Author: kannadanewsnow09

ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ ‌ ‌ ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ ‌‌ ‌ ‌ ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ – ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ. ‌ ‌ ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು. ‌ ‌ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು…

Read More

ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023-24ನೇ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು. ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು. ವಿದ್ಯಾರ್ಥಿಯ ಪಾಲಕರ ಅಥವಾ ಪೋಷಕರ ವಾರ್ಷಿಕ ಆದಾಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ರೂ. 2.00 ಲಕ್ಷಗಳಿಗಿಂತ ಮೀರಿರಬಾರದು ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿಗಳಿಗೆ 2.50 ಲಕ್ಷಗಳಿಗಿಂತ ಮೀರಿರಬಾರದು. ಆಸಕ್ತ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು State Scholarship Portal ನ ವೆಬ್‍ಸೈಟ್ https://ssp.karnataka.gov.in ಅಥವಾ http:// dom.karnataka.gov.in (Directorate of Minorities-GOK) ನ ಮೂಲಕ ಜ.30 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಾಲಾಲ್ ರಸ್ತೆ, ದುರ್ಗಿಗುಡಿ, ದೂ.ಸಂ.: 08182-220206 ನ್ನು ಸಂಪರ್ಕಿಸುವುದು. https://kannadanewsnow.com/kannada/three-feared-dead-as-state-run-bus-collides-with-lorry-in-gadag/…

Read More

ಬೆಂಗಳೂರು: BMTCಯ 171 ಚಾಲಕರಿಗೆ ಅಪಘಾತ ರಹಿತವಾಗಿ ಚಾಲನೆ ಮಾಡಿದ್ದಕ್ಕಾಗಿ, ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಮುಖ್ಯಮಂತ್ರಿ ಚಿನ್ನದ ಪದಕವನ್ನು ವಿತರಿಸಿದರು. ಇಂದು ನಮ್ಮ ಎಲ್ಲಾ ಚಾಲನಾ ಸಿಬ್ಬಂದಿಗಳಿಗೂ ರಾಷ್ಟ್ರೀಯ ಚಾಲಕರ ದಿನಾಚರಣೆಯ ಶುಭಾಶಯಗಳು ತಿಳಿಸುತ್ತಾ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 171 ಅರ್ಹ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ವಿತರಿಸಿದೆ. 25 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ 139 ಚಾಲಕರು ಹಿರಿಯ ಚಾಲಕ ಹುದ್ದೆಗೆ ಪದೋನ್ನತಿ ಹೊಂದಿದ್ದು ಸಾಂಕೇತಿಕವಾಗಿ 13 ಚಾಲಕರಿಗೆ ಪದೋನ್ನತಿ ಆದೇಶವನ್ನು ವಿತರಿಸಲಾಯಿತು. 1122 ಅರ್ಹ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕಕ್ಕೆ ಅರ್ಹರಿದ್ದಾರೆ. ಈ ಸಂದರ್ಭದಲ್ಲಿ ಕಲಾ‌ಕೃಷ್ಣಮೂರ್ತಿ, ಭಾಪೊಸೇ, ನಿರ್ದೇಶಕರು ( ಭದ್ರತಾ & ಜಾಗೃತ) ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳು‌, ಸಿಬ್ಬಂದಿಗಳು ಹಾಜರಿದ್ದರು. https://kannadanewsnow.com/kannada/three-feared-dead-as-state-run-bus-collides-with-lorry-in-gadag/ https://kannadanewsnow.com/kannada/139-36-crore-girls-have-travelled-so-far-under-shakti-yojana-minister-laxmi-hebbalkar/

Read More

ಬಮಾಕೊ: ಕಳೆದ ವಾರ ಮಾಲಿಯನ್ ಚಿನ್ನದ ಗಣಿಗಾರಿಕೆ ಸ್ಥಳದಲ್ಲಿ ಸುರಂಗ ಕುಸಿದು 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಚಿನ್ನದ ಗಣಿಗಾರಿಕೆ ಗುಂಪಿನ ನಾಯಕ ಮತ್ತು ಸ್ಥಳೀಯ ಅಧಿಕಾರಿಯೊಬ್ಬರು ಬುಧವಾರ ಎಎಫ್ಪಿಗೆ ತಿಳಿಸಿದ್ದಾರೆ. “ಇದು ಶಬ್ದದೊಂದಿಗೆ ಪ್ರಾರಂಭವಾಯಿತು. ಭೂಮಿ ಕಂಪಿಸಲು ಪ್ರಾರಂಭಿಸಿತು. ಹೊಲದಲ್ಲಿ 200ಕ್ಕೂ ಹೆಚ್ಚು ಚಿನ್ನದ ಗಣಿಗಾರರು ಇದ್ದರು. ಈಗ ಹುಡುಕಾಟ ಮುಗಿದಿದೆ. ನಾವು 73 ಶವಗಳನ್ನು ಪತ್ತೆ ಮಾಡಿದ್ದೇವೆ” ಎಂದು ನೈಋತ್ಯ ಪಟ್ಟಣ ಕಂಗಾಬಾದ ಚಿನ್ನದ ಗಣಿಗಾರರ ಅಧಿಕಾರಿ ಓಮರ್ ಸಿಡಿಬೆ ಶುಕ್ರವಾರ ಘಟನೆಯ ಬಗ್ಗೆ ಎಎಫ್ಪಿಗೆ ತಿಳಿಸಿದರು. ಇದೇ ಸಂಖ್ಯೆಯನ್ನು ಸ್ಥಳೀಯ ಕೌನ್ಸಿಲರ್ ದೃಢಪಡಿಸಿದ್ದಾರೆ. ಮಾಲಿಯ ಗಣಿ ಸಚಿವಾಲಯವು ಮಂಗಳವಾರ ಹೇಳಿಕೆಯಲ್ಲಿ ಹಲವಾರು ಗಣಿಗಾರರ ಮರಣವನ್ನು ಘೋಷಿಸಿತ್ತು. ಆದರೆ ನಿಖರವಾದ ಅಂಕಿಅಂಶಗಳನ್ನು ನೀಡಿಲ್ಲ. ಸರ್ಕಾರವು “ದುಃಖಿತ ಕುಟುಂಬಗಳಿಗೆ ಮತ್ತು ಮಾಲಿಯನ್ ಜನರಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿತು”. “ಗಣಿಗಾರಿಕೆ ಸ್ಥಳಗಳ ಬಳಿ ವಾಸಿಸುವ ಸಮುದಾಯಗಳು ಮತ್ತು ಚಿನ್ನದ ಗಣಿಗಾರರು ಸುರಕ್ಷತಾ ಅವಶ್ಯಕತೆಗಳನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು…

Read More

ಹಾಸನ: ರಾಜ್ಯಾಧ್ಯಂತ ಇರುವಂತ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಲ್ಲದೇ ಆಯಾ ಪ್ರಾದೇಶಿಕ ಆಹಾರ ವಿತರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಪೌರಾಡಳಿತ ಇಲಾಖೆಯ ಸಚಿವ ರಹೀಂ ಖಾನ್ ಅವರು, ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಆಯಾ ಪ್ರಾದೇಶಿಕ ಆದಾರಗಳನ್ನು ನೀಡೋದಕ್ಕೆ ಚಿಂತನೆ ನಡೆಸಲಾಗಿದೆ ಎಂದರು. ಇಂದಿರಾ ಕ್ಯಾಂಟೀನ್ ಬಗ್ಗೆ ಸಿಎಂ ಸಿದ್ಧರಾಮಯ್ಯ ವಿಶೇಷ ಕಾಳಜಿ ವಹಿಸಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ಗಳ ಜೊತೆಗೆ ಹೆಚ್ಚುವರಿ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತದೆ. ಅದರಲ್ಲೂ ಬಡವರು, ಆಸ್ಪತ್ರೆಗಳಿರುವ ಕಡೆ ಹೆಚ್ಚುವರಿಯಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತದೆ ಎಂಬುದಾಗಿ ತಿಳಿಸಿದರು. ಅಂದಹಾಗೇ ಈಗಾಗಲೇ ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರದ ಮೆನೂ ಬದಲಾವಣೆ ಮಾಡಿದೆ. ಶುಚಿ ರುಚಿಗೆ ಮೊದಲ ಆದ್ಯತೆಯನ್ನು ನೀಡಿ, ಆಹಾರ ವಿತರಣೆ ಮಾಡಲಾಗುತ್ತಿದೆ. ಇದೀಗ ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೆ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‍ಟೇಬಲ್ (ಸಿಎಆರ್/ಡಿಎಆರ್) (ಪುರುಷ ಮತ್ತು ತೃತೀಯ ಲಿಂಗ ಪುರುಷ) -3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜ. 28 ರಂದು ಬೆಳಗ್ಗೆ 11.00 ರಿಂದ 12.30ರವರೆಗೆ ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಈ ಲಿಖಿತ ಪರೀಕ್ಷೆಗೆ ಹಾಜರಾಗುವ ಪುರುಷ ಮತ್ತು ತೃತಿಯಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‍ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‍ಗಳನ್ನು ಧರಿಸುವುದು. ಜಿಪ್ ಪ್ಯಾಕೆಟ್‍ಗಳು, ದೊಡ್ಡ ಬಟನ್‍ಗಳು ಇರುವ ಶರ್ಟ್‍ಗಳನ್ನು ಧರಿಸಬಾರದು. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‍ಗಳನ್ನು ಧರಿಸತಕ್ಕದ್ದಲ್ಲ ಎಂದು ಹೇಳಿದೆ. ಪರೀಕ್ಷಾ ಕೇಂದ್ರದೊಳಗೆ ಷೂಗಳನ್ನು ನಿಷೇಧಿಸಲಾಗಿದ್ದು, ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು ಧರಿಸುವುದು. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಲಾಗಿದೆ ಎಂದು ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ. https://kannadanewsnow.com/kannada/three-feared-dead-as-state-run-bus-collides-with-lorry-in-gadag/ https://kannadanewsnow.com/kannada/139-36-crore-girls-have-travelled-so-far-under-shakti-yojana-minister-laxmi-hebbalkar/

Read More

ಬೆಂಗಳೂರು: ನಗರದ ಲಾಲ್ ಬಾಗ್ ನಲ್ಲಿ ( Lal Bag ) ಜನವರಿ.26ರ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ವೀಕ್ಷಣೆಗೆ ತೆರಳೋರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ನಮ್ಮ ಮೆಟ್ರೋದಿಂದ ( Namma Metro ) ರಿಟರ್ನ್ ಜರ್ನಿ ಪೇಪರ್ ಟಿಕೆಟ್ ( Paper Ticket ) ಪರಿಚಯಿಸಲಾಗುತ್ತಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮೆಟ್ರೋ ರೈಲು ನಿಗಮದ ನಿಯಮಿತದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ, ನಮ್ಮ ಮೆಟ್ರೋದಲ್ಲಿ ದಿನಾಂಕ 26.01.2024 ಶುಕ್ರವಾರದಂದು (ಗಣರಾಜ್ಯೋತ್ಸವ ದಿನ), ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಿದೆ. ಸದರಿ ದಿನದಂದು ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು ರೂ.30/- ಕ್ಕೆ ನಿಗಧಿಪಡಿಸಲಾಗಿದೆ ಎಂದಿದ್ದಾರೆ.…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿನಾಂಕ 16-02-2024ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು. ಆದ್ರೇ ಈ ಬಜೆಟ್ ಅನ್ನು ಮುಂದೂಡುವಂತೆ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಈ ಸಂಬಂಧ ರಾಜಭವನಕ್ಕೆ ಭೇಟಿ ನೀಡಿರುವಂತ ಬಿಜೆಪಿಯ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ, ವಿ.ಸುನೀಲ್ ಕುಮಾರ್, ಜೆ ಪ್ರೀತಂ ಗೌಡ, ಬೈರತಿ ಬಸವರಾಜ್, ಮುನಿರತ್ನ, ಎಸ್ ಮುನಿರಾಜು ಹಾಗೂ ಹರತಾಳು ಹಾಲಪ್ಪ ಅವರು, ರಾಜ್ಯ ಬಜೆಟ್ ಮಂಡಿನೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಲಿದೆ. ಹೀಗಾಗಿ ಮುಂದೂಡುವಂತೆ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಅದೇ ಸಂದರ್ಭದಲ್ಲಿ ಉಪ ಚುನಾವಣೆ ಘೋಷಣೆ ಮಾಡಿದೆ. ದಿನಾಂಕ 16-02-2024ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಕೂಡ ನಡೆಯಲಿದೆ. ಈ ಸಂದರ್ಭದಲ್ಲೇ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರೋದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗಲಿದೆ ಅಂತ ಹೇಳಿದೆ. ಈ ಎಲ್ಲಾ ಕಾರಣದಿಂದಾಗಿ ಫೆ.16ರಂದು…

Read More

ಬೆಂಗಳೂರು: ಬಿಎಡ್ ಕೋರ್ಸ್ ಗೆ ದಾಖಲಾತಿಗೆ ಸಂಬಂಧಿಸಿದಂತ ಈಗಾಗಲೇ ಮೊದಲ, ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈಗ ಮೂರನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಕುರಿಕಂತೆ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಬಿಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ 3ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ದಿನಾಂಕ 24-01-2024ರ ಇಂದು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು, ದಾಖಲಾತಿ ಶುಲ್ಕವನ್ನು ಎಸ್ ಬಿಐ ಬ್ಯಾಂಕಿನಲ್ಲಿ ಪಾವತಿಸಿ, ದಿನಾಂಕ 30-01-2024ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್ ನಲ್ಲಿ ಸಲ್ಲಿಸಿ, ಪ್ರವೇಶ ಪತ್ರವನ್ನು ಪಡೆಯುವಂತೆ ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.schooleducation.karnataka.gov.in ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿ ಎಂದಿದ್ದಾರೆ. https://kannadanewsnow.com/kannada/three-feared-dead-as-state-run-bus-collides-with-lorry-in-gadag/ https://kannadanewsnow.com/kannada/139-36-crore-girls-have-travelled-so-far-under-shakti-yojana-minister-laxmi-hebbalkar/

Read More

ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತಂತ ತಾಯಿಯೊಬ್ಬಳು ತನ್ನ ಮಗುವಿನ ಜೊತೆಗೆ ಲಕ್ಷ್ಮಣ ರೇಖೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಗು ಸಾವನ್ನಪ್ಪಿದ್ರೇ, ತಾಯಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರಿನಲ್ಲಿ ಗಂಡ-ಹೆಂಡತಿ ಜಗಳವಾಡಿಕೊಂಡಿದ್ದರು. ಇದರಿಂದ ಬೇಸತ್ತಂತ ಪತ್ನಿ 3 ವರ್ಷದ ಮಗ ದೀಕ್ಷಿತ್ ಗೌಡಗೆ ಲಕ್ಷ್ಮಣ ರೇಖೆ ಕೀಟನಾಶಕ ಕುಡಿಸಿ, ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದಂತ ತಾಯಿ-ಮಗನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ವಾಂತಿ, ಬೇಧಿಯಿಂದ 3 ವರ್ಷದ ದೀಕ್ಷಿತ್ ಗೌಡ ಸಾವನ್ನಪ್ಪಿದ್ರೇ, ಚಿಕಿತ್ಸೆಯ ಬಳಿಕ ತಾಯಿ ಪೂರ್ಣಿಮಾ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆಯ ಸಂಬಂಧ ಪೂರ್ಣಿಮಾ ವಿರುದ್ಧ ಪತಿ ಸೋಮಶೇಖರ್ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ರೇ, ಪತಿಯ ವಿರುದ್ಧ ಪೂರ್ಣಿಮಾ ಪೋಷಕರು ದೂರು ನೀಡಿದ್ದಾರೆ. ಈಗ ದೂರು, ಪ್ರತಿ ದೂರು ದಾಖಲಿಸಿಕೊಂಡಿರುವಂತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/we-are-devotees-of-lord-ram-says-siddaramaiah/ https://kannadanewsnow.com/kannada/three-feared-dead-as-state-run-bus-collides-with-lorry-in-gadag/

Read More