadanewsnow.com/kannada/womans-body-found-in-decomposed-state-in-bagalkot-head-and-torso-severed/ https://kannadanewsnow.com/kannada/fire-breaks-out-at-delhi-childrens-hospital-owner-of-three-hospitals-run-without-licence/

Read More

ಹಣಕಾಸಿನ ತೊಂದರೆಗಳು ಬರುವುದು ಮತ್ತು ಹೋಗುವುದು ಮನುಷ್ಯನಿಗೆ ಸಂಭವಿಸುವ ಸಹಜ ಸಂಗತಿಯಾಗಿದೆ. ಹಣ ಬಂದಾಗ ಅದನ್ನು ಉಳಿಸಲು ಪ್ರಯತ್ನಿಸಿ. ಆಗ ಮಾತ್ರ ಆದಾಯವಿಲ್ಲದೆ ಬದುಕಲು ಸಾಧ್ಯ. ಎಷ್ಟೇ ಹಣ ಬಂದರೂ ತಕ್ಷಣ ಖರ್ಚು ಮಾಡುವ ಅಭ್ಯಾಸವಿರುವವರು ಜೀವನದಲ್ಲಿ ಕಷ್ಟದ ಪರಿಸ್ಥಿತಿಗೆ ಸಿಲುಕುವುದು ಖಂಡಿತ. ಹಣ ತೆಗೆಯಲಾಗದ ಪರಿಸ್ಥಿತಿ ಬಂದರೂ ಬ್ಯಾಂಕ್ ಖಾತೆಗೆ ನೂರು ರೂಪಾಯಿ ಹಾಕುವ ಕುಟುಂಬದ ಸಂಪತ್ತು ಕ್ರಮೇಣ ಹೆಚ್ಚಾಗುವುದು ಖಂಡಿತ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ…

Read More